Blood Donation: ರಕ್ತದಾನ ಮಾಡುವ ಮುನ್ನ ಹಾಗೂ ರಕ್ತದಾನ ಮಾಡಿದ ಬಳಿಕ ತಪ್ಪದೇ ಈ ಕೆಲಸ ಮಾಡಿ

Blood donation: ಹಸಿವಿನಿಂದಿದ್ದಾಗ ಮತ್ತು ಉಪವಾಸವಿರುವಾಗ ರಕ್ತದಾನ ಮಾಡುವಂತಿಲ್ಲ. ಏಕೆಂದರೆ ಕಳೆದುಕೊಂಡ ರಕ್ತವನ್ನು ಮರುಪೂರೈಕೆ ಮಾಡಲು ದೇಹ ಅದೇ ಕ್ಷಣದಿಂದ ಕಾರ್ಯತತ್ಪರವಾಗುವುದರಿಂದ ಇದಕ್ಕೆ ಹೆಚ್ಚಿನ ಶಕ್ತಿಯ ಮತ್ತು ಪೋಷಕಾಂಶಗಳ ಅಗತ್ಯವಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಎಲ್ಲಾ ದಾನಗಳಿಗಿಂತ ರಕ್ತದಾನ (Blood Donation) ಶ್ರೇಷ್ಠ ಎಂದು ಹಲವರು ಹೇಳುತ್ತಾರೆ. ಏಕೆಂದರೆ ನೀವು ಒಪ್ಪಿ ಮಾಡಲು ಬಯಸುವ ನಿಮ್ಮ ದೇಹದ(Body) ರಕ್ತದಾನ(Blood) ಮತ್ತೊಬ್ಬರ ಜೀವವನ್ನು(Life) ಅಮೃತದಂತೆ ಉಳಿಸುತ್ತದೆ. ಹಲವಾರು ತುರ್ತು ಸಂದರ್ಭಗಳಲ್ಲಿ ತಮ್ಮ ಅಗತ್ಯಕ್ಕೆ ಬೇಕಾದ ಗುಂಪಿನ ರಕ್ತ ಸಿಗದೇ ಸಾವಿರಾರು ಜನರು ಪ್ರಾಣ ಬಿಟ್ಟಿದ್ದಾರೆ(Death). ದಿನದ 24 ಗಂಟೆಗಳಲ್ಲಿ ಯಾವ ಕ್ಷಣವಾದರೂ ಅಮೂಲ್ಯವಾದ ಮಗುವಿನ ಜೀವಕ್ಕೆ ಜನ್ಮ ನೀಡುವ ಗರ್ಭಿಣಿ(Pregnant) ಮಹಿಳೆಯರಿಂದ ಹಿಡಿದು ರಸ್ತೆ ಅಪಘಾತಗಳಲ್ಲಿ(Accident) ರಕ್ತ ಚೆಲ್ಲಿದ ಹಲವಾರು ಮಂದಿ ನಿಮ್ಮ ದೇಹದ ಒಂದು ಬಾಟಲ್ ರಕ್ತಕ್ಕಾಗಿ ಕಾಯುತ್ತಿರುತ್ತಾರೆ ಎಂಬುದು ಸದಾ ನಿಮ್ಮ ನೆನಪಿನಲ್ಲಿರಬೇಕು. ಅಲ್ಲದೇ ಪರೋಕ್ಷವಾಗಿ ರಕ್ತದಾನ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ. ಆದರೆ ರಕ್ತದಾನ ಮಾಡುವ ಮುನ್ನ, ರಕ್ತದಾನ ಮಾಡಿದ ಬಳಿಕ ಕೆಲವು ಎಚ್ಚರಿಕೆಗಳನ್ನು ಖಂಡಿತಾ ವಹಿಸಬೇಕು.

    ರಕ್ತದಾನ ಮಾಡುವ ಮುನ್ನ ಏನು ಮಾಡಬೇಕು..?

    1) ರಕ್ತದಾನಕ್ಕೂ ಮುನ್ನ ಏನಾದರೂ ಆಹಾರ ಸೇವಿಸಿ: ಹಸಿವಿನಿಂದಿದ್ದಾಗ ಮತ್ತು ಉಪವಾಸವಿರುವಾಗ ರಕ್ತದಾನ ಮಾಡುವಂತಿಲ್ಲ. ಏಕೆಂದರೆ ಕಳೆದುಕೊಂಡ ರಕ್ತವನ್ನು ಮರುಪೂರೈಕೆ ಮಾಡಲು ದೇಹ ಅದೇ ಕ್ಷಣದಿಂದ ಕಾರ್ಯತತ್ಪರವಾಗುವುದರಿಂದ ಇದಕ್ಕೆ ಹೆಚ್ಚಿನ ಶಕ್ತಿಯ ಮತ್ತು ಪೋಷಕಾಂಶಗಳ ಅಗತ್ಯವಿದೆ. ರಕ್ತದಾನದ ಬಳಿಕ ಸುಸ್ತಾಗುವುದು ಮತ್ತು ತಲೆಸುತ್ತುವುದು ಸಾಮಾನ್ಯವಾಗಿ ಕಂಡುಬರುತ್ತದೆ. ರಕ್ತದಾನಕ್ಕೂ ಮುನ್ನ ಕೊಂಚವಾದರೂ ಆಹಾರ ಸೇವಿಸುವುದು ಅಗತ್ಯ. ಉಪವಾಸವಿದ್ದವರ ರಕ್ತವನ್ನು ಪಡೆಯಲು ಸಾಧ್ಯವಿಲ್ಲ. ವೈದ್ಯರು ಇದಕ್ಕೆ ಅವಕಾಶ ನೀಡುವುದೂ ಇಲ್ಲ. ಬಳಿಕ ಸಾಕಷ್ಟು ದ್ರವಾಹಾರಗಳನ್ನು ಸೇವಿಸಬೇಕು. ರಕ್ತದಾನದ ಅಗತ್ಯಬೀಳಬಹುದು ಎಂದು ಮೊದಲೇ ಅರಿವಿದ್ದರೆ ಒಂದು ವಾರಕ್ಕೂ ಮೊದಲಿನಿಂದ ಕಬ್ಬಿಣದ ಅಂಶ ಹೆಚ್ಚಿರುವ ಆಹಾರಗಳನ್ನು, ಉದಾಹರಣೆಗೆ ಬಸಲೆ ಸೊಪ್ಪು, ಹೆಚ್ಚಾಗಿ ಸೇವಿಸಿ.

    ಇದನ್ನೂ ಓದಿ: ನಿಮ್ಮಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ಪ್ಲೇಟ್ಲೆಟ್ಸ್ ಸಂಖ್ಯೆ ಕಡಿಮೆಯಾಗಿದೆ ಎಂದರ್ಥ, ನಿರ್ಲಕ್ಷ್ಯ ಬೇಡ

    2) ಹೆಚ್ಚಾಗಿ ನೀರು ಕುಡಿಯಿರಿ: ರಕ್ತದಾನಕ್ಕೆ ಮುಂಚೆ ಸಾಕಷ್ಟು ನೀರು ಕುಡಿಯಬೇಕು ಎಂದು ಹೇಳುತ್ತಾರೆ. ಇದಕ್ಕೆ ಕಾರಣವಿದೆ. ರಕ್ತದಾನ ಮಾಡಿದ ನಂತರ ಕೆಲವರಿಗೆ ತಲೆ ಸುತ್ತು ಬರುತ್ತದೆ. ಏಕೆಂದರೆ ಅವರ ದೇಹದಲ್ಲಿ ಅದಾಗಲೇ ನಿರ್ಜಲೀಕರಣದ ಸಮಸ್ಯೆ ಎದುರಾಗಿರುತ್ತದೆ. ಆದ್ದರಿಂದ ರಕ್ತದಾನ ಮಾಡುವ ಮುಂಚೆ ವೈದ್ಯರು ಸೂಚಿಸಿದ ಪ್ರಮಾಣದಷ್ಟು ನೀರು ಕುಡಿದು ಸ್ವಲ್ಪ ಹೊತ್ತು ಬಿಟ್ಟು ನಂತರ ರಕ್ತದಾನ ಮಾಡಬೇಕು.

    3) ರೆಡ್ ಮೀಟ್ ಸೇವನೆ: ರಕ್ತದಾನಕ್ಕೆ ಒಪ್ಪಿಗೆ ಕೊಡುವ ಮುಂಚೆ ನಿಮ್ಮ ದೇಹ ಸಾಕಷ್ಟು ಸದೃಢವಾಗಿದೆಯೇ ಎಂಬುದನ್ನು ನೀವು ಮೊದಲು ಖಾತ್ರಿ ಪಡಿಸಿಕೊಳ್ಳಬೇಕು. ವೈದ್ಯರು ನಿಮ್ಮಿಂದ ರಕ್ತ ಪಡೆಯುವ ಮುಂಚೆ ನಿಮಗೆ ರಕ್ತ ಪರೀಕ್ಷೆ ಮಾಡುತ್ತಾರೆ. ಅದರಲ್ಲಿ ನೀವು ಉತ್ತೀರ್ಣರಾಗಬೇಕು.ಮುಖ್ಯವಾಗಿ ಅವರು ನಿಮ್ಮ ರಕ್ತದಲ್ಲಿ ಕಬ್ಬಿಣದ ಅಂಶ ಯಾವ ಪ್ರಮಾಣದಲ್ಲಿದೆ ಎಂಬುದನ್ನು ಪರೀಕ್ಷೆ ಮಾಡಲು ಮುಂದಾಗುತ್ತಾರೆ. ಹಾಗಾಗಿ ನೀವು ರಕ್ತದಾನ ಮಾಡಲು ಮನೆಯಿಂದ ಹೊರಡುವ ಮುಂಚೆ ಸ್ವಲ್ಪ ಮಾಂಸಾಹಾರವನ್ನು ಮಿತಿಯಲ್ಲಿ ಸೇವಿಸಿ ಹೊರಡಬಹುದು.

    4) ವಿಟಮಿನ್ ಸಿ ಅಂಶ ಇರುವ ಆಹಾರ: ವಿಟಾಮಿನ್ ಸಿ ಅಂಶವುಳ್ಳ ಆಹಾರವನ್ನು ಸೇವಿಸಿ. ನಿಂಬೆ ಹಣ್ಣಿನ ಜ್ಯೂಸ್, ಆರೇಂಜ್ ಜ್ಯೂಸ್, ಮೂಸಂಬಿ ಜ್ಯೂಸ್, ನೆಲ್ಲಿಕಾಯಿ ಸೇವಿಸಿ.

    5) ಧೂಮಪಾನ/ಮದ್ಯಪಾನ ಸೇವನೆ ತೊರೆಯುವುದು: ಇನ್ನು ಮುಖ್ಯವಾದ ವಿಷಯ ಅಂದ್ರೆ, ಧೂಮಪಾನ ಮತ್ತು ಮದ್ಯಪಾನ ಮಾಡುವ ಅಭ್ಯಾಸವಿದ್ದವರು, ರಕ್ತ ದಾನ ಮಾಡುವ ಎರಡು ವಾರಗಳ ಮುಂಚೆಯೇ ಧೂಮಪಾನ, ಮದ್ಯಪಾನ ಮಾಡುವುದನ್ನು ನಿಲ್ಲಿಸಿಬಿಡಿ. ಇದು ನಿಮ್ಮ ಜೀವಕ್ಕೂ ಒಳ್ಳೆಯದಲ್ಲ, ನೀವು ರಕ್ತ ಕೊಡುವವರ ಆರೋಗ್ಯಕ್ಕೂ ಒಳ್ಳೆಯದಲ್ಲ.

    ಇದನ್ನೂ ಓದಿ: ಸಡನ್​ ಆಗಿ ಬಿಪಿ ಕಡಿಮೆ ಆದ್ರೆ ಟೆನ್ಷನ್​ ಆಗ್ಬೇಡಿ ಇವುಗಳನ್ನು ತಿನ್ನಿ ಸಾಕು

    6) ಕೊಬ್ಬಿನ ಅಂಶ ಇರುವ ಆಹಾರ ಸೇವನೆ ಬೇಡ: ರಕ್ತದಾನಕ್ಕೆ ಮುಂಚೆ ಹೆಚ್ಚು ಕೊಬ್ಬಿನ ಅಂಶ ಇರುವ ಆಹಾರಗಳನ್ನು ಸೇವಿಸಬಾರದು ಎಂದು ಹೇಳುತ್ತಾರೆ. ಹಾಗಾಗಿ ನಿಮ್ಮ ದೇಹದ ಅಗತ್ಯತೆಗೆ ತಕ್ಕಂತೆ ಕೊಬ್ಬಿನ ಅಂಶವನ್ನು ಹೊಂದಿರುವ ಅವಕ್ಯಾಡೊ ಹಣ್ಣುಗಳನ್ನು ರಕ್ತದಾನ ಮಾಡಿದ ನಂತರ ಸೇವಿಸಬಹುದು.
    Published by:ranjumbkgowda1 ranjumbkgowda1
    First published: