ಕೇಂದ್ರ ಸರ್ಕಾರ ಚಾಪೆ ಕೆಳಗೆ ನುಸುಳಿದ್ರೆ, ಪೋರ್ನ್​ ಪ್ರಿಯರು ರಂಗೋಲಿ ಕೆಳಗೆ ತೂರಿ ವೀಡಿಯೊ ವೀಕ್ಷಿಸುತ್ತಿದ್ದಾರೆ..!

ವಿಶ್ವದಲ್ಲೇ ಅತಿ ಹೆಚ್ಚು ಅಶ್ಲೀಲ ವೀಡಿಯೊ ವೀಕ್ಷಿಸುವ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.

news18
Updated:December 24, 2018, 11:25 AM IST
ಕೇಂದ್ರ ಸರ್ಕಾರ ಚಾಪೆ ಕೆಳಗೆ ನುಸುಳಿದ್ರೆ, ಪೋರ್ನ್​ ಪ್ರಿಯರು ರಂಗೋಲಿ ಕೆಳಗೆ ತೂರಿ ವೀಡಿಯೊ ವೀಕ್ಷಿಸುತ್ತಿದ್ದಾರೆ..!
ಸಾಂದರ್ಭಿಕ ಚಿತ್ರ
news18
Updated: December 24, 2018, 11:25 AM IST
ಕಾಮಪ್ರಚೋದಕ ವಿಷಯಗಳನ್ನು ಒಳಗೊಂಡ 827 ಪೋರ್ನ್​ ವೆಬ್​ಸೈಟ್​ಗಳನ್ನು ನಿಷೇಧಿಸುವಂತೆ ಇಂಟರ್ನೆಟ್​ ಸೇವೆ ಒದಗಿಸುವ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಈ ಹಿಂದೆ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಜಿಯೋ, ಏರ್​ಟೆಲ್​ ಸೇರಿದಂತೆ ಎಲ್ಲ ನೆಟ್​ವರ್ಕ್​ ಪ್ರೊವೈಡರ್​ ಕಂಪೆನಿಗಳು ಪೋರ್ನ್​ ಸೈಟ್​ಗಳನ್ನು ಬ್ಲಾಕ್ ಮಾಡಿತ್ತು.

ಆದರೆ ಸರ್ಕಾರದ ಈ ಕ್ರಮದಿಂದ ಪೋರ್ನ್​ ಪ್ರಿಯರಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂಬ ಅಚ್ಚರಿಯ ಸುದ್ದಿಯೊಂದು ಇದೀಗ ಹೊರ ಬಿದ್ದಿದೆ. ಏಕೆಂದರೆ ಪೋರ್ನ್​ ಪ್ರಿಯರು ಇದಕ್ಕಾಗಿ ಪರ್ಯಾಯ ಮಾರ್ಗವನ್ನು ಕಂಡು ಕೊಂಡಿದ್ದಾರೆ. ದೇಶದ ಹೆಚ್ಚಿನ ಜನರು ಟೊರ್​ ಎಂಬ ಬ್ರೌಸರ್ ಮೊರೆ ಹೋಗಿದ್ದು, ಆ ಮೂಲಕ ತಮ್ಮ ದಾಹವನ್ನು ತೀರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಈ ಬ್ರೌಸರ್​ ಬಳಸಿ ದೇಶದಲ್ಲಿ ಬ್ಯಾನ್​ ಮಾಡಲ್ಪಟ್ಟ ಯಾವುದೇ ವೆಬ್​ಸೈಟ್​ಗಳಿಗೆ ಭೇಟಿ ನೀಡಬಹುದು. ಇದೊಂದು ಡಾರ್ಕ್​ ಬ್ರೌಸರ್​ ಆಗಿದ್ದು, ಇಲ್ಲಿ ನಿಮ್ಮ ಐಪಿ ಅಡ್ರೆಸ್​ ಪತ್ತೆಯಾಗುವುದಿಲ್ಲ. ಇಂತಹದೊಂದು ಬ್ರೌಸರ್​ ಮಾಹಿತಿ ತಿಳಿಯುತ್ತಿದ್ದಂತೆ ಹೆಚ್ಚಿನ ಜನರು ಕಾನೂನು ಬಾಹಿರವಾದ ಈ ಬ್ರೌಸರ್​ನ ಬಳಕೆಗೆ ಇಳಿದಿದ್ದಾರೆ.  ಈ ಮೂಲಕ ಅಶ್ಲೀಲ ವೀಡಿಯೊಗಳನ್ನು​ ವೀಕ್ಷಿಸುತ್ತಿದ್ದಾರೆ ಎನ್ನಲಾಗಿದೆ.

ಸ್ಥಳೀಯ ನೆಟ್​ವರ್ಕ್​ನಲ್ಲಿ ಮಾತ್ರ ಬ್ಯಾನ್‌

ಭಾರತದಲ್ಲಿ ಪೋರ್ನ್‌ ವೆಬ್‌ಸೈಟ್‌ಗಳನ್ನು ದೇಶದ ಇಂಟರ್‌ನೆಟ್‌ ಸೇವಾ ಪೂರೈಕೆದಾರರ ಮಟ್ಟದಲ್ಲಿ ಮಾತ್ರ ನಿಷೇಧಿಸಲ್ಪಟ್ಟಿದೆ. ಅಂದರೆ ಬಳಕೆದಾರನು ಪ್ರತ್ಯೇಕ VPN (Virtual Private Network), ಅಥವಾ ಟೊರ್​ ವೆಬ್‌ ಬ್ರೌಸರ್‌ ಬಳಸಿ ಬ್ಯಾನ್‌ ಆದ ಅಶ್ಲೀಲ ಸೈಟ್​ಗಳನ್ನು ವೀಕ್ಷಿಸಬಹುದು.

ಟೋರ್​ ಎಂಬ ಡಾರ್ಕ್‌ವೆಬ್‌ ಬ್ರೌಸರ್​
ಟೋರ್‌ ಬ್ರೌಸರ್‌ಗಳ ಮುಖಾಂತರ ಯಾವುದೇ ವೆಬ್​ಸೈಟ್​ನ್ನು ಪ್ರವೇಶಿಸಬಹುದು. ಇಲ್ಲಿ ವೆಬ್‌ಸೈಟ್‌ಗಳ ಬಳಕೆಯ ಐಪಿ ಅಡ್ರೆಸ್‌ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಈ ಬ್ರೌಸರ್​ನ್ನು ಡಾರ್ಕ್‌ವೆಬ್‌ನ ಅತ್ಯಂತ ಬಲಿಷ್ಠ ಬ್ರೌಸರ್​ ಎನ್ನಲಾಗುತ್ತದೆ. ಇದನ್ನು ಅಕ್ರಮ ಚಟುವಟಿಕೆಗಳಿಗಾಗಿ ಹೆಚ್ಚು ಬಳಸುತ್ತಾರೆ. ಇದು ಸರಕಾರದ ಅಧೀನದಲ್ಲಿ ಒಳಪಡದಿರುವುದರಿಂದ ಇದೇ ಬ್ರೌಸರ್ ಈಗ ಪೋರ್ನ್​ ಪ್ರಿಯರಿಗೆ ವರದಾನವಾಗಿ ಪರಿಣಮಿಸಿದೆ.
Loading...

ಇದನ್ನೂ ಓದಿ: ಬೆಂಗಳೂರಿನಲ್ಲೊಬ್ಬ ಸೈಕೋಪಾಥ್: ಪ್ರೀತ್ಸೆ..ಪ್ರೀತ್ಸೆ..ಎಂದು ಮಹಿಳೆಯರ ಹಿಂದೆ ಬೀಳುತ್ತಿರುವ ಯುವಕ

ಭಾರತದಲ್ಲಿ ಇದೀಗ ಟೊರ್ ಬ್ರೌಸರ್ ಆ್ಯಪ್​ಗಳು ಲಭ್ಯವಾಗುತ್ತಿದ್ದು ಎನ್ನಲಾಗಿದ್ದು, ಇದರಿಂದ ಬಳಕೆದಾರರಿಗೆ ಯಾವುದೇ ವೆಬ್​ಸೈಟ್​​ನ್ನು ಬೇಕಾದರೂ ಒಪನ್​ ಮಾಡಿಕೊಳ್ಳಬಹುದಾಗಿದೆ. ಇಲ್ಲಿ ಮುಖ್ಯವಾಗಿ ಪೋರ್ನ್​ ಸೈಟ್,​ ಫೇಸ್​ಬುಕ್ ಸೇರಿದಂತೆ ಯಾವುದೇ ಸಮಾಜಿಕ ಜಾಲತಾಣವನ್ನು ಬಳಸಿದರೆ ಬಳಕೆದಾರನ ಮಾಹಿತಿಗಳನ್ನು ಲಭ್ಯವಾಗುವುದಿಲ್ಲ. ಏಕೆಂದರೆ ಈ ಬ್ರೌಸರ್​ ಮೂಲಕ ನೀವು ಯಾವುದೇ ಸೈಟ್​ನ್ನು ಒಪನ್​ ಮಾಡಿಕೊಂಡರೂ ನಿಮ್ಮ ಐಪಿ ಅಡ್ರೆಸ್​ ಪತ್ತೆಯಾಗುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್​ ಕಳ್ಳರು ಅನೇಕ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಆರ್​ಪಿಎಫ್​ ನೇಮಕಾತಿ: ಎಸ್​ಎಸ್​ಎಲ್​ಸಿ ಪಾಸಾದವರಿ ಸರ್ಕಾರಿ ಉದ್ಯೋಗ ಪಡೆಯಲು ಸುವರ್ಣಾವಕಾಶ

ಅಮೆರಿಕ ಹುಟ್ಟು ಹಾಕಿದ ಬ್ರೌಸರ್
1990 ರಲ್ಲಿ ಅಮೆರಿಕದ ನೌಕಾ ಸಂಶೋಧನಾ ಪ್ರಯೋಗಾಲಯ​ ಟೊರ್​ ಬ್ರೌಸರ್​ನ್ನು ಪರಿಚಯಿಸಿತು. ಇದನ್ನೇ ಬಳಸಿ ಮುಂದೆ ಚೀನಾ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳ ಮೇಲೆ ಸೈಬರ್​ ದಾಳಿ ನಡೆಸಿ ಗೌಪ್ಯ ಮಾಹಿತಿಗಳನ್ನು ಅಮೆರಿಕ ಕಲೆ ಹಾಕಿತ್ತು. ಅನಂತರ ಈ ಬ್ರೌಸರ್​ ಸಾರ್ವಜನಿಕ ಬಳಕೆಗೆ ಲಭಿಸಿದ್ದರಿಂದ ಅಕ್ರಮ ಚಟುವಟಿಕೆಗಳ ಕಾರ್ಯಕ್ಷೇತ್ರವಾಗಿ ಮಾರ್ಪಟ್ಟಿದೆ ಎನ್ನಲಾಗಿದೆ. ಗ್ಲೋಬಲ್‌ ಕ್ರೈಂ ಲೋಕದ ಮುಖ್ಯ ಕಚೇರಿಯಂತೆ ಡಾರ್ಕ್‌ವೆಬ್ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಮುಖ್ಯವಾಗಿ ಟೊರ್​ ಬ್ರೌಸರ್​ ಪ್ರಮುಖ ಪಾತ್ರವಹಿಸುತ್ತಿದೆ.

ಇದನ್ನೂ ಓದಿ: ಯಾವ ಸಮಯದಲ್ಲಿ ಲೈಂಗಿಕ ಕ್ರಿಯೆ ಉತ್ತಮ?: ಸಂಶೋಧನೆಯಿಂದ ತಿಳಿದು ಬಂತು ಹೊಸ ಸತ್ಯ

ವಿಶ್ವದಲ್ಲೇ ಅತಿ ಹೆಚ್ಚು ಅಶ್ಲೀಲ ವೀಡಿಯೊ ವೀಕ್ಷಿಸುವ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತೀಯರು, ದೇಶದಲ್ಲಿ ಪೋರ್ನ್ ಸೈಟ್​ ನಿಷೇಧವಾದ ಬೆನ್ನಲ್ಲೇ ಮತ್ತೊಂದು ಪರ್ಯಾಯ ಬ್ರೌಸರ್​​ ಮೂಲಕ ಪೋರ್ನ್​ ವೀಕ್ಷಿಸುತ್ತಿದ್ದಾರೆ. ಒಟ್ಟಿನಲ್ಲಿ ಸರ್ಕಾರ ಚಾಪೆ ಕೆಳಗೆ ನುಸುಳಿದರೆ, ಪೋರ್ನ್​ ಪ್ರಿಯರು ರಂಗೋಲಿ ಕೆಳಗೆ ತೂರಿದ್ದಾರೆ ಎನ್ನಬಹುದು.

First published:December 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ