• Home
 • »
 • News
 • »
 • lifestyle
 • »
 • Food : ಉಡುಪಿ ತಿಂಡಿ ಅಂದ್ರೆ ಕೇವಲ ಇಡ್ಲಿ-ಸಾಂಬರ್ ಅಲ್ಲ..ಇಲ್ಲಿದೆ ನೋಡಿ ಉಡುಪಿಯ ಬೆಸ್ಟ್ ಫುಡ್ಸ್

Food : ಉಡುಪಿ ತಿಂಡಿ ಅಂದ್ರೆ ಕೇವಲ ಇಡ್ಲಿ-ಸಾಂಬರ್ ಅಲ್ಲ..ಇಲ್ಲಿದೆ ನೋಡಿ ಉಡುಪಿಯ ಬೆಸ್ಟ್ ಫುಡ್ಸ್

ಉಡುಪಿ

ಉಡುಪಿ

Udupi food : ತುಳುನಾಡಿನ ಭಾಗ ಉಡುಪಿ ಅಂದ್ರೆ ಸಸ್ಯಹಾರಿಗಳಿಗೆ ನೆನಪಾಗೋದು ಇಡ್ಲಿ-ಸಾಂಬರ್, ಶೀರ ಅಂದ್ರೆ ಕೇಸರಿಬಾತ್, ಮಾಂಸಹಾರಿಗಳಿಗೆ ಕಡಲತಡಿಯಲ್ಲಿ ಸಿಗೋ ಬಗೆಬಗೆಯ ಮೀನುಗಳು..ಆದ್ರೆ ಇದೆಲ್ಲವನ್ನ ಬಿಟ್ಟು ಉಡುಪಿ ಕೆಲವು ಖಾದ್ಯಗಳು ಇಂದಿಗೂ ಸಿಕ್ಕಾಪಟ್ಟೆ ಫೇಮಸ್ .

 • Share this:

  ಮಹಾಭಾರತದ(Mahabharath) ಕಾಲದಿಂದಲೂ ಊಟ-ತಿಂಡಿಗೆ ಸಾಕಷ್ಟು ಹೆಸರು ಮಾಡಿರೋ ನಮ್ಮ ಕರ್ನಾಟಕದ(Karnataka) ಹೆಮ್ಮೆಯ ಪ್ರದೇಶ ಅಂದ್ರೆ ಅದು ಉಡುಪಿ(Udupi).. ಯುದ್ಧದ (War)ಸಮಯದಲ್ಲಿ ಕೌರವರ ವಿರುದ್ಧ ಹೋರಾಡಿ ಬಂದ ಪಾಂಡವರ ಪಡೆಯ ಸೈನಿಕರಿಗೆ ಪ್ರತಿನಿತ್ಯ ರುಚಿ ರುಚಿಯದ ಅಡುಗೆ ಮಾಡಿ ಬಡಿಸುತ್ತಿದ್ದ ಉಡುಪಿ ಮಹಾರಾಜನ (Udupi King)ಅಡುಗೆ ಎಷ್ಟೋ ಪ್ರಸಿದ್ಧವೂ ಈಗಲೂ ಉಡುಪಿ ಶೈಲಿಯ ಆಹಾರ ಪದ್ಧತಿಗಳು ಅಷ್ಟೇ ಪ್ರಸಿದ್ಧ..  ಹೀಗಾಗಿಯೇ ಇಂದು ಯಾವ ನಗರಗಳ ಗಲ್ಲಿಗೆ ಹೋದ್ರು ಹೆಸರಿಗೆ ಒಂದು ಉಡುಪಿ ಹೆಸರಿನ ಉಪಹಾರ ಗೃಹಗಳು (Udupi Hotel)ಸಿಗುತ್ತೆ.. ಜೊತೆಗೆ ಉಡುಪಿಯ ಸಾಂಪ್ರದಾಯಿಕ ತಿಂಡಿಗಳು ಸಿಗುತ್ತವೆ


  ಉಡುಪಿ ಊಟ ಅಂದ್ರೆ ಕೇವಲ ಇಡ್ಲಿ-ಸಾಂಬರ್ ಅಲ್ಲ


  ತುಳುನಾಡಿನ ಭಾಗ ಉಡುಪಿ ಅಂದ್ರೆ ಸಸ್ಯಹಾರಿಗಳಿಗೆ ನೆನಪಾಗೋದು ಇಡ್ಲಿ-ಸಾಂಬರ್, ಶೀರ ಅಂದ್ರೆ ಕೇಸರಿಬಾತ್, ಮಾಂಸಹಾರಿಗಳಿಗೆ ಕಡಲತಡಿಯಲ್ಲಿ ಸಿಗೋ ಬಗೆಬಗೆಯ ಮೀನುಗಳು..ಆದ್ರೆ ಇದೆಲ್ಲವನ್ನ ಬಿಟ್ಟು ಉಡುಪಿ ಕೆಲವು ಖಾದ್ಯಗಳು ಇಂದಿಗೂ ಸಿಕ್ಕಾಪಟ್ಟೆ ಫೇಮಸ್ ಒಮ್ಮೆ ಅದರ ರುಚಿ ನೋಡಿದ್ರೆ ಮತ್ತೆ ಮತ್ತೆ ತನ್ಬೇಕು ಅನ್ನೋವಷ್ಟು ಉಡುಪಿಯ ಈ ಖಾದ್ಯಗಳು ಗಮನ ಸೆಳೆಯುತ್ತವೆ.ಹಾಗಿದ್ರೆ ಉಡುಪಿಯ ಪ್ರಸಿದ್ಧ ಖಾದ್ಯಗಳು ಯಾವುವು ಅನ್ನೋ ಮಾಹಿತಿ ಇಲ್ಲಿದೆ


  ಇದನ್ನೂ ಓದಿ:  PCOS ಗೆ ಕುಂಬಳಕಾಯಿ ಮದ್ದು! ಹೀಗೆ ಬಳಸಿ ಅಂತಾರೆ ವೈದ್ಯರು


  ೧)ಕೊಟ್ಟೆ ಕಡುಬು :ಕೊಟ್ಟೆ ಕಡುಬು, ಮೂಡೆ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಮಂಗಳೂರು ಇಡ್ಲಿಯು, ಮಂಗಳೂರು ಉಡುಪಿ ಸೇರಿದಂತೆ ಕರಾವಳಿ ಭಾಗದ ಜನರ ಅಚ್ಚುಮೆಚ್ಚಿನ ತಿನಿಸು. ಈ ಮೂಡೆಯನ್ನು ಇಷ್ಟ ಪಡದ ವ್ಯಕ್ತಿಗಳೇ ಇಲ್ಲ. ಅದರ ರುಚಿ, ಘಮ ಎಲ್ಲರನ್ನೂ ಸೆಳೆಯುತ್ತದೆ. ಇತರ ಇಡ್ಲಿಯಂತೆ, ಈ ಇಡ್ಲಿಯಲ್ಲೂ ಹೆಚ್ಚಿನ ಪದಾರ್ಥಗಳು ಒಂದೇ ಆಗಿರುತ್ತವೆ..ಹಲಸು, ಬಾಳೆಹಣ್ಣು, ಅರಿಶಿನ, ತೇಗ ಅಥವಾ ಪಾಂಡನ್ ಎಲೆಗಳನ್ನು ಬಳಸೋದು ಈ ಕೊಟ್ಟೆ ಕಡುಬಿಗೆ ವಿಶೇಷ ಸ್ಥಾನ ನೀಡುತ್ತವೆ.


  2)ಗೋಲಿ ಬಜ್ಜಿ :ಕರಾವಳಿ ಕರ್ನಾಟಕದ ಅತ್ಯಂತ ಜನಪ್ರಿಯವಾದ ತಿಂಡಿ ಎಂದರೆ ಅದು ಗೋಲಿ ಬಜ್ಜಿ. ಈ ಖಾದ್ಯ ಮಂಗಳೂರಿನಲ್ಲಿ ಹುಟ್ಟಿಕೊಂಡಿದೆ ಎಂದು ನಂಬಿರುವುದರಿಂದ ಇದನ್ನು ಮಂಗಳೂರು ಬೋಂಡ ಎಂದು ಕರೆಯುತ್ತಾರೆ.ಗೋಲಿ ಬಜ್ಜಿಯು ಹಗುರವಾಗಿ ಹಾಗೂ ಗರಿಗರಿಯಾಗಿರುತ್ತದೆ. ಇದು ಹೊರಗೆ ಗರಿಗರಿಯಾದ ಮತ್ತು ಒಳಗೆ ಮೃದುವಾಗಿರುತ್ತದೆ.ಅಕ್ಕಿ ಹಿಟ್ಟು, ಮೈದಾ, ಮೊಸರು, ಹಸಿರು ಮೆಣಸಿನಕಾಯಿ ಮತ್ತು ಶುಂಠಿಯಿಂದ ಮಾಡಿದ ಉಡುಪಿ ಭಕ್ಷ್ಯವಾಗಿದೆ.ಇನ್ನು ಸಂಜೆಯ ವೇಳೆ ಕಾಫಿ ಜೊತೆಗೆ ಗೋಳಿ ಬಜೆ ಬೆಸ್ಟ್ ಸ್ನಾಕ್ಸ್


  3)ಮಂಗಳೂರು ಬನ್ಸ್ :ಮಂಗಳೂರು ಬನ್ಸ್ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರಿಯ ಬೆಳಗ್ಗಿನ ಉಪಹಾರ ಅಥವಾ ಚಹಾ ಸಮಯದ ತಿಂಡಿಯಾಗಿದೆ. ಜಿಲ್ಲೆಯ ಹೋಟೆಲ್‍ಗಳಲ್ಲಿ ಸರ್ವೇ ಸಾಮಾನ್ಯವಾಗಿ ಸಿಗುವ ಬನ್ಸ್, ಸ್ವಲ್ಪ ಸಿಹಿ ಮಿಶ್ರಿತ ಎಣ್ಣೆಯಲ್ಲಿ ಕರಿದು ಮಾಡುವಂತಹ ಅಡುಗೆಯಾಗಿದೆ. ಇನ್ನು ಈ ಮಂಗಳೂರು ಬನ್‌ನ ನೋಟವು ಕಚೋರಿಗಳಿಗೆ ಹೋಲಿಸಬಹುದಾದರೂ, ಈ ಡೀಪ್-ಫ್ರೈಡ್ ಬನ್‌ಗಳು ವಿಶಿಷ್ಟವಾದ ರುಚಿಯನ್ನು ಹೊಂದಿರುತ್ತವೆ. ಹಿಟ್ಟನ್ನು ತಯಾರಿಸಲು ಅತಿಯಾದ ಬಾಳೆಹಣ್ಣುಗಳನ್ನು ಬಳಸುವುದು ಈ ಬನ್‌ಗಳಿಗೆ ಸೂಕ್ಷ್ಮವಾದ ಸಿಹಿ ರುಚಿಯನ್ನು ನೀಡುತ್ತದೆ


  ಇದನ್ನೂ ಓದಿ:  Lungs: ಈ ಪದಾರ್ಥಗಳನ್ನು ತಿಂದ್ರೆ ಶ್ವಾಸಕೋಶ ಸದಾ ಆರೋಗ್ಯವಾಗಿ ಇರುತ್ತದಂತೆ!


  4)ಪತ್ರೊಡೆ: ಪತ್ರೊಡೆ ಬೆಳಗಿನ ವೇಳೆ ಒಂದು ಸೂಪರ್ ಫಾಸ್ಟ್ ಬ್ರೇಕ್ ಫಾಸ್ಟ್..ಜೊತೆಗೆ ಪತ್ರೊಡೆ ಸೇವನೆ ನಮ್ಮ ದೇಹಕ್ಕೆ ಔಷಧಿಯ ರೀತಿ ಕಾರ್ಯನಿರ್ವಹಿಸುತ್ತದೆ..ಆಹಾರದಲ್ಲಿ ಕ್ಯಾಲ್ಸಿಯಂ ಅಧಿಕವಿದೆ, ಇದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುವುದು. ಇದರಲ್ಲಿ ಫೀನಾನ್‌ಗಳು, ಟ್ಯಾನಿನ್ಸ್, ಪ್ಲೇವೋನಾಯ್ಡ್ಸ್, ಗ್ಲೈಸೋಸೈಡ್ಸ್, ಸ್ಟೀರೋಲ್ಸ್ ಅಂಶವಿರುವುದರಿಂದ ಸಂಧಿವಾತ ನಿವಾರಿಸುತ್ತದೆ. ಪತ್ರೊಡೆಗಾಗಿ ಬಳಸುವ ಕೆಸುವಿನ ಎಲೆಯಲ್ಲಿ ವಿಟಮಿನ್ ಸಿ ಹಾಗೂ ಬೀಟಾ ಕೆರೋಟಿನ್ ಅಧಿಕವಿದೆ ಎಂದು ಆಯುಷ್ ಇಲಾಖೆ ಹೇಳಿದೆ.


  5)ಪೆಲಕ್ಕಾಯಿ ಗಟ್ಟಿ: ಮಳೆಗಾಲ ಪ್ರಾರಂಭವಾದ ಸಮಯದಲ್ಲಿ ಹಲವು ಹಣ್ಣುಗಳ ವಿಶಿಷ್ಟ ಖಾದ್ಯಗಳನ್ನು ತುಳುನಾಡಲ್ಲಿ ತಯಾರಿಸುತ್ತಾರೆ. ಇದರಲ್ಲಿ ವಿಶಿಷ್ಟವಾದುದ್ದು ಪೆಲಕ್ಕಾಯಿ ಗಟ್ಟಿ. ಹಲಸಿನ ಹಣ್ಣು, ಅಕ್ಕಿ, ಬೆಲ್ಲ, ಜೀರಿಗೆ ಸೇರಿಸಿ ನಂತರ ಬಾಳೆಎಲೆಯಲ್ಲಿ ಸುತ್ತಿ ಬೇಯಿಸಿ ತಯಾರಿಸುವ ರುಚಿಕರವಾದ ತಿಂಡಿ ಇದು. ಇದನ್ನು ಸವಿದವರಿಗೇ ಗೊತ್ತು ಅದರ ರುಚಿ


  6) ಪೆಲಕಾಯಿ ಹಲ್ವಾ: ಈ ಉಡುಪಿ ಸಿಹಿಭಕ್ಷ್ಯವuduನ್ನು ಹಲಸಿನ ಹಣ್ಣಿನಿಂದ ತಯಾರಿಸಲಾಗುತ್ತದೆ. ಇದು ಕಾಲೋಚಿತ ಉಪಹಾರ ಅಥವಾ ಬಾಳೆಹಣ್ಣು ಅಥವಾ ತೇಗದ ಎಲೆಗಳಲ್ಲಿ ನೆಲದ ಹಲಸು, ಅಕ್ಕಿ ಮತ್ತು ಬೆಲ್ಲವನ್ನು ಆವಿಯಲ್ಲಿ ಮಾಡುವ ಮೂಲಕ ಮಾಡಿದ ತಿಂಡಿ..

  Published by:ranjumbkgowda1 ranjumbkgowda1
  First published: