Gym Tips: ಜಿಮ್​ಗೆ ಹೋಗ್ತಿದ್ದೀರಾ? ಹಾಗಾದ್ರೆ ಈ ನಿಯಮಗಳನ್ನು ಪಾಲಿಸಿ

Health Tips: ಪ್ರತಿನಿತ್ಯವೂ ಜಿಮ್ ಗೆ ಹೋಗಿ ವ್ಯಾಯಾಮ ಮಾಡುವವರು ಅತಿಯಾಗಿ ಬೆವರುತ್ತಾರೆ ಹಾಗೂ ಬೇರೆ ವ್ಯಕ್ತಿಗಳು ಬಳಸಿರುವಂತಹ ವಸ್ತುಗಳನ್ನು ವ್ಯಾಯಾಮ ಮಾಡಲು ಬಳಸ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕೆಲವು ಸೋಂಕುಗಳು ದೇಹವನ್ನು ಸೇರುವ ಸಾಧ್ಯತೆ ಇರುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಹದ ಫಿಟ್ನೆಸ್ ಕಡೆಗೆ ಅತಿಯಾಗಿ ಗಮನಹರಿಸುವಂತಹ ಜನರು ಹಲವಾರು ವಿಚಾರಗಳ ಬಗ್ಗೆ ಗಮನ ನೀಡುವುದಿಲ್ಲ.  ಜಿಮ್​ಗೆ ಸಾಮಾನ್ಯವಾಗಿ ಜನರು ತೂಕ ಇಳಿಸಿಕೊಳ್ಳಲು ಅಥವಾ ದೇಹದ ಆರೊಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಹೋಗುತ್ತಾರೆ. ಜಿಮ್​ನಲ್ಲಿ ಹೇಳಿದ ಆಹಾರ ಕ್ರಮಗಳನ್ನು ಸಹ ಪಾಲನೆ ಮಾಡುತ್ತಾರೆ. ಆದರೆ ಅದರ ಜತೆಗೆ ಕೆಲವು ಇತರ ಸ್ವಚ್ಛತಾ ಕ್ರಮಗಳನ್ನು ಪಾಲಿಸಿಕೊಂಡು ಹೋಗಬೇಕು ಎಂಬುದು ಮುಖ್ಯ. ಕೆಲ ನಿಯಮಗಳ ಪಾಲನೆ ಖಂಡಿತವಾಗಿಯೂ ಇದು ತುಂಬಾ ನೆರವಾಗುವುದರ ಜೊತೆಗೆ  ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.

ಯಾಕೆಂದರೆ ಪ್ರತಿನಿತ್ಯವೂ ಜಿಮ್ ಗೆ ಹೋಗಿ ವ್ಯಾಯಾಮ ಮಾಡುವವರು ಅತಿಯಾಗಿ ಬೆವರುತ್ತಾರೆ ಹಾಗೂ ಬೇರೆ ವ್ಯಕ್ತಿಗಳು ಬಳಸಿರುವಂತಹ ವಸ್ತುಗಳನ್ನು ವ್ಯಾಯಾಮ ಮಾಡಲು ಬಳಸ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕೆಲವು ಸೋಂಕುಗಳು ದೇಹವನ್ನು ಸೇರುವ ಸಾಧ್ಯತೆ ಇರುತ್ತದೆ. ಕೊರೊನಾ ಸಮಯದಲ್ಲಿ ಸಣ್ಣ ಸಣ್ಣ ವಿಚಾರಗಳ ಬಗ್ಗೆ ಗಮನ ನೀಡುವುದು ಬಹಳ ಮುಖ್ಯವಾಗುತ್ತದೆ. ನಾವು ಮಾಡುವ ಸಣ್ಣ ತಪ್ಪು ನಮ್ಮ ಆರೋಗ್ಯವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ.

ಹಾಗಾದ್ರೆ ಜಿಮ್​ಗೆ ಹೋಗುವವರು ಯಾವ ನಿಯಮಗಳನ್ನು ಪಾಲಿಸಬೇಕು ಎಂಬುದು ಇಲ್ಲಿದೆ.

ಜಿಮ್​ನಲ್ಲಿ ವ್ಯಾಯಾಮಗಳು ಮುಗಿದ ನಂತರ ಕೈಗಳನ್ನು ಸರಿಯಾಗಿ ತೊಳೆಯದೆ ಇದ್ದರೆ ಅದರಿಂದ ಕೀಟಾಣುಗಳು ಮತ್ತು ಬ್ಯಾಕ್ಟೀರಿಯಾವು ದೇಹವನ್ನು ಸೇರುತ್ತದೆ. ಅವು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹೀಗಾಗಿ ನೀವು ಕೈಗಳನ್ನು ಸರಿಯಾಗಿ ತೊಳೆಯುವುದು ಬಹಳ ಮುಖ್ಯ. ಇನ್ನು ಕೆಲವೊಂದು ಜಿಮ್​ಗಳಲ್ಲಿ ಕೈ ತೊಳೆಯಲು ಯಾವುದೇ ಸೌಲಭ್ಯ ಸಿಗದಿದ್ದಲ್ಲಿ, ಸ್ಯಾನಿಟೈಸರ್ ಬಳಸಿ ಕೈ ಸ್ವಚ್ಛ ಮಾಡಿ.

ಇದನ್ನೂ ಓದಿ: ನಿಮ್ಮ ಆರೋಗ್ಯದ ಮೇಲೆ ಜಾಯಿಕಾಯಿ ಮ್ಯಾಜಿಕ್ ಏನು ಗೊತ್ತಾ?

ಕೊರೊನಾ ಸಂದರ್ಭದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ನಿಮ್ಮ ವಸ್ತುಗಳನ್ನು ಬೇರೆಯವರಿಗೆ ನೀಡಬೇಡಿ. ಅಲ್ಲದೇ ಬೇರೆಯವರ ವಸ್ತುಗಳನ್ನು ಬಳಕೆ ಮಾಡಬೇಡಿ. ಇದು ಸೋಂಕು ಹರಡುವ ಸಾಧ್ಯತೆಯನ್ನು ಹೆಚ್ಚು ಮಾಡುತ್ತದೆ. ಜಿಮ್ ನಲ್ಲಿ ಅವರು ನಿಮಗೆ ಎಷ್ಟೇ ಆಪ್ತರಾಗಿದ್ದರೂ ಯಾವುದೇ ವಸ್ತುವನ್ನು ಹಂಚುವುದು ಒಳ್ಳೆಯದಲ್ಲ. ಅದರಲ್ಲೂ ಟವೆಲ್, ಇಯರ್ ಫೋನ್, ಬಾಟಲಿಗಳಿಂದ ಸೋಂಕು ಬಹು ಬೇಗ ಹರಡುತ್ತದೆ.

ನೀವು ಜಿಮ್ ಗೆ ವ್ಯಾಯಾಮಕ್ಕೆ ಹೋಗುವ ವೇಳೆ, ಅದರಲ್ಲೂ ಕೊರೊನಾ ಸಂದರ್ಭದಲ್ಲಿ ತುಂಬಾ ಎಚ್ಚರ ವಹಿಸಬೇಕು. ಪ್ರತೀ ಸಲ ನೀವು ಯಾವುದೇ ವ್ಯಾಯಾಮದ ಸಾಮಗ್ರಿಯನ್ನು ಬಳಸುವ ಮೊದಲು ಹಾಗೂ ಬಳಿಕ ಒರೆಸಿ. ಯಾಕೆಂದರೆ ಬೇರೆ ಜನರು ಬಳಸಿದ ಕಾರಣದಿಂದ ನಿಮಗೆ ತೊಂದರೆಯಾಗಬಹುದು.

ಜಿಮ್​ ಗೋಗುವಾಗ ಯಾವಾಗಲೂ ಒಂದು ಟವೆಲ್ ಇಟ್ಟುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ.  ಜಿಮ್​ನಲ್ಲಿ ವ್ಯಾಯಾಮ ಮಾಡಿದ ನಂತರ ಬರವರು ಬರುವುದು ಸಾಮಾನ್ಯ.  ಅದನ್ನು ಹಾಕಿರುವ ಶರ್ಟ್ ನಲ್ಲಿ ಒರೆಸುವುದು ಕೆಟ್ಟ ಅಭ್ಯಾಸ. ಅದನ್ನು ಟವೆಲ್​ನಲ್ಲಿ ಒರೆಸುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಟೀ ಶರ್ಟ್ ನಲ್ಲಿ ಇರುವಂತಹ ಸೋಂಕುಗಳು ಮುಖದ ಮೂಲಕ ದೇಹವನ್ನು ಪ್ರವೇಶಿಸುವುದನ್ನ ತಪ್ಪಿಸಬಹುದು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: