ಗುಳಿಕೆನ್ನೆ ಸುಂದರಿ ಪ್ರೀತಿ ಜಿಂಟಾ ಗಂಡನ ಜೊತೆ ವಿದೇಶದಲ್ಲಿ ನೆಲೆಸಿದ್ದಾರೆ. ಅವರ ತಾಯಿ ಸಹ ಅವರೊಂದಿಗೆ ಇದ್ದಾರೆ. ಲಾಕ್ಡೌನ್ನಲ್ಲಿ ತಮ್ಮ ನಿತ್ಯದ ಅಪ್ಡೇಟ್ ಕೊಡುತ್ತಿದ್ದ ನಟಿ, ಒಂದಿಲ್ಲೊಂದು ವಿಡಿಯೋಗಳ ಮೂಲಕ ರಂಜಿಸುತ್ತಿದ್ದಾರೆ.
ಪ್ರೀತಿ ಜಿಂಟಾ, ಅಮ್ಮನ ಕೈಯಿಂದ ತಲೆಗೆ ದೇಸಿ ಎಣ್ಣೆ ಹಚ್ಚಿಸಿಕೊಂಡು ಆಯಿಲ್ ಮಸಾಜ್ ಮಾಡಿಸಿಕೊಂಡ ವಿಡಿಯೋವನ್ನು ಹಂಚಿಕೊಂಡಿದ್ದರು. ಇದಾದ ನಂತರ ಗಂಡನಿಗೆ ಹೇರ್ ಕಟ್ ಮಾಡಿದ್ದ ಹಾಗೂ ಮುದ್ದಿನ ನಾಯಿ ಜೊತೆ ಆಟವಾಡುತ್ತಾ, ವ್ಯಾಯಾಮ ಮಾಡುತ್ತಿದ್ದ ವಿಡಿಯೋಗಳನ್ನೂ ಪೋಸ್ಟ್ ಮಾಡಿದ್ದರು.
ಪ್ರೀತಿ ಜಿಂಟಾ, ಈಗ ತಮ್ಮ ಮನೆಯ ಕೈತೋಟದ ಪುಟ್ಟ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮನೆಯಲ್ಲಿ ಇರುವ ಜಾಗದಲ್ಲೇ ಅಡುಗೆಗೆ ಬೇಕಾದ ತರಕಾರಿಯನ್ನು ಅವರೇ ಬೆಳೆದುಕೊಳ್ಳುತ್ತಿದ್ದಾರಂತೆ. ತಾವೇ ಕೃಷಿ ಮಾಡಿ ಬೆಳೆದ ತರಕಾರಿಯನ್ನು ತೋರಿಸುತ್ತಾ ಒಂದು ಪುಟ್ಟ ವಿಡಿಯೋ ಮಾಡಿದ್ದಾರೆ.
ಮನೆಗೆ ಅಗತ್ಯದ ತರಕಾರಿಯನ್ನು ಯಾವುದೇ ಕ್ರಿಮಿನಾಶ ಅಥವಾ ರಾಸಾಯನಿಕಗಳಿಲ್ಲದೆ ಬೆಳೆಯುವುದನ್ನು ಪ್ರೀತಿಗೆ ಅವರ ತಾಯಿ ಹೇಳಿಕೊಟ್ಟಿದ್ದಂತೆ. ಈ ಕೈತೋಟ ಮಾಡಿದ ಎಲ್ಲ ಕ್ರೆಡಿಟ್ ಅಮ್ಮನಿಗೆ ಸಲ್ಲಬೇಕು ಎಂದಿದ್ದಾರೆ.
ಅಷ್ಟೇಅಲ್ಲ, ಪ್ರೀತಿ ಜಿಂಟಾ ನಟಿಸಿರುವ ಟಾಲಿವುಡ್ನ 'ರಾಜಕುಮಾರುಡು' ಚಿತ್ರಕ್ಕೆ ಇಂದು 21ರ ಸಂಭ್ರಮ. ಈ ಖುಷಿಯನ್ನು ಮಹೇಶ್ ಬಾಬು ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.
![mahesh babus first movie as hero rajakumarudu movie completed 21 years]()
ಮಹೇಶ್ ಬಾಬು ಅವರ ಟ್ವೀಟ್
ಮಹೇಶ್ ಬಾಬು ನಾಯಕನಾಗಿ ಪರಿಚಯವಾದ 'ರಾಜಕುಮಾರುಡು' ಸಿನಿಮಾದಲ್ಲಿ ಪ್ರೀತಿ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ರಾಘವೇಂದ್ರ ರಾವ್ ಅವರು ನಿರ್ದೇಶಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ