Heart Care: ಹೃದ್ರೋಗ ಸಮಸ್ಯೆ ತಡೆದು, ರಕ್ತ ತೆಳುವಾಗಿಸಲು ಈ ಮನೆಮದ್ದು ಸಹಕಾರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಕ್ತವು ದೇಹಕ್ಕೆ ಪೌಷ್ಟಿಕಾಂಶ ಒದಗಿಸುವ ಕೆಲಸ ಮಾಡುತ್ತದೆ. ಹಾಗಾಗಿ ರಕ್ತ ದಪ್ಪವಾಗಿದ್ದಾಗ, ಹೆಪ್ಪುಗಟ್ಟಿದಾಗ ಅಥವಾ ಹೆಚ್ಚು ತೆಳ್ಳಗಿದ್ದಾಗ ಆರೋಗ್ಯರ ರೀತಿಯಲ್ಲಿ ಸಂಚಾರವಾಗಲು ತೊಂದರೆ ಆಗುತ್ತದೆ. ಆದರೆ ರಕ್ತವು ಆರೋಗ್ಯಕರ ರೀತಿಯಲ್ಲಿ ಹರಿಯುವುದು ಮುಖ್ಯ.

  • Share this:

    ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳ (Heart Attack Cases) ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಹಲವು ಮಂದಿ ಈ ಮಹಾಮಾರಿ ಹೃದಯಾಘಾತಕ್ಕೆ ತುತ್ತಾಗಿ ಜೀವ (Life) ಕಳೆದುಕೊಂಡಿದ್ದಾರೆ. ಹೃದಯಾಘಾತವಾಗುವ ಮೊದಲು ಕೆಲವು ಸಂಕೇತಗಳನ್ನು (Symptoms) ದೇಹ ನೀಡುತ್ತದೆ. ಆದರೆ ಇವುಗಳನ್ನು ಸರಿಯಾಗಿ ತಿಳಿದುಕೊಳ್ಳುವಲ್ಲಿ ಮತ್ತು ಇದು ಹೃದಯಾಘಾತದ ಸಂಕೇತವೇ ಎಂದು ಪತ್ತೆ ಹಚ್ಚಲು ರೋಗಿಯು (Patient) ವಿಫಲನಾಗುತ್ತಾನೆ. ಹೀಗಾಗಿ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ವ್ಯಕ್ತಿಯು ಮರಣ ಹೊಂದುತ್ತಾನೆ. ಹಾಗಾಗಿ ಹೃದಯದ ಬಗ್ಗೆ ಪ್ರತಿಯೊಬ್ಬರೂ ತುಂಬಾ ಕಾಳಜಿ ವಹಿಸಬೇಕು.  


    ಹೃದಯದ ಬಗ್ಗೆ ಸೂಕ್ತ ಕಾಳಜಿ ವಹಿಸಿ


    ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಹೃದಯಾಘಾತ ಸಮಸ್ಯೆಯಿಂದ ಹೆಚ್ಚಿನ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಯಾವಾಗ ಏನಾಗುತ್ತದೆಯೋ ಎಂಬ ಆಲೋಚನೆಯ ಜೊತೆ ಭಯದಲ್ಲೇ ಬದುಕು ನಡೆಸುವಂತಾಗುತ್ತದೆ.


    ರಕ್ತವು ದೇಹಕ್ಕೆ ಪೌಷ್ಟಿಕಾಂಶ ಒದಗಿಸುವ ಕೆಲಸ ಮಾಡುತ್ತದೆ. ಹಾಗಾಗಿ ರಕ್ತ ದಪ್ಪವಾಗಿದ್ದಾಗ, ಹೆಪ್ಪುಗಟ್ಟಿದಾಗ ಅಥವಾ ಹೆಚ್ಚು ತೆಳ್ಳಗಿದ್ದಾಗ ಆರೋಗ್ಯರ ರೀತಿಯಲ್ಲಿ ಸಂಚಾರವಾಗಲು ತೊಂದರೆ ಆಗುತ್ತದೆ. ಆದರೆ ರಕ್ತವು ಆರೋಗ್ಯಕರ ರೀತಿಯಲ್ಲಿ ಹರಿಯುವುದು ಮುಖ್ಯ.




    ನಿಮ್ಮ ದೇಹದಲ್ಲಿ ರಕ್ತವು ದಪ್ಪವಾಗಲು ಪ್ರಾರಂಭಿಸಿದಾಗ ಅದು ಹೃದ್ರೋಗ ಕಾಯಿಲೆ ಉಂಟಾಗಲು ಮತ್ತು ಹೃದಯಾಘಾತ ಸಮಸ್ಯೆ ಅಪಾಯ ಹೆಚ್ಚಾಗಲು ಕಾರಣವಾಗುತ್ತದೆ.


    ಹೃದ್ರೋಗ ಸಮಸ್ಯೆ ಇರುವ ರೋಗಿಗೆ ರಕ್ತ ತೆಳುವಾಗಲು ಔಷಧ ನೀಡಲಾಗುತ್ತದೆ. ಇದು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ತಡೆಯುತ್ತದೆ. ಹೃದಯವು ಸಾಕಷ್ಟು ರಕ್ತ ಪಡೆಯಲು ಸಹಾಯ ಆಗುತ್ತದೆ.


    ಆಯುರ್ವೇದ ವೈದ್ಯ ಮಿಹಿರ್ ಖಾತ್ರಿ ಅವರು ರಕ್ತ ಹೆಚ್ಚು ಹೆಪ್ಪುಗಟ್ಟುವಿಕೆ ಮತ್ತು ದಪ್ಪವಾಗುವುದನ್ನು ತಡೆಯಲು ಕೆಲವು ಮನೆಮದ್ದುಗಳ ಬಗ್ಗೆ ಹೇಳಿದ್ದಾರೆ. ಇದು ರಕ್ತ ದಪ್ಪವಾಗದಂತೆ ತಡೆದು, ಅನಾರೋಗ್ಯ ಮತ್ತು ಹೃದ್ರೋಗ ಸಮಸ್ಯೆ ತಡೆಯಲು ಸಹಾಯ ಮಾಡುತ್ತದೆ.


    ಮೊದಲು ಪ್ರತಿಯೊಬ್ಬರೂ ಹೃದ್ರೋಗದ ಲಕ್ಷಣಗಳ ಬಗ್ಗೆ ತಿಳಿಯುವುದು ತುಂಬಾ ಮುಖ್ಯ. ಇಲ್ಲದಿದ್ದರೆ ಹೃದ್ರೋಗ ಹಾಗೂ ಹೃದಯಾಘಾತದ ಬಗ್ಗೆ ತಿಳಿವಳಿಕೆಯಿಲ್ಲದೇ ಸಮಸ್ಯೆ ಎದುರಿಸಬೇಕಾಗುತ್ತದೆ.


    ಹೃದ್ರೋಗ ಸಮಸ್ಯೆಯ ಲಕ್ಷಣಗಳು ಹೀಗಿವೆ.


    ಎದೆ ನೋವು ಹಾಗೂ ಎದೆ ಭಾರವಾಗುವುದು, ಉಸಿರಾಟದ ತೊಂದರೆ ಉಂಟಾಗುವುದು, ಕುತ್ತಿಗೆ, ದವಡೆ, ಗಂಟಲು, ಬೆನ್ನು ನೋವು ಬರುವುದು, ಕೈ ಮತ್ತು ಕಾಲುಗಳಲ್ಲಿ ಮರಗಟ್ಟುವಿಕೆ ಸಮಸ್ಯೆ ಹಾಗೂ ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.


    ಸಾಂದರ್ಭಿಕ ಚಿತ್ರ


    ರಕ್ತ ತೆಳುವಾಗಿಸಲು ಕೆಲವು ಮನೆಮದ್ದುಗಳು ಹೀಗಿವೆ


    ಆಯುರ್ವೇದ ತಜ್ಞ ಮಿಹಿರ್ ಅವರು ಹೇಳುವ ಪ್ರಕಾರ, ಬೆಲ್ಲದ ಸೇವನೆ ಮತ್ತು ಬೆಳ್ಳುಳ್ಳಿ ಎಸಳು ಸೇವನೆಯು ರಕ್ತ ತೆಳುವಾಗಿಸಲು ಸಹಾಯ ಮಾಡುತ್ತದೆ. ಇದು ಉತ್ತಮ ಪರಿಹಾರ ಆಗಿದೆ.


    ಬೆಲ್ಲವು ಹೃದಯಕ್ಕೆ ಆರೋಗ್ಯಕರ. ಮತ್ತು ಬೆಳ್ಳುಳ್ಳಿಯು ವಯಸ್ಸಾದ ವಿರೋಧಿ ಗುಣ ಹೊಂದಿದೆ. ಇದು ದೇಹದ ಆರೋಗ್ಯ ಮತ್ತು ಹೃದ್ರೋಗದ ಅಪಾಯ ತಡೆಗೆ ಸಹಾಯ ಮಾಡುತ್ತದೆ.


    ರಕ್ತ ತೆಳುವಾಗಿಸಲು ಮನೆಮದ್ದು


    ರಕ್ತ ತೆಳುವಾಗಿಸಲು ಮೊದಲು ಅರ್ಧ ಚಮಚ ಹಳೆಯ ಬೆಲ್ಲ ತೆಗೆದುಕೊಳ್ಳಿ. ಈಗ ಬೆಳ್ಳುಳ್ಳಿಯ 2 ಎಸಳು ತೆಗೆದುಕೊಂಡು ಸಿಪ್ಪೆ ತೆಗೆದು ಮತ್ತು ಸ್ವಚ್ಛಗೊಳಿಸಿ. ಈಗ ಗ್ರೈಂಡರ್‌ಗೆ ಹಾಕಿ ರುಬ್ಬುವ ಮೂಲಕ ಚಟ್ನಿ ಮಾಡಿ. ಖಾಲಿ ಹೊಟ್ಟೆಯಲ್ಲಿ ಅಥವಾ ಆಹಾರದ ಜೊತೆಗೆ ಈ ಚಟ್ನಿ ಸೇವಿಸಿ.


    ಇದನ್ನೂ ಓದಿ: ಸೌಂದರ್ಯಕ್ಕೊಂದೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು ರೋಸ್ ವಾಟರ್


    ಹೀಗೆ ಕಾಳಜಿ ವಹಿಸಿ


    ಈ ಆಯುರ್ವೇದ ಪರಿಹಾರವು ಬಿಸಿಯಾಗಿದೆ. ಇದನ್ನು ಬೇಸಿಗೆಯಲ್ಲಿ ಮಾಡಬಾರದು. ರಕ್ತ ತೆಳುವಾಗಿಸುವ ಔಷಧಿ ಸೇವಿಸುತ್ತಿದ್ದರೆ ಈ ಪರಿಹಾರ ಮಾಡುವ ಮೊದಲು ವೈದ್ಯರ ಸಲಹೆ ಪಡೆಯಿರಿ.

    Published by:renukadariyannavar
    First published: