• Home
  • »
  • News
  • »
  • lifestyle
  • »
  • Acne Problem: ಪಿಸಿಒಎಸ್​ ಇಂದ ಉಂಟಾಗುವ ಮೊಡವೆ ಸಮಸ್ಯೆ ತೊಡೆದು ಹಾಕಲು ತಜ್ಞರು ಹೇಳಿದ ಸಲಹೆ ಹೀಗಿದೆ!

Acne Problem: ಪಿಸಿಒಎಸ್​ ಇಂದ ಉಂಟಾಗುವ ಮೊಡವೆ ಸಮಸ್ಯೆ ತೊಡೆದು ಹಾಕಲು ತಜ್ಞರು ಹೇಳಿದ ಸಲಹೆ ಹೀಗಿದೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಇದರಿಂದ ಉಂಟಾಗುವ ಮೊಡವೆಗಳು ಸಾಮಾನ್ಯ ಮೊಡವೆ ಸಮಸ್ಯೆಗಿಂತ ಹೆಚ್ಚು ನೋವುಂಟು ಮಾಡುತ್ತವೆ. ಕಲೆ ಹಾಗೆಯೇ ಉಳಿಯುತ್ತದೆ. ಅದೇ ವೇಳೆ ಮೊಡವೆ ಸಮಸ್ಯೆ ನಿಯಂತ್ರಿಸಲು ಕಷ್ಟವಾಗುತ್ತದೆ. ಇದು ಮಹಿಳೆಯರು ಚಿಂತೆಗೀಡು ಮಾಡುತ್ತದೆ. ಆದರೆ ಸಮಸ್ಯೆ ಹೇಗೆ ಪರಿಹರಿಸಬಹುದು ಎಂದು ತಜ್ಞರು ಹೇಳ್ತಾರೆ.

ಮುಂದೆ ಓದಿ ...
  • Share this:

    ಇತ್ತೀಚಿನ ದಿನಗಳಲ್ಲಿ ತುಂಬಾ ಮಹಿಳೆಯರು (Women’s) ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ (PCOS Problem) ಎದುರಿಸುತ್ತಿದ್ದಾರೆ. ಪಿಸಿಓಎಸ್ ಸಮಸ್ಯೆ ಮುಖದ ಮೇಲೆ ಮೊಡವೆ ಸಮಸ್ಯೆ (Acne Problem) ಉಂಟು ಮಾಡುತ್ತದೆ. ಮೊಡವೆ ಸಮಸ್ಯೆ ತುಂಬಾ ಮಹಿಳೆಯರನ್ನು ಕಾಡುತ್ತಿದೆ. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಒಂದು ರೀತಿಯ ಹಾರ್ಮೋನ್ ಸಮಸ್ಯೆ ಆಗಿದೆ. ಅನೇಕ ಹಾರ್ಮೋನುಗಳು ಅಸಮತೋಲನದಿಂದ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್  ಮೊಡವೆ ಸಮಸ್ಯೆ ಉಂಟು ಮಾಡುತ್ತದೆ. ಮತ್ತೊಂದೆಡೆ ಪಿಸಿಓಎಸ್ ಒಂದು ಸಮಸ್ಯೆ ಆಗಿ ಕಾಡುತ್ತಿದೆ. ಪ್ರೌಢಾವಸ್ಥೆ ನಂತರ, ಯಾವುದೇ ವಯಸ್ಸಿನ ಹುಡುಗಿಯರು ಮತ್ತು ಮಹಿಳೆಯರು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಹಿಡಿತಕ್ಕೆ ಗುರಿಯಾಗಬಹುದು.


    ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಮೊಡವೆ ಸಮಸ್ಯೆ


    ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಇದರಿಂದ ಉಂಟಾಗುವ ಮೊಡವೆಗಳು ಸಾಮಾನ್ಯ ಮೊಡವೆ ಸಮಸ್ಯೆಗಿಂತ ಹೆಚ್ಚು ನೋವುಂಟು ಮಾಡುತ್ತವೆ. ಕಲೆ ಹಾಗೆಯೇ ಉಳಿಯುತ್ತದೆ. ಅದೇ ವೇಳೆ ಮೊಡವೆ ಸಮಸ್ಯೆ ನಿಯಂತ್ರಿಸಲು ಕಷ್ಟವಾಗುತ್ತದೆ. ಇದು ಮಹಿಳೆಯರು ಚಿಂತೇಗೀಡು ಮಾಡುತ್ತದೆ.


    ಈ ಬಗ್ಗೆ ತಜ್ಞರು, ಸಮಸ್ಯೆ ಹೇಗೆ ಪರಿಹರಿಸಬಹುದು ಎಂದು ಹೇಳಿದ್ದಾರೆ. ಅದನ್ನು ಹೋಗಲಾಡಿಸಲು ಕೆಲ ಮಹತ್ವದ ಕ್ರಮಗಳ ಬಗ್ಗೆ ಹೇಳಿದ್ದಾರೆ. ಸ್ತ್ರೀರೋಗ ತಜ್ಞ ಮತ್ತು ಪ್ರಸೂತಿ ತಜ್ಞ ಅಂಜಲಿ ಕುಮಾರ್ ಪ್ರಕಾರ, ಪಿಸಿಓಎಸ್‌ನಿಂದ ಉಂಟಾಗುವ ಮೊಡವೆ ತೊಡೆದು ಹಾಕಲು ಕೆಲವು ಪರಿಣಾಮಕಾರಿ ಮಾರ್ಗಗಳ ಕುರಿತು ಹೇಳಿದ್ದಾರೆ. ತ್ವಚೆಯ ಕಾಳಜಿ ಹೇಗೆ ವಹಿಸಬೇಕು ಎಂದು ತಿಳಿಸಿದ್ದಾರೆ.


    ಪಿಸಿಓಎಸ್ ಮೊಡವೆಗಳು ಸಾಮಾನ್ಯವಾಗಿ ಆಂಡ್ರೊಜೆನ್ ಸೂಕ್ಷ್ಮ ಪ್ರದೇಶಲ್ಲಿ ಉಂಟು ಮಾಡುತ್ತವೆ. ಪರಿಣಾಮ ಗಲ್ಲ, ಮುಖದ ಬದಿಯಲ್ಲಿ, ದೇಹದ ಮೇಲ್ಭಾಗ ಮತ್ತು ಹಿಂಭಾಗದಲ್ಲಿ ಮೊಡವೆ ಆಗತ್ತವೆ.


    ಪಿಸಿಓಎಸ್ ಮೊಡವೆ ತೊಡೆದು ಹಾಕಲು  ಪರಿಣಾಮಕಾರಿ ಮಾರ್ಗಗಳು


    ಚರ್ಮವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ


    ಪಿಸಿಓಎಸ್ ಮೊಡವೆ ತಪ್ಪಿಸಲು, ದಿನಕ್ಕೆ ಕನಿಷ್ಠ 2 ಬಾರಿ ಉಗುರು ಬೆಚ್ಚಗಿನ ನೀರಿನಿಂದ ಚರ್ಮವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಫೇಸ್ ವಾಶ್ ಬಳಸಿ ಮುಖ ತೊಳೆದರೆ ಮೊಡವೆ ತಡೆಯಬಹುದು. ಸ್ಕ್ರಬ್ಬಿಂಗ್ ಅನ್ನು ಸಂಪೂರ್ಣವಾಗಿ ತಪ್ಪಿಸಿ. ತೈಲ ಮುಕ್ತ ಮಾಯಿಶ್ಚರೈಸರ್ ಬಳಸಿ.


    ಮೇಕಪ್ ಉತ್ಪನ್ನಗಳ ಬಳಕೆ ಕಡಿಮೆ ಮಾಡಿ


    ಪಿಸಿಓಎಸ್ ಮೊಡವೆ ತಪ್ಪಿಸಲು ಕಡಿಮೆ ಮೇಕಪ್ ಉತ್ಪನ್ನ ಬಳಸಿ. ಮತ್ತು ಮೇಕಪ್ ಬಳಸಲು ತೈಲ ಮುಕ್ತ ಉತ್ಪನ್ನ ಆಯ್ಕೆ ಮಾಡಿ. ಕಾಮೆಡೋಜೆನಿಕ್ ಅಲ್ಲದ ಮೇಕಪ್ ಉತ್ಪನ್ನ ಬಳಸಿ. ಇದು ಮೊಡವೆಗಳ ಸಮಸ್ಯೆಯಾಗದಂತೆ ತಡೆಯುತ್ತದೆ.


    ಕೂದಲಿಗೆ ಬಳಸುವ ಉತ್ಪನ್ನಗಳ ಬಗ್ಗೆ ಕಾಳಜಿಯಿರಲಿ


    ಪಿಸಿಓಎಸ್ ಮೊಡವೆ ತಪ್ಪಿಸಲು ಕೂದಲಿಗೆ ಬಳಸುವ ಉತ್ಪನ್ನದ ಬಗ್ಗೆಯೂ ಕಾಳಜಿ ವಹಿಸಬೇಕು. ಹೇರ್ ಸ್ಪ್ರೇ, ಅತಿಯಾದ ಹೇರ್ ಆಯಿಲ್ ಮತ್ತು ಜೆಲ್‌ ಉತ್ಪನ್ನಗಳ ಬಳಕೆ ತಪ್ಪಿಸಬೇಕು. ದೀರ್ಘಕಾಲದವರೆಗೆ ಎಣ್ಣೆ ಇರಿಸುವುದು ಬೇಡ. ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಎಣ್ಣೆ ಹಚ್ಚಿದ ಸ್ವಲ್ಪ ಸಮಯದ ನಂತರ ಕೂದಲನ್ನು ಶಾಂಪೂ ಮಾಡಿ.


    ದೀರ್ಘಕಾಲ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ


    ಪಿಸಿಓಎಸ್ ಮೊಡವೆ ತಪ್ಪಿಸಲು ದೀರ್ಘಕಾಲ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ. ದೇಹವನ್ನು ಸಂಪೂರ್ಣವಾಗಿ ಕವರ್ ಮಾಡಿ. ಕಾಮೆಡೋಜೆನಿಕ್ ಅಲ್ಲದ ಸನ್‌ಸ್ಕ್ರೀನ್ ಅನ್ವಯಿಸಿ.


     ಸಮತೋಲಿತ ಆಹಾರ ಸೇವನೆ


    ಪಿಸಿಓಎಸ್ ಮೊಡವೆ ತಪ್ಪಿಸಲು ಸಸ್ಯಾಹಾರ ಸೇವಿಸಿ. ಡಯಟ್ ಮಾಡಿ. ಎಣ್ಣೆ ಪದಾರ್ಥ ಸೇವನೆ ತಪ್ಪಿಸಿ. ಹಣ್ಣು, ತರಕಾರಿ, ಧಾನ್ಯ ನೈಸರ್ಗಿಕವಾಗಿ ಸೇವಿಸಿ.


    ಇದನ್ನೂ ಓದಿ: ಆಪಲ್ ಸೈಡರ್ ವಿನೆಗರ್ ಬಳಕೆ ಚರ್ಮ ಮತ್ತು ಕೂದಲ ಆರೋಗ್ಯಕ್ಕೆ ಹಾನಿ ಮಾಡುತ್ತದೆಯೇ?


    ವ್ಯಾಯಾಮ ಮಾಡಿ


    ಪಿಸಿಓಎಸ್ ಸಮಸ್ಯೆ ತಪ್ಪಿಸಲು ನಿಯಮಿತ ವ್ಯಾಯಾಮ ಮಾಡಿ ಸಕ್ರಿಯರಾಗಿರಿ. ಯೋಗ ಮತ್ತು ವ್ಯಾಯಾಮದಂತಹ ಚಟುವಟಿಕೆ ಮಾಡಿ.

    Published by:renukadariyannavar
    First published: