ಗರ್ಭಧಾರಣೆ (Pregnancy) ವಿಶೇಷ ಅನುಭವ (Special Feel). ಹೀಗಾಗಿ ತುಂಬಾ ಕಾಳಜಿ (Care) ತೆಗೆದುಕೊಳ್ಳಬೇಕಾಗುತ್ತದೆ. ಗರ್ಭಧಾರಣೆ ಸಮಯದಲ್ಲಿ ತಾಯಿ ಮತ್ತು ಮಗು ಇಬ್ಬರ ಆರೋಗ್ಯ (Health) ಕಾಪಾಡುವುದು ತುಂಬಾ ಮುಖ್ಯ. ಗರ್ಭಧರಿಸಿದ ನಂತರ ಪ್ರತೀ ತಿಂಗಳು ಮಗು (Baby) ಬೆಳವಣಿಗೆಯಾಗುತ್ತಾ (Growth) ಹೋಗುತ್ತದೆ. ಮಗು ಪ್ರತಿ ವಾರ ಮತ್ತು ಪ್ರತಿ ತಿಂಗಳು ಬೆಳವಣಿಗೆಯಾಗುವಾಗ ವಿಶೇಷ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ನಿಯಮಿತವಾಗಿ ತಪಾಸಣೆ ಮಾಡಿಸುವುದು ಮುಖ್ಯ. ತಾಯಿಯು ತನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಜೊತೆಗೆ ಮಗುವಿನ ಬೆಳವಣಿಗೆ ಮತ್ತು ಆರೋಗ್ಯಕ್ಕೆ ಸಹಾಯ ಮಾಡುವ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.
ಗರ್ಭಧಾರಣೆ ವೇಳೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ಸುರಕ್ಷಿತವಾಗಿರಲು ಸಾಧ್ಯವಾಗುವ ಎಲ್ಲಾ ಕ್ರಮ ಮತ್ತು ನಿಯಮ ಪಾಲಿಸಬೇಕಾಗುತ್ತದೆ. ಗರ್ಭಾವಸ್ಥೆಯ ಒಂಭತ್ತು ತಿಂಗಳು ತಾಯಿ ಹಲವು ಸಂಕೇತಗಳನ್ನು ಅನುಭವಿಸಬೇಕಾಗುತ್ತದೆ.
ಇದು ಗರ್ಭಾಶಯದಲ್ಲಿ ಮಗು ಸುರಕ್ಷಿತವಾಗಿದೆಯೋ, ಇಲ್ಲವೋ ಎಂಬುದನ್ನು ತಿಳಿಸುತ್ತದೆ. ಅದೇ ವೇಳೆ ಹುಟ್ಟಲಿರುವ ಮಗು ಸುರಕ್ಷಿತವಾಗಿದೆಯೇ? ಆರೋಗ್ಯ ಹೇಗಿದೆ ಎಂಬುದನ್ನು ತಿಳಿಸುತ್ತದೆ.
ಹಾಗಾದ್ರೆ ಇಲ್ಲಿ ನಾವು ಭವಿಷ್ಯದ ನಿಮ್ಮ ಮಗು ಅನಾರೋಗ್ಯವಾಗಿದ್ದಾಗ ಯಾವೆಲ್ಲಾ ಸಂಕೇತಗಳು ಸಿಗುತ್ತದೆ ಎಂದು ಇಲ್ಲಿ ನೋಡೋಣ.
ಅಸಹಜ ಗರ್ಭಾಶಯದ ಎತ್ತರ
ಮಹಿಳೆಯ ಗರ್ಭಾಶಯವು ಬೆಳೆಯುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಫಂಡಲ್ ಎತ್ತರದಿಂದ ವೈದ್ಯರು ಪತ್ತೆ ಹಚ್ಚುತ್ತಾರೆ. ಸಾಮಾನ್ಯವಾಗಿ ಗರ್ಭಧಾರಣೆಯ 16 ನೇ ವಾರದ ನಂತರ ಗರ್ಭಾಶಯದ ಮೂಲಭೂತ ಎತ್ತರವು ಗರ್ಭಾವಸ್ಥೆಯು ಪ್ರಗತಿಯಲ್ಲಿದೆಯೇ ಅಥವಾ ಇಲ್ಲವೇ ಎಂದು ತಿಳಿಸುತ್ತದೆ.
ಕಡಿಮೆ ಅಥವಾ ಹೆಚ್ಚು ಆಮ್ನಿಯೋಟಿಕ್ ದ್ರವ ಅಥವಾ ಮಗು ಗರ್ಭಾಶಯದಲ್ಲಿ ತಲೆಕೆಳಗಾಗಿ ತಿರುಗಿರುವುದು ಅಸಹಜ ಎತ್ತರಕ್ಕೆಕಾರಣವಾಗಿರುತ್ತದೆ ಅಂತಾರೆ ವೈದ್ಯರು.
ಭ್ರೂಣದ ಹೃದಯ ಬಡಿತ
ಗರ್ಭಧಾರಣೆಯ ಐದನೇ ವಾರದ ನಂತರ ಮಗುವಿನ ಹೃದಯ ಬಡಿತ ಕೇಳಿಸುತ್ತದೆ. ಆರನೇ ವಾರದಲ್ಲಿ ಮಗುವಿನ ಹೃದಯ ಬಡಿತ ಕೇಳಿಸುತ್ತದೆ. ಭ್ರೂಣದ ಹೃದಯ ಬಡಿತದ ಮಾನಿಟರಿಂಗ್ ಮಗುವಿನ ಹೃದಯ ಬಡಿತ ಮತ್ತು ಲಯವನ್ನು ಅಳೆಯುತ್ತದೆ. ಇದು ಗರ್ಭದಲ್ಲಿರುವ ಮಗು ಎಷ್ಟು ಆರೋಗ್ಯಕರವಾಗಿದೆ ಎಂದು ತಿಳಿಯಲು ವೈದ್ಯರಿಗೆ ಸಹಾಯ ಮಾಡುತ್ತದೆ.
ಮಗುವಿನ ಸ್ಥಾನ ಅಥವಾ ಜರಾಯುವಿನ ಸಮಸ್ಯೆಯಿದ್ದಾಗ ಕೆಲವೊಮ್ಮೆ ಮಗುವಿನ ಹೃದಯ ಬಡಿತ ಕೇಳಿಸುವುದಿಲ್ಲ. ಈ ವೇಳೆ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿಸಿದರೆ ಹೃದಯ ಬಡಿತ ಕೇಳಿಸದೇ ಇರುವುದು, ಗರ್ಭಾಶಯದಲ್ಲಿ ಮಗುವಿನ ಬೆಳವಣಿಗೆಗೆ ಅಡ್ಡಿ ಉಂಟಾಗುತ್ತಿದೆ ಎಂಬುದನ್ನು ತಿಳಿಸುತ್ತದೆ.
ಬೆನ್ನು ನೋವು ಬರುವುದು
ಗರ್ಭಾವಸ್ಥೆಯಲ್ಲಿ ತೀವ್ರವಾದ ತಲೆನೋವು, ಹೊಟ್ಟೆ ನೋವು ಅಥವಾ ಸೆಳೆತವು ಗರ್ಭಧಾರಣೆಯ ತೊಡಕಿನ ಸಂಕೇತ ಎಂದು ವರದಿಯೊಂದು ಹೇಳುತ್ತದೆ. ಗರ್ಭಾವಸ್ಥೆಯಲ್ಲಿ ಅವಧಿ ಸೆಳೆತ ಅನುಭವಿಸುವುದು ಒಂದು ಎಚ್ಚರಿಕೆಯ ಚಿಹ್ನೆ ಆಗಿದೆ. ಆಗ ನೀವು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು.
ಕಡಿಮೆ hCG ಮಟ್ಟ
HCG ಗರ್ಭಾವಸ್ಥೆಯಲ್ಲಿ ಜರಾಯು ಉತ್ಪಾದಿಸುವ ಹಾರ್ಮೋನ್ ಆಗಿದೆ. ಗರ್ಭಾವಸ್ಥೆಯ ಪ್ರತಿ ತ್ರೈಮಾಸಿಕದಲ್ಲಿ ಇದರ ಮಟ್ಟವು ಬದಲಾಗುತ್ತದೆ. ಸಾಮಾನ್ಯವಾಗಿ ಇದು 9 ರಿಂದ 16 ನೇ ವಾರದಲ್ಲಿ ತುಂಬಾ ಹೆಚ್ಚುತ್ತದೆ. ಗರ್ಭಾವಸ್ಥೆಯಲ್ಲಿ ಕಡಿಮೆ ಎಚ್‌ಸಿಜಿ ಮಟ್ಟವು ಗರ್ಭಪಾತ ಅಥವಾ ಅಂಡಾಣು ಅಥವಾ ಅಪಸ್ಥಾನೀಯ ಗರ್ಭಧಾರಣೆಗೆ ಕಾರಣ ಆಗುತ್ತದೆ.
ಗರ್ಭಾವಸ್ಥೆಯಲ್ಲಿ ಯಾವ ತೊಡಕು ಉಂಟಾಗುತ್ತವೆ?
ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಪ್ರಕಾರ, ಯುಟಿಐ, ಅಧಿಕ ಬಿಪಿ, ತೂಕ ಹೆಚ್ಚಾಗುವುದು ಮತ್ತು ಸೋಂಕಿನ ಅಪಾಯ ಗರ್ಭಾವಸ್ಥೆ ವೇಳೆ ಹೆಚ್ಚು ಕಂಡು ಬರುತ್ತದೆ.
ಇದನ್ನೂ ಓದಿ: ಸೌಂದರ್ಯಕ್ಕೊಂದೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು ರೋಸ್ ವಾಟರ್
ಮಧುಮೇಹ, ಕ್ಯಾನ್ಸರ್, ಅಧಿಕ ಬಿಪಿ, ಮೂತ್ರಪಿಂಡದ ತೊಂದರೆ, ಅಪಸ್ಮಾರ ಮತ್ತು ರಕ್ತಹೀನತೆ ಸಮಸ್ಯೆ ಇದ್ದರೆ ಗರ್ಭಾವಸ್ಥೆಯಲ್ಲಿ ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ