• Home
 • »
 • News
 • »
 • lifestyle
 • »
 • Pneumonia Problem: ನ್ಯೂಮೋನಿಯಾ ಲಕ್ಷಣಗಳನ್ನು ತೊಡೆದು ಹಾಕಲು ಈ ಮನೆಮದ್ದು ಬಳಸಿ!

Pneumonia Problem: ನ್ಯೂಮೋನಿಯಾ ಲಕ್ಷಣಗಳನ್ನು ತೊಡೆದು ಹಾಕಲು ಈ ಮನೆಮದ್ದು ಬಳಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನ್ಯುಮೋನಿಯಾ ಕಾಯಿಲೆ ಶ್ವಾಸಕೋಶದ ಸೋಂಕಿನ ಒಂದು ವಿಧ. ಇದು ಎರಡೂ ಶ್ವಾಸಕೋಶಗಳ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. ನ್ಯೂಮೋನಿಯಾ ಉಂಟಾದಾಗ ಶ್ವಾಸಕೋಶದಲ್ಲಿರುವ ಗಾಳಿ ಚೀಲಗಳು ದ್ರವ ಮತ್ತು ಕೀವುಗಳಿಂದ ತುಂಬುತ್ತವೆ. ಆಗ ರೋಗಿಯು ಉಸಿರಾಟದ ತೊಂದರೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಾನೆ.

ಮುಂದೆ ಓದಿ ...
 • Share this:

  ಪ್ರತಿ ವರ್ಷ ನವೆಂಬರ್ 12 ನ್ನು ವಿಶ್ವ ನ್ಯುಮೋನಿಯಾ ದಿನ 2022 (World Pneumonia Day) ಎಂದು ಆಚರಣೆ ಮಾಡ್ತಾರೆ. ನ್ಯುಮೋನಿಯಾ ಎಂಬುದು ಒಂದು ಶ್ವಾಸಕೋಶದ (Lungs) ಮೇಲೆ ನೇರವಾಗಿ ಪರಿಣಾಮ ಬೀರುವ ಸೋಂಕು (Infection) ಆಗಿದೆ. ನ್ಯೂಮೋನಿಯಾ ಹೆಚ್ಚಾಗಿ ಮಕ್ಕಳು, ವೃದ್ಧರು ಮತ್ತು ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವ ಜನರಲ್ಲಿ ಬೇಗ ಆಕ್ರಮಣ ಮಾಡುತ್ತದೆ. ಹಾಗಾಗಿ ಈ ನ್ಯೂಮೋನಿಯಾ ಕಾಯಿಲೆ ಬಗ್ಗೆ ಹೆಚ್ಚು ಅರಿವು ಹೊಂದುವುದು ಮತ್ತು ಕಾಳಜಿ ವಹಿಸುವುದು ಮುಖ್ಯ ಆಗಿದೆ. ನ್ಯೂಮೋನಿಯಾ ಬರದಂತೆ ಜಾಗ್ರತೆ ವಹಿಸಬೇಕಾಗುತ್ತದೆ. ನ್ಯುಮೋನಿಯಾ ಹೊಡೆದೋಡಿಸಲು ಯಾವ ಮನೆಮದ್ದುಗಳು ಸಹಾಯ ಮಾಡುತ್ತವೆ ಎಂಬುದನ್ನು ಇಲ್ಲಿ ನಾವು ತಿಳಿಯೋಣ.


  ನ್ಯೂಮೋನಿಯಾ ಕಾಯಿಲೆ ಎಂದರೇನು?


  ನ್ಯುಮೋನಿಯಾ ಕಾಯಿಲೆ ಶ್ವಾಸಕೋಶದ ಸೋಂಕಿನ ಒಂದು ವಿಧ ಆಗಿದೆ. ಇದು ಎರಡೂ ಶ್ವಾಸಕೋಶಗಳ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯೂ ಇದೆ. ನ್ಯೂಮೋನಿಯಾ ಉಂಟಾದಾಗ ಶ್ವಾಸಕೋಶದಲ್ಲಿರುವ ಗಾಳಿ ಚೀಲಗಳು ದ್ರವ, ಕೀವುಗಳಿಂದ ತುಂಬುತ್ತವೆ.


  ಹೀಗಾಗಿ ನ್ಯೂಮೋನಿಯಾ ಬಂದ ವ್ಯಕ್ತಿಯು ಕೆಮ್ಮು, ಜ್ವರ, ಲೋಳೆ, ನೆಗಡಿ, ಉಸಿರಾಟದ ತೊಂದರೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಾನೆ. ಹೀಗೆ ಉಸಿರಾಟದ ತೊಂದರೆ ನ್ಯೂಮೋನಿಯಾ ಒಂದೇ ಅಲ್ಲ, ಬೇರೆ ಕಾರಣಗಳಿಂದಲೂ ಆಗಿರಬಹುದು. ಇದಕ್ಕಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕಾಗುತ್ತದೆ.


  ಇದನ್ನೂ ಓದಿ: ಬಲಿಷ್ಠ ಮೂಳೆಗಳಿಗಾಗಿ ಬೇಕು ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ, ಇವು ಹೇಗೆ ಕೆಲಸ ಮಾಡುತ್ತವೆ?


  ನ್ಯುಮೋನಿಯಾ ಸೋಂಕಿನ ಸಾಮಾನ್ಯ ಲಕ್ಷಣಗಳು ಹೀಗಿವೆ


  ಉಸಿರಾಡುವಾಗ ಮತ್ತು ಕೆಮ್ಮುವಾಗ ಎದೆ ನೋವು


  ಅರವತ್ತೈದು ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಮತ್ತು ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ ಹೊಂದಿರುವ ಜನರಲ್ಲಿ ದೇಹದ ಉಷ್ಣತೆಯು ಸಾಮಾನ್ಯಕ್ಕಿಂತ ಕಡಿಮೆ ಇರುವುದು. ಮತ್ತು ವಾಕರಿಕೆ, ವಾಂತಿ ಅಥವಾ ಅತಿಸಾರ ಸಮಸ್ಯೆ ಉಂಟಾಗುವುದು, ಕಫ ಮತ್ತು ಲೋಳೆ ಜೊತೆಗೆ ಕೆಮ್ಮು ಬರುವುದು, ಅತಿಯಾದ ಆಯಾಸ ಉಂಟಾದ ಭಾವನೆ, ಜ್ವರ ಬರುವುದು, ಬೆವರು ಮತ್ತು ನಡುಕ ಬರುವುದು, ಉಸಿರಾಟದಲ್ಲಿ ತೊಂದರೆ ಉಂಟಾಗುವುದು ಆಗಿದೆ.


  ನ್ಯುಮೋನಿಯಾ ಸೋಂಕು ತೊಡೆದು ಹಾಕಲು ಮನೆಮದ್ದು


  ಉಪ್ಪು ನೀರಿನಿಂದ ಗಾರ್ಗ್ಲಿಂಗ್ ಮಾಡುವುದು


  ಉಪ್ಪನ್ನು ಬೆರೆಸಿದ ಉಗುರುಬೆಚ್ಚಗಿನ ನೀರಿನಿಂದ ಬಾಯಿ ಮುಕ್ಕಳಿಸಿ. ಇದು ನಿಮ್ಮ ಗಂಟಲು ತೆರವು ಮಾಡುತ್ತದೆ. ಮತ್ತು ಲೋಳೆ ಹೊರ ಹಾಕಲು ಸುಲಭವಾಗುತ್ತದೆ.


  ಪುದೀನಾ ಟೀ ಪ್ರಯತ್ನಿಸಿ


  ಸಂಶೋಧನೆ ಪ್ರಕಾರ, ಪುದೀನಾ ನೋವಿನಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ. ಪುದೀನಾ ಚಹಾ ಸೇವನೆ ಮಾಡಿ. ಇದು ಲೋಳೆ ತೆಗೆದು ಹಾಕುತ್ತದೆ. ಇದಕ್ಕೆ ನೀವು ನಿಂಬೆ, ಜೇನುತುಪ್ಪ ಬಳಸಬಹುದು. ಇದು ನಿಮ್ಮ ಮೂಗಿನ ಮಾರ್ಗಗಳನ್ನು ತೆರೆಯುತ್ತದೆ.


  ಒಂದು ಕಪ್ ಕಾಫಿ ಸೇವನೆ


  ನ್ಯುಮೋನಿಯಾದಿಂದ ಉಸಿರಾಟದ ತೊಂದರೆ ಉಂಟಾದರೆ, ಒಂದು ಕಪ್ ಕಾಫಿ ಸೇವನೆ ಮಾಡಿ. ಇದು ತ್ವರಿತ ಪರಿಹಾರ ನೀಡುತ್ತದೆ. ಕೆಫೀನ್ ವಾಯು ಮಾರ್ಗಗಳನ್ನು ತೆರೆಯಲು ಸಹಾಯ ಮಾಡುತ್ತದೆ. ಇದು ಸಾಕಷ್ಟು ಪ್ರಮಾಣದ ಆಮ್ಲಜನಕ ಶ್ವಾಸಕೋಶಕ್ಕೆ ತಲುಪಿಸಲು ಸಹಕಾರಿ.


  ಅರಿಶಿನ ಸೇವನೆ ಪ್ರಯೋಜನಕಾರಿ


  ಅರಿಶಿನದಲ್ಲಿ ಕರ್ಕ್ಯುಮಿನ್ ಎಂಬ ಸಂಯುಕ್ತವಿದೆ. ಇದು ಉರಿಯೂತದ, ಆಂಟಿಮೈಕ್ರೊಬಿಯಲ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿದೆ. ಇದು ನ್ಯುಮೋನಿಯಾ ರೋಗ ಲಕ್ಷಣಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಎದೆ ನೋವಿಗೆ ಪರಿಹಾರ ನೀಡುತ್ತದೆ. ಪಡೆಯಲು ಇದನ್ನು ಬಳಸಬಹುದು.


  ಶುಂಠಿ ಚಹಾ ಸೇವಿಸಿ


  ಶುಂಠಿಯು ಉರಿಯೂತ ಮತ್ತು ನೋವು ನಿವಾರಕ ಗುಣ ಹೊಂದಿದೆ. ಅವುಗಳನ್ನು ಚಹಾದ ರೂಪದಲ್ಲಿ ಸೇವಿಸಿ. ಲೋಳೆ ಹೊರಗೆ ತೆಗೆಯುತ್ತದೆ. ಎದೆ ನೋವಿನಿಂದ ಪರಿಹಾರ ನೀಡುತ್ತದೆ.


  ಸಾಕಷ್ಟು ನೀರು ಕುಡಿಯಿರಿ


  ಸಾಕಷ್ಟು ನೀರು ಕುಡಿಯಿರಿ. ದೇಹ ನಿರ್ಜಲೀಕರಣವಾಗದಂತೆ ತಡೆಯುತ್ತದೆ. ಮನೆಯಲ್ಲಿ ತಯಾರಿಸಿ, ಹಣ್ಣುಗಳ ರಸ ಸೇವಿಸಿ. ದೇಹವನ್ನು ತಂಪಾಗಿಸಿ, ಜ್ವರ ಕಡಿಮೆ ಮಾಡುತ್ತದೆ.


  ಮೆಂತ್ಯ ಬೀಜದ ಚಹಾ ಸೇವಿಸಿ


  ಮೆಂತ್ಯ ಬೀಜದ ಚಹಾ ಸೇವನೆ ಮಾಡಿದರೆ ಬೆವರು ಬರುತ್ತದೆ. ಇದು ದೇಹವನ್ನು ತಂಪಾಗಿಸುತ್ತದೆ. ಜ್ವರ ಕಡಿಮೆಯಾಗುತ್ತದೆ.


  ಇದನ್ನೂ ಓದಿ: ಟೇಸ್ಟಿ ಎಂದು ಅತಿಯಾಗಿ ತಿನ್ನುವ ಚೀಸ್ ಯಾವೆಲ್ಲಾ ಅಡ್ಡ ಪರಿಣಾಮ ಉಂಟು ಮಾಡುತ್ತದೆ?


  ನಿಯಮಿತವಾಗಿ ಎರಡೂ ಕೈಗಳನ್ನು ಚೆನ್ನಾಗಿ ತೊಳೆಯಿರಿ. ಇದು ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಾಣು ದೇಹಕ್ಕೆ ಪ್ರವೇಶಿಸದಂತೆ ತಡೆಯುತ್ತದೆ. ಮನೆಯ ಎಲ್ಲಾ ಸ್ಥಳಗಳನ್ನು ಸ್ವಚ್ಛವಾಗಿರಿಸಿ. ಧೂಮಪಾನ ಮಾಡಬೇಡಿ. ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರ ಬಳಸಿ.

  Published by:renukadariyannavar
  First published: