ಅತಿಯಾದ ಜಂಕ್​ ಫುಡ್​ ಸೇವನೆ ಗರ್ಭಧಾರಣೆಗೆ ಕುತ್ತು

news18
Updated:May 7, 2018, 12:54 PM IST
ಅತಿಯಾದ ಜಂಕ್​ ಫುಡ್​ ಸೇವನೆ ಗರ್ಭಧಾರಣೆಗೆ ಕುತ್ತು
news18
Updated: May 7, 2018, 12:54 PM IST
ನ್ಯೂಸ್ 18 ಕನ್ನಡ

ಅತಿಯಾದ ಜಂಕ್​ ಫುಡ್​ ಸೇವಿಸುವ ಮಹಿಳೆಯರು ಗರ್ಭವತಿಯಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ ಎಂಬ ಅಚ್ಚರಿಯ ವಿಷಯವು ಇತ್ತೀಚಿನ ಅಧ್ಯಯನದಿಂದ ತಿಳಿದು ಬಂದಿದೆ.  ಕರಿದ ತಿಂಡಿಗಳ ಅತಿಯಾದ ಸೇವೆನೆಯಿಂದ ಒಂದು ವರ್ಷದೊಳಗೆ ಗರ್ಭಧರಿಸುವುದು ಕಷ್ಟವಾಗುತ್ತದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.

ಮೂರು ವಾರಗಳಲ್ಲಿ ಒಮ್ಮೆಯಾದರು ದಿನನಿತ್ಯದ ಆಹಾರ ಕ್ರಮದಲ್ಲಿ ಹಣ್ಣುಗಳು ಇಲ್ಲದಿದ್ದರೆ ಕೂಡ ಗರ್ಭವತಿಯಾಗಲು ಸಮಯ ತೆಗೆದುಕೊಳ್ಳುತ್ತದೆ ಎಂದು ಜರ್ನಲ್ ಹ್ಯೂಮೆನ್ ರಿಪ್ರೊಡಕ್ಷನ್ ಸಂಶೋಧಕರು ತಿಳಿಸಿದ್ದಾರೆ.

ಹಾಗೆಯೇ ಬರ್ಗರ್​, ಫಿಜ್ಜಾ , ಫ್ರೈಡ್ ಚಿಕನ್​ಗಳಂತಹ ಆಹಾರಗಳನ್ನು ವಾರಕ್ಕೆ ನಾಲ್ಕು ಬಾರಿ ಅಥವಾ ಅದಕ್ಕಿಂತ ಹೆಚ್ಚಿನ ಬಾರಿ ಸೇವಿಸಿದರೂ ಕೂಡ ಮಹಿಳೆಯರು ಗರ್ಭಿಣಿಯಾಗಲು ಬಯಸುವ ಸಮಯಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.

ಡಯಟ್​ ಪಾಲಿಸುವುದರಿಂದ ಗರ್ಭಧಾರಣೆಯ ನಿಧಾನಗತಿಯನ್ನು ತಡೆಯಬಹುದು. ಅದರಲ್ಲೂ ಆಹಾರದಲ್ಲಿ ಹಣ್ಣುಗಳ ಸೇವನೆ ಹೆಚ್ಚಾಗಿದ್ದರೆ ಮತ್ತೂ ಒಳ್ಳೆಯದು ಎಂದು ಮುಖ್ಯ ಸಂಶೋಧಕ ಕ್ಲೈರ್ ರಾಬರ್ಸ್ ಹೇಳಿದ್ದಾರೆ.

ಆಸ್ಟ್ರೇಲಿಯಾ, ನ್ಯೂ ಬ್ರಿಟನ್ ಮತ್ತು ನ್ಯೂಜಿಲೆಂಡ್​ನಲ್ಲಿ 2004-2011ರ ನಡುವೆ ರಾಬರ್ಟ್ಸ್ ಮತ್ತು ತಂಡ ನಡೆಸಿದ 'ಪ್ರೆಗ್ನೆನ್ಸಿ ಎಂಡ್​ಪಾಯಿಂಟ್'​ (SCOPE) ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮಾಹಿತಿಯಿಂದ ಈ ವಿಷಯ ಗೊತ್ತಾಗಿದೆ.

ಹಣ್ಣು ಹಂಪಲು ಕೂಡಿದ ಆಹಾರ ತೆಗೆದುಕೊಂಡ 5600 ಮಹಿಳೆಯರು ಮೊದಲ ತಿಂಗಳಲ್ಲೆ ಗರ್ಭವತಿಯಾಗಿರುವುದು ಈ ಅಧ್ಯಯನದಿಂದ ಸಾಬೀತಾಗಿದೆ. ಅಲ್ಲದೆ ಜಂಕ್ ಫುಡ್ ಸೇವಿಸುವುದರಿಂದ ಗರ್ಭಧಾರಣೆಯ ಸಮಯವನ್ನು ಹೆಚ್ಚಿಸುವುದಲ್ಲದೆ,  ಬಂಜೆತನಕ್ಕೆ ಕಾರಣವಾಗಲಿದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.
First published:May 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...