HOME » NEWS » Lifestyle » POST OFFICE MONEY BACK SCHEME CAN GIVE RETURNS OF UP TO RS 14 LAKH KVD

Post Office Money Back Scheme: ಪೋಸ್ಟ್ ಆಫೀಸ್​​​ನಿಂದ ₹14 ಲಕ್ಷದವರೆಗೆ ವಿಮೆ ಹಣ ಹಿಂತೆಗೆಯಲು ಅವಕಾಶ!

ನಿತ್ಯ 95 ರೂಪಾಯಿ ಹೂಡಿಗೆ ಮಾಡುವ ಮೂಲಕ 14 ಲಕ್ಷದವರೆಗೆ ವಿಮೆ ಪಡೆಯಬಹುದಾಗಿತ್ತು. 15 ಇಲ್ಲವೇ 20 ವರ್ಷಗಳ ಅವಧಿಯ ಈ ವಿಮೆ ಹಣವನ್ನು ಈಗ ಹಿಂತೆಗೆಯಲು ಅವಕಾಶ ನೀಡಲಾಗಿದೆ.

Kavya V | news18-kannada
Updated:June 14, 2021, 5:30 PM IST
Post Office Money Back Scheme: ಪೋಸ್ಟ್ ಆಫೀಸ್​​​ನಿಂದ ₹14 ಲಕ್ಷದವರೆಗೆ ವಿಮೆ ಹಣ ಹಿಂತೆಗೆಯಲು ಅವಕಾಶ!
ಪೋಸ್ಟ್​​ ಆಫೀಸ್​​ ಬ್ಯಾಂಕ್​
  • Share this:
ಕೊರೊನಾ, ಲಾಕ್​ಡೌನ್​ನಿಂದ ಭಾರತದ ಮಧ್ಯಮ ವರ್ಗ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದೆ. ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಇಪಿಎಫ್​​​ ಈಗಾಗಲೇ ತನ್ನ ಚಂದಾದಾರರಿಗೆ ಹಣ ಹಿಂತೆಗೆಯಲು ಅವಕಾಶಗಳನ್ನು ನೀಡಿದೆ. ಹೆಚ್ಚಿನ ಬಡ್ಡಿಯನ್ನೂ ನೀಡುವ ಮೂಲಕ ನೆರವಾಗುತ್ತಿದೆ. ಇದೇ ಮಾದರಿಯಲ್ಲಿ ಪೋಸ್ಟ್​​ಆಫೀಸ್​ ಬ್ಯಾಂಕ್​​ ಕೂಡ ತನ್ನ ಖಾತೆದಾರರಿಗೆ ಹಣ ಹಿಂತೆಗೆಯಲು ದೊಡ್ಡ ಅವಕಾಶವನ್ನು ನೀಡಿದೆ. ಮನಿ ಬ್ಯಾಕ್​​ ಸ್ಕೀಮ್​​ನಡಿ 14 ಲಕ್ಷದವರೆಗೂ ಹಣ ಹಿಂಪಡೆಯಲು ಅವಕಾಶ ನೀಡಿದೆ. ಸಣ್ಣ ಮೊತ್ತದ ಹಣ ಹೂಡಿಕೆ ಮೂಲಕ ದೊಡ್ಡ ಪ್ರಮಾಣದ ಉಳಿತಾಯ ಮಾಡುತ್ತಿದ್ದವರಿಗೆ ಕಷ್ಟ ಕಾಲದಲ್ಲಿ ಹಣ ತೆಗೆದುಕೊಳ್ಳಲು ಅವಕಾಶ ನೀಡಿದೆ.

ಗ್ರಾಮ ಸುಮಂಗಳ ರೂರಲ್​​ ಪೋಸ್ಟ್​​ ಜೀವ ವಿಮೆ ಯೋಜನೆ (Gram Sumangal Rural Postal Life Insurance Scheme) ಯಡಿ ಹಣ ಕಟ್ಟಿದ್ದ ಗ್ರಾಹಕರು ಈಗ 14 ಲಕ್ಷದವರೆಗೆ ಹಣವನ್ನು ಹಿಂತೆಗೆಯಬಹುದು. ಗ್ರಾಮೀಣ ಭಾಗದವರಿಗಾಗಿ 1995ರಲ್ಲಿ ಭಾರತ ಸರ್ಕಾರ​ ಈ ಯೋಜನೆಯನ್ನು ಜಾರಿಗೆ ತಂದಿತ್ತು. ನಿತ್ಯ 95 ರೂಪಾಯಿ ಹೂಡಿಗೆ ಮಾಡುವ ಮೂಲಕ 14 ಲಕ್ಷದವರೆಗೆ ವಿಮೆ ಪಡೆಯಬಹುದಾಗಿತ್ತು. 15 ಇಲ್ಲವೇ 20 ವರ್ಷಗಳ ಅವಧಿಯ ಈ ವಿಮೆ ಹಣವನ್ನು ಈಗ ಹಿಂತೆಗೆಯಲು ಅವಕಾಶ ನೀಡಲಾಗಿದೆ. ಮೆಚ್ಯುರಿಟಿ ಅವಧಿಗೂ ಮುನ್ನ 3 ಬಾರಿ ಹಣ ಪಡೆಯಲು ಅವಕಾಶ ನೀಡಲಾಗಿದೆ.15 ವರ್ಷಗಳವರೆಗೆ ವಿಮೆ ಮಾಡಿಸಿದ್ದರೆ ಒಟ್ಟು ಮೊತ್ತದ ಶೇ.20ರಷ್ಟು ಹಣವನ್ನು ಹಿಂತೆಗೆದುಕೊಳ್ಳಬಹುದು. ವಿಮೆ ಅವಧಿ ಕನಿಷ್ಟ 6 ವರ್ಷಗಳನ್ನು ಪೂರೈಸಿರಬೇಕು. 20 ವರ್ಷಗಳ ಅವಧಿಗೆ ವಿಮೆ ಮಾಡಿದ್ದರೆ, ವಿಮೆ ಅವಧಿ 8 ವರ್ಷಗಳನ್ನು ಪೂರೈಸಿದ್ದರೆ ಶೇ.20ರಷ್ಟು ಹಣವನ್ನು ಹಿಂಗೆದುಕೊಳ್ಳಬಹುದಾಗಿದೆ.
Youtube Video

ಇನ್ನು ದೇಶದಲ್ಲಿ ಕೊರೊನಾ 2ನೇ ಅಲೆ ತಗ್ಗುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 70,421 ಹೊಸ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಕೊರೊನಾ ಪ್ರಕರಣಗಳ ಸಂಖ್ಯೆ 2,95,10,410ಕ್ಕೆ ಏರಿಕೆಯಾಗಿದೆ. ಒಂದೇ ದಿನ ಸೋಂಕಿನಿಂದ 3, 921 ಜನ ಮೃತಪಟ್ಟಿದ್ದಾರೆ. ಈವರೆಗೆ ಕೊರೊನಾದಿಂದ ಸತ್ತವರು 3,74,305ಕ್ಕೆ ಏರಿಕೆಯಾಗಿದೆ.ಇನ್ನು ಒಂದೇ ದಿನ ಸೋಂಕಿನಿಂದ 1,19,501 ಜನ ಗುಣಮುಖರಾಗಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 2,81,62,947ಕ್ಕೆ ಏರಿಕೆಯಾಗಿದೆ. ದೇಶಾದ್ಯಂತ ಸದ್ಯ 9,73,158 ಆಕ್ಟೀವ್​ ಕೇಸ್​ಗಳಿವೆ ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೋವಿಡ್​​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Kavya V
First published: June 14, 2021, 5:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories