• Home
  • »
  • News
  • »
  • lifestyle
  • »
  • PCOS Problem: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?

PCOS Problem: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Foods For PCOS: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ವಿಶ್ವದಲ್ಲೇ ಅತ್ಯಂತ ಕಡಿಮೆ ರೋಗ ನಿರ್ಣಯದ ಕಾಯಿಲೆಗಳಲ್ಲಿ ಒಂದಾಗಿದೆ ಎಂದು ಎನ್ ಸಿಬಿಐ ಹೇಳಿದೆ. ಪಿಸಿಓಎಸ್ ಬಗ್ಗೆ ಮಹಿಳೆಯರಲ್ಲಿ ಕಡಿಮೆ ಅರಿವು ಇರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಯಾವ ವಿಧದ ಪಿಸಿಓಎಸ್ ಇದೆ ಎಂಬುದನ್ನು ತಿಳಿಯುವುದು ಮುಖ್ಯ ಎನ್ನುತ್ತಾರೆ ತಜ್ಞರು.

ಮುಂದೆ ಓದಿ ...
  • Share this:

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) ಎಂಬುದು ಇದೊಂದು ಸ್ತ್ರೀ ಸಂತಾನೋತ್ಪತ್ತಿ ಆರೋಗ್ಯಕ್ಕೆ ಸಂಬಂಧಿಸಿದ ಆರೋಗ್ಯ (Health) ಸ್ಥಿತಿ ಆಗಿದೆ. ಈ ಕುರಿತು ಬಹುತೇಕ ಮಹಿಳೆಯರು (Women’s) ಮುಕ್ತವಾಗಿ ಮಾತನಾಡಲು ಮುಜುಗರ ಪಟ್ಟುಕೊಳ್ಳುತ್ತಾರೆ. ಕೆಲವರು ಋತುಚಕ್ರ (Menstrual) ಸಂಬಂಧಿತ ಸಮಸ್ಯೆಗಳ (Problem) ಬಗ್ಗೆ ಮಾತನಾಡುವುದೇ ಇಲ್ಲ. ಹಾಗಾಗಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸೇರಿದಂತೆ ಕೆಲವು ಮಹಿಳೆಯರ ಆರೋಗ್ಯ ಸಮಸ್ಯೆಗಳು ಬೇಗ ಕಂಡು ಹಿಡಿಯಲು ಸಾಧ್ಯವಾಗಲ್ಲ. ಇಂತಹ ಕೆಲವು ಸಮಸ್ಯೆಗಳನ್ನು ಗರ್ಭಧರಿಸುವ ಹಾಗೂ ಹೆರಿಗೆಯ ಸಮಯದಲ್ಲಿ ಬೆಳಕಿಗೆ ಬರುತ್ತವೆ. ಹಾಗಾಗಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಬಗ್ಗೆ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ.


ವಿಶ್ವದಲ್ಲೇ ಅತ್ಯಂತ ಕಡಿಮೆ ರೋಗ ನಿರ್ಣಯದ ಕಾಯಿಲೆಗಳಲ್ಲಿ ಒಂದು ಪಿಸಿಓಎಸ್


ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ವಿಶ್ವದಲ್ಲೇ ಅತ್ಯಂತ ಕಡಿಮೆ ರೋಗ ನಿರ್ಣಯದ ಕಾಯಿಲೆಗಳಲ್ಲಿ ಒಂದಾಗಿದೆ ಎಂದು NCBI ಹೇಳಿದೆ. ಪಿಸಿಓಎಸ್ ಬಗ್ಗೆ ಮಹಿಳೆಯರಲ್ಲಿ ಕಡಿಮೆ ಅರಿವು ಇರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಫಿಟ್ ಇಂಡಿಯಾ ರಾಯಭಾರಿ ಮತ್ತು ಪೌಷ್ಟಿಕತಜ್ಞ ರಿದ್ಧಿಮಾ ಬಾತ್ರಾ ಇತ್ತೀಚೆಗೆ ಪಿಸಿಓಎಸ್ ಸಮಸ್ಯೆ ನಿಯಂತ್ರಿಸಲು


ಮತ್ತು ತೊಡೆದುಹಾಕಲು ಪರಿಣಾಮಕಾರಿ ಮಾರ್ಗಗಳ ಬಗ್ಗೆ ತಿಳಿಸಿದ್ದಾರೆ. ಪಿಸಿಓಎಸ್‌ನಂತಹ ಗುಣಪಡಿಸಲಾಗದ ಕಾಯಿಲೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರತಿಯೊಬ್ಬ ಮಹಿಳೆಯೂ ಅರಿವು ಹೊಂದಿರಬೇಕು ಎಂದು ಹೇಳಿದ್ದಾರೆ. ಪಿಸಿಓಎಸ್ ಸಮಸ್ಯೆ ಸರಿಪಡಿಸುವುದು ಹೇಗೆ?


ಪಿಸಿಓಎಸ್‌ನಲ್ಲಿ ನಾಲ್ಕು ವಿಧಗಳಿವೆ


ಇನ್ಸುಲಿನ್ ಪ್ರತಿರೋಧ ಪಿಸಿಓಎಸ್, ಮೂತ್ರಜನಕಾಂಗದ ಪಿಸಿಓ, ಉರಿಯೂತದ ಪಿಸಿಓಎಸ್, ಪೋಸ್ಟ್ ಪಿಲ್ ಪಿಸಿಓಎಸ್ ಆಗಿವೆ.


ಹಾಗಾಗಿ ನಿಮ್ಮಲ್ಲಿ ಯಾವ ವಿಧದ ಪಿಸಿಓಎಸ್ ಇದೆ ಎಂಬುದನ್ನು ತಿಳಿಯುವುದು ಮುಖ್ಯ ಎನ್ನುತ್ತಾರೆ ತಜ್ಞರು. ಏಕೆಂದರೆ ಪಿಸಿಓಎಸ್ ಪ್ರಕಾರ ಯಾವುದು ಎಂಬುದರ ಮೇಲೆ ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಲಾಗುತ್ತದೆ.


ಪಿಸಿಓಎಸ್ ಲಕ್ಷಣಗಳು ಹೀಗಿವೆ


ಪಿಸಿಓಡಿ ಲಕ್ಷಣಗಳು:  ಅನಿಯಮಿತ ಅವಧಿ, ನೋವಿನ ಮತ್ತು ದೀರ್ಘಕಾಲದ ಅವಧಿ, ಅನಗತ್ಯ ಮುಖದ ಕೂದಲು, ಮೊಡವೆ, ಶ್ರೋಣಿಯ ನೋವು ಮತ್ತು ಬಂಜೆತನ.


ದೀರ್ಘಕಾಲದ ಪಿಸಿಓಎಸ್ ರೋಗ ಲಕ್ಷಣಗಳು: ಟೈಪ್ 2 ಮಧುಮೇಹ, ಸ್ಥೂಲಕಾಯ, ಪ್ರತಿರೋಧಕ ನಿದ್ರೆಯಲ್ಲಿ ಉಸಿರುಕಟ್ಟುವಿಕೆ, ಹೃದಯ ಸಮಸ್ಯೆ, ಖಿನ್ನತೆ ಮತ್ತು ಎಂಡೊಮೆಟ್ರಿಯಲ್ ಕ್ಯಾನ್ಸರ್ ಅಪಾಯ.


ಪಿಸಿಓಎಸ್ ಸಮಸ್ಯೆ ಇದ್ದವರು ಚೆನ್ನಾಗಿ ನಿದ್ರೆ ಮಾಡಬೇಕು


ಎಂಟು ಗಂಟೆ ಚೆನ್ನಾಗಿ ನಿದ್ದೆ ಮಾಡುವುದನ್ನು ಆರೋಗ್ಯದ ಕೀಲಿ ಕೈ ಎನ್ನಲಾಗುತ್ತದೆ. ಉತ್ತಮ ನಿದ್ರೆ ದೇಹದ ಉರಿಯೂತ ಕಡಿಮೆ ಮಾಡುತ್ತದೆ. ಎಂಡೋಕ್ರೈನ್ ಸಿಸ್ಟಮ್ ಹೋಮಿಯೋಸ್ಟಾಸಿಸ್ ಅನ್ನು ಸಹ ನಿರ್ವಹಿಸುತ್ತದೆ. ಇದು ಚಯಾಪಚಯ ಚೆನ್ನಾಗಿ ಇಡುವ ಕೆಲಸ ಮಾಡುತ್ತದೆ.


ಪಿಸಿಓಎಸ್ ಸಮಸ್ಯೆಗೆ ಪೂರಕ ಸೇವನೆ


ಪಿಸಿಓಎಸ್ ರೋಗ ಲಕ್ಷಣ ಸುಧಾರಿಸಲು ಸತು, ವಿಟಮಿನ್ ಡಿ, ವಿಟಮಿನ್ ಬಿ 12, ಮೆಗ್ನೀಸಿಯಮ್, ಬಯೋಟಿನ್, ಸ್ಪಿಯರ್‌ಮಿಂಟ್, ಈವ್ನಿಂಗ್ ಪ್ರೈಮ್ರೋಸ್ ಆಯಿಲ್ ಮತ್ತು ಇನೋಸಿಟಾಲ್ ನಂತಹ ಪೂರಕ ಸೇವಿಸುವುದು ಉತ್ತಮ. ಪೂರಕ ಸೇವನೆಯ ಮೊದಲು ವೈದ್ಯರ ಸಲಹೆ ಪಡೆಯಿರಿ.


ಉರಿಯೂತ ಆಹಾರ ತಪ್ಪಿಸಿ


ಉರಿಯೂತ ಆಹಾರಗಳಾದ ಸಕ್ಕರೆ, ಸಸ್ಯಜನ್ಯ ಎಣ್ಣೆ, ಹೆಚ್ಚಿನ ಜಿಐ ಆಹಾರ, ಸಂಸ್ಕರಿಸಿದ ಆಹಾರ, ಆಲ್ಕೋಹಾಲ್ ಮತ್ತು ಕೆಫೀನ್ ಸೇವನೆ ತಪ್ಪಿಸಿ. ದುರ್ಬಲ ಕರುಳು ಮತ್ತು ಚರ್ಮದ ಸಮಸ್ಯೆಯಿದ್ದರೆ ಗ್ಲುಟನ್ ಮತ್ತು ಡೈರಿ ಪದಾರ್ಥ ಸೇವನೆ ತಪ್ಪಿಸಿ.


ನಿಯಮಿತ ವ್ಯಾಯಾಮ


ಪ್ರತಿ ವಾರ ಕನಿಷ್ಠ 150 ನಿಮಿಷ ವ್ಯಾಯಾಮ ಮಾಡಿ. ಹೆಚ್ಚು ಶಕ್ತಿ ತರಬೇತಿ ತಾಲೀಮು ಮಾಡಿ. ಪ್ಲಾಸ್ಟಿಕ್ ಪಾತ್ರೆಗಳಲ್ಲಿನ ರಾಸಾಯನಿಕ, ಪರಿಸರ ವಿಷ, ಸೌಂದರ್ಯ ಉತ್ಪನ್ನ ಮತ್ತು ಶಾಂಪೂ ಬಳಕೆ ಮಿತಿಗೊಳಿಸಿ.


ಮಾನಸಿಕ ಆರೋಗ್ಯ


ಒತ್ತಡ ಮೂತ್ರಜನಕಾಂಗದ ಗ್ರಂಥಿಗಳು ಹೆಚ್ಚುವರಿ ಟೆಸ್ಟೋಸ್ಟೆರಾನ್ / DHEA ಅನ್ನು ಉತ್ಪಾದಿಸಲು ಕಾರಣವಾಗುತ್ತದೆ. ಹಾಗಾಗಿ ಪ್ರತಿದಿನ ಧ್ಯಾನ, ಯೋಗ, ಜರ್ನಲಿಂಗ್ ಅಭ್ಯಾಸ ಮಾಡಿ, ಆರೋಗ್ಯ ಕಾಪಾಡಿ.


ಕ್ಯಾಲೋರಿ ಸೇವನೆ ಮಿತಿ


ಕಡಿಮೆ ಜಿಐ ಆಹಾರ ಸೇವನೆ ಮಾಡಿ. ಕ್ರೂಸಿಫೆರಸ್ ತರಕಾರಿಗಳು, ಹಸಿರು ಎಲೆಗಳು, ದ್ವಿದಳ ಧಾನ್ಯಗಳು ಮತ್ತು ಕೋಳಿ, ಮೀನು ಮತ್ತು ಮೊಟ್ಟೆ ಪ್ರೋಟೀನ್ ಸೇವಿಸಿ. ಅಗಸೆಬೀಜ, ಮೆಂತ್ಯ ಬೀಜ ಇತ್ಯಾದಿ ಫೈಟೊಸ್ಟ್ರೊಜೆನ್‌ ಸಮೃದ್ಧ ಆಹಾರ ಸೇರಿಸಿ.


ಕರುಳಿನ ಆರೋಗ್ಯಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಕಿಮ್ಚಿ, ಸೌರ್‌ಕ್ರಾಟ್, ಮೊಸರು, ಹುದುಗಿಸಿದ ಮತ್ತು ಫೈಬರ್ ಭರಿತ ಆಹಾರ ನಿಯಮಿತವಾಗಿ ಸೇವಿಸಿ.

Published by:renukadariyannavar
First published: