Pregnancy Care: ತಾಯಿ ಆಗುತ್ತಿದ್ದರೆ, ಈ ವಿಚಾರಗಳನ್ನು ಮರೆಯಬೇಡಿ

ಗರ್ಭಿಣಿಯರು ತಮ್ಮ ಆರೋಗ್ಯ, ಆಹಾರ ಮತ್ತು ಜೀವನಶೈಲಿಯಲ್ಲಿ ಸರಿಯಾದ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ಅದು ಅವರ ಆರೋಗ್ಯ ಮತ್ತು ಭ್ರೂಣದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಹಾಗಾಗಿ ಇಲ್ಲಿ ನಾವು ಗರ್ಭಿಣಿಯರು ಯಾವ ಪದಾರ್ಥಗಳನ್ನು ಸೇವಿಸಬಾರದು ಎಂಬ ಬಗ್ಗೆ ಹೇಳಿದ್ದೇವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಗರ್ಭಿಣಿಯರು (Pregnant Women’s) ತಮ್ಮ ಆಹಾರ ಮತ್ತು ಜೀವನಶೈಲಿಯನ್ನು (Food And Lifestyle) ಚೆನ್ನಾಗಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಮಹಿಳೆಯರ ಆರೋಗ್ಯವು ಆಹಾರ, ದೈಹಿಕ ಚಟುವಟಿಕೆ, ಒತ್ತಡ (Stress), ಹಾರ್ಮೋನುಗಳ ಬದಲಾವಣೆ ಸೇರಿದಂತೆ ಹಲವು ವಿಷಯಗಳಿಂದ ಪ್ರಭಾವಿತವಾಗಿರುತ್ತದೆ. ಉತ್ತಮ ಜೀವನಶೈಲಿಯು ಮಗುವಿನ ಬೆಳವಣಿಗೆಯಲ್ಲಿ ಬಹಳಷ್ಟು ಪ್ರಯೋಜನ ನೀಡುತ್ತದೆ. ಮತ್ತು ಈ ಅಭ್ಯಾಸಗಳಿಂದ ಮಗು ಆರೋಗ್ಯಕರವಾಗಿರುತ್ತದೆ. ಹೆಚ್ಚಿನ ಮಹಿಳೆಯರು ಗರ್ಭಾವಸ್ಥೆಯಲ್ಲಿ ತಮ್ಮ ದೈನಂದಿನ ಚಟುವಟಿಕೆಗಳನ್ನು ಮುಂದುವರೆಸುವ ಮೂಲಕ ಮತ್ತು ತಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು. ಕೆಲವು ಆಹಾರ ಪದಾರ್ಥಗಳ ಸೇವನೆಯನ್ನು ತಪ್ಪಿಸಬೇಕು. ಇದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ತುಂಬಾ ಮುಖ್ಯ.

    ಗರ್ಭಿಣಿಯರ ಆರೋಗ್ಯ, ಆಹಾರ ಮತ್ತು ಜೀವನಶೈಲಿ

    ಗರ್ಭಿಣಿಯರು ತಮ್ಮ ಆರೋಗ್ಯ, ಆಹಾರ ಮತ್ತು ಜೀವನಶೈಲಿಯಲ್ಲಿ ಸರಿಯಾದ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ಅದು ಅವರ ಆರೋಗ್ಯ ಮತ್ತು ಭ್ರೂಣದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಹಾಗಾಗಿ ಇಲ್ಲಿ ನಾವು ಗರ್ಭಿಣಿಯರು ಯಾವ ಪದಾರ್ಥಗಳನ್ನು ಸೇವಿಸಬಾರದು ಎಂಬ ಬಗ್ಗೆ ಹೇಳಿದ್ದೇವೆ.

    ಆಲ್ಕೋಹಾಲ್ ಸೇವನೆ ಬೇಡ

    ಆಲ್ಕೊಹಾಲ್ ಸೇವನೆ ಗರ್ಭಿಣಿಯರಿಗೆ ಅಪಾಯಕಾರಿ. ಗರ್ಭಿಣಿ ಮದ್ಯಪಾನ ಮಾಡುವಾಗ, ಆಲ್ಕೋಹಾಲ್ ಜರಾಯು ದಾಟುತ್ತದೆ. ಮತ್ತು ಭ್ರೂಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಭ್ರೂಣದ ಆಲ್ಕೋಹಾಲ್ ಸಿಂಡ್ರೋಮ್ಗೆ ಕಾರಣವಾಗಬಹುದು.

    ಇದನ್ನೂ ಓದಿ: ಹೇಗಪ್ಪಾ ತೂಕ ಇಳಿಸೋದು ಎಂಬ ಚಿಂತೆನಾ? ಹಾಗಿದ್ರೆ ತಜ್ಞರು ಹೇಳಿರುವ ಈ ಟಿಪ್ಸ್ ಫಾಲೋ ಮಾಡಿ

    ಗರ್ಭಾಶಯ ಆಲ್ಕೋಹಾಲ್ಗೆ ಒಡ್ಡಿಕೊಳ್ಳುವುದರಿಂದ ಭ್ರೂಣದ ಆಲ್ಕೋಹಾಲ್ ಸಿಂಡ್ರೋಮ್ಗೆ ಸಂಬಂಧಿಸಿದ ಹಲವಾರು ಸಮಸ್ಯೆಗೆ ಇದು ಕಾರಣವಾಗಬಹುದು. ಜೊತೆಗೆ ದೈಹಿಕ ಅಸಾಮರ್ಥ್ಯ,  ಮಾನಸಿಕ ನ್ಯೂನತೆ, ವರ್ತನೆಯ ಸಮಸ್ಯೆಗಳು, ಬೆಳವಣಿಗೆಯಲ್ಲಿ ವಿಳಂಬ ಸಮಸ್ಯೆ ಕಾಡುತ್ತವೆ.

    ಕೆಫೀನ್ ಸೇವನೆ ಹೆಚ್ಚು ಬೇಡ

    ಆಲ್ಕೋಹಾಲ್ ನಂತೆಯೇ ಕೆಫೀನ್ ಕೂಡ ಜರಾಯುವನ್ನು ದಾಟಿ ಭ್ರೂಣದ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಸಂಶೋಧನೆಗಳು ಪ್ರತಿದಿನ 300 ಮಿಗ್ರಾಂಗಿಂತ ಹೆಚ್ಚು ಕೆಫೀನ್ ಸೇವಿಸಬಾರದು ಎಂದು ಹೇಳುತ್ತವೆ. ಇದರ ಅತಿಯಾದ ಸೇವನೆ ಭ್ರೂಣ ಮತ್ತು ಮಗುವಿಗೆ ಹಾನಿಯುಂಟು ಮಾಡುತ್ತದೆ.  ಗರ್ಭಿಣಿಯರು ದಿನಕ್ಕೆ 200 ಮಿಗ್ರಾಂಗಿಂತ ಹೆಚ್ಚು ಕೆಫೀನ್ ಸೇವಿಸಬಾರದು. ದಿನಕ್ಕೆ ಒಂದೂವರೆ ಕಪ್ ಕಾಫಿ ಮಾತ್ರ ಸೇವನೆ ಮಾಡಬೇಕು.

    ಅತಿಯಾದ ಬಿಸಿ ನೀರಿನ ಸ್ನಾನ ಬೇಡ

    ಅತಿಯಾದ ಬಿಸಿ ನೀರಿನ ಸ್ನಾನ ಮತ್ತು ಅತಿಯಾಗಿ ಬಿಸಿಯಾಗುವುದು, ವಿಶ್ರಾಂತಿ, ಗರ್ಭಾವಸ್ಥೆಯ ಅಸ್ವಸ್ಥತೆ ಕಡಿಮೆ ಮಾಡಬಹುದು. ಆದರೆ ತಜ್ಞರು ಬಿಸಿನೀರಿನ ಸ್ನಾನ ಬೇಡವೆಂದು ಗರ್ಭಿಣಿಯರಿಗೆ ಶಿಫಾರಸು ಮಾಡುತ್ತಾರೆ.

    ಅಮೇರಿಕನ್ ಪ್ರೆಗ್ನೆನ್ಸಿ ಅಸೋಸಿಯೇಷನ್ ​​ಪ್ರಕಾರ, ಬಿಸಿನೀರಿನ ತೊಟ್ಟಿಗಳು ಹೈಪರ್ಥರ್ಮಿಯಾ ಅಥವಾ ಅಸಹಜವಾಗಿ ದೇಹದ ಉಷ್ಣತೆ ಹೆಚ್ಚಿಸುತ್ತವೆ. ಇದು ಮಗುವಿನಲ್ಲಿ ಅನೇಕ ಅಸಹಜತೆ ಉಂಟು ಮಾಡುತ್ತದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಕೆಳಗಿನ ಚಟುವಟಿಕೆಗಳನ್ನು ಮಾಡುವುದನ್ನು ತಪ್ಪಿಸಿ.

    ಯೋಗ ಅಥವಾ ಪೈಲೇಟ್ಸ್

    ಸೂರ್ಯನ ಬಿಸಿಲಿಗೆ ದೀರ್ಘಕಾಲ ಕುಳಿತುಕೊಳ್ಳುವುದು

    ಬಿಸಿ ಸ್ಥಳದಲ್ಲಿ ಕುಳಿತುಕೊಳ್ಳುವುದು

    ನಿರ್ಜಲೀಕರಣ

    ಈ ವ್ಯಾಯಾಮ ಮಾಡಬೇಡಿ

    ಕೆಲವು ರೀತಿಯ ವ್ಯಾಯಾಮಗಳನ್ನು ಗರ್ಭಾವಸ್ಥೆಯಲ್ಲಿ ಮಾಡದಂತೆ ವೈದ್ಯರು ತಿಳಿಸುತ್ತಾರೆ. ಗರ್ಭಿಣಿಯರು ಜಂಪಿಂಗ್ ವ್ಯಾಯಾಮ, ಜರ್ಕಿ ವ್ಯಾಯಾಮ, ಮೊದಲ ಮೂರು ತಿಂಗಳ ನಂತರ ಸಿಟಪ್‌ಗಳು, ಕ್ರಂಚಸ್‌ಗಳು, ಭಾರ ಎತ್ತುವಿಕೆ ಮಾಡಬಾರದು.

    ಇನ್ನು ವಾಕಿಂಗ್, ಈಜು ಮತ್ತು ಸ್ಕ್ವಾಟ್‌ಗಳನ್ನು ಗರ್ಭಾವಸ್ಥೆಯಲ್ಲಿ ಮಾಡಬಹುದು ಇದು ಪ್ರಯೋಜನಕಾರಿ.

    ಧೂಮಪಾನ ಬೇಡ

    ಗರ್ಭಾವಸ್ಥೆಯಲ್ಲಿ ಸಿಗರೇಟ್ ಸೇದುವುದು ಹಾನಿಕರ. ಇದು ಹೃದ್ರೋಗ ಮತ್ತು ಶ್ವಾಸಕೋಶದ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ. ಅಕಾಲಿಕ ಜನನ, ಜನ್ಮಜಾತ ಅಸಹಜತೆ, ಮಗುವಿನ ಹಠಾತ್ ಸಾವು, ಜರಾಯು ಸಮಸ್ಯೆ ಉಂಟಾಗುತ್ತವೆ.

    ಇದನ್ನೂ ಓದಿ: ಮಹಿಳೆಯರಲ್ಲಿ ಗರ್ಭಾಶಯದಲ್ಲಿನ ಗಡ್ಡೆ ಆದಾಗ ಯಾವ ಲಕ್ಷಣಗಳು ಕಂಡು ಬರುತ್ತವೆ? ಆಯುರ್ವೇದ ಪರಿಹಾರವೇನು?

    ಗರ್ಭಿಣಿಯರು ಫುಟ್‌ಬಾಲ್ ಅಥವಾ ಬಾಕ್ಸಿಂಗ್‌ನಂತಹ ಕ್ರೀಡೆಗಳನ್ನು ತಪ್ಪಿಸಬೇಕು. ಇದು ಗರ್ಭಾಶಯದ ಗೋಡೆಯಿಂದ ಜರಾಯುವನ್ನು ಅಕಾಲಿಕವಾಗಿ ಬೇರ್ಪಡಿಸುತ್ತದೆ. ಇದು ಅಕಾಲಿಕ ಜನನ ಅಥವಾ ಇತರ ಸಮಸ್ಯೆಗೆ ಕಾರಣವಾಗುತ್ತದೆ.

    ಅಪಾಯಕಾರಿ ಸವಾರಿ, ಮ್ಯೂಸಿಯಂ ಪಾರ್ಕ್‌ಗೆ ಹೋಗುವುದು, ರೋಲರ್ ಕೋಸ್ಟರ್ ಅಥವಾ ಇತರ ಯಾವುದೇ ಸವಾರಿ ಮಾಡುವುದನ್ನು ತಪ್ಪಿಸಬೇಕು.
    Published by:renukadariyannavar
    First published: