Pomegranate Benefits: ಪೋಷಕಾಂಶಗಳಿಂದ ಸಮೃದ್ಧವಾಗಿರುವ ದಾಳಿಂಬೆಯ ಪ್ರಯೋಜನಗಳು ಹೀಗಿವೆ

ಇದು ಸಾಕಷ್ಟು ಉತ್ತಮ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸಣ್ಣ ಮತ್ತು ಕೆಂಪು ಹಣ್ಣು ಆಗಿದೆ. ಇದರ ಕಾಳುಗಳನ್ನು ತಿನ್ನುತ್ತಾರೆ. ಇಲ್ಲದಿದ್ದರೆ ದಾಳಿಂಬೆ ರಸ ತೆಗೆದು ಸೇವನೆ ಮಾಡುತ್ತಾರೆ. ಇದು ಪ್ರಪಂಚದ ಅನೇಕ ಭಾಗಗಳಲ್ಲಿ ಸಾಮಾನ್ಯವಾಗಿ ಸಿಗುವ ಹಣ್ಣು ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹಣ್ಣುಗಳು (Fruits) ಮತ್ತು ತರಕಾರಿಗಳ (Vegetables) ಸೇವನೆ ಅನೇಕ ಆರೋಗ್ಯ ಪ್ರಯೋಜನಗಳನ್ನು (Health Benefits) ತಂದು ಕೊಡುತ್ತದೆ. ಎಲ್ಲಾ ಪೋಷಕಾಂಶಗಳು ಹಣ್ಣುಗಳಲ್ಲಿ ಕಂಡು ಬರುತ್ತವೆ. ಹಾಗಾಗಿ ಹೆಚ್ಚು ಜನರು (People) ದಿನವೂ ಹಣ್ಣುಗಳ ಸೇವನೆ ಮಾಡುತ್ತಾರೆ. ನಾವು ಪ್ರತೀ ಸೀಸನ್ ನಲ್ಲೂ ವಿವಿಧ ರೀತಿಯ ಹಣ್ಣುಗಳ ಸೇವನೆ ಮಾಡುತ್ತೇವೆ. ಒಂದೊಂದು ಹಣ್ಣು, ಒಂದೊಂದು ರೀತಿಯ ದೇಹದ ಆರೋಗ್ಯ ಪ್ರಯೋಜನಗಳನ್ನು ತಂದು ಕೊಡುತ್ತದೆ. ಇದು ಆರೋಗ್ಯದ ಉತ್ತಮ ಕಾರ್ಯ ನಿರ್ವಹಣೆಗೆ ಅವಶ್ಯಕ ಆಗಿದೆ. ಅಂತಹ ಒಂದು ಅದ್ಭುತ ಹಣ್ಣು ದಾಳಿಂಬೆ ಆಗಿದೆ. ದಾಳಿಂಬೆ ಕಾಳಿನ ರೀತಿಯಲ್ಲಿದೆ.

    ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕೆಂಪು ಹಣ್ಣು ದಾಳಿಂಬೆ

    ಇದು ಸಾಕಷ್ಟು ಉತ್ತಮ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸಣ್ಣ ಮತ್ತು ಕೆಂಪು ಹಣ್ಣು ಆಗಿದೆ. ಇದರ ಕಾಳುಗಳನ್ನು ತಿನ್ನುತ್ತಾರೆ. ಇಲ್ಲದಿದ್ದರೆ ದಾಳಿಂಬೆ ರಸ ತೆಗೆದು ಸೇವನೆ ಮಾಡುತ್ತಾರೆ. ಇದು ಪ್ರಪಂಚದ ಅನೇಕ ಭಾಗಗಳಲ್ಲಿ ಸಾಮಾನ್ಯವಾಗಿ ಸಿಗುವ ಹಣ್ಣು ಆಗಿದೆ. ಆದರೆ ಇರಾನ್ ಮತ್ತು ಉತ್ತರ ಭಾರತದಲ್ಲಿ ಹೆಚ್ಚಿನ ಮರಗಳನ್ನು ಕಾಣುತ್ತೇವೆ.

    ದಾಳಿಂಬೆ ತಿನ್ನುವ ಆರೋಗ್ಯ ಪ್ರಯೋಜನಗಳು

    ಈ ಆರೋಗ್ಯವರ್ಧಕ ಸಮೃದ್ಧ ಹಣ್ಣನ್ನು ಪ್ರಾಚೀನ ಬರಹಗಳಲ್ಲಿ ಪವಿತ್ರ ಹಣ್ಣು ಎಂದು ಪರಿಗಣಿಸಲಾಗಿದೆ. ದಾಳಿಂಬೆ ತಿನ್ನುವ ಆರೋಗ್ಯ ಪ್ರಯೋಜನಗಳು ಹಲವು ಇವೆ. ನಿಯಮಿತವಾಗಿ ದಾಳಿಂಬೆ ಹಣ್ಣು ಸೇವಿಸುವುದು ಅಥವಾ ಜ್ಯೂಸ್ ಕುಡಿಯುವುದು ಹೃದ್ರೋಗ, ಅಧಿಕ ರಕ್ತದೊತ್ತಡ,

    ಇದನ್ನೂ ಓದಿ: ದೇಹದಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳ ಕೊರತೆಯ ಲಕ್ಷಣಗಳು ಮತ್ತು ಪದಾರ್ಥಗಳು ಯಾವವು?

    ಕಡಿಮೆ ರಕ್ತದ ಕೊಲೆಸ್ಟ್ರಾಲ್, ಕ್ಯಾನ್ಸರ್ ಮತ್ತು ಮಧುಮೇಹ ಸೇರಿದಂತೆ ಅನೇಕ ಗಂಭೀರ ಮತ್ತು ಮಾರಣಾಂತಿಕ ಕಾಯಿಲೆ ತಪ್ಪಿಸಲು ಮತ್ತು ಹೋರಾಡಲು ಶಕ್ತಿ ನೀಡುತ್ತದೆ ಎಂದು ಹೇಳಲಾಗಿದೆ. ದಾಳಿಂಬೆ ದಿನನಿತ್ಯ ಹಾಗೂ ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.

    ನೂರು ರೋಗಗಳಿಗೆ ಒಂದು ಔಷಧಿ ದಾಳಿಂಬೆ

    ನ್ಯಾಷನಲ್ ಸೆಂಟರ್ ಫಾರ್ ಕಾಂಪ್ಲಿಮೆಂಟರಿ ಅಂಡ್ ಇಂಟೆರೊಗೇಟಿವ್ ಹೆಲ್ತ್ (NCCIH) ನಲ್ಲಿ ಪ್ರಕಟವಾದ ವರದಿ ಪ್ರಕಾರ, ದಾಳಿಂಬೆ ಹಣ್ಣಿನಲ್ಲಿ ಅನೇಕ ಪೋಷಕಾಂಶಗಳಿವೆ. ಇದು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣ ಹೊಂದಿದೆ.

    ದಾಳಿಂಬೆ ಸೇವನೆಯು ಹೃದ್ರೋಗ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟರಾಲ್ ಮಟ್ಟ, ಕ್ಯಾನ್ಸರ್, ಮಧುಮೇಹ ಕಾಯಿಲೆಗಳನ್ನು ಗುಣಪಡಿಸುವುದಿಲ್ಲ ಎಂದು ಸೀಮಿತ ಅಧ್ಯಯನಗಳು ತಿಳಿಸಿವೆ. ಆದರೆ ಅವುಗಳ ಅಪಾಯ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು.

    ದಾಳಿಂಬೆ ರಸವು ಹೆಚ್ಚು ಪ್ರಯೋಜನಕಾರಿ

    ದಾಳಿಂಬೆ ರಸ ಕುಡಿಯುವ ಪ್ರಯೋಜನಗಳು ದಾಳಿಂಬೆ ರಸವನ್ನು ಸುರಕ್ಷಿತವೆಂದು ಪರಿಗಣಿಸಲಾಗಿದೆ. ಮತ್ತು ಇದರ ಸೇವನೆಯು ಅನೇಕ ಆರೋಗ್ಯ ಪ್ರಯೋಜನ ಹೊಂದಿದೆ. ದಾಳಿಂಬೆ ಬೇರು, ಕಾಂಡ ಮತ್ತು ಸಿಪ್ಪೆಯನ್ನು ದೊಡ್ಡ ಪ್ರಮಾಣದಲ್ಲಿ ಸೇವಿಸಿದಾಗ ಸುರಕ್ಷಿತ ಆಗಿರುವುದಿಲ್ಲ. ಏಕೆಂದರೆ ಅವುಗಳು ಹಾನಿಕಾರಕ ಪರಿಣಾಮ ಉಂಟು ಮಾಡುವ ವಸ್ತು ಹೊಂದಿವೆ.

    ದಾಳಿಂಬೆ ಸೇವನೆ ಯಾರಿಗೆ ಅಪಾಯಕಾರಿ?

    ದಾಳಿಂಬೆ ಸೇವನೆಯಿಂದ ಅಡ್ಡ ಪರಿಣಾಮಗಳು ಯಾವುದೇ ಇಲ್ಲ. ಆದರೆ ಜೀರ್ಣಾಂಗ ವ್ಯವಸ್ಥೆಯ ಲಕ್ಷಣಗಳು, ವಿಶೇಷವಾಗಿ ಅತಿಸಾರ, ಕಡಿಮೆ ಸಂಖ್ಯೆಯ ಜನರಲ್ಲಿ ಕಂಡು ಬರಬಹುದು. ದಾಳಿಂಬೆ ಸೇವನೆಯಿಂದ ಕೆಲವರಿಗೆ ಅಲರ್ಜಿ ಉಂಟಾಗಬಹುದು. ಹಾಗಾಗಿ ಅಂತಹವರು ಇದರ ಸೇವನೆಯಿಂದ ದೂರವಿರಬೇಕು.

    ಇದನ್ನೂ ಓದಿ: ಹಿಮೋಗ್ಲೋಬಿನ್ ಕೊರತೆ ತಪ್ಪಿಸಲು ಈ ಪದಾರ್ಥಗಳ ಸೇವನೆ ಅಗತ್ಯ, ಮಿಸ್ ಮಾಡಬೇಡಿ

    ಗರ್ಭಾವಸ್ಥೆಯಲ್ಲಿ ದಾಳಿಂಬೆ ರಸವು ಉತ್ತಮ ಆಯ್ಕೆ ಆಗಿದೆ

    ದಾಳಿಂಬೆ ರಸ ಗರ್ಭಾವಸ್ಥೆಯಲ್ಲಿ ಅಥವಾ ಹಾಲುಣಿಸುವ ಸಮಯದಲ್ಲಿ ಬಳಸಲು ಸುರಕ್ಷಿತವಾಗಿದೆಯೇ ಎಂಬುದನ್ನು ವೈದ್ಯರ ಬಳಿ ಕೇಳಿ ತಿಳಿಯಿರಿ. ಕೆಲವು ಸಂದರ್ಭದಲ್ಲಿ ದಾಳಿಂಬೆ ಜ್ಯೂಸ್ ಕುಡಿಯುವುದು ಹೆಚ್ಚು ಸುರಕ್ಷಿತ ಆಗಿರುತ್ತದೆ.
    Published by:renukadariyannavar
    First published: