ನಿರಂತರ ದುಸ್ವಪ್ನದಿಂದ ಮಾನಸಿಕ ಕಾಯಿಲೆ !

news18
Updated:July 10, 2018, 2:51 PM IST
ನಿರಂತರ ದುಸ್ವಪ್ನದಿಂದ ಮಾನಸಿಕ ಕಾಯಿಲೆ !
news18
Updated: July 10, 2018, 2:51 PM IST
-ನ್ಯೂಸ್ 18 ಕನ್ನಡ

ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಪ್ರತಿಯೊಬ್ಬರಿಗೂ ಕನಸು ಬೀಳುತ್ತದೆ. ಕನಸು ಎಂಬುದು ಕಾಲ್ಪನಿಕ ಕಥೆ ಎನ್ನಬಹುದಾದರೂ, ಇದು ಮನಸಿನ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ.

ಒಳ್ಳೆಯ ಕನಸುಗಳು ಬಿದ್ದರೆ ಮನಸ್ಸಿಗೆ ಹಿತವೆನಿಸಿದರೆ, ಕೆಟ್ಟ ಕನಸು ಮಾನಸಿಕ ಮತ್ತು ಶಾರೀರಿಕವಾಗಿ ಹಿಂಸಿಸುತ್ತದೆ. ಅಷ್ಟೇ ಅಲ್ಲದೆ ನಿರಂತರ ದುಸ್ವಪ್ನ ಅಥವಾ ಕೆಟ್ಟ ಕನಸು ಬೀಳುತ್ತಿದ್ದರೆ 'ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್' (PTSD) ಸಮಸ್ಯೆಗೆ ಕಾರಣವಾಗಬಹುದು.

PTSD ಸಮಸ್ಯೆಯಲ್ಲಿ ಸಾಮಾನ್ಯವಾಗಿ ಹಿಂದಿನ ಘಟನೆಗಳ ಕನಸಿನ ರೂಪದಲ್ಲಿ ಮರುಕಳಿಸುತ್ತದೆ. ಬಾಲ್ಯದ ಆಘಾತ ಮತ್ತು ಕುಟುಂಬ ಒತ್ತಡಗಳು ಕೂಡ PTSD ಸಮಸ್ಯೆಯನ್ನು ಹೆಚ್ಚಿಸಬಹುದು. ಈ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ  'ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್' ರೋಗಕ್ಕೆ ಒಳಗಾಗಿದ್ದೀರಿ ಎಂದರ್ಥ.


  • ದುಸ್ವಪ್ನದಿಂದ ಎಚ್ಚರಗೊಳ್ಳುವುದು. ಒಂದು ಘಟನೆ ನಿರಂತರ ಕನಸಿನಲ್ಲಿ ಕಾಣುವುದು.

  • ಸ್ವಪ್ನದಲ್ಲಿ ಕಂಡಂತಹ ಘಟನೆಗಳನ್ನು ನೆನಪಿಟ್ಟುಕೊಳ್ಳಲು ಅಥವಾ ಮರೆಯಲು ತೊಂದರೆ ಉಂಟಾಗುವುದು.

  • Loading...

  • ಇದ್ದಕ್ಕಿದ್ದಂತೆ ಕೋಪಗೊಂಡು ಹಿಂಸಾರೂಪ ತಾಳುವುದು. ಭಯಯೊಂದಿಗೆ ಸ್ನಾಯುವಿನಲ್ಲಿ ನೋವು ಕಾಣಿಸಿಕೊಳ್ಳುವುದು. ಭಾವುಕತೆ ಮತ್ತು ಅವಮಾನದ ಕುರಿತು ಅಲೋಚನೆ.


ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರನ್ನು ಬೇಟಿಯಾಗಿ ಪರಿಹಾರ ಕಂಡು ಕೊಳ್ಳಬೇಕಾಗಿದೆ. ಸಾಮಾನ್ಯವಾಗಿ ದುಸ್ವಪ್ನದಿಂದ ಉಂಟಾಗುವ ಮಾನಸಿಕ ಅಸ್ವಸ್ಥತೆಗೆ ವೈದ್ಯರು ಮೂಡ್​ ಎಲಿವೆಟರ್ ಥೆರಪಿ ಬಳಸಿ ಚಿಕಿತ್ಸೆ ನೀಡುತ್ತಾರೆ. ಅಲ್ಲದೆ ಸಮ್ಮೋಹನ (Hypnosis) ವಿದ್ಯೆ ಮೂಲಕ ಕೂಡ PTSD ಸಮಸ್ಯೆಯಿಂದ ಪಾರಾಗಬಹುದು. ಇದಲ್ಲದೆ ಇನ್ನೂ ಮೂರು ರೀತಿಯ ಚಿಕಿತ್ಸಾ ವಿಧಾನದ ಮೂಲಕ ಪರಿಹಾರ ಕಾಣಬಹುದು.

1- ಕಾಗ್ನೆಟಿವ್ ಬಿಹೆವಿಯರಲ್ ಥೆರಪಿ : ಸಾಮಾನ್ಯವಾಗಿ ಮಾನಸಿಕ ಸಮಸ್ಯೆಯನ್ನು ಹೋಗಲಾಡಿಸಲು ಈ ಥೆರಪಿಯನ್ನು ಬಳಸಲಾಗುತ್ತದೆ. ಇದೊಂದು ವೈಜ್ಞಾನಿಕ ಸಂಭಾಷಣಾ ವಿಧಾನವಾಗಿದ್ದು, ಭಾವಾನಾತ್ಮಕ ಘಟನೆ ಮತ್ತು ಚಿಂತನೆಯಿಂದ ಹೊರ ಬರಲು ಈ ಥೆರಪಿ ಮೂಲಕ ರೋಗಿಯೊಂದಿಗೆ ಮಾತನಾಡಲಾಗುತ್ತದೆ.

2- ಆಘಾತ ಕೇಂದ್ರಿತ CBT : ಈ ವಿಧಾನದಲ್ಲಿ ಆಘಾತಗೊಂಡಿರುವ ರೋಗಿಯ ಮಾನಸಿಕ ಆತಂಕವನ್ನು ನಿವಾರಿಸಲು ಪ್ರಯತ್ನಿಸಲಾಗುತ್ತದೆ.

3- ಪುನಾರ್ವತನೆ ಚಿಕಿತ್ಸೆ : ಈ ಚಿಕಿತ್ಸಾ ಪದ್ದತಿಯಲ್ಲಿ ವೈದ್ಯರು ಮಾನಸಿಕವಾಗಿ ಕುಗ್ಗಿರುವ ರೋಗಿಯ ಬೆರಳನ್ನು ಪರಿಶೀಲಿಸಿ ಮಾನಸಿಕ ಆಘಾತದ ಕುರಿತು ತಿಳಿಸುತ್ತಾರೆ. ಇದು PTSD ಚಿಕಿತ್ಸೆಯಲ್ಲಿ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ.
First published:July 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...