• Home
  • »
  • News
  • »
  • lifestyle
  • »
  • Clove Benefits: ಮೂಳೆಗಳ ಸಮಸ್ಯೆ ಹಾಗೂ ಶೀತ ತಡೆಯಲು ಈ ಪದಾರ್ಥಗಳ ಸೇವನೆ ಪ್ರಯೋಜನಕಾರಿ!

Clove Benefits: ಮೂಳೆಗಳ ಸಮಸ್ಯೆ ಹಾಗೂ ಶೀತ ತಡೆಯಲು ಈ ಪದಾರ್ಥಗಳ ಸೇವನೆ ಪ್ರಯೋಜನಕಾರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರತಿಯೊಬ್ಬರ ಮನೆಯಲ್ಲಿ ಲವಂಗವನ್ನು ಇಟ್ಟಿರುತ್ತಾರೆ. ಲವಂಗವನ್ನು ಹಲವು ಪದಾರ್ಥಗಳಲ್ಲಿ ಹಾಕಿ ಸೇವನೆ ಮಾಡಲಾಗುತ್ತದೆ. ಲವಂಗವು ದೇಹವನ್ನು ಬೆಚ್ಚಗೆ ಇರಿಸಲು ಸಹಾಯ ಮಾಡುತ್ತದೆ. ಲವಂಗವು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಲವಂಗ ಋತುಮಾನದ ಸೋಂಕು ಮತ್ತು ಇತರ ಕಾಯಿಲೆಗಳಿಂದ ರಕ್ಷಿಸುತ್ತದೆ.

ಮುಂದೆ ಓದಿ ...
  • Share this:

    ಇತ್ತೀಚಿನ ದಿನಗಳಲ್ಲಿ ಪರಿಸರದಲ್ಲಿ (Environment) ತುಂಬಾ ಬದಲಾವಣೆ (Changes) ಆಗುತ್ತಿರುವುದನ್ನು ನೀವು ಗಮನಿಸಿರಬಹುದು. ಮತ್ತು ಅನುಭಸಿರಬಹುದು (Feel). ಈ ವೇಳೆ ನೀವು ದೇಹದ (Body) ಉಷ್ಣತೆ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಇದಕ್ಕಾಗಿ ಹಸಿರು ತರಕಾರಿಗಳು (Green Vegetables) ಮತ್ತು ಕಾಲೋಚಿತ ಹಣ್ಣುಗಳನ್ನು ಆಹಾರದಲ್ಲಿ ಕೆಲವು ಪ್ರಮುಖ ಬದಲಾವಣೆ ಸೇರಿಸುವುದು ಅವಶ್ಯಕ. ತಣ್ಣನೆಯ ಪದಾರ್ಥ ಮತ್ತು ಜ್ಯೂಸ್ ಸೇವನೆ ಮಾಡುವ ಬದಲು ಬಿಸಿ ಮತ್ತು ಕಡಿದಾದ ಮಸಾಲೆಗಳ ಸೇವನೆ ಋತುಮಾನದ ಬದಲಾವಣೆಗಳಿಂದ ಉಂಟಾಗುವ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಣೆ ಮಾಡುತ್ತವೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆಹಾರದಲ್ಲಿ ಲವಂಗ ಸೇರಿಸಿ ಸೇವನೆ ಮಾಡಲು ಪ್ರಾರಂಭಿಸಿದ್ದಾರೆ.


    ಅಡುಗೆ ಮನೆಯಲ್ಲಿನ ಔಷಧ ಲವಂಗ


    ಪ್ರತಿಯೊಬ್ಬರ ಮನೆಯಲ್ಲಿ ಲವಂಗವನ್ನು ಇಟ್ಟಿರುತ್ತಾರೆ. ಲವಂಗವನ್ನು ಹಲವು ಪದಾರ್ಥಗಳಲ್ಲಿ ಹಾಕಿ ಸೇವನೆ ಮಾಡಲಾಗುತ್ತದೆ. ಲವಂಗವು ದೇಹವನ್ನು ಬೆಚ್ಚಗೆ ಇರಿಸಲು ಸಹಾಯ ಮಾಡುತ್ತದೆ. ಲವಂಗವು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಲವಂಗ ಋತುಮಾನದ ಸೋಂಕು ಮತ್ತು ಇತರ ಕಾಯಿಲೆಗಳಿಂದ ರಕ್ಷಿಸುತ್ತದೆ. ಲವಂಗವನ್ನು ಆಹಾರದಲ್ಲಿ ಸೇರಿಸಿದರೆ ಹಲವು ಆರೋಗ್ಯ ಪ್ರಯೋಜನ ಸಿಗುತ್ತದೆ.


    ಲವಂಗವನ್ನು ಆಯುರ್ವೇದದಲ್ಲಿ ಔಷಧಿ ಎಂದು ಪರಿಗಣಿಸಲಾಗಿದೆ. ಲವಂಗ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಮತ್ತು ಹಲ್ಲುನೋವು, ಕೀಲು ನೋವು ಸಮಸ್ಯೆ ತಡೆಯಲು ರಾಮಬಾಣವಾಗಿದೆ. ನಿಮ್ಮ ಅಡುಗೆ ಮನೆಯಲ್ಲಿ ಇರಿಸಲಾಗಿರುವ ಈ ಆಯುರ್ವೇದ ಔಷಧ ಲವಂಗ ಇತರ ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಅದರ ಬಗ್ಗೆ ಇಲ್ಲಿ ತಿಳಿಯೋಣ.


    ಇದನ್ನೂ ಓದಿ: ಮಹಿಳೆಯರ ಆರೋಗ್ಯಕ್ಕೆ ಸಮಸ್ಯೆಯಂತೆ ಈ ಮಧ್ಯಂತರ ಉಪವಾಸ


    ಲವಂಗದಲ್ಲಿರುವ ಪೋಷಕಾಂಶಗಳು


    ಲವಂಗದಲ್ಲಿ ಫೈಬರ್, ಜೀವಸತ್ವ ಮತ್ತು ಖನಿಜಗಳು ಇವೆ. ಕಡಿಮೆ ಪ್ರಮಾಣದ ಕ್ಯಾಲೊರಿ ಹೊಂದಿದೆ. ಮ್ಯಾಂಗನೀಸ್ ಉತ್ತಮ ಪ್ರಮಾಣದಲ್ಲಿದೆ. ಇದು ನಮ್ಮ ಮೆದುಳಿನ ಕಾರ್ಯವನ್ನು ಹಾಗೂ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅಲ್ಲದೆ ಲವಂಗವು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುತ್ತದೆ.


    ಶೀತ ಮತ್ತು ಜ್ವರಕ್ಕೆ ಲವಂಗ ಉತ್ತಮ ಪರಿಹಾರ


    ಶೀತವನ್ನು ಹೊಂದಿರುವಾಗ ಚಹಾದಲ್ಲಿ ಲವಂಗ ಹಾಕಿ ಕುದಿಸಿ ಕುಡಿಯುವುದು ಪರಿಹಾರ ನೀಡುತ್ತದೆ. ಲವಂಗವು ಅದರ ಆಂಟಿವೈರಲ್ ಗುಣಲಕ್ಷಣದಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಕಷಾಯ ರೂಪದಲ್ಲೂ ಇದನ್ನು ಸೇವಿಸಬಹುದು. ಶೀತದಿಂದ ಪರಿಹಾರ ಪಡೆಯಲು ಅನ್ನ ಮಾಡುವಾಗ ಲವಂಗ ಸೇರಿಸುವುದು ಬೆಸ್ಟ್.


    ಕ್ಯಾನ್ಸರ್ ತಡೆಗೆ ಪ್ರಯೋಜನಕಾರಿ


    ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ ಲವಂಗ. ಇದರ ಸೇವನೆ ಕ್ಯಾನ್ಸರ್ ಸಮಸ್ಯೆಯ ವಿರುದ್ಧ ಹೋರಾಡಲು ಸಹ ಪ್ರಯೋಜನಕಾರಿ. ಲವಂಗದಲ್ಲಿರುವ ಅಂಶಗಳು ಗಡ್ಡೆಗಳನ್ನು ಕಡಿಮೆ ಮಾಡುತ್ತವೆ. ಕ್ಯಾನ್ಸರ್ ಕೋಶಗಳನ್ನು ಪ್ರತಿಬಂಧಿಸುತ್ತವೆ ಎಂದು ಟೆಸ್ಟ್ ಟ್ಯೂಬ್ ಅಧ್ಯಯನಗಳು ಹೇಳಿವೆ. ಲವಂಗ ಎಣ್ಣೆಯು ಅನ್ನನಾಳದ ಕ್ಯಾನ್ಸರ್ ಕೋಶಗಳ ಬೆಳವಣಿಗೆ ತಡೆಯುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.


    ಯಕೃತ್ತಿನ ಆರೋಗ್ಯ ಸುಧಾರಿಸುತ್ತದೆ


    ಯಕೃತ್ತು ರಕ್ತವನ್ನು ನಿರ್ವಿಷಗೊಳಿಸುತ್ತದೆ. ರಕ್ತದ ಸಕ್ಕರೆ ನಿಯಂತ್ರಣದಲ್ಲಿಡುತ್ತದೆ. ಲವಂಗವನ್ನು ಆಹಾರದಲ್ಲಿ ಸೇವಿಸುವುದು ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ. ಲವಂಗವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುತ್ತದೆ. ಯಕೃತ್ತಿನ ಕಾಯಿಲೆ ಅಪಾಯ ಕಡಿಮೆ ಮಾಡುತ್ತದೆ.


    ರಕ್ತದ ಸಕ್ಕರೆ ನಿಯಂತ್ರಣದಲ್ಲಿಡುತ್ತದೆ ಲವಂಗ


    ಲವಂಗ ರಕ್ತದ ಸಕ್ಕರೆ ನಿಯಂತ್ರಿಸುತ್ತದೆ. ಲವಂಗದಲ್ಲಿನ ಸಂಯುಕ್ತಗಳು ರಕ್ತದ ಸಕ್ಕರೆ ನಿಯಂತ್ರಿಸುವಲ್ಲಿ ಪ್ರಯೋಜನಕಾರಿ ಎಂದು ಸಂಶೋಧನೆ ತಿಳಿಸಿದೆ. ಲವಂಗದಲ್ಲಿ ಕಂಡು ಬರುವ ಸಂಯುಕ್ತವು ರಕ್ತದ ಸಕ್ಕರೆಯನ್ನು ಕಡಿಮೆ ಮಾಡಲು ಇನ್ಸುಲಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


    ಮೂಳೆಗಳಿಗೆ ಲವಂಗ ಉತ್ತಮ


    ದೀರ್ಘ ಕಾಲದವರೆಗೆ ಆರೋಗ್ಯವಾಗಿರಲು ಮತ್ತು ಮೂಳೆಗಳ ಆರೋಗ್ಯಕ್ಕೆ ಲವಂಗದಲ್ಲಿ ಕಂಡುಬರುವ ಪೋಷಕಾಂಶಗಳು ಸಹಕಾರಿ ಆಗಿವೆ. ಮೂಳೆ ಮುರಿತದ ಅಪಾಯ ಕಡಿಮೆ ಮಾಡುತ್ತದೆ. ಲವಂಗದಲ್ಲಿ ಕಂಡುಬರುವ ಸಂಯುಕ್ತ ಮತ್ತು ಮ್ಯಾಂಗನೀಸ್ ಮೂಳೆಯ ಖನಿಜ ಸಾಂದ್ರತೆ ಹೆಚ್ಚಿಸಲು ಸಹಾಯ ಮಾಡುತ್ತದೆ.


    ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಈ ಒಂದು ಮೂಲಿಕೆ ಪರಿಣಾಮಕಾರಿ!


    ಹಲ್ಲು ಮತ್ತು ಕೀಲು ನೋವು ನಿವಾರಿಸುತ್ತದೆ


    ಆಯುರ್ವೇದದ ಪ್ರಕಾರ, ಲವಂಗ ಅಗಿಯುವುದು ಅಥವಾ ನೋವು ಇರುವ ಜಾಗದಲ್ಲಿ ಇಡುವುದರಿಂದ ಹಲ್ಲುನೋವು ನಿವಾರಣೆಯಾಗುತ್ತದೆ. ಬಾಯಿಯ ದುರ್ವಾಸನೆ ದೂರವಾಗುತ್ತದೆ. ಲವಂಗದ ಎಣ್ಣೆ ಕೀಲು ನೋವಿಗೆ ಮನೆಮದ್ದಾಗಿದೆ.

    Published by:renukadariyannavar
    First published: