• Home
  • »
  • News
  • »
  • lifestyle
  • »
  • Pomegranate: ಪ್ರತಿ ದಿನ ದಾಳಿಂಬೆ ಹಣ್ಣು ಸೇವಿಸಿ, ಅನೇಕ ಕಾಯಿಲೆಗಳ ಚಿಕಿತ್ಸೆಗೆ ಇದು ಬೆಸ್ಟ್!

Pomegranate: ಪ್ರತಿ ದಿನ ದಾಳಿಂಬೆ ಹಣ್ಣು ಸೇವಿಸಿ, ಅನೇಕ ಕಾಯಿಲೆಗಳ ಚಿಕಿತ್ಸೆಗೆ ಇದು ಬೆಸ್ಟ್!

ದಾಳಿಂಬೆ ಹಣ್ಣು

ದಾಳಿಂಬೆ ಹಣ್ಣು

ದಾಳಿಂಬೆ ಹಣ್ಣು ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತವೆ. ಈ ಹಣ್ಣು ಸಣ್ಣ ಜ್ವರದಿಂದ ಹಿಡಿದು ಕ್ಯಾನ್ಸರ್‌ ಎಂಬಂತಹ ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ ಸಹಾಯ ಮಾಡುತ್ತದೆ. ದಾಳಿಂಬೆ ಬೀಜದ ಸಾರವು ಸಂಧಿವಾತ ಮತ್ತು ಹೃದಯ ಕಾಯಿಲೆಗಳನ್ನು ನಿವಾರಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಮುಂದೆ ಓದಿ ...
  • Share this:

ಪ್ರೊಮೊಗ್ರ್ಯಾನೈಟ್‌ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲಾಗುವ ದಾಳಿಂಬೆಯು (Pomegranate) ಲಿತ್ರೇಸಿ ಕುಟುಂಬಕ್ಕೆಸೇರಿದೆ. ಇದು ಮೂಲತಃ ಪರ್ಷಿಯಾ ದೇಶದ ಹಣ್ಣಾಗಿದೆ. ಈ ದಾಳಿಂಬೆ ರುಚಿಕರವಾದ ಹಣ್ಣಿಗೆ ಪ್ರಸಿದ್ಧವಾಗಿದೆ. ಕೇವಲ ರುಚಿಯನ್ನಷ್ಟೆ ಹೊಂದಿರದೇ, ಇದರಲ್ಲಿ ಇರುವ ವಿಶೇಷ ದಾಳಿಂಬೆ ರಸದ ಫೀನಾಲಿಕ್ (Phenolic) ಅಂಶವು ಸಂಸ್ಕರಣೆ ಮತ್ತು ಪಾಶ್ಚರೀಕರಣದ ತಂತ್ರಗಳಿಂದ ಪ್ರತಿಕೂಲ ಪರಿಣಾಮ ಬೀರುತ್ತದೆ. ಹಣ್ಣಿನಲ್ಲಿರುವ ಬೀಜಗಳಿಗೆ ಹೋಲಿಸಿದರೆ, ತಿನ್ನಲಾಗದ ದಾಳಿಂಬೆ ಸಿಪ್ಪೆಯಲ್ಲಿ ಪಾಲಿಫೀನಾಲ್‌ಗಳ ಒಟ್ಟು ಪ್ರಮಾಣವು ಮೂರು ಪಟ್ಟು ಹೆಚ್ಚಿರುತ್ತದೆ. ಸಿಪ್ಪೆಯ ಹೆಚ್ಚಿನ ಫೀನಾಲಿಕ್ ಅಂಶವು ಆಹಾರದ (Food) ಪೂರಕ ಮತ್ತು ಆಹಾರ ಸಂರಕ್ಷಕಗಳಲ್ಲಿ ಬಳಕೆಗೆ ಸಾರವಾಗುತ್ತದೆ. ಈ ಪಾಲಿಫಿನಾಲ್‌ ಅಂಶದಿಂದ ಇದು ಅತ್ಯಂತ ಸುಂದರ ಕೆಂಪು ಬಣ್ಣವನ್ನು (Red Color) ಹೊಂದಿದೆ ಎಂದು ಹೇಳಬಹುದು.


ಇದರಲ್ಲಿ ವಿಟಮಿನ್‌ಗಳು ಹೇರಳವಾಗಿವೆ. ಈ ಹಣ್ಣನ್ನು ಹೆಚ್ಚು ಸೇವಿಸುವುದರಿಂದ ದೇಹದಲ್ಲಿನ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ. ಈ ಹಣ್ಣು ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತವೆ. ಈ ಹಣ್ಣು ಸಣ್ಣ ಜ್ವರದಿಂದ ಹಿಡಿದು ಕ್ಯಾನ್ಸರ್‌ ಎಂಬಂತಹ ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ ಸಹಾಯ ಮಾಡುತ್ತದೆ. ದಾಳಿಂಬೆ ಬೀಜದ ಸಾರವು ಸಂಧಿವಾತ ಮತ್ತು ಹೃದಯ ಕಾಯಿಲೆಗಳನ್ನು ನಿವಾರಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.


ದಾಳಿಂಬೆ ಹಣ್ಣಿನ ಆರೋಗ್ಯಕರ ಪ್ರಯೋಜನಗಳು


  • ದಾಳಿಂಬೆ ಬೀಜದ ಎಣ್ಣೆಯು ಸಂಧಿವಾತ ಮತ್ತು ಹೃದ್ರೋಗಗಳ ನಿರ್ವಹಣೆಗೆ ಪ್ರಯೋಜನಗಳನ್ನು ಹೊಂದಿದೆ.

  • ದಾಳಿಂಬೆ ಬೀಜಗಳಲ್ಲಿನ ಉತ್ಕರ್ಷಣ ನಿರೋಧಕಗಳು ಸೇರಿದಂತೆ ಪಾಲಿಫಿನಾಲ್‌ಗಳು ಸಂಧಿವಾತಕ್ಕೆ ಸಂಬಂಧಿಸಿದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

  • ಸಂಧಿವಾತಕ್ಕೆ ಸಂಬಂಧಿಸಿದ ಕೀಲು ನೋವುಗಳನ್ನು ನಿವಾರಿಸಲು ಪ್ಯೂನಿಕಾಲಾಜಿನ್‌ಗಳು ಮತ್ತು ಪ್ಯೂನಿಕ್ ಆಮ್ಲವು ಸಹಾಯ ಮಾಡುತ್ತದೆ.

  • ಬೀಜದ ಸಾರದಲ್ಲಿರುವ ಟ್ಯಾನಿನ್‌ಗಳು ಮತ್ತು ಆಂಥೋಸಯಾನಿನ್‌ಗಳು ಹೃದಯ ಕಾಯಿಲೆಗಳನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ.

  • ದಾಳಿಂಬೆ ಬೀಜಗಳಲ್ಲಿನ ಫೈಟೊಕೆಮಿಕಲ್‌ಗಳು ಲಿಪಿಡ್‌ಗಳು ಮತ್ತು ಕೊಬ್ಬಿನಾಮ್ಲಗಳಂತಹ ಬಾಹ್ಯ ಅಂಶಗಳಿಂದ ರಕ್ತನಾಳಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: Green Tea or Black Tea; ಇವೆರಡರಲ್ಲಿ ಯಾವುದು ಬೆಸ್ಟ್? ಹೆಚ್ಚು ಆರೋಗ್ಯದಾಯಕ ಯಾವುದು?


ದಾಳಿಂಬೆ ಬೀಜದ ಎಣ್ಣೆಯನ್ನು ಬೀಜಗಳನ್ನು ಪುಡಿ ಮಾಡಿ ಮತ್ತು ಸಂಸ್ಕರಿಸುವ ಮೂಲಕ ಉತ್ಪಾದಿಸಲಾಗುತ್ತದೆ. ಬೀಜಗಳು ಹಣ್ಣಿನ ಕೇಂದ್ರ ಭಾಗವಾಗಿದ್ದು ಅದು ಅಗತ್ಯವಾದ ಫೈಟೊಕೆಮಿಕಲ್‌ಗಳ ಇರುವಿಕೆಯನ್ನು ಹೊಂದಿದೆ. ಈ ಹಣ್ಣಿನ ಬೀಜಗಳ ಎಣ್ಣೆಯು ಚರ್ಮ ಮತ್ತು ಕೂದಲಿನ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಾಮಾನ್ಯವಾಗಿ ಇದನ್ನು ಸೌಂದರ್ಯವರ್ಧಕಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಹಾಗೆಯೇ ಅವುಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಇತರ ಅಂಗಗಳಿಗೂ ಕೂಡ ಸೂಕ್ತ ಪೋಷಕಾಂಶಗಳನ್ನು ನೀಡುತ್ತವೆ.


ಸಂಧಿವಾತವನ್ನು ಗುಣಪಡಿಸುವಲ್ಲಿ ದಾಳಿಂಬೆ ಹಣ್ಣಿನ ಪಾತ್ರವೇನು?
ಸಂಧಿವಾತವು ಇತ್ತೀಚೆಗೆ ಹೆಚ್ಚು ಸಾಮಾನ್ಯವಾಗಿದೆ. ಇದರ ಸಾಮಾನ್ಯ ಲಕ್ಷಣವೆಂದರೆ ಉರಿಯೂತದ ನಂತರ ತೀವ್ರವಾದ ಕೀಲು ನೋವು ಬರುತ್ತದೆ. ದಾಳಿಂಬೆ ಸಾರಗಳು ಈ ಉರಿಯೂತವನ್ನು ಗುಣಪಡಿಸುವಲ್ಲಿ ಕೆಲಸ ಮಾಡುತ್ತವೆ. ಏಕೆಂದರೆ ದಾಳಿಂಬೆಯು ಇತರ ಹಲವಾರು ಹಣ್ಣುಗಳಿಗಿಂತ ಹೆಚ್ಚಿನ ಮಟ್ಟದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ದಾಳಿಂಬೆಯಲ್ಲಿರುವ ಪಾಲಿಫಿನಾಲ್‌ಗಳು ಪ್ರಬಲವಾದ ಉತ್ಕರ್ಷಣ ನಿರೋಧಕ ಸಾಮರ್ಥ್ಯವನ್ನು ಹೊಂದಿರುವ ರಾಸಾಯನಿಕಗಳಾಗಿವೆ. ಇದರಿಂದ ಸಂಧಿವಾತಕ್ಕೆ ಇದು ಬೆಸ್ಟ್‌ ಹಣ್ಣು ಎಂದು ಹೇಳಬಹುದು.


ಇದನ್ನೂ ಓದಿ:  Onion ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದಂತೆ! ಉಳ್ಳಾಗಡ್ಡಿಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ


ನಿಮ್ಮ ಹೃದಯ ಕಾಯಿಲೆಗಳಿಗೆ ದಾಳಿಂಬೆ ಹಣ್ಣು ಹೇಗೆ ಪ್ರಯೋಜನಜಕಾರಿ?
ದಾಳಿಂಬೆ ಬೀಜ ಮತ್ತು ಸಿಪ್ಪೆಯ ಸಾರಗಳು ಟ್ಯಾನಿನ್‌ಗಳು ಮತ್ತು ಆಂಥೋಸಯಾನಿನ್‌ಗಳಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿವೆ. ಈ ಅಂಶಗಳು ಹೃದ್ರೋಗವನ್ನು ಬರದಂತೆ ತಡೆಗಟ್ಟಲು ಸಹಾಯ ಮಾಡುತ್ತವೆ. ಫೈಟೊಕೆಮಿಕಲ್‌ಗಳು ನಮ್ಮ ದೇಹದಲ್ಲಿ ನೈಟ್ರಿಕ್ ಆಕ್ಸೈಡ್‌ನ ಸಂಶ್ಲೇಷಣೆಯನ್ನು ಉತ್ತೇಜಿಸುವ ಮೂಲಕ ರಕ್ತನಾಳಗಳ ಮೇಲಿನ ಒತ್ತಡದ ಪರಿಣಾಮಗಳನ್ನು ಕಡಿಮೆ ಮಾಡುತ್ತವೆ. ಇದರಿಂದ ರಕ್ತದ ಹರಿವು ಸುಗಮಗೊಂಡು, ಹೃದ್ರೋಗವನ್ನು ತಡೆಗಟ್ಟಲು ಪ್ರಮುಖ ಪಾತ್ರವನ್ನು ವಹಿಸುತ್ತದೆ.

Published by:Ashwini Prabhu
First published: