PCOS Problem: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್! ಈ ಕೆಲವು ಆಹಾರ ಸೇವಿಸಲೇಬೇಡಿ

ಪಿಸಿಓಎಸ್ ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ ಜೀವನಶೈಲಿ ಮತ್ತು ಆಹಾರದಲ್ಲಿ ಕೆಲವು ಅಗತ್ಯ ಬದಲಾವಣೆ ಮಾಡಿಕೊಳ್ಳುವುದು ಈ ಗಂಭೀರ ಸಮಸ್ಯೆ ಯನ್ನು ನೀವು ನಿಯಂತ್ರಣ ಮಾಡಬಹುದು. ಪಿಸಿಓಎಸ್‌ ತಡೆಯಲು ಕೆಲವು ಆಹಾರ ಸೇವನೆ ನಿಲ್ಲಿಸುವುದು ನಿಮಗೆ ಪ್ರಯೋಜನಕಾರಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಅಂದ್ರೆ ಪಿಸಿಓಎಸ್ (PCOS) ಮಹಿಳೆಯರಲ್ಲಿ (Women’s) ಅನಿಯಮಿತ ಅವಧಿ (Periods) ಮತ್ತು ಸ್ಥೂಲಕಾಯ (Obesity) ಹಾಗೂ ಹಾರ್ಮೋನ್ ಅಡಚಣೆಗೆ ಸಂಬಂಧಿಸಿದ ಗಂಭೀರ ಕಾಯಿಲೆ (Disease) ಹುಟ್ಟು ಹಾಕುತ್ತದೆ. NCBI ವರದಿ ಪ್ರಕಾರ, ಪ್ರಪಂಚದಲ್ಲಿ 4 ರಿಂದ 20 ಪ್ರತಿಶತ ಮಹಿಳೆಯರು, PCOS ಕಾಯಿಲೆಯಿಂದ ಬಳಲುತ್ತಿದ್ದಾರೆ. ಪಿಸಿಓಎಸ್ ಹೊಂದಿರುವ ಮಹಿಳೆಯರು, ಇತರ ಮಹಿಳೆಯರಿಗಿಂತ ಟೈಪ್ 2 ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಮಸ್ಯೆ ಮತ್ತು ಎಂಡೊಮೆಟ್ರಿಯಲ್ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯ ಹೊಂದಿರುತ್ತಾರೆ ಎಂದು ತಜ್ಞರು ಹೇಳಿದ್ದಾರೆ. ಅಂತಹ ಸ್ಥಿತಿಯಲ್ಲಿ ನೀವು ಪಿಸಿಓಎಸ್ ನಿಂದ ಬಳಲುತ್ತಿದ್ದರೆ ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚು ಜಾಗ್ರತೆ ವಹಿಸಬೇಕು.

    PCOS ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ ಜೀವನಶೈಲಿ ಮತ್ತು ಆಹಾರದಲ್ಲಿ ಕೆಲವು ಅಗತ್ಯ ಬದಲಾವಣೆ ಮಾಡಿಕೊಳ್ಳುವುದು ಈ ಗಂಭೀರ ಸಮಸ್ಯೆ ಯನ್ನು ನೀವು ನಿಯಂತ್ರಣ ಮಾಡಬಹುದು. ಹೋಮಿಯೋಪತಿ ವೈದ್ಯೆ ಸ್ಮಿತಾ ಭೋರ್ ಪಾಟೀಲ್ ಅವರು, ಇತ್ತೀಚೆಗೆ ಪಿಸಿಓಎಸ್ ವಿರುದ್ಧ ಹೋರಾಡುತ್ತಿರುವ ಮಹಿಳೆಯರಿಗಾಗಿ ಇನ್ಸ್ಟಾದಲ್ಲಿ ಆಹಾರ ಸಲಹೆ ಶೇರ್ ಮಾಡಿದ್ದಾರೆ.

    ಈ ಪೋಸ್ಟ್‌ನಲ್ಲಿ ನೀವು ಪಿಸಿಓಎಸ್‌ನಿಂದ ಬಳಲುತ್ತಿದ್ದರೆ ಅದನ್ನು ತಡೆಯಲು ಕೆಲವು ಆಹಾರ ಸೇವನೆ ಮಾಡದಿರುವುದು ಮತ್ತು ಕೆಲವು ಆಹಾರ ಸೇವನೆ ನಿಲ್ಲಿಸುವುದು ನಿಮಗೆ ಪ್ರಯೋಜನಕಾರಿ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ತಿಂಗಳುಗಟ್ಟಲೇ ಬಾಧಿಸುವ ಕಾಮಾಲೆಯಿಂದ ಶೀಘ್ರ ಪರಿಹಾರ ಕೊಡುತ್ತೆ ಈ ಮನೆಮದ್ದು!

    ಪಿಸಿಓಎಸ್ ನಲ್ಲಿ ಸಿಹಿ ಪದಾರ್ಥ ತಿನ್ನಬೇಡಿ

    ಪಿಸಿಓಎಸ್‌ ಉಂಟಾಗುವ ಕಾರಣಗಳಲ್ಲಿ ಇನ್ಸುಲಿನ್ ಪ್ರತಿರೋಧ ಒಂದಾಗಿದೆ ಎಂದು ಕಂಡು ಬಂದಿದೆ. ಇದು ಹೆಚ್ಚು ಸಕ್ಕರೆ ತಿನ್ನುವುದರಿಂದ ಉಂಟಾಗುವ ಪರಿಣಾಮದ ಸಮಸ್ಯೆ ಆಗಿದೆ. ಅಂತಹ ಸ್ಥಿತಿಯಲ್ಲಿ, ಆಹಾರದಲ್ಲಿ ಸಕ್ಕರೆ ಪ್ರಮಾಣ ಸೀಮಿತವಾಗಿದೆಯೇ ಅಥವಾ ಇಲ್ಲವೇ ಎಂದು ಖಚಿತಪಡಿಸಿಕೊಳ್ಳಿ.

    ಪಿಸಿಓಎಸ್ ನಲ್ಲಿ ಹಣ್ಣಿನ ರಸ ಸೇವನೆ ಮಾಡಬೇಡಿ

    ಹಣ್ಣಿನ ರಸದಲ್ಲಿ ಸಕ್ಕರೆ ಪ್ರಮಾಣ ಹೆಚ್ಚು ಎನ್ನುತ್ತಾರೆ ತಜ್ಞರು. ಇದು ಹೆಚ್ಚಿನ ಇನ್ಸುಲಿನ್ ಆಹಾರ ಪದಾರ್ಥವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ PCOS ನಲ್ಲಿ ಇದರ ಸೇವನೆಯನ್ನು ತಪ್ಪಿಸಬೇಕು.

    ಪಿಸಿಓಎಸ್‌ನಲ್ಲಿ ಸಂಸ್ಕರಿಸಿದ ಆಹಾರ ವಿಷದಂತಿದೆ

    PCOS ನಿಂದ ಬಳಲುತ್ತಿರುವ ಜನರು ಸಂಸ್ಕರಿಸಿದ ಆಹಾರ ಅಥವಾ ಕರಿದ ಆಹಾರ ಸೇವನೆ ತಪ್ಪಿಸಬೇಕು. ಏಕೆಂದರೆ ಅವು ದೇಹದಲ್ಲಿ ಉರಿಯೂತ ಹೆಚ್ಚಿಸುತ್ತವೆ. ಆದ್ದರಿಂದ ಎಲ್ಲಾ ಸಂಸ್ಕರಿಸಿದ ಆಹಾರಗಳು, ಮಾಂಸದಿಂದ ದೂರವಿರಿ. ಮತ್ತು ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುವ ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಆಹಾರ ಪದಾರ್ಥಗಳ ಸೇವನೆ ಮಾಡಿ.

    PCOS ನಲ್ಲಿ ಹಾಲು ಅಥವಾ ಡೈರಿ ಉತ್ಪನ್ನ ಸೇವನೆ ತಪ್ಪಿಸಿ

    ಪಿಸಿಓಎಸ್‌ನಿಂದ ಬಳಲುತ್ತಿರುವ ಮಹಿಳೆಯರಿಗೆ ಡೈರಿಯು ಉತ್ತಮ ಆಯ್ಕೆ ಅಲ್ಲ ಎಂದು ತಜ್ಞರು ಸೂಚಿಸುತ್ತಾರೆ. ಏಕೆಂದರೆ ಇದು ಹೆಚ್ಚು ಈಸ್ಟ್ರೊಜೆನಿಕ್ ಆಹಾರ ಎಂದು ಪರಿಗಣಿಸಲಾಗಿದೆ. ಇದು IGF-1 ಅನ್ನು ಸಹ ಹೊಂದಿದೆ.

    ಇನ್ಸುಲಿನ್ ತರಹದ ಬೆಳವಣಿಗೆಯ ಅಂಶ. ಇದು ಆಂಡ್ರೊಜೆನ್ ಹಾರ್ಮೋನುಗಳ ಉತ್ಪಾದನೆ ಹೆಚ್ಚಿಸಲು ಕೆಲಸ ಮಾಡುತ್ತದೆ. ಇದು ಈಗಾಗಲೇ ಪಿಸಿಓಎಸ್ ಹೊಂದಿರುವ ಮಹಿಳೆಯರಲ್ಲಿ ಹೆಚ್ಚಿದೆ. ಆದ್ದರಿಂದ ಡೈರಿ ಉತ್ಪನ್ನಗಳ ಸೇವನೆ ತಪ್ಪಿಸಿ.

    ಇದನ್ನೂ ಓದಿ: ಸಿಟ್ರಿಕ್ ಆಮ್ಲವಿರುವ ನಿಂಬೆ ಹಣ್ಣು ಕೂದಲ ಆರೈಕೆಗೆ ಹೇಗೆ ಪ್ರಯೋಜನಕಾರಿ?

    ಬೇಕರಿ ಉತ್ಪನ್ನ ಸೇವನೆ ಮಾಡುವುದು PCOS ನಲ್ಲಿ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು

    ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಇನ್ಸುಲಿನ್ ಪ್ರತಿರೋಧ ಹೆಚ್ಚಿಸುತ್ತವೆ ಮತ್ತು ಪಿಸಿಓಎಸ್ ರೋಗ ಲಕ್ಷಣಗಳನ್ನು ಉಲ್ಬಣಗೊಳಿಸುತ್ತವೆ. ಅಂತಹ ವೇಳೆ ನೀವು PCOS ನಿಂದ ಬಳಲುತ್ತಿದ್ದರೆ ಬೇಕರಿ ಉತ್ಪನ್ನ ಸೇವಿಸಬೇಡಿ.
    Published by:renukadariyannavar
    First published: