ಮೂಗಿನ ಕೂದಲು ಕೀಳುತ್ತೀರಾ? ಎಚ್ಚರ; ಇದರಿಂದ ಸಾವು ಕೂಡ ಸಂಭವಿಸಬಹುದು..!

ಮೂಗಿನಲ್ಲಿ ಉದ್ದವಾಗಿ ಬೆಳೆಯುವ ಈ ಕೂದಲನ್ನು ಟ್ರಿಮ್ ಮಾಡುವ ಮೂಲಕ ಅಥವಾ ಕತ್ತರಿಯಲ್ಲಿ ಚಿಕ್ಕದಾಗಿ ಕಟ್​ ಮಾಡಿ, ಸ್ವಚ್ಛವಾಗಿಟ್ಟುಕೊಳ್ಳಿ

zahir | news18
Updated:November 20, 2018, 3:59 PM IST
ಮೂಗಿನ ಕೂದಲು ಕೀಳುತ್ತೀರಾ? ಎಚ್ಚರ; ಇದರಿಂದ ಸಾವು ಕೂಡ ಸಂಭವಿಸಬಹುದು..!
.
zahir | news18
Updated: November 20, 2018, 3:59 PM IST
ನೀವು ಯಾವತ್ತಾದರೂ ನಿಮ್ಮ ಮೂಗಿನ ಕೂದಲನ್ನು ಕಿತ್ತಿದ್ದೀರಾ? ಹೌದು, ಮಾಡಿದ್ದೇನೆ ಎನ್ನುವುದು ನಿಮ್ಮ ಉತ್ತರವಾಗಿದ್ದರೆ, ನೀವು ಒಂದು ಅಪಾಯದಿಂದ ಪಾರಾಗಿದ್ದೀರಿ ಎಂದರ್ಥ. ಏಕೆಂದರೆ ಮೂಗಿನ ಹೊಳ್ಳೆಯಲ್ಲಿನ ಕೂದಲು ಕೀಳುವುದರಿಂದ ಮರಣ ಕೂಡ ಸಂಭವಿಸಬಹುದು. ಅಚ್ಚರಿ ಎನಿಸಿದರೂ ಇದು ಸತ್ಯ. ಯಾವ ರೀತಿಯಾಗಿ ಸಣ್ಣದೊಂದು ಕಾರ್ಯ ಪ್ರಾಣಾಂತಿಕವಾಗುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಮೂಗಿನೊಳಗೆ ಕೂದಲು ಏಕೆ ಬೆಳೆಯುತ್ತದೆ?
ನೀವು ಮೂಗಿನ ಹೊಳ್ಳೆಗಳಲ್ಲಿ ಗಮನಿಸಿದರೆ ಕೂದಲು ಕಾಣಿಸುತ್ತದೆ. ಸುತ್ತಲೂ ಬ್ರಷ್​ನಂತಿರುವ ಈ ಕೂದಲಿನಲ್ಲಿ ಸಣ್ಣ ಮತ್ತು ದಪ್ಪವಿರುವ ಕೂದಳುಗಳಿರುತ್ತದೆ. ಇದು ಎರಡು ವಿಧದ ಮೂಗಿನ ಕೂದಲುಗಳಾಗಿದ್ದು, ಕೆಲವು ಕೂದಲುಗಳು ಕಾಣಿಸುವುದೇ ಇಲ್ಲ. ಮತ್ತೆ ಕೆಲವು ಉದ್ದ ಬೆಳೆಯುವುದಲ್ಲದೆ ಮೂಗಿನ ಹೊರಗೆ ಕಾಣಿಸುತ್ತದೆ. ಇಂತಹ ಸಮಯದಲ್ಲಿ ಹೆಚ್ಚಿನವರು ಮುಜುಗರ ತಪ್ಪಿಸಲು ಕೂದಲನ್ನು ಕಿತ್ತುಕೊಳ್ಳುತ್ತಾರೆ. ಹಾಗೆಯೇ ಈ ಕೂದಲುಗಳು ಯಾಕೆ ಬೆಳೆಯುತ್ತದೆ ಎಂಬ ಪ್ರಶ್ನೆ ಕೂಡ ಅನೇಕ ಬಾರಿ ನಿಮಗೆ ಮೂಡಿರಬಹುದು.

ಮೂಗಿನಲ್ಲಿ ಎರಡು ರೀತಿಯ ಕೂದಲು ಬೆಳೆಯುವುದು ದೇಹದ ಪ್ರಮುಖ ಕಾರ್ಯವನ್ನು ಮಾಡಲು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಇಲ್ಲಿ ಉದ್ದನೆ ಬೆಳೆಯುವ ಕೂದಲನ್ನು-ವೈಬರಿಸೈ ಎಂದು ಕರೆಯಲಾಗುತ್ತದೆ. ಇದು ನಿಮ್ಮ ದೇಹದ ರಕ್ಷಣಾ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ. ನಾವು ಆಕ್ಸಿಜನ್ ಮತ್ತು ಇಂಗಾಲದ ಡೈ ಆಕ್ಸೈಡ್​ನ್ನು ಮೂಗಿನ ಮೂಲಕ ಉಸಿರಾಡುತ್ತೇವೆ. ಈ ಉಸಿರಾಟ ಪ್ರಕ್ರಿಯೆ ವೇಳೆ ಆಕ್ಸಿಜನ್​ನೊಂದಿಗೆ  ಧೂಳು, ಬ್ಯಾಕ್ಟೀರಿಯಾ ಮತ್ತು ಮಣ್ಣು ನಮ್ಮ ದೇಹ ಸೇರುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಈ ಕೂದಲುಗಳು ಫಿಲ್ಟರ್​ಗಳಾಗಿ ಕಾರ್ಯ ನಿರ್ವಹಿಸುತ್ತದೆ.ಮೂಗಿನ ಕೂದಲು ಏಕೆ ಬಹಳ ಮುಖ್ಯ?

ಮೂಗಿನ ಮೂಲಕ ಧೂಳಿನ ಕಣಗಳು, ಬ್ಯಾಕ್ಟೀರಿಯಾಗಳು ನಮ್ಮ ದೇಹವನ್ನು ಪ್ರವೇಶಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಮೂಗಿನಲ್ಲಿ ಕಡಿಮೆ ಕೂದಳಿದ್ದರೆ ಅದು ನೇರವಾಗಿ ಶ್ವಾಸಕೋಶ ಪ್ರವೇಶಿಸುತ್ತದೆ. ಇದರಿಂದ ಅನೇಕ ರೀತಿಯ ಅನಾರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅದೇ ವೇಳೆ ಕೂದಲುಗಳಿದ್ದರೆ ನಮ್ಮ ಉಸಿರಾಟವನ್ನು ಫಿಲ್ಟರ್ ಮಾಡುವ ಕೆಲಸ ಮಾಡುತ್ತದೆ. ಕಣ್ಣು ರೆಪ್ಪೆಗಳು ಹೇಗೆ ನಮ್ಮ ಕಣ್ಣುಗಳನ್ನು ಶುದ್ಧವಾಗಿಟ್ಟುಕೊಳ್ಳಲು ನೆರವಾಗುತ್ತದೆಯೋ, ಹಾಗೆಯೇ ಮೂಗಿನ ಕೂದಲು ನಮ್ಮ ಮೂಗನ್ನು ಸ್ವಚ್ಛವಾಗಿ ಮತ್ತು ಆರೋಗ್ಯವಾಗಿರಿಸುತ್ತದೆ. ಶ್ವಾಸಕೋಶಕ್ಕೂ ಮೂಗಿಗೂ ನೇರ ಸಂಪರ್ಕ ಇರುವುದರಿಂದ ಮೂಗಿನ ಕೂದಲು ಶ್ವಾಸಕೋಶದ ಫಿಲ್ಟರ್​ ಆಗಿ ಕಾರ್ಯ ನಿರ್ವಹಿಸುತ್ತದೆ. ಇಲ್ಲದಿದ್ದರೆ ಕಲುಷಿತ ಬ್ಯಾಕ್ಟೀರಿಯಾಗಳು ದೇಹ ಸೇರಿ ಸೋಂಕು ಉಂಟಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ.

ಮೂಗಿನ ಕೂದಲನ್ನು ಏಕೆ ಕೀಳಬಾರದು?
ಮೂಗಿನ ಮೇಲಿನ ಭಾಗದಿಂದ ತುಟಿಗಳ ಎರಡು ಮೂಲೆಗಳನ್ನು ಸೇರಿಸಿದರೆ, ತ್ರೀಕೋನ ಆಕಾರ ಕಾಣಿಸುತ್ತದೆ. ಮುಖದ ಈ ಭಾಗವನ್ನು ಅತೀ ಅಪಾಯಕಾರಿ ಎನ್ನಲಾಗುತ್ತದೆ. ಕಣ್ಣು, ಮೂಗು ಮತ್ತು ಬಾಯಿಯನ್ನು ಸಂಧಿಸುವ ಈ ಭಾಗ ಬಹಳ ಸೂಕ್ಷ್ಮವಾಗಿರುತ್ತದೆ. ದೇಹದ ಅನೇಕ ಪ್ರಮುಖ ರಕ್ತನಾಳಗಳು ಮುಖದ ಈ ಭಾಗಗಳ ಮೂಲಕ ಹಾದು ಹೋಗುತ್ತವೆ. ಅಲ್ಲದೆ ಅವುಗಳು ನೇರವಾಗಿ ಮೆದುಳನ್ನು ಸಂಪರ್ಕಿಸುತ್ತದೆ. ಕಣ್ಣು, ಬಾಯಿ ಮತ್ತು ಮೂಗಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾದರೆ ನೇರವಾಗಿ ಅದು ಮೆದುಳಿನ ಮೇಲೆ ಪ್ರಭಾವ ಬೀರುತ್ತದೆ. ಕೆಲವೊಂದು ಬಾರಿ ಸಣ್ಣ ಗಾಯಗಳೂ ಕೂಡ ಅಪಾಯಕಾರಿಯಾಗಿ ಪರಿಣಮಿಸಬಹುದು. ಅಂತದರಲ್ಲಿ ನೀವು ಮೂಗಿನ ಕೂದಲನ್ನು ಕಿತ್ತುಕೊಂಡರೆ ರಕ್ತನಾಳದಲ್ಲಿ ರಂಧ್ರವಾಗಿ ರಕ್ತಸ್ರಾವ ಉಂಟಾಗಬಹುದು. ಇಲ್ಲ ಯಾವುದಾದರೂ ಸೋಂಕು ತಗುಲಬಹುದು. ಈ ವೇಳೆ ಅದು ಮುಖ ತ್ರಿಕೋನ ಭಾಗದ ರಕ್ತನಾಳಗಳ ಮೇಲೆ ನೇರ ಪರಿಣಾಮ ಬೀರಬಹುದು. ಇದರಿಂದ ವ್ಯಕ್ತಿಯ ಮೆದುಳಿಗೆ ಹಾನಿಯುಂಟಾಗಿ ಸಾವು ಕೂಡ ಸಂಭವಿಸಬಹುದು, ಅಥವಾ ಹುಚ್ಚರಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು.
Loading...

ಇದನ್ನೂ ಓದಿ: 2 ಇನ್ 1: ಡೆಬಿಟ್-ಕ್ರೆಡಿಟ್​ ಕಾರ್ಡ್​ನೊಂದಿಗೆ ಸಿಗುತ್ತೆ 24 ಲಕ್ಷ ರೂ. ಉಚಿತ ವಿಮೆ

ಮುಖದ ತ್ರಿಕೋನ ಆಕಾರ ಗುರುತಿಸುವುದು ಹೇಗೆ?
ನಿಮ್ಮ ಮುಖದ ಟ್ರಯಾಂಗಲ್ ( ತ್ರಿಕೋನ)ನ್ನು ಊಹಿಸಿಕೊಳ್ಳಬಹುದು. ಯಾವ ಭಾಗವೆಂದು ಗುರುತಿಸಲು ನಿಮ್ಮ ಎರಡು ಕೈಗಳ ಹೆಬ್ಬೆರಳ ತುದಿಗಳನ್ನು ಪರಸ್ಪರ ನೇರವಾಗಿ ಸೇರಿಸಿ. ಆನಂತರ ಎರಡು ಮಧ್ಯ ಬೆರಳ ತುದಿಗಳನ್ನು ಸೇರಿಸಿದಾಗ ತ್ರಿಕೋನಾಕಾರ ರೂಪುಗೊಳ್ಳತ್ತದೆ. ಈ ಆಕಾರದ ಹೆಬ್ಬೆರಳನ್ನು ತುಟಿಗಳ ತುದಿಯಲ್ಲರಿಸಿ ಮಧ್ಯ ಬೆರಳನ್ನು ಕಣ್ಣಿನ ಬಳಿಯಲ್ಲಿರಿಸಿದರೆ ಮುಖದ ತ್ರೀಕೋನ ಭಾಗವನ್ನು ಗುರುತಿಸಬಹುದು. ಈ ತ್ರಿಕೋನಾಕಾರ ಭಾಗವನ್ನು ಅಪಾಯಕಾರಿ ಭಾಗ ಎಂದು ಪರಿಗಣಿಸಲಾಗುತ್ತದೆ.ಮುಜುಗರ ತಪ್ಪಿಸುವುದು ಹೇಗೆ?
ಮೂಗಿನಲ್ಲಿ ಉದ್ದವಾಗಿ ಬೆಳೆಯುವ ಈ ಕೂದಲನ್ನು ಟ್ರಿಮ್ ಮಾಡುವ ಮೂಲಕ ಅಥವಾ ಕತ್ತರಿಯಲ್ಲಿ ಚಿಕ್ಕದಾಗಿ ಕಟ್​ ಮಾಡಿ, ಸ್ವಚ್ಛವಾಗಿಟ್ಟುಕೊಳ್ಳಿ. ಇದರಿಂದ ಜನರ ಮಧ್ಯೆ ಮೂಗಿನ ಕೂದಲಿನ ಮುಜುಗರದಿಂದ ತಪ್ಪಿಸಿಕೊಳ್ಳಬಹುದು. ಇದರ ಹೊರತಾಗಿ ಕೂದಲನ್ನು ಕೀಳುವ ಸಹವಾಸಕ್ಕೆ ಮಾತ್ರ ಕೈ ಹಾಕಬೇಡಿ.

ಇದನ್ನೂ ಓದಿ: ಬುಲೆಟ್​ ಖರೀದಿಸದೇ ಈ ಕೆಲಸ ಮಾಡಿದ್ರೆ, ನಿಮ್ಮ ಖಾತೆಯಲ್ಲಿರುತ್ತಿತ್ತು 7 ಕೋಟಿ ರೂ..!

First published:November 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ