Heart Failure Awareness: ಹಾರ್ಟ್​ ಫೇಲ್ ತಡೆಗೆ ವೈದ್ಯರು ಸೂಚಿಸಿದ ಪ್ರಮುಖ ಸಲಹೆಗಳು! ತಿಳಿದಿರುವುದು ಅಗತ್ಯ

ಹೃದಯ ವೈಫಲ್ಯದ ರೋಗಿಗಳು ಆರೋಗ್ಯಕರ ಮತ್ತು ಸಂತೋಷದ ಜೀವನ ನಡೆಸಲು ಸಹಾಯ ಮಾಡುವ ಸಲಹೆಗಳು ಇಲ್ಲಿವೆ. ಹೃದಯ ವೈಫಲ್ಯ ಎಂದರೇನು ಎಂದು ತಿಳಿಯುವುದು ತುಂಬಾ ಮುಖ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದೇಹದ (Body) ಇತರೆ ಎಲ್ಲ ಭಾಗಗಳ (Parts) ಕಾಳಜಿ (Care) ಒಂದು ಕಡೆಯಾದರೆ, ಯಾವಾಗಲೂ ಲಬ್ ದಬ್ ಎಂದು ಬಡಿದುಕೊಳ್ಳುವ ಹೃದಯದ (Heart) ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ. ವಿಶೇಷವಾಗಿ ನೀವು ಹೃದಯ ಸಂಬಂಧಿ ಕಾಯಿಲೆಯಿಂದ (Disease) ಬಳಲುತ್ತಿರುವ ರೋಗಿಗಳಾಗಿದ್ದರೆ (Patient) ಹೃದಯದ ಕಾಳಜಿ ವಹಿಸುವುದು ಮುಖ್ಯ.  ಹೃದಯಾಘಾತದ ಸಾಮಾನ್ಯ ಲಕ್ಷಣಗಳಾದ ಉಸಿರಾಟದ ತೊಂದರೆ, ತ್ವರಿತ ಹೃದಯ ಬಡಿತ ಮತ್ತು ಆಯಾಸ ಆಗಿದೆ. ಇದೆಲ್ಲಾ ಲಕ್ಷಣಗಳು ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಹೃದಯದ ಅಸಮರ್ಥತೆ ಇರುವ ಬಗ್ಗೆ ಹೇಳುತ್ತದೆ. ಹೃದಯ ವೈಫಲ್ಯದ ಕುರಿತು ಜಾಗೃತಿ ಮೂಡಿಸುವ ತಿಂಗಳು ಇದು.

    ಹೃದಯ ವೈಫಲ್ಯ ಎಂದರೇನು

    ಹೃದಯ ವೈಫಲ್ಯದ ರೋಗಿಗಳು ಆರೋಗ್ಯಕರ ಮತ್ತು ಸಂತೋಷದ ಜೀವನ ನಡೆಸಲು ಸಹಾಯ ಮಾಡುವ ಸಲಹೆಗಳು ಇಲ್ಲಿವೆ. ಹೃದಯ ವೈಫಲ್ಯ ಎಂದರೇನು ಎಂದು ತಿಳಿಯುವುದು ತುಂಬಾ ಮುಖ್ಯ. ಹೈದರಾಬಾದ್‌ನ ಟಿಎಕ್ಸ್ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ.ಕೆ ಶರತ್ ಚಂದ್ರ ಅವರ ಪ್ರಕಾರ, ಹೃದಯ ಸಂಬಂಧಿ ಕಾಯಿಲೆ ಇದು ಶಾಶ್ವತ ಕಾಯಿಲೆ ಆಗಿದೆ.

    ಹೃದಯ ವೈಫಲ್ಯ ತಡೆಗಟ್ಟುವ ಮಾರ್ಗಗಳು

    ವೈದ್ಯರ ಪ್ರಕಾರ, ಭಾರತದಲ್ಲಿ ಹೃದಯ ವೈಫಲ್ಯ ಸಮಸ್ಯೆ ಹೆಚ್ಚುತ್ತಿದೆ. ಮತ್ತು ಇದಕ್ಕೆ ಮಧುಮೇಹ, ಅಧಿಕ ರಕ್ತದೊತ್ತಡ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಮತ್ತು ಹೃದಯಾಘಾತ ಕಾರಣವಾಗಿದೆ. ಈ ಸಮಸ್ಯೆ ತಡೆಗಟ್ಟಲು, ನಾವು ನಮ್ಮ ಜೀವನಶೈಲಿಯನ್ನು ಸುಧಾರಿಸಬೇಕು.

    ಇದನ್ನೂ ಓದಿ: ಚರ್ಮದ ಟ್ಯಾಗ್‌ ಮತ್ತು ನರಹುಲಿ ಸಮಸ್ಯೆ ನಿವಾರಣೆಗೆ ನೈಸರ್ಗಿಕ ಮನೆಮದ್ದು ಟ್ರೈ ಮಾಡಿ

    ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಧೂಮಪಾನ ತ್ಯಜಿಸಬೇಕು ಮತ್ತು ಆಲ್ಕೊಹಾಲ್ ಸೇವನೆ ಮಿತಿಯಲ್ಲಿ ಮಾಡಬೇಕು. ರಕ್ತದ ಸಕ್ಕರೆ ಮಟ್ಟ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ಸಹ ನಿಯಂತ್ರಿಸಿ.

    ಹೃದ್ರೋಗ ತಜ್ಞರೊಂದಿಗೆ ಸೂಕ್ತ ಸಲಹೆ ಪಡೆಯಿರಿ

    ನಿಮ್ಮ ಹೃದ್ರೋಗ ತಜ್ಞರೊಂದಿಗೆ ನಿಯಮಿತ ಸಂಭಾಷಣೆ ನಡೆಸಿ. ಯಾವುದೇ ಹೊಸ ರೋಗ ಲಕ್ಷಣಗಳು ಹೊರಹೊಮ್ಮುವ ತಕ್ಷಣವೇ ತಿಳಿಸಿ. ನಿಯತಕಾಲಿಕ ಪರೀಕ್ಷೆಗೆ ಒಳಗಾಗುವುದು ನಿಮ್ಮ ಪ್ರಗತಿಯನ್ನು ಟ್ರ್ಯಾಕ್ ಮಾಡಲು ಸಹಕಾರಿ.

    ಉಪ್ಪು ಸೇವನೆ ಬಗ್ಗೆ ಸೂಕ್ತ ಗಮನ ಕೊಡಿ

    ಮೂತ್ರಪಿಂಡಗಳಿಗೆ ಸಾಕಷ್ಟು ರಕ್ತದ ಹರಿವಿನಿಂದಾಗಿ, ದೇಹವು ನೀರು ಮತ್ತು ದ್ರವವನ್ನು ಉಳಿಸಿಕೊಳ್ಳುತ್ತದೆ. ಇದು ಕಾಲು, ಹೊಟ್ಟೆ ಮತ್ತು ಕಣಕಾಲುಗಳಲ್ಲಿ ಊತ, ಅತಿಯಾದ ಮೂತ್ರ ವಿಸರ್ಜನೆ ಮತ್ತು ತೂಕ ಹೆಚ್ಚಾಗಲು ಕಾರಣವಾಗುತ್ತದೆ.

    ಉಪ್ಪಿನ ಹೆಚ್ಚಿನ ಸೇವನೆಯು ದೇಹದಲ್ಲಿ ಹೆಚ್ಚುವರಿ ದ್ರವದ ಶೇಖರಣೆಗೆ ಕಾರಣ. ಹೃದಯಾಘಾತದ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಮಾಡುವ ಮೂಲಕ ಸೇವನೆ ನಿಯಂತ್ರಿಸಬಹುದು.

    ದ್ರವ ಸೇವನೆಗೆ ಗಮನ ಕೊಡಿ

    ಹೆಚ್ಚು ದ್ರವವನ್ನು ಕುಡಿಯುವುದು ಹೃದಯ ವೈಫಲ್ಯ ಇನ್ನಷ್ಟು ಹದಗೆಡಿಸುತ್ತದೆ. ಚಹಾ, ಜ್ಯೂಸ್ ಮತ್ತು ತಂಪು ಪಾನೀಯಗಳಂತಹ ಪಾನೀಯಗಳ ಸೇವನೆ ಕಡಿಮೆ ಮಾಡಿ.

    ಸಮಯಕ್ಕೆ ಔಷಧಿ ತೆಗೆದುಕೊಳ್ಳಿ

    ಹೃದಯ ವೈಫಲ್ಯದ ಚಿಕಿತ್ಸೆಗೆ ಹೇಳಲಾದ ಔಷಧಿಗಳನ್ನು ತೆಗೆದುಕೊಳ್ಳಿ. ಡೋಸ್ ಅಥವಾ ಅಪಾಯಿಂಟ್‌ಮೆಂಟ್ ಅನ್ನು ಎಂದಿಗೂ ಕಳೆದುಕೊಳ್ಳದಂತೆ ಅಲಾರಂ ಸೆಟ್ ಮಾಡಿಡಿ. ನಿಮ್ಮ ಬೀರು ಅಥವಾ ರೆಫ್ರಿಜರೇಟರ್‌ನಲ್ಲಿ ಟಿಪ್ಪಣಿ ಬರೆಯಿರಿ ಮತ್ತು ಅಂಟಿಸಿ.

    ಇದನ್ನೂ ಓದಿ: ಈ ಕೆಲವು ಸಸ್ಯಗಳಲ್ಲಿವೆ ಸೂಪರ್ ಪವರ್! ತೂಕ ಇಳಿಸಿ ಆರೋಗ್ಯ ರಕ್ಷಿಸುತ್ತೆ

    ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಿ

    ಹೃದಯ ವೈಫಲ್ಯ ಪ್ರಕರಣಗಳು ಹೆಚ್ಚಾಗಲು ಮುಖ್ಯ ಕಾರಣ ಜಡ ಜೀವನಶೈಲಿ. ಆಹಾರದಲ್ಲಿ ಉಪ್ಪು, ಸಕ್ಕರೆ ಮತ್ತು ಕೊಬ್ಬಿನ ಅತಿಯಾದ ಸೇವನೆಯನ್ನು ತಪ್ಪಿಸಿ.
    Published by:renukadariyannavar
    First published: