• Home
  • »
  • News
  • »
  • lifestyle
  • »
  • Lungs Health: ಉಸಿರಾಟದ ಸಮಸ್ಯೆಗೆ ಈ ಔಷಧ ಪರಿಹಾರವಂತೆ, ಇಲ್ಲಿದೆ ಸಂಪೂರ್ಣ ಮಾಹಿತಿ

Lungs Health: ಉಸಿರಾಟದ ಸಮಸ್ಯೆಗೆ ಈ ಔಷಧ ಪರಿಹಾರವಂತೆ, ಇಲ್ಲಿದೆ ಸಂಪೂರ್ಣ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಾಯು ಮಾಲಿನ್ಯದಿಂದ ಹೃದ್ರೋಗ ಶ್ವಾಸಕೋಶ ಸೇರಿ ಹಲವು ಕಾಯಿಲೆಗಳು ಕಾಡುತ್ತವೆ. ಕೆಲವು ಗಿಡಮೂಲಿಕೆಗಳು ಮತ್ತು ಮಸಾಲೆಗಳು ಉತ್ತಮ ಶ್ವಾಸಕೋಶದ ಆರೋಗ್ಯಕ್ಕೆ ಸಹಾಯ ಮಾಡುತ್ತವೆ. ಜೊತೆಗೆ ಉಸಿರಾಟದ ಕಾಯಿಲೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

  • Share this:

    ದೀಪಾವಳಿಯ ನಂತರ ಹೆಚ್ಚು ವಾಯು ಮಾಲಿನ್ಯ (Air Pollution) ಉಂಟಾಗುತ್ತದೆ. ಬೃಹತ್ ನಗರಗಳಲ್ಲಿ (Main Cities) ವಾಯು ಮಾಲಿನ್ಯ ಹಲವು ಆರೋಗ್ಯ ಸಮಸ್ಯೆಗಳಿಗೆ (Health Problems)  ಕಾರಣವಾಗುತ್ತಿದೆ. ಅದರಲ್ಲೂ ದೆಹಲಿ ನಗರ ವಾಸಿಗಳು ವಿಷಕಾರಿ ವಾಯು ಸೇವಿಸುತ್ತಿದ್ದು, ಹಲವು ಕಾಯಿಲೆಗಳ ವಿರುದ್ಧ ಹೋರಾಡುವಂತಾಗಿದೆ. ಏರ್ ಕ್ವಾಲಿಟಿ ಇಂಡೆಕ್ಸ್ (AQI) ಪ್ರಕಾರ ದೆಹಲಿ, ಕೋಲ್ಕತ್ತಾ ಮತ್ತು ಬಿಹಾರ ನಗರಗಳಲ್ಲಿ ಹೆಚ್ಚು ಕಲುಷಿತ ಗಾಳಿ ಇರುವುದು ಕಂಡು ಬಂದಿದೆ. ಈ ನಗರಗಳಲ್ಲಿ ವಾಸ ಮಾಡುತ್ತಿರುವವರು ತಡ ಮಾಡದೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯದತ್ತ ಹೆಚ್ಚಿನ ಕಾಳಜಿ ವಹಿಸುವ ಕ್ರಮ ಕೈಗೊಳ್ಳುವ ಮೂಲಕ ಕೆಟ್ಟ ಪರಿಣಾಮವನ್ನು ತಪ್ಪಿಸಬಹುದು.


    ಕಲುಷಿತ ಗಾಳಿ ಯಾವ ಕಾಯಿಲೆ ಹರಡಲು ಕಾರಣವಾಗಿದೆ?  


    ವಾಯು ಮಾಲಿನ್ಯದಿಂದ ಹೃದ್ರೋಗ, ಶ್ವಾಸಕೋಶ ಕ್ಯಾನ್ಸರ್ ಮತ್ತು ಉಸಿರಾಟದ ಕಾಯಿಲೆ ಉಂಟಾಗುತ್ತಿರುವುದು ಬೆಳಕಿಗೆ ಬಂದಿದೆ. ವಾಯು ಮಾಲಿನ್ಯ ಜನರ ನರ, ಮೆದುಳು, ಮೂತ್ರಪಿಂಡ, ಯಕೃತ್ತು ಮತ್ತು ಇತರೆ ಅಂಗಗಳಿಗೆ ದೀರ್ಘಾವಧಿ ಹಾನಿ ಉಂಟು ಮಾಡುತ್ತವೆ. ವಾಯು ಮಾಲಿನ್ಯದಿಂದ ಜನ್ಮ ದೋಷ ಸಹ ಉಂಟಾಗುತ್ತವೆ.


    ಈ ಗಿಡಮೂಲಿಕೆಯು ಕಲುಷಿತ ಗಾಳಿಯ ಉಲ್ಬಣ ನಿಯಂತ್ರಿಸುತ್ತದೆ


    ಆಯುರ್ವೇದ ಆಸ್ಪತ್ರೆಯ ಮುಖ್ಯಸ್ಥ ಡಾ ಆರ್‌ಪಿ ಪ್ರಶಾಂತ್ ವಿಹಾರ್ ಮಾಧ್ಯಮವೊಂದರಲ್ಲಿ ಮಾತನಾಡಿದ್ದು, ಕೆಲವು ಗಿಡಮೂಲಿಕೆಗಳು ಮತ್ತು ಮಸಾಲೆಗಳು ಉತ್ತಮ ಶ್ವಾಸಕೋಶದ ಆರೋಗ್ಯಕ್ಕೆ ಸಹಾಯ ಮಾಡುತ್ತವೆ. ಜೊತೆಗೆ ಉಸಿರಾಟದ ಕಾಯಿಲೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.




    ಇದು ತುಳಸಿ, ಲವಂಗ, ಪೀಪ್ಲಿ, ಗೋಜಿಯಾ, ದಾಲ್ಚಿನ್ನಿ, ಕಟೆಲಿ, ಬಹೇಡಾ, ಒಣಗಿದ ಅಂಜೂರದ ಹಣ್ಣುಗಳು ಮತ್ತು ಉನಾಬ್‌ ಜುಫಾ ಸೇವನೆ ಮಾಡಿದರೆ ದೇಹದಿಂದ ಕಲುಷಿತ ಗಾಳಿಯನ್ನು ಕಡಿಮೆ ಮಾಡಬಹುದು.


    ದೇಹದಿಂದ ಕಲುಷಿತ ಗಾಳಿ ಕಡಿಮೆ ಮಾಡಲು ಜುಫಾ ಸಹಕಾರಿ


    ಜುಫಾ ಒಂದು ಔಷಧೀಯ ಸಸ್ಯ ಆಗಿದೆ. ಇದು ಸೌಮ್ಯ ಪರಿಮಳ, ಕಹಿ ರುಚಿ ಮತ್ತು ಬೆಚ್ಚಗಿನ ಪರಿಣಾಮ ಹೊಂದಿದೆ. ಈ ಸಸ್ಯವು ದೇಹವನ್ನು ಅನೇಕ ರೋಗಗಳಿಂದ ರಕ್ಷಣೆ ನೀಡಲು ಸಹಾಯ ಮಾಡುತ್ತದೆ. ಮತ್ತು ಚಿಕಿತ್ಸೆ ನೀಡಲು ಸಹಕಾರಿ.


    ಗಂಟಲು ನೋವಿಗೆ ಪರಿಹಾರ ನೀಡುತ್ತದೆ ಜುಫಾ


    ಶೀತ ದಿನಗಳಲ್ಲಿ ಗಂಟಲಿನಲ್ಲಿ ನೋವು ಕಾಣಿಸುತ್ತದೆ. ಇದು ತುಂಬಾ ಸಾಮಾನ್ಯ. ಆದರೆ ಇದು ಕಲುಷಿತ ಗಾಳಿಯ ಪರಿಣಾಮ ಆಗಿರಬಹುದು. ಕೇವಲ ಹವಾಮಾನ ಮಾತ್ರವಲ್ಲದೇ ಬೇರೆ ಕಾರಣಗಳಿಂದಲೂ ಗಂಟಲು ನೋವು ಸಮಸ್ಯೆ ಆಗುತ್ತದೆ. ಜುಫಾ ಎಲೆಗಳ ಕಷಾಯ ತಯಾರಿಸಿ ಮತ್ತು ಅದನ್ನು ಗಾರ್ಗ್ಲಿಂಗ್ ಮಾಡಿ.


    ಕೆಮ್ಮು ನಿವಾರಣೆಗೆ ಜುಫಾ ಪ್ರಯೋಜನಕಾರಿ


    ಕೆಟ್ಟ ಗಾಳಿ ಉಸಿರಾಡುವುದು ಕೆಮ್ಮು ಉಂಟು ಮಾಡುತ್ತದೆ. ಜನರು ಶೀತ ವಾತಾವರಣದಿಂದ ಕೆಮ್ಮು ಸಮಸ್ಯೆ ಅನುಭವಿಸುತ್ತಾರೆ. 3 ದಿನಗಳಲ್ಲಿ ಕೆಮ್ಮಿನಿಂದ ಪರಿಹಾರ ಸಿಗದಿದ್ದರೆ ಜುಫಾ ಎಲೆಯನ್ನು ಪೇಸ್ಟ್ ಮಾಡಿ ಮತ್ತು ಜೇನುತುಪ್ಪದ ಜೊತೆ ಸೇವಿಸಿ.


    ಮುಟ್ಟಿನ ಸಮಸ್ಯೆ ಕಡಿಮೆ ಮಾಡುತ್ತದೆ ಜುಫಾ


    ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಹೊಟ್ಟೆ ನೋವಿನ ಸಮಸ್ಯೆ ಕಾಡುತ್ತದೆ. ಔಷಧಿ ಸೇವಿಸುವ ಬದಲು ಜುಫಾ ಸೇವಿಸಿ.


    ಹೊಟ್ಟೆ ನೋವಿಗೆ ಮನೆ ಮದ್ದು ಜುಫಾ


    ಜುಫಾದಲ್ಲಿರುವ ಔಷಧೀಯ ಗುಣಗಳು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಡಿಮೆ ಮಾಡಲು ಸಹಕಾರಿ. ಜುಫಾ ಕಷಾಯ ಸೇವನೆ ಹೊಟ್ಟೆ ನೋವು, ಹೊಟ್ಟೆಯ ಊತ ಮತ್ತು ಹುಣ್ಣು ಕಡಿಮೆ ಮಾಡುತ್ತದೆ.


    ಇದನ್ನೂ ಓದಿ: ಯಕೃತ್ತಿನ ಅನಾರೋಗ್ಯ ಈ ಸಮಸ್ಯೆಗಳನ್ನು ಹೆಚ್ಚಿಸುತ್ತದೆ, ಕೊಬ್ಬಿನ ಪಿತ್ತಜನಕಾಂಗ ಕಾಯಿಲೆ ತಪ್ಪಿಸುವ ಬಗೆ ಇಲ್ಲಿದೆ


    ಉಸಿರಾಟದ ತೊಂದರೆ ಕಡಿಮೆ ಮಾಡುತ್ತದೆ ಜುಫಾ


    ಶ್ವಾಸಕೋಶದಲ್ಲಿನ ಲೋಳೆ, ಕಸದಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ. ಆಗ ಜುಫಾ ಸೇವಿಸಿ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೆ, ಜುಫಾ ಹೂವಿನ ಕಷಾಯ ಕುಡಿಯಿರಿ.

    Published by:renukadariyannavar
    First published: