ಬ್ರಿಟನ್ ರಾಜಕುಮಾರನ ಕಾರು ಮಾರಾಟಕ್ಕೆ; ಬಯಸಿದ್ದು ಮಾತ್ರ ಸಿಗಲ್ಲ!

news18
Updated:August 5, 2018, 7:15 PM IST
ಬ್ರಿಟನ್ ರಾಜಕುಮಾರನ ಕಾರು ಮಾರಾಟಕ್ಕೆ; ಬಯಸಿದ್ದು ಮಾತ್ರ ಸಿಗಲ್ಲ!
news18
Updated: August 5, 2018, 7:15 PM IST
-ನ್ಯೂಸ್ 18 ಕನ್ನಡ

ಬ್ರಿಟನ್ ರಾಜಕುಮಾರ ಹ್ಯಾರಿ ತಮ್ಮ ಕಾರನ್ನು ಮಾರಾಟ ಮಾಡಲಿದ್ದಾರೆ. ಐಷಾರಾಮಿ ಆಡಿ ಕಂಪನಿಯ ಆರ್​ಎಸ್​6 ಕಾರನ್ನು ಸುಮಾರು 71900 ಪೌಂಡ್ ಅಥವಾ 94000 ಡಾಲರ್​ ಬೆಲೆಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಇದರ ಬೆಲೆ ಭಾರತದ ಮೌಲ್ಯಕ್ಕೆ ಪರಿವರ್ತಿಸಿದರೆ 64 ಲಕ್ಷ ರೂ ಆಗುತ್ತದೆ. ಯುನೈಟೆಡ್​ ಕಿಂಗ್​ಡಮ್​ನಲ್ಲಿ ನಡೆಸಲಾಗುತ್ತಿರುವ ಹಳೆ ಕಾರು ಮಾರಾಟ ಮೇಳದಲ್ಲಿ ರಾಜಕುಮಾರನ ಈ ಕಾರನ್ನು ಖರೀದಿಸಬಹುದು.ಆದರೆ ಪ್ರಿನ್ಸ್​ ಕಾರು ಮಾರಾಟಕ್ಕಿದೆ ಎಂದಾಗ ಎಲ್ಲ ಕಡೆ ಸುದ್ದಿಯಾಗಿದ್ದು ಮಾತ್ರ ರಾಜ ಗಾಂಭೀರ್ಯದ ಹಳೆಯ ಕಾರು. ಮೇ 19ರಂದು ನಡೆದ ಪ್ರಿನ್ಸ್​ ಮತ್ತು ಮೇಘನ್ ಮಾರ್ಕೆಲ್​ ವಿವಾಹ ಸಮಾರಂಭಕ್ಕೆ ನವಜೋಡಿಗಳು ಆಗಮಿಸಿದ ಜಾಗ್ವಾರ್ ಇ-ಟೈಪ್ ಎಲ್ಲರ ಮನಗೆದ್ದಿತ್ತು. 1960ರ ಮಾಡೆಲ್​ನ ಈ ಕ್ಲಾಸಿಕ್​ ಕಾರನ್ನೇ ಪ್ರಿನ್ಸ್​ ಮಾರಾಟ ಮಾಡಲಿದ್ದಾರೆಂದು ಸುದ್ದಿ ಹಬ್ಬಿತ್ತು. ಆದರೆ ಹ್ಯಾರಿ ಮಾರುತ್ತಿರುವುದು ಕಳೆದ ವರ್ಷದ ಆಡಿ ಆರ್​ಎಸ್​6 ಕಾರನ್ನು ಮಾತ್ರ ಎಂದು ರಾಜ ಕುಟುಂಬ ಸ್ಪಷ್ಟಪಡಿಸಿದೆ.ರಾಜಮನೆತನದ ಈ ಕಾರನ್ನು ವಿಶೇಷವಾಗಿ ರೂಪಿಸಲಾಗಿತ್ತು. ಇದರ ಸನ್​ರೂಫ್​ನ ವಿನ್ಯಾಸವು ವಿಶೇಷವಾಗಿದ್ದು, ಪ್ರೈವಸಿ ಗ್ಲಾಸ್​ಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಅಷ್ಟೇ ಅಲ್ಲದೆ ಇದರ ಒಳ ವಿನ್ಯಾಸವನ್ನೂ ಸಹ ಅದ್ಭುತವಾಗಿ ರೂಪಿಸಿದ್ದು, ಇದರ ಸೀಟುಗಳು ಯಾವುದೇ ಕಾರಣಕ್ಕೂ ಬಿಸಿಯಾಗುವುದಿಲ್ಲ. ಇವುಗಳ ವಿನ್ಯಾಸಕ್ಕಾಗಿ 15000 ಡಾಲರ್​ನ್ನು ಖರ್ಚು ಮಾಡಲಾಗಿದೆ ಎನ್ನಲಾಗಿದೆ.

ಇವೆಲ್ಲದಕ್ಕೂ ಕುತೂಹಲಕಾರಿ ವಿಷಯವೆಂದರೆ ಪ್ರಿನ್ಸ್​ ಹ್ಯಾರಿ ಮೊದಲ ಬಾರಿ ತನ್ನ ಸಂಗಾತಿ ಮೇಘನ್​ರನ್ನು ಪಿಪ್ಪಾ ಮಿಡಲ್​ಟನ್​ನ ವಿವಾಹ ಸಂದರ್ಭದಲ್ಲಿ ಇದೇ ಕಾರಿನಲ್ಲಿ ಕರೆದುಕೊಂಡು ಬಂದಿದ್ದರು.
First published:August 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...