Heart Stroke: ಆರೋಗ್ಯಕರ ಹೃದಯಕ್ಕಾಗಿ ಈ Yoga Asana ಅಭ್ಯಾಸ ಮಾಡಿ..!

ಯೋಗ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಸೂರ್ಯ ನಮಸ್ಕಾರ ಮತ್ತು ಚಂದ್ರ ನಮಸ್ಕಾರ ಹೃದಯಕ್ಕೆ ಪ್ರಯೋಜನಕಾರಿ.

ಪ್ರಾತಿನಿಧಿಕ ಚಿತ್ರ Photo: Google

ಪ್ರಾತಿನಿಧಿಕ ಚಿತ್ರ Photo: Google

  • Share this:
ಯೋಗದಿಂದ ದೇಹ, ಮನಸ್ಸು ಮತ್ತು ಆತ್ಮಕ್ಕೆ ಸಾಕಷ್ಟು ಪ್ರಯೋಜನಗಳು ಇವೆ. ಅದರಿಂದ ನೀವು ಹೃದಯದ ಕಾಯಿಲೆಗಳು ಸೇರಿದಂತೆ ಅನೇಕ ಆರೋಗ್ಯದ ಸಮಸ್ಯೆಗಳನ್ನು ಬಾರದಂತೆ ತಡೆಯಬಹುದು. ಹಿಮಾಲಯದ ಸಿದ್ಧ, ಗ್ರ್ಯಾಂಡ್‌ ಮಾಸ್ಟರ್ ಅಕ್ಷರ, ಮಾರಣಾಂತಿಕ ಹೃದಯಾಘಾತವನ್ನು ತಡೆಯುವ  5 ಯೋಗದ ಆಸನಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಪ್ರಾಣಾಯಾಮ ಮತ್ತು ಧ್ಯಾನದ ಪ್ರಯೋಜನಗಳು

ಆರಂಭ ಧ್ಯಾನ, ಶ್ವಾಸ ಧ್ಯಾನ , ಸ್ಥಿತಿ ಧ್ಯಾನ ಮುಂತಾದ ಧ್ಯಾನ ತಂತ್ರಗಳು ಮನಸ್ಸಿನ ಏರಿಳಿತಗಳಿಗೆ ವಿರಾಮ ನೀಡುತ್ತವೆ. ಇದು ನಿಮಗೆ ವಿಶ್ರಾಂತಿ ನೀಡುತ್ತದೆ ಮತ್ತು ಶಾಂತಗೊಳಿಸುತ್ತದೆ. ಇದರ ನಿರಂತರ ಅಭ್ಯಾಸದಿಂದ ನೀವು ವಿಶ್ರಾಂತಿದಾಯಕ ಆಂತರಿಕ ಮತ್ತು ಒಟ್ಟಾರೆ ಆರೋಗ್ಯದ ಪ್ರಯೋಜನಗಳನ್ನು ಪಡೆಯುತ್ತೀರಿ.

World Heart Day 2021 cured of covid follow up with heart check once in 3 months necessary to avoid complications say doctors
ಪ್ರಾತಿನಿಧಿಕ ಚಿತ್ರ


ಯೋಗಾಭ್ಯಾಸ- ಆಸನಗಳು

ಮಂಡುಕಾಸನ – ಮಾಡುವ ವಿಧಾನ

1. ಮೊದಲು ವಜ್ರಾಸನದಲ್ಲಿ ಕುಳಿತುಕೊಳ್ಳಿ. ಇದೊಂದು ಸರವಾದ ಮಂಡಿಯೂರಿ ಕುಳಿತುಕೊಳ್ಳುವ ಭಂಗಿ.

2. ಈಗ ನಿಮ್ಮ ಕೈಗಳಲ್ಲಿ, ನಾಲ್ಕು ಬೆರಳುಗಳ ಒಳಗೆ ಹೆಬ್ಬೆರಳನ್ನು ಸರಿಯಾಗಿ ಜೋಡಿಸಿ.

3. ಹೊಕ್ಕಳಿನ ಎರಡೂ ಬದಿಗಳಲ್ಲಿ ಹೊಟ್ಟೆಯ ಭಾಗದಲ್ಲಿ ನಿಮ್ಮ ಮುಷ್ಟಿಗಳನ್ನು ಇಡಿ.

4. ಈಗ ಉಸಿರು ಬಿಡುತ್ತಾ, ಹೊಟ್ಟೆಯನ್ನು ಸ್ವಲ್ಪ ಒಳಗೆ ಎಳೆದುಕೊಳ್ಳಲು ಪ್ರಾರಂಭಿಸಿ. ಬಳಿಕ ನಿಧಾನಕ್ಕೆ ಮುಂದಕ್ಕೆ ಬಾಗಿ , ನಿಮ್ಮ ಮುಷ್ಟಿಯಿಂದ ಹೊಕ್ಕಳನ್ನು ಒತ್ತಲು ಪ್ರಾರಂಭಿಸಿ.

5. ಬಾಗಿದಾಗ ನಿಮ್ಮ ಬೆನ್ನನ್ನು ಆದಷ್ಟು ನೇರವಾಗಿಡಿ ಮತ್ತು ಹಾಗೆಯೇ ನೇರಕ್ಕೆ ನೋಡುತ್ತಿರಿ.

6. ಈ ಭಂಗಿಯಲ್ಲಿ ಸರಿಯಾಗಿ ಉಸಿರಾಡುತ್ತಿರಿ ಹಾಗೂ ನಿಮಗೆ ಸಾಧ್ಯವಾಗುವಷ್ಟು ಹೊತ್ತು ಇದೇ ಭಂಗಿಯಲ್ಲಿ ಇರಿ.

7. ಈಗ ಭಂಗಿಯಿಂದ ವಿರಮಿಸಿ , ಉಸಿರು ಒಳಗೆ ತೆಗೆದುಕೊಳ್ಳಿ ಮತ್ತು ನಿಧಾನವಾಗಿ ಬಾಗಿದ ಸ್ಥಿತಿಯಿಂದ ಮೇಲಕ್ಕೆ ಏಳಿ, ಕೈಗಳನ್ನು ಸಾಮಾನ್ಯ ಸ್ಥಿತಿಗೆ ತನ್ನಿ ಮತ್ತು ವಿಶ್ರಾಂತಿ ಪಡೆಯಿರಿ.

ಸಾಂದರ್ಭಿಕ ಚಿತ್ರ


ಪದ್ಮಾಸನ – ಮಾಡುವ ವಿಧಾನ

1. ಅರ್ಧ ಪದ್ಮಾಸನದಲ್ಲಿ ಕುಳಿತು, ನಿಮ್ಮ ಬಲ ಪಾದವನ್ನು ಎಡ ತೊಡೆಯ ಮೇಲೆ ಇಡಿ.

2. ನಿಮ್ಮ ಎಡ ಪಾದವನ್ನು ಬಲ ತೊಡೆಯ ಮೇಲೆ ಮೇಲ್ಮುಖವಾಗಿ ಇಡಿ.

3. ನಿಮ್ಮ ಪಾದಗಳನ್ನು ನಿಮ್ಮ ಸೊಂಟದ ಹತ್ತಿರಕ್ಕೆ ಎಳೆಯಿರಿ.

4. ಮೊಣಕಾಲುಗಳನ್ನು ನೆಲಕ್ಕೆ ಸ್ಪರ್ಶಿಸುವಂತೆ ಇಡಿ.

5. ನಿಮ್ಮ ಹಸ್ತಗಳನ್ನು ಮೇಲ್ಮುಖವಾಗಿ ಮೊಣಕಾಲುಗಳ ಮೇಲೆ ಇಡಿ.

6. ಸ್ವಲ್ಪ ಹೊತ್ತು ಇದೇ ಆಸನದಲ್ಲಿ ಇರಿ.

7. ಮತ್ತೊಂದು ಕಾಲಿನ ಮೂಲಕ ಇದೇ ಆಸನವನ್ನು ಪುನರಾವರ್ತಿಸಿ.

ಇದನ್ನೂ ಓದಿ: Weight Loss: ಸೂರ್ಯ ನಮಸ್ಕಾರ ಮಾಡಿ ದೇಹದ ತೂಕ ಇಳಿಸಿ..!

ಪವನಮುಕ್ತಾಸನ – ಮಾಡುವ ವಿಧಾನ

1. ಬೆನ್ನಿನ ಮೇಲೆ ಮಲಗಿ

2.  ಉಸಿರನ್ನು ಎಳೆದುಕೊಳ್ಳಿ ಮತ್ತು ಕಾಲುಗಳನ್ನು ನೆಲದಿಂದ 90 ಡಿಗ್ರಿ ಕೋನಕ್ಕೆ ಏರಿಸಿ.
• ಮಂಡಿಯ ಮೂಲಕ ಕಾಲನ್ನು ಬಾಗಿಸಿ, ಮಂಡಿ ಮತ್ತು ಪಾದಗಳನ್ನು ಜೊತೆಗೂಡಿಸಿ, ಮಂಡಿಗಳನ್ನು ಹೊಟ್ಟೆಗೆ ತಾಗಿಸಿ.

3. ಮಂಡಿಗಳನ್ನು ಎರಡು ಕೈಗಳಿಂದ ಬಾಚಿ ಹಿಡಿದು, ಬಲಕೈಯಿಂದ ಎಡ ಮೊಣಕೈಯನ್ನು, ಎಡ ಕೈಯಿಂದ ಬಲ ಮೊಣಕೈಯನ್ನು ಹಿಡಿದುಕೊಳ್ಳಿ.

4. ಕತ್ತು ಬಾಗಿಸಿ ಮತ್ತು ಗಲ್ಲವನ್ನು ಮೊಣಕಾಲುಗಳ ಮೇಲೆ ಇರಿಸಿ. ಆಸನ ಮುಂದುವರೆಸಿ ಮತ್ತು ಸಾಮಾನ್ಯವಾಗಿ ಉಸಿರಾಡಿ.

ಮಾಲಾಸನ – ಮಾಡುವ ವಿಧಾನ

•1. ಕೈಗಳನ್ನು ದೇಹದ ಬದಿಗಿಟ್ಟು, ತೋಳುಗಳಿಂದ ನೇರವಾಗಿ ನಿಲ್ಲುವ ಮೂಲಕ ಆಸನವನ್ನು ಆರಂಭಿಸಿ.

2. ಮಂಡಿಗಳನ್ನು ಬಾಗಿಸಿ, ಪೆಲ್ವಿಸನ್ನು ಕುಗ್ಗಿಸಿ ಮತ್ತು ಅದನ್ನು ಹಿಮ್ಮಡಿಯ ಮೇಲಿಡಿ.

3.  ನಿಮ್ಮ ಪಾದ ನೆಲದ ಮೇಲೆ ನೇರವಾಗಿರುವಂತೆ ನೋಡಿಕೊಳ್ಳಿ.

4. ನೀವು ನಿಮ್ಮ ಕೈಗಳನ್ನು ನೆಲದ ಮೇಲೆ ಇಡಬಹುದು ಅಥವಾ ಮುಂದಕ್ಕೆ ನಮಸ್ಕಾರದ ರೀತಿಯಲ್ಲೂ ಕೈ ಜೋಡಿಸಿ ಇಟ್ಟುಕೊಳ್ಳಬಹುದು.

5. ಬೆನ್ನು ಮೂಳೆ ನೇರವಾಗಿ ಇರಲಿ.

ಇದನ್ನೂ ಓದಿ: Vidya Balan: ದೇಹದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸಿ ಆಸ್ಪತ್ರೆ ಪಾಲಾಗಿದ್ದ ನಟಿ ವಿದ್ಯಾ ಬಾಲನ್​..!

ನೌಕಾಸನ – ಮಾಡುವ ವಿಧಾನ

1. ಬೆನ್ನಿನ ಮೇಲೆ ಮಲಗಿ

2. ನಿತಂಬಾಸ್ಥಿಯನ್ನು ಸಮತೋಲನಗೊಳಿಸಲು ದೇಹದ ಮೇಲಿನ ಮತ್ತು ಕೆಲಗಿನ ಭಾಗವನ್ನು ಮೇಲಕ್ಕೆ ಎತ್ತಿ.

3. ನಿಮ್ಮ ಕಾಲ್ಬೆರಳುಗಳು ಕಣ್ಣುಗಳಿಗೆ ನೇರವಾಗಿ ಇರಬೇಕು.

4. ನಿಮ್ಮ ಮೊಣಕಾಲು ಮತ್ತು ಮಂಡಿಗಳನ್ನು ನೇರಕ್ಕೆ ಇರಿಸಿ.

5.  ನಿಮ್ಮ ಬಾಹುಗಳು ನೆಲಕ್ಕೆ ಸಮಾನಾಂತವಾಗಿ , ಮುಂದಕ್ಕೆ ಚಾಚಿರಲಿ.

6. ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಿಗಿಗೊಳಿಸಿ.

7. ಬೆನ್ನನ್ನು ನೇರವಾಗಿಸಿ

8. ಉಸಿರಾಟ ಸಾಮಾನ್ಯವಾಗಿ ಇರಲಿ

ಯೋಗ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಸೂರ್ಯ ನಮಸ್ಕಾರ ಮತ್ತು ಚಂದ್ರ ನಮಸ್ಕಾರ ಹೃದಯಕ್ಕೆ ಪ್ರಯೋಜನಕಾರಿ. ಈ ಅನುಕ್ರಮಗಳನ್ನು ಬೆಳಗ್ಗೆ ಮತ್ತು ಸಂಜೆ ವಾರಕ್ಕೆ ಕನಿಷ್ಟ ಮೂರು ಬಾರಿ ಮಾಡಿ. ಭಸ್ತ್ರಿಕಾ ಮತ್ತು ಭ್ರಾಮರಿಯಂತಹ ಪ್ರಾಣಾಯಾಮ ತಂತ್ರಗಳನ್ನು ಮಾಡಬಹುದು.
Published by:Anitha E
First published: