Fitness Tips: ವ್ಯಾಯಾಮದ ನಂತರ ಯಾವ ಆಹಾರಗಳನ್ನು ಸೇವನೆ ಮಾಡುವುದು ಉತ್ತಮ ಗೊತ್ತಾ?

Post Workout Food: ವ್ಯಾಯಾಮದ ನಂತರ ನೀವು ಯಾವ ಆಹಾರವನ್ನು ಸೇವನೆ  ಮಾಡುತ್ತೀರಿ ಎಂಬುದು ಇಲ್ಲಿ ಪ್ರಮುಖವಾಗುತ್ತದೆ. ಸೂಕ್ತ ಪ್ರಮಾಣದ ಪೌಷ್ಟಿಕ ಆಹಾರವು ಒಳ್ಳೆಯ ಪರಿಣಾಮ ಬೀರುತ್ತದೆ. ಪ್ರತಿ ವ್ಯಾಯಾಮದ ನಂತರ ಪ್ರೋಟೀನ್ ಅಗತ್ಯ ಬಹಳಷ್ಟಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಮ್ಮ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ವ್ಯಾಯಾಮ ಅಗತ್ಯ. ಇದು ಕೇವಲ ತೂಕ ಇಳಿಸಲು ಮಾತ್ರವಲ್ಲದೇ ದೇಹದ ಒಟ್ಟಾರೆ ಆರೋಗ್ಯವನ್ನು ಸಹ ಕಾಪಾಡುತ್ತದೆ. ಇನ್ನು ವ್ಯಾಯಾಮ ಮಾಡಲು ಸಹ ಹೆಚ್ಚಿನ ಶಕ್ತಿಯ ಅವಶ್ಯಕತೆ ಇದೆ. ನಮ್ಮಲ್ಲಿ ಶಕ್ತಿ ಕಡಿಮೆ ಇದ್ದರೆ ವ್ಯಾಯಾಮ ಮಾಡಲು ಸಾಧ್ಯವಾಗುವುದಿಲ್ಲ. ಆರೋಗ್ಯಕರ ಆಹಾರ ಬಹಳ ಮುಖ್ಯವಾಗುತ್ತದೆ. ತೂಕ ಹೆಚ್ಚಿಸಿಕೊಳ್ಳಲು ಬಯಸುವವರು ಹೆಚ್ಚಿನ ಪೋಷಕಾಂಶಯುಕ್ತ ಆಹಾರ ಸೇವನೆ ಮಾಡುವುದು ಬಹಳ ಮಖ್ಯವಾಗುತ್ತದೆ. ನೀವು ವ್ಯಾಯಾಮ ಮಾಡಿ ನಿಮ್ಮ ಗುರಿ ಸಾಧಿಸಲು ಆರೋಗ್ಯ ಕ್ರಮ ಉತ್ತಮವಾಗಿರಬೇಕು.

ವ್ಯಾಯಾಮದ ನಂತರ ನೀವು ಯಾವ ಆಹಾರವನ್ನು ಸೇವನೆ  ಮಾಡುತ್ತೀರ ಎಂಬುದು ಇಲ್ಲಿ ಪ್ರಮುಖವಾಗುತ್ತದೆ. ಸೂಕ್ತ ಪ್ರಮಾಣದ ಪೌಷ್ಟಿಕ ಆಹಾರವು ಒಳ್ಳೆಯ ಪರಿಣಾಮ ಬೀರುತ್ತದೆ. ಪ್ರತಿ ವ್ಯಾಯಾಮದ ನಂತರ ಪ್ರೋಟೀನ್ ಅಗತ್ಯ ಬಹಳಷ್ಟಿದೆ.

ಸಾಮಾನ್ಯವಾಗಿ ವ್ಯಾಯಾಮದ ನಂತರ ಸ್ಯಾಯು ನೋವುಗಳು ಕಾಣಿಸಿಕೊಳ್ಳುತ್ತದೆ, ಆದರೆ ಪೋಷಕಾಂಶಯುಕ್ತ ಆಹಾರ ಸೇವನೆ ಈ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಹೆಚ್ಚಿನ ಫೈಬರ್ ಅಂಶ ಮತ್ತು ಕಡಿಮೆ ಕ್ಯಾಲೋರಿ ಇದೆ. ಇದು ಉತ್ತಮ ಕಾರ್ಬೋಹೈಡ್ರೇಟ್​ಗಳನ್ನು ಹೊಂದಿದೆ. ಇದನ್ನು ವ್ಯಾಯಾಮದ ನಂತರ ಇದನ್ನು ಸೇವನೆ ಮಾಡುವುದು ಶಕ್ತಿಯನ್ನು ನೀಡುತ್ತದೆ. ವ್ಯಾಯಾಮ ಮಾಡುವ ಸಮಯದಲ್ಲಿ ಯಾವುದೇ ರೀತಿಯ ಉಪ್ಪು, ಸಂಸ್ಕರಿಸಿದ ಆಹಾರಗಳು, ಪ್ಯಾಕ್ ಮಾಡಿದ ಆಹಾರಗಳನ್ನು ಸೇವನೆ ಮಾಡುವುದು ಉತ್ತಮವಲ್ಲ. ಇದು ನಿಮ್ಮ ವ್ಯಾಯಾಮದ ಮೇಲೆ ಪರಿಣಾಮ ಬೀರುತ್ತದೆ.

ಕೃತಕವಾಗಿ ಸಿಹಿ ಬಳಸಿ ಮಾಡಿರುವ ಪಾನೀಯಗಳನ್ನು ಸೇವಿಸುವುದರ ಬದಲಾಗಿ ಎಳನೀರು ಸೇವಿಸಿ, ಅಲ್ಲದೆ  ರಾಸಾಯನಿಕಗಳನ್ನು ಸೇರಿಸದೆ ಇರುವಂತಹ ಪಾನೀಯಗಳನ್ನು ಸೇವಿಸಿ.

ಇದನ್ನೂ ಸೇವಿಸಿ: ನಿಮ್ಮ ಮೆಟಾಬಲಿಸಮ್ ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ

ನವಣೆ

ಒಳ್ಳೆಯ  ಧಾನ್ಯ ಎಂದರೆ ಅದು ನವಣೆ. ಇದನ್ನು ವ್ಯಾಯಾಮದ ಮೊದಲು ಮತ್ತು ವ್ಯಾಯಾಮದ ನಂತರ ಸೇವಿಸಬಹುದು. ಇದರಲ್ಲಿ ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಅಧಿಕವಾಗಿದ್ದು, ಹೆಚ್ಚು ಪೋಷಕಾಂಶವನ್ನು ನೀಡುತ್ತದೆ. ಅಲ್ಲದೇ ಇದರಲ್ಲಿ ಕಡಿಮೆ ಗ್ಲೈಸೆಮಿಕ್   ಇರುವ ಕಾರಣ ಮಧುಮೇಹ ಇರುವವರಿಗೆ ಇದು ಸೂಕ್ತವಾಗಿದೆ.

ಇದರಲ್ಲಿ ಅಧಿಕ ನಾರಿನಂಶವಿದ್ದು,ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಹೆಚ್ಚು ಪ್ರೋಟೀನ್ ಸೇರಿಸಲು  , ಮೀನು, ಚಿಕನ್, ಹಣ್ಣುಗಳು ಅಥವಾ ತರಕಾರಿಗಳೊಂದಿಗೆ ಈ ನವಣೆಯನ್ನು ಸೇವಿಸುವುದು ಉತ್ತಮ. ತಜ್ಞರ ಪ್ರಕಾರ ದೇಹದ ಒಟ್ಟಾರೆ ಆರೋಗ್ಯ ಕಾಪಾಡುವಲ್ಲಿ ನವಣೆ ಪ್ರಮುಕ ಪಾತ್ರವಹಿಸುತ್ತದೆ.ಸಾಲ್ಮನ್

ವ್ಯಾಯಾಮದ ನಂತರ ಸಾಲ್ಮನ್ ಫಿಶ್ ಸೇವನೆ ಮಾಡುವುದು ಉತ್ತಮ ಪ್ರಯೋಜನ  ನೀಡುತ್ತದೆ. ಇದರಲ್ಲಿ ಪ್ರಮುಖವಾಗಿ ಒಮೆಗಾ – 3 ಕೊಬ್ಬಿನ ಆಮ್ಲಗಳು, ಪ್ರೋಟೀನ್, ವಿಟಮಿನ್ ಬಿ, ಪೊಟ್ಯಾಶಿಯಂ, ಮತ್ತು ಸೆಲೆನಿಯಂ ಇದೆ. ಅಲ್ಲದೆ ಇದರಲ್ಲಿರುವ ಕೊಬ್ಬಿನಾಮ್ಲ ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ವ್ಯಾಯಾಮದ ನಂತರ ಇದರ ಸೇವನೆ ನಿಮ್ಮ ಸ್ನಾಯು ನೋವುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದು ಬಹಳ ಪ್ರಯೋಜನವನ್ನು ನೀಡುತ್ತದೆ.

ಮೊಟ್ಟೆ

ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ವ್ಯಾಯಾಮ ಮಾಡಿದ ನಂತರ ಮೊಟ್ಟೆಗಳನ್ನು ಸೇವನೆ ಮಾಡುವುದು ಸ್ನಾಯುಗಳ ಬಲವರ್ಧನೆಗೆ ಮತ್ತು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  ಅಲ್ಲದೆ ಮೊಟ್ಟೆಗಳು ವಿಟಮಿನ್ ಎ,ಡಿ, ಇ, ಬಿ 12 , ಬಿ 6 ಮತ್ತು ಕೆ ಯಂತಹ ಅಗತ್ಯ ವಿಟಮಿನ್ ಗಳನ್ನು ಸಹ  ಹೊಂದಿದೆ.
Published by:Sandhya M
First published: