• Home
  • »
  • News
  • »
  • lifestyle
  • »
  • Constipation Problem: ಮಲಬದ್ಧತೆ ಸಮಸ್ಯೆ ನಿವಾರಿಸಲು ಈ ಪಾನೀಯ ಸೇವಿಸಿ

Constipation Problem: ಮಲಬದ್ಧತೆ ಸಮಸ್ಯೆ ನಿವಾರಿಸಲು ಈ ಪಾನೀಯ ಸೇವಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಮ್ಮೊಮ್ಮೆ ಮಲಬದ್ಧತೆ ಬರುವುದು ಸಾಮಾನ್ಯ. ಆದರೂ ಇದನ್ನು ಸರಿಯಾಗಿ ಬಗೆ ಹರಿಸದೇ ಹೋದರೆ ಯಾರಿಗೆ ಬೇಕಾದ್ರೂ ಸಮಸ್ಯೆ ಆಗಬಹುದು. ಆದರೆ ನೀವು ದೀರ್ಘ ಕಾಲದವರೆಗೆ ಈ ಸಮಸ್ಯೆ ಹೊಂದಿದ್ದರೆ ಮತ್ತು ನೀವು ಅದಕ್ಕೆ ಚಿಕಿತ್ಸೆ ಪಡೆಯದೇ ಇದ್ದರೆ ಅದು ಇತರ ಕಾಯಿಲೆಗಳನ್ನು ಪಡೆಯುವ ಅಪಾಯ ಹೆಚ್ಚಿಸುತ್ತದೆ.

ಮುಂದೆ ಓದಿ ...
  • Share this:

    ಮಲಬದ್ಧತೆ (Constipation) ಬಗ್ಗೆ ತುಂಬಾ ಜನರು (People) ಮುಕ್ತವಾಗಿ ಮಾತನಾಡಲು ಇಷ್ಟ (Like) ಪಡುವುದಿಲ್ಲ. ಹೀಗಾಗಿ ಈ ಸಮಸ್ಯೆ (Problem) ಹೆಚ್ಚಾಗುತ್ತಾ ಹೋಗುತ್ತದೆ. ಅನೇಕ ಜನರು ಮಲಬದ್ಧತೆ ಸಮಸ್ಯೆ ಬಗ್ಗೆ ಹೇಳಿಕೊಳ್ಳಲು ಮುಜುಗರ ಪಡುತ್ತಾರೆ. ಜನರು ಈ ಸಮಸ್ಯೆ ಚಿಕಿತ್ಸೆಗಾಗಿ (Treatment) ತಮ್ಮದೇ ಆದ ಹುಡುಕಾಟ ಪ್ರಾರಂಭಿಸಲು ಇದು ಕಾರಣವಾಗಿದೆ. ಒಮ್ಮೊಮ್ಮೆ ಮಲಬದ್ಧತೆ ಬರುವುದು ಸಾಮಾನ್ಯ. ಆದರೂ ಇದನ್ನು ಸರಿಯಾಗಿ ಬಗೆ ಹರಿಸದೇ ಹೋದರೆ ಯಾರಿಗೆ ಬೇಕಾದ್ರೂ ಸಮಸ್ಯೆ ಆಗಬಹುದು. ಆದರೆ ನೀವು ದೀರ್ಘ ಕಾಲದವರೆಗೆ ಈ ಸಮಸ್ಯೆ ಹೊಂದಿದ್ದರೆ ಮತ್ತು ನೀವು ಅದಕ್ಕೆ ಚಿಕಿತ್ಸೆ ಪಡೆಯದೇ ಇದ್ದರೆ ಅದು ಇತರ ಕಾಯಿಲೆಗಳನ್ನು ಪಡೆಯುವ ಅಪಾಯ ಹೆಚ್ಚಿಸುತ್ತದೆ.


    ಮಲಬದ್ಧತೆ ಸಮಸ್ಯೆ


    ಆಹಾರ ತಜ್ಞೆ ಡಾ.ಸ್ನೇಹಾ ಅಡ್ಸುಲೆ ಹೇಳುವ ಪ್ರಕಾರ, ಶೇ. 22ಕ್ಕೂ ಹೆಚ್ಚು ಭಾರತೀಯರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಇಹಾಗಾಗಿ ಇದು ಗಂಭೀರವಾದ ಆದರೆ ನಿರ್ಲಕ್ಷ್ಯ ಮಾಡದೇ ಚಿಕಿತ್ಸೆ ಪಡೆಯುವ ಸಮಸ್ಯೆಯಾಗಿದೆ.


    ಮಲಬದ್ಧತೆ ನಿಯಂತ್ರಿಸಲು ಮತ್ತು ನಿಭಾಯಿಸಲು ಡಾ. ಸ್ನೇಹಾ ಅಡ್ಸುಲೆ ಅವರು ತಮ್ಮ Instagram ಖಾತೆಯಲ್ಲಿ ಮಲಬದ್ಧತೆಗೆ ಅದರ ಮನೆಮದ್ದನ್ನು ಶೇರ್ ಮಾಡಿದ್ದಾರೆ. ಇದು ಮಲಬದ್ಧತೆಯ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ನಿವಾರಣೆ ಆಗುತ್ತದೆ. ಅಲ್ಲದೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ.


    ಇದನ್ನೂ ಓದಿ: ತೂಕ ಹೆಚ್ಚಾಗ್ಬೇಕು ಅಂತ ಸಿಕ್ಕಿದ್ದೆಲ್ಲಾ ತಿಂತೀರಾ? ಅದರ ಬದಲು ಈ ಆರೋಗ್ಯಕರ ಆಹಾರ ಸೇವಿಸಿ


    ಹೊಟ್ಟೆಯನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಮುಖ್ಯ


    ಮಲಬದ್ಧತೆ ಸಮಸ್ಯೆಯಲ್ಲಿ ಹೊಟ್ಟೆಯನ್ನು ಸರಿಯಾಗಿ ಸ್ವಚ್ಛಗೊಳಿಸುವುದು ತುಂಬಾ ಮುಖ್ಯ. ಒಂದು ವೇಳೆ ಹೊಟ್ಟೆಯನ್ನು ಸರಿಯಾಗಿ ಸ್ವಚ್ಛ ಮಾಡದೇ ಹೋದರೆ ಅಥವಾ ಕರುಳಿನ ಚಲನೆಯಲ್ಲಿ ತೊಂದರೆ ಉಂಟಾದಾಗ ಅದನ್ನು ಮಲಬದ್ಧತೆ ಎಂದು ಕರೆಯುತ್ತಾರೆ.


    ಜೀರ್ಣಾಂಗ ವ್ಯವಸ್ಥೆ ದುರ್ಬಲವಾಗಿರುವ ಜನರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಕ್ಕಳು ಮತ್ತು ವೃದ್ಧರು ಹೆಚ್ಚು ದುರ್ಬಲ ಅವಸ್ಥೆ ಎದುರಿಸುತ್ತಾರೆ. ಆದಾಗ್ಯೂ, ಈ ರೋಗವು ಯಾವುದೇ ವಯಸ್ಸಿನ ಜನರಿಗೆ ಸಂಭವಿಸಬಹುದು.


    ಈ ಗಂಭೀರ ಕಾಯಿಲೆ ಅಪಾಯ


    ನೀವು ದೀರ್ಘ ಕಾಲದವರೆಗೆ ಮಲಬದ್ಧತೆ ಸಮಸ್ಯೆ ಹೊಂದಿದ್ದರೆ ಅದು ಅನೇಕ ರೋಗಗಳಿಗೆ ಕಾರಣ ಆಗಬಹುದು. ದೀರ್ಘ ಕಾಲದ ಮತ್ತು ಸಂಸ್ಕರಿಸದ ಮಲಬದ್ಧತೆ ಹುಣ್ಣು, ಗುದದ ಬಿರುಕು ಅಥವಾ ಪೈಲ್ಸ್ ಅಪಾಯ ಹೆಚ್ಚಿಸುತ್ತದೆ. ಹಾಗಾಗಿ ಮಲಬದ್ಧತೆ ಸಮಸ್ಯೆ ನಿರ್ಲಕ್ಷಿಸಲು ತಜ್ಞರು ಕಟ್ಟು ನಿಟ್ಟಾಗಿ ನಿಷೇಧಿಸುತ್ತಾರೆ.


    ತೀವ್ರವಾದ ಮಲಬದ್ಧತೆ ಉಂಟಾದಾಗ ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸುವುದು ಉತ್ತಮ., ಔಷಧಿಗಳು ಮತ್ತು ಚಿಕಿತ್ಸೆಯನ್ನು ಸಮಯಕ್ಕೆ ಪ್ರಾರಂಭಿಸಿದರೆ ಮಲಬದ್ಧತೆ ನಿವಾರಿಸಬಹುದು. ಇನ್ನು ಸೌಮ್ಯ ಮಟ್ಟದ ಮಲಬದ್ಧತೆಯನ್ನು ಕೆಲವು ಮನೆಮದ್ದುಗಳು ಮತ್ತು ಆರೋಗ್ಯಕರ ಆಹಾರದ ಮೂಲಕ ಮಾತ್ರ ನಿಭಾಯಿಸಬಹುದು.


    ಯಾವ ಪಾನೀಯ ಮಲಬದ್ಧತೆ ನಿವಾರಿಸಲು ಸಹಕಾರಿ ?


    ಮಲಬದ್ಧತೆ ಸಮಸ್ಯೆ ಹೋಗಲಾಡಿಸಲು ಡಾ.ಸ್ನೇಹಾ ಅಡ್ಸುಲೆ ಅವರು ಪಾನೀಯ ಕುಡಿಯಲು ಸಲಹೆ ನೀಡಿದ್ದಾರೆ. ಈ ಪಾನೀಯವನ್ನು ತಯಾರಿಸಲು ಒಣದ್ರಾಕ್ಷಿ ಬೇಕು.


    ಮನೆಯಲ್ಲಿ ಮಲಬದ್ಧತೆ ಸಮಸ್ಯೆ ಗುಣಪಡಿಸಲು ನಾಲ್ಕರಿಂದ ಐದು ಒಣದ್ರಾಕ್ಷಿಗಳನ್ನು ತೆಗೆದುಕೊಳ್ಳಿ. ಅದನ್ನು ಒಂದು ಬಟ್ಟಲಿನಲ್ಲಿ ಹಾಕಿ ನೀರಿನಲ್ಲಿ ನೆನೆಸಿಡಿ. ರಾತ್ರಿ ನೆನೆಸಿದ ಒಣದ್ರಾಕ್ಷಿ ಬಿಡಿ. ಈ ನೆನೆಸಿದ ಒಣದ್ರಾಕ್ಷಿಯನ್ನು ಬೆಳಿಗ್ಗೆ ಮೊದಲು ತಿನ್ನಿರಿ ಮತ್ತು ಅದರ ನೀರನ್ನು ಕುಡಿಯಿರಿ.


    ನೆನೆಸಿದ ಒಣದ್ರಾಕ್ಷಿ ಸೇವನೆಯ ಪ್ರಯೋಜನಗಳು


    ನೆನೆಸಿದ ಒಣದ್ರಾಕ್ಷಿ ಮಲಬದ್ಧತೆಯ ವಿರುದ್ಧ ಅತ್ಯಂತ ಪರಿಣಾಮಕಾರಿ ಮನೆಮದ್ದುಗಳು ಆಗಿವೆ. ಒಣದ್ರಾಕ್ಷಿ ಉತ್ತಮ ಪ್ರಮಾಣದ ಫೈಬರ್ ಹೊಂದಿದೆ. ಇದು ನೈಸರ್ಗಿಕ ವಿರೇಚಕವೂ ಆಗಿದೆ. ಅಲ್ಲದೆ, ನೆನೆಸಿದ ಒಣದ್ರಾಕ್ಷಿ ಜೀರ್ಣಕ್ರಿಯೆ ಸುಧಾರಿಸುತ್ಲು ಸಹಕಾರಿ.


    ಇದನ್ನೂ ಓದಿ: ನೈಸರ್ಗಿಕವಾಗಿ ಚರ್ಮದ ಕಾಳಜಿಗೆ ಈ ಆಹಾರ ಸೇವಿಸಿ, ಒಮ್ಮೆ ಟ್ರೈ ಮಾಡಿ ನೋಡಿ


    ಇದು ಮಲಬದ್ಧತೆ ಸಮಸ್ಯೆ ತೆಗೆದು ಹಾಕುತ್ತದೆ. ಮಲಬದ್ಧತೆ ಗುಣಪಡಿಸುವುದರ ಜೊತೆಗೆ, ಒಣದ್ರಾಕ್ಷಿ ಹೊಟ್ಟೆ ನೋವು, ಸೆಳೆತ ಮತ್ತು ಅಜೀರ್ಣದ ದೂರುಗಳನ್ನು ಸಹ ತೆಗೆದು ಹಾಕುತ್ತದೆ.

    Published by:renukadariyannavar
    First published: