• Home
  • »
  • News
  • »
  • lifestyle
  • »
  • Health Care: ಕಲುಷಿತ ಗಾಳಿಯಿಂದ ಉಂಟಾಗುವ ಶೀತ, ಕೆಮ್ಮು, ಶ್ವಾಸಕೋಶ ಸಮಸ್ಯೆ ನಿವಾರಿಸಲು ಈ ಪದಾರ್ಥ ಸಹಕಾರಿ!

Health Care: ಕಲುಷಿತ ಗಾಳಿಯಿಂದ ಉಂಟಾಗುವ ಶೀತ, ಕೆಮ್ಮು, ಶ್ವಾಸಕೋಶ ಸಮಸ್ಯೆ ನಿವಾರಿಸಲು ಈ ಪದಾರ್ಥ ಸಹಕಾರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಷ್ಟ್ರ ರಾಜಧಾನಿ ದೆಹಲಿ ಮಾತ್ರವಲ್ಲದೇ ಇತ್ತೀಚಿನ ದಿನಗಳಲ್ಲಿ ಹಲವು ನಗರಗಳು ವಿಷಕಾರಿ ವಾತಾವರಣ ಹೊಂದುತ್ತಿರುವುದು ಸಾಕಷ್ಟು ಆತಂಕದ ವಿಚಾರವಾಗಿದೆ. ವಾತಾವರಣದ ಈ ಕಲುಷಿತ ಗಾಳಿಯು ದಿನನಿತ್ಯ ತಮ್ಮ ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗುವವರಿಗೆ ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳ್ತಾರೆ.

ಮುಂದೆ ಓದಿ ...
  • Share this:

    ದೆಹಲಿಯ ಎನ್‌ಸಿಆರ್‌ ನಲ್ಲಿ (Delhi NCR) ವಾತಾವರಣ (Weather) ತುಂಬಾ ಹದಗೆಟ್ಟಿದೆ. ಅಲ್ಲಿ ಮಾಲಿನ್ಯವು (Pollution) ಅಪಾಯಕಾರಿ ಮಟ್ಟ ತಲುಪಿದ್ದು, ವಿವಿಧ ಕಾಯಿಲೆಗೆ (Disease) ಕಾರಣವಾಗ್ತಿದೆ. ಚಳಿಗಾಲವು (Winter) ಸಮೀಪಿಸುತ್ತಿದ್ದಂತೆ ಬೆಳಿಗ್ಗೆ ದಟ್ಟವಾದ ಹೊಗೆ ಪದರ ಆವರಿಸಿಕೊಳ್ಳುತ್ತದೆ. ದೆಹಲಿಯ ಜನರು ಉಸಿರಾಡಲು ಕಷ್ಟ ಪಡುವ ಸ್ಥಿತಿ ಎದುರಾಗಿದೆ. ಕೇವಲ ರಾಷ್ಟ್ರ ರಾಜಧಾನಿ ದೆಹಲಿ ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ಹಲವು ನಗರಗಳು ವಿಷಕಾರಿ ವಾತಾವರಣ ಹೊಂದುತ್ತಿರುವುದು ಸಾಕಷ್ಟು ಆತಂಕದ ವಿಚಾರವಾಗಿದೆ. ವಾತಾವರಣದ ಈ ಕಲುಷಿತ ಗಾಳಿಯು ದಿನನಿತ್ಯ ತಮ್ಮ ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗುವವರಿಗೆ ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳ್ತಾರೆ.


    ಕಲುಷಿತ ಗಾಳಿಯಿಂದ ವಿವಿಧ ಕಾಯಿಲೆಗಳ ಆತಂಕ


    ಕಲುಷಿತ ಗಾಳಿ ಮಕ್ಕಳಿಂದ ವೃದ್ಧರವರೆಗೆ ತೀವ್ರ ತೊಂದರೆ ಉಂಟು ಮಾಡುತ್ತಿದೆ. ಮನೆಯಲ್ಲಿ ವಾಸಿಸುವವರಿಗೆ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಆನ್ಕ್ವೆಸ್ಟ್ ಲ್ಯಾಬೊರೇಟರೀಸ್ ಲಿಮಿಟೆಡ್ ನ ನಿರ್ದೇಶಕ ಡಾ. ಶಿವಾಲಿ ಅಹ್ಲಾವತ್ ಹೇಳುವ ಪ್ರಕಾರ, ದೇಹವು ಈ ಭಯಾನಕ ವಾಯು ಮಾಲಿನ್ಯದ ವಿರುದ್ಧ ಹೋರಾಡಲು ಸಹಾಯ ಮಾಡುವ ಕೆಲವು ಉತ್ಕರ್ಷಣ ನಿರೋಧಕಗಳಿವೆ ಎಂದು ತಿಳಿಸಿದ್ದಾರೆ.


    ಕಲುಷಿತ ಗಾಳಿಯಿಂದ ನಮ್ಮ ಉಸಿರಾಟದ ಮೂಲಕ ಓಝೋನ್, ನೈಟ್ರೋಜನ್ ಡೈಆಕ್ಸೈಡ್, ಡೀಸೆಲ್ ಕಣಗಳು ಇತ್ಯಾದಿ ದೇಹ ಸೇರುತ್ತಿವೆ. ಇದು ನಮ್ಮ ಶ್ವಾಸಕೋಶ ಮತ್ತು ದೇಹಕ್ಕೆ ಹಾನಿ ಉಂಟು ಮಾಡುತ್ತಿದೆ. ಸಮಯೋಚಿತ ತಡೆಗಟ್ಟುವ ಕ್ರಮಗಳನ್ನು ಕೈಗೊಂಡರೆ ಮಾತ್ರ ದೇಹಾರೋಗ್ಯದ ರಕ್ಷಣೆ ಸಾಧ್ಯ ಎಂದು ಅವರು ಹೇಳಿದ್ದಾರೆ.




    ಅರಿಶಿನ ನಿಯಮಿತ ಆಹಾರದಲ್ಲಿ ಬಳಕೆ ಮಾಡಿ


    ಮಾಲಿನ್ಯದ ವಿಷಕಾರಿ ಪರಿಣಾಮಗಳಿಂದ ಶ್ವಾಸಕೋಶವನ್ನು ರಕ್ಷಿಸಲು ಅರಿಶಿನ ಸಾಕಷ್ಟು ಸಹಕಾರಿ ಎಂದು ತಜ್ಞರು ಹೇಳುತ್ತಾರೆ. ಯಾಕಂದ್ರೆ ಅರಿಶಿನ ಉರಿಯೂತದ ಗುಣಲಕ್ಷಣಗಳನ್ನು ಮತ್ತು ಕರ್ಕ್ಯುಮಿನ್ ಸಂಯುಕ್ತ ಹೊಂದಿದೆ. ಶ್ವಾಸಕೋಶದ ಕಿರಿಕಿರಿ, ಉಸಿರಾಟದ ತೊಂದರೆ ಮತ್ತು ವಾಯು ಮಾಲಿನ್ಯದಿಂದ ಉಂಟಾಗುವ ಕೆಮ್ಮಿನಿಂದ ಪರಿಹಾರ ಪಡೆಯಲು ಮತ್ತು ಮಲಗುವ ಸಮಯದಲ್ಲಿ ಬೆಚ್ಚಗಿನ ಹಾಲಿನೊಂದಿಗೆ ಅರಿಶಿನ ಬೆರೆಸಿ ಕುಡಿಯುವುದು ಸಾಕಷ್ಟು ಪ್ರಯೋಜನ ನೀಡುತ್ತದೆ.


    ತುಳಸಿ ಸೇವನೆ ಮಾಡುವುದು


    ತುಳಸಿಯ ಸೇವನೆಯಿಂದ ಅನೇಕ ರೋಗಗಳು ಸುಲಭವಾಗಿ ವಾಸಿಯಾಗುತ್ತವೆ. ಶೀತ, ಕೆಮ್ಮು ಮತ್ತು ಶ್ವಾಸಕೋಶದ ಸೋಂಕಿನ ಸಮಸ್ಯೆ ದೂರ ಮಾಡುತ್ತದೆ ತುಳಸಿ ಎಲೆ. ಕಷಾಯ ಅಥವಾ ಚಹಾ ರೂಪದಲ್ಲಿ ತುಳಸಿ ಎಲೆ ಬಳಸಿದರೆ ವಾಯು ಮಾಲಿನ್ಯದಿಂದ ಉಂಟಾಗುವ ತೊಂದರೆ ಹೊಡೆದೋಡಿಸಬಹುದು. ತುಳಸಿ ಎಲೆ ಸೇವನೆಯಿಂದ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ.


    ಜೇನುತುಪ್ಪ ಸೇವನೆ ಮಾಡುವುದು


    ಹೆಚ್ಚುತ್ತಿರುವ ವಾಯು ಮಾಲಿನ್ಯ ಕೆಮ್ಮು ಮತ್ತು ಗಂಟಲು ನೋವಿನ ಸಮಸ್ಯೆ ಉಂಟಾಗಲು ಕಾರಣವಾಗುತ್ತದೆ. ಇದರಿಂದ ಪರಿಹಾರ ಪಡೆಯಲು ರಾತ್ರಿ ಅಥವಾ ಹಗಲು ಮಲಗುವ ಮುನ್ನ ಜೇನುತುಪ್ಪ ಸೇವಿಸಿ. ಜೇನುತುಪ್ಪವನ್ನು ಕರಿಮೆಣಸಿನ ಪುಡಿ ಮತ್ತು ಹುರಿದ ಶುಂಠಿ ಜೊತೆ ಸೇವನೆ ಮಾಡಬಹುದು.


    ಹಸಿರು ತರಕಾರಿ ಸೇವನೆ ಮಾಡಿ


    ಹಸಿರು ಎಲೆಗಳ ತರಕಾರಿ ವಾಯು ಮಾಲಿನ್ಯ ಸಮಸ್ಯೆ ನಿಯಂತ್ರಿಸುತ್ತವೆ. ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ವಿಟಮಿನ್ ಕೆ ಅಂಶಗಳು ಹಸಿರು ತರಕಾರಿ, ಕೊತ್ತಂಬರಿ ಎಲೆ, ಅಮರಂಥ್ ಗ್ರೀನ್ಸ್, ಎಲೆಕೋಸು ಮತ್ತು ಟರ್ನಿಪ್ಗಳಲ್ಲಿದೆ. ಇದು ವಾಯು ಮಾಲಿನ್ಯದಿಂದ ಉಂಟಾಗುವ ಸಮಸ್ಯೆ ತಪ್ಪಿಸಲು ಸಹಕಾರಿ ಆಗಿದೆ.


    ಶುಂಠಿ ಸೇವನೆ ಮಾಡುವುದು


    ಚಳಿಗಾಲದಲ್ಲಿ ಶುಂಠಿ ಸೇವಿಸಿದರೆ ರೋಗ ನಿರೋಧಕ ಶಕ್ತಿ ಉತ್ತಮವಾಗುತ್ತದೆ. ಶೀತ, ಕೆಮ್ಮು ಮತ್ತು ನೋಯುತ್ತಿರುವ ಗಂಟಲಿನ ಜೊತೆಗೆ ಶುಂಠಿಯು ಋತುಮಾನದ ಸೋಂಕನ್ನು ತಡೆಗಟ್ಟುವಲ್ಲಿ ಬಹಳ ಸಹಕಾರಿ. ಶುಂಠಿಯು ನಮ್ಮ ಶ್ವಾಸಕೋಶವನ್ನು ಆರೋಗ್ಯವಾಗಿಡುತ್ತದೆ. ಶುಂಠಿಯನ್ನು ಚಹಾ, ಕಷಾಯ ಅಥವಾ ಜೇನುತುಪ್ಪದ ಜೊತೆ ಸೇವಿಸಬಹುದು.


    ಇದನ್ನೂ ಓದಿ: ಅಸ್ತಮಾ ಸಮಸ್ಯೆ, ಯಕೃತ್ತಿನ ಆರೋಗ್ಯಕ್ಕೆ ಸೇವಿಸಿ ಗ್ರೀನ್ ಆ್ಯಪಲ್!


    ಚೆನ್ನಾಗಿ ನೀರು ಕುಡಿಯಿರಿ


    ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದ ಉಂಟಾಗುವ ತೊಂದರೆ ತಪ್ಪಿಸಲು ದೇಹದಲ್ಲಿ ನೀರಿನ ಕೊರತೆ ಇರಬಾರದು. ದೇಹದಲ್ಲಿ ಸರಿಯಾದ ಪ್ರಮಾಣದ ನೀರನ್ನು ಹೊಂದುವುದು ಚಯಾಪಚಯ ಮತ್ತು ಆರೋಗ್ಯಕ್ಕೆ ಸಹಕಾರಿ.

    Published by:renukadariyannavar
    First published: