• Home
  • »
  • News
  • »
  • lifestyle
  • »
  • Pregnancy Proteinuria: ಗರ್ಭಾವಸ್ಥೆಯಲ್ಲಿ ಉಂಟಾಗುವ ಪ್ರೊಟೀನುರಿಯಾಕ್ಕೆ ಕಾರಣ, ತಡೆಗಟ್ಟುವ ಕ್ರಮಗಳು!

Pregnancy Proteinuria: ಗರ್ಭಾವಸ್ಥೆಯಲ್ಲಿ ಉಂಟಾಗುವ ಪ್ರೊಟೀನುರಿಯಾಕ್ಕೆ ಕಾರಣ, ತಡೆಗಟ್ಟುವ ಕ್ರಮಗಳು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗರ್ಭಾವಸ್ಥೆಯು ಸ್ವತಃ ಪ್ರೋಟೀನುರಿಯಾಕ್ಕೆ ಕಾರಣ ಆಗಿದೆ. ಗರ್ಭಾವಸ್ಥೆಯಲ್ಲಿ ಹೆಚ್ಚಿದ ರಕ್ತದ ಪ್ರಮಾಣದ ಕಾರಣ ಮೂತ್ರದಲ್ಲಿ ಪ್ರೋಟೀನ್ ವಿಸರ್ಜನೆ ಹೆಚ್ಚುತ್ತದೆ. ಅಧಿಕ ರಕ್ತದ ಪ್ರಮಾಣವು ಸೀರಮ್ ಯೂರಿಯಾ ಮತ್ತು ಕ್ರಿಯೇಟಿನೈನ್ ಮಟ್ಟವು ಕಡಿಮೆ ಆಗುತ್ತದೆ. ಹಾಗಾಗಿ ಈ ಸಮಯದಲ್ಲಿ ಪ್ರೋಟೀನ್ ವಿಸರ್ಜನೆ ಹೆಚ್ಚುತ್ತದೆ.

ಮುಂದೆ ಓದಿ ...
  • Share this:

    ಮೂತ್ರದಲ್ಲಿ (Urine) ಪ್ರೋಟೀನ್ ಪರೀಕ್ಷೆಯು (Protein Test) ಗರ್ಭಾವಸ್ಥೆಯಲ್ಲಿ (Pregnancy) ದಿನ ನಿತ್ಯದ ಪ್ರಸವಪೂರ್ವ ಆರೈಕೆಯ ಒಂದು ಭಾಗ ಆಗಿದೆ. ಗರ್ಭಾವಸ್ಥೆಯಲ್ಲಿ ಮೂತ್ರದಲ್ಲಿ ಪ್ರೋಟೀನ್ ವಿಸರ್ಜನೆಯು ದ್ವಿಗುಣ ಆಗುತ್ತದೆ. ಮತ್ತು ಸಾಮಾನ್ಯ ಮಹಿಳೆಯರಲ್ಲಿ (Women’s) 150 mg/24 h ಗೆ ವಿರುದ್ಧವಾಗಿ 300 mg/24 h ತಲುಪಬಹುದು. ಅಮೇರಿಕನ್ ಕಾಲೇಜ್ ಆಫ್ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಹೇಳುವ ಪ್ರಕಾರ ಇಪ್ಪತ್ತನಾಲ್ಕು ಗಂಟೆಗಳ ಸಂಗ್ರಹಣೆಯಲ್ಲಿ ಮೂತ್ರದ ಪ್ರೋಟೀನ್ ವಿಸರ್ಜನೆ 300 mg ಗಿಂತ ಹೆಚ್ಚಿದ್ದರೆ ಅದರ ಪ್ರೋಟೀನ್ ಅನುಪಾತವು 0.3 mg/mg ಅಥವಾ ಮೂತ್ರದ ಡಿಪ್ಸ್ಟಿಕ್ ಪರೀಕ್ಷೆಯಲ್ಲಿ 2 ಪ್ಲಸ್ ಆಗಿದೆ.


    ಗರ್ಭಾವಸ್ಥೆಯಲ್ಲಿ ಮೂತ್ರದಲ್ಲಿ ಪ್ರೊಟೀನ್ ಪರೀಕ್ಷೆಯನ್ನು ಪ್ರೋಟೀನುರಿಯಾ ಅಥವಾ ಹೆಚ್ಚಿನ ಪ್ರೋಟೀನ್ ಎಂದು ಹೇಳಬಹುದು. ಗರ್ಭಾವಸ್ಥೆಯಲ್ಲಿ ಹೆಚ್ಚಿದ ಪ್ರೋಟೀನ್ ವಿಸರ್ಜನೆಗೆ ಕಾರಣ ಏನಿರಬಹುದು, ಅದರ ಅಪಾಯಕಾರಿ ಅಂಶಗಳು ಯಾವವು? ಲಕ್ಷಣಗಳು ಹೇಗಿರುತ್ತವೆ? ಮತ್ತು ಗರ್ಭಿಣಿಯರಲ್ಲಿ ಅದಕ್ಕೆ ಹೇಗೆ ಚಿಕಿತ್ಸೆ ನೀಡಬಹುದು ಎಂದು ಇಲ್ಲಿ ತಿಳಿಯೋಣ.


    ಗರ್ಭಾವಸ್ಥೆಯಲ್ಲಿ ಯಾಕೆ ಹೆಚ್ಚಿನ ಪ್ರೋಟೀನ್ ಹೋಗುತ್ತದೆ?


    ಗರ್ಭಾವಸ್ಥೆಯು ಸ್ವತಃ ಪ್ರೋಟೀನುರಿಯಾಕ್ಕೆ ಕಾರಣ ಆಗಿದೆ. ಗರ್ಭಾವಸ್ಥೆಯಲ್ಲಿ ಹೆಚ್ಚಿದ ರಕ್ತದ ಪ್ರಮಾಣದ ಕಾರಣ ಮೂತ್ರದಲ್ಲಿ ಪ್ರೋಟೀನ್ ವಿಸರ್ಜನೆ ಹೆಚ್ಚುತ್ತದೆ. ಅಧಿಕ ರಕ್ತದ ಪ್ರಮಾಣವು ಸೀರಮ್ ಯೂರಿಯಾ ಮತ್ತು ಕ್ರಿಯೇಟಿನೈನ್ ಮಟ್ಟವು ಕಡಿಮೆ ಆಗುತ್ತದೆ. ಹಾಗಾಗಿ ಈ ಸಮಯದಲ್ಲಿ ಪ್ರೋಟೀನ್ ವಿಸರ್ಜನೆ ಹೆಚ್ಚುತ್ತದೆ.


    ಇದನ್ನೂ ಓದಿ: ತೂಕ ಇಳಿಕೆಯ ಜರ್ನಿಯಲ್ಲಿ ಈ ಪಾನೀಯ ಸೇರಿಸಿ ಹೊಟ್ಟೆ ಕೊಬ್ಬನ್ನು ವೇಗವಾಗಿ ಕರಗಿಸಿ!


    ಗರ್ಭಾವಸ್ಥೆಯಲ್ಲಿ ಹೆಚ್ಚಿನ ಪ್ರೋಟೀನ್ ಹೋಗಲು ಕಾರಣಗಳೇನು?


    ಮೊದಲೇ ಅಸ್ತಿತ್ವದಲ್ಲಿರುವ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD), ದೀರ್ಘಕಾಲದ ಅಧಿಕ ರಕ್ತದೊತ್ತಡ ಅಥವಾ ಟೈಪ್ 1 ಅಥವಾ 2 ಡಯಾಬಿಟಿಸ್ ಮೆಲ್ಲಿಟಸ್ ಸಹ ಗರ್ಭಾವಸ್ಥೆಯ ಆರಂಭಿಕ ಹಂತಗಳಲ್ಲಿ ದೀರ್ಘಕಾಲದ ಪ್ರೋಟೀನುರಿಯಾ ಉಂಟು ಮಾಡುತ್ತದೆ.


    ಗರ್ಭಾವಸ್ಥೆಯಲ್ಲಿ ಯುಟಿಐಗಳು ಮೂತ್ರದ ಪ್ರೋಟೀನ್ ಮಟ್ಟದಲ್ಲಿ ತಾತ್ಕಾಲಿಕ ಹೆಚ್ಚಳ ಉಂಟು ಮಾಡುತ್ತವೆ. ಪ್ರೀಕ್ಲಾಂಪ್ಸಿಯಾವು ಗರ್ಭಾವಸ್ಥೆಯ ನಂತರದ ಹಂತಗಳಲ್ಲಿ ಪ್ರೋಟೀನುರಿಯಾ ಉಂಟು ಮಾಡುತ್ತದೆ. ಈ ವೇಳೆ ಗರ್ಭಿಣಿಯರು ಅಧಿಕ ರಕ್ತದೊತ್ತಡ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಹೆಚ್ಚು.


    ಅಪಾಯಕಾರಿ ಅಂಶಗಳು ಯಾವುವು?


    ಗರ್ಭಾವಸ್ಥೆಯಲ್ಲಿ ಮೂತ್ರದಲ್ಲಿ ಹೆಚ್ಚಿನ ಪ್ರೋಟೀನ್ ಸಾಧ್ಯತೆ ಹೆಚ್ಚಿಸುವ ಕೆಲವು ಅಪಾಯಕಾರಿ ಅಂಶಗಳು ಯಾವವು ಎಂದರೆ ಒಂದಕ್ಕಿಂತ ಹೆಚ್ಚು ಬಾರಿ ಹೆರಿಗೆಯಾದ ಮಹಿಳೆಯರಲ್ಲಿ ಸಮಸ್ಯೆ ಕಂಡು ಬರುತ್ತದೆ. ಹಿಂದಿನ ಗರ್ಭಾವಸ್ಥೆಯಲ್ಲಿ ಪ್ರಿಕ್ಲಾಂಪ್ಸಿಯಾ ಹೊಂದಿದ್ದರೆ, 35 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ, ಬೊಜ್ಜು, ಅಧಿಕ ರಕ್ತದೊತ್ತಡ, ಮಧುಮೇಹ ಟೈಪ್ 1 ಅಥವಾ ಟೈಪ್ 2 ಸ್ಥಿತಿ ಇದ್ದವರಲ್ಲಿ ಅಪಾಯಕಾರಿ.


    ಗರ್ಭಾವಸ್ಥೆಯ ಮೂತ್ರದಲ್ಲಿ ಹೆಚ್ಚಿನ ಪ್ರೋಟೀನುರಿಯಾ ರೋಗ ಲಕ್ಷಣಗಳು


    ನೊರೆ ಅಥವಾ ಗುಳ್ಳೆ ಮೂತ್ರ, ತೋಳು ಕಾಲು ಹೊಟ್ಟೆ ಅಥವಾ ಮುಖದಲ್ಲಿ ಊತ, ಆಗಾಗ್ಗೆ ಮೂತ್ರ ವಿಸರ್ಜನೆ, ವಾಕರಿಕೆ ಮತ್ತು ವಾಂತಿ, ರಾತ್ರಿ ಸ್ನಾಯು ಸೆಳೆತ.


    ಚಿಕಿತ್ಸೆ ಏನು?


    ಪ್ರೋಟೀನುರಿಯಾ ಒಂದು ಅಸ್ವಸ್ಥತೆಯಲ್ಲ. ಆದರೆ ಗರ್ಭಿಣಿಯರಲ್ಲಿ ವಿವಿಧ ಅಂಶಗಳು ಮತ್ತು ವೈದ್ಯಕೀಯ ಪರಿಸ್ಥಿತಿಗಳಿಂದ ಉಂಟಾಗುವ ಸ್ಥಿತಿ. ಮೂತ್ರದಲ್ಲಿ ಪ್ರೋಟೀನ್ ಅಂಶ ಹೋಗುವ ಬಗ್ಗೆ ಜಾಗ್ರತೆ ವಹಿಸಬೇಕಾಗುತ್ತದೆ. ಮೂತ್ರದಲ್ಲಿ ಪ್ರೋಟೀನ್ ಮಟ್ಟದಲ್ಲಿ ಸ್ವಲ್ಪ ಹೆಚ್ಚಳ ಸರಳವಾದ ಆಹಾರ ಮತ್ತು ಜೀವನಶೈಲಿ ಬದಲಾಯಿಸಿ.


    ಅಧಿಕ ರಕ್ತದೊತ್ತಡ ಮತ್ತು ಸೋಂಕಿನಂತಹ ಆಧಾರವಾಗಿರುವ ಪರಿಸ್ಥಿತಿಗಳಲ್ಲಿ ಪ್ರೋಟೀನುರಿಯಾ ಸರಿಪಡಿಸಲು ಔಷಧಿ ನೀಡುತ್ತಾರೆ. ಮೂತ್ರದಲ್ಲಿನ ಪ್ರೋಟೀನ್ ಮಟ್ಟ ಕಡಿಮೆ ಮಾಡಲು ಕೆಲವು ಆಹಾರ ವ್ಯಾಯಾಮ, ಜೀವನಶೈಲಿ ಬದಲಾವಣೆ ಅವಶ್ಯಕ.


    ಬೆಂಗಳೂರಿನ ಜೀವೋತ್ತಮ ಸ್ವಾಸ್ಥ್ಯ ಕೇಂದ್ರದ ಆಯುರ್ವೇದ ವೈದ್ಯ ಶರದ್ ಕುಲಕರ್ಣಿ ಪ್ರಕಾರ, ಗರ್ಭಾವಸ್ಥೆಯಲ್ಲಿ ಪ್ರೋಟೀನುರಿಯಾ ತಡೆಗಟ್ಟುವುದು ಕಷ್ಟ. ಆದರೆ ಅದರ ಮುಂದಿನ ಪರಿಣಾಮ ನಿಯಂತ್ರಿಸಬಹುದು.


    ಇದನ್ನೂ ಓದಿ: ಮುಟ್ಟಿನ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಇದ್ರೆ; ಈ ಪರಿಹಾರ ಬಳಸಿ


    ರಕ್ತದ ಸಕ್ಕರೆ ಮಟ್ಟ ನಿಯಮಿತವಾಗಿ ಪರಿಶೀಲಿಸುವುದು, ಆರೋಗ್ಯಕರ ಆಹಾರ ಸೇವನೆ, ಗರ್ಭಧಾರಣೆಯ ಸ್ನೇಹಿ ದೈಹಿಕ ಚಟುವಟಿಕೆ, ಉಪ್ಪು ಮತ್ತು ಪ್ರೋಟೀನ್ ಸೇವನೆ ಮಿತಿಗೊಳಿಸಿ, ಆರೋಗ್ಯಕರ ತೂಕ ಕಾಪಾಡಿಕೊಳ್ಳಿ, ವಿಶ್ರಾಂತಿ ಪಡೆಯಿರಿ, ಹೆಚ್ಚು ನೀರು ಮತ್ತು ದ್ರವಪದಾರ್ಥ ಸೇವಿಸಿ.

    Published by:renukadariyannavar
    First published: