HOME » NEWS » Lifestyle » PLASTIC FIBERS FOUND IN BOTTELED WATER RESEARCH VB

ಪ್ಲಾಸ್ಟಿಕ್ ಬಾಟಲ್‍ಗಳಲ್ಲಿ ಸಿಗುವ ನೀರು ಸುರಕ್ಷಿತವಲ್ಲ; ಸಂಶೋಧನೆಯಿಂದ ಅಚ್ಚರಿಯ ಮಾಹಿತಿ ಬಹಿರಂಗ

ಭಾರತ, ಚೀನಾ, ಅಮೆರಿಕ, ಇಂಡೋನೇಷ್ಯಾ, ಮೆಕ್ಸಿಕೊ, ಲೆಬನಾನ್, ಕೀನ್ಯಾ ದೇಶಗಳ 19 ಬೇರೆ ಬೇರೆ ಪ್ರದೇಶದಿಂದ ಒಟ್ಟು 11 ಕಂಪೆನಿಗಳ 259 ಬಾಟಲಿ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

news18-kannada
Updated:March 23, 2020, 4:25 PM IST
ಪ್ಲಾಸ್ಟಿಕ್ ಬಾಟಲ್‍ಗಳಲ್ಲಿ ಸಿಗುವ ನೀರು ಸುರಕ್ಷಿತವಲ್ಲ; ಸಂಶೋಧನೆಯಿಂದ ಅಚ್ಚರಿಯ ಮಾಹಿತಿ ಬಹಿರಂಗ
ಪ್ರಾತಿನಿದಿಕ ಚಿತ್ರ
  • Share this:
ನೀರಿನಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ತಿಳಿದಿದೆ. ಆದರೆ, ಇಂದು ಶುದ್ಧ ನೀರು ದೊರೆಯುವುದು ಕಷ್ಟ ಎಂದೆ ಹೇಳಬಹುದು. ಸಾಮಾನ್ಯವಾಗಿ ಹೋಟೆಲ್‍ಗೆ ಅಥವಾ ಹೊರಗಡೆ ಹೋದಾಗ ಅಲ್ಲಿರುವ ನೀರು ಶುದ್ಧ ಇರುತ್ತದೋ ಇಲ್ಲವೋ ಎಂಬ ಕಾರಣಕ್ಕೆ ಹೆಚ್ಚಾಗಿ ನೀರಿನ ಬಾಟಲಿಗಳನ್ನ ತೆಗೆದುಕೊಳ್ಳುತ್ತೇವೆ.

ಆದರೆ, ಇಂತಹ ಹವ್ಯಾಸ ಒಳ್ಳೆಯದಲ್ಲ. ಇದರಿಂದ ನಿಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀಳುವ ಸಂಭವವಿದೆ. ನಿಮ್ಮ ಮನೆಯ ನೀರಿಗಿಂತ ಇದು ಹೆಚ್ಚಿನ ಅಪಾಯಕಾರಿ ಎನ್ನುತ್ತಿದ್ದಾರೆ ವಿಜ್ಞಾನಿಗಳು.

ಗರ್ಭಿಣಿಯರು ದಾಳಿಂಬೆ ಸೇವಿಸಬಹುದೇ?: ಎಷ್ಟು ಲಾಭವಿದೆಯೋ ಅಷ್ಟೇ ಅಪಾಯವಿದೆ!

ನ್ಯೂಯಾರ್ಕ್​​​​ನ ಫ್ರೆಡೋನಿಯಾದಲ್ಲಿರುವ ಸ್ಟೇಟ್ ಯೂನಿವರ್ಸಿಟಿಯ ವಿಜ್ಞಾನಿಗಳು ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಮಾರುಕಟ್ಟೆಯಲ್ಲಿ ದೊರೆಯುವ ಬಾಟಲಿ ನೀರಿನಲ್ಲಿ ಮೈಕ್ರೊ ಪ್ಲಾಸ್ಟಿಕ್ ಕಣಗಳಿದ್ದು ಶೇ. 90 ರಷ್ಟು ಕಲುಷಿತಗೊಂಡಿದೆ ಎಂದು ಸಾಬೀತುಪಡಿಸಿದ್ದಾರೆ. ಅಲ್ಲದೆ ಇವು ಜೀವಕ್ಕೆ ಅತ್ಯಂತ ಅಪಾಯಕಾರಿ ಎಂಬ ಅಂಶವನ್ನು ತಿಳಿಸಿದ್ದಾರೆ.

ಭಾರತ, ಚೀನಾ, ಅಮೆರಿಕ, ಇಂಡೋನೇಷ್ಯಾ, ಮೆಕ್ಸಿಕೊ, ಲೆಬನಾನ್, ಕೀನ್ಯಾ ದೇಶಗಳ 19 ಬೇರೆ ಬೇರೆ ಪ್ರದೇಶದಿಂದ ಒಟ್ಟು 11 ಕಂಪೆನಿಗಳ 259 ಬಾಟಲಿ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಕೇವಲ 17 ನೀರಿನ ಬಾಟಲಿ ಯೋಗ್ಯವೆಂದು ದೃಢವಾಗಿದೆ. ಪಾಲಿಪ್ರೊಪಿಲೀನ್ ಎಂಬ ಪ್ಲಾಸ್ಟಿಕ್ ಕಣಗಳು ಉಳಿದ ನೀರಿನ ಬಾಟಲಿಗಳಲ್ಲಿ ಹೆಚ್ಚು ಕಂಡುಬಂದಿದ್ದು, ಪ್ರತಿ ಲೀಟರ್​ಗೆ ಶೇ. 58.6 ರಷ್ಟು ಪ್ಲಾಸ್ಟಿಕ್ ಫೈಬರ್​ ಸಿಕ್ಕಿದೆ.

ನಿಮ್ಮ ಮಕ್ಕಳಿಗೆ ನೆನಪಿನ ಶಕ್ತಿ ಕಡಿಮೆಯೇ?; ಹಾಗಿದ್ದರೆ ಇದನ್ನು ಟ್ರೈ ಮಾಡಿ

ಇವು ಹೆಚ್ಚಾಗಿ ಕಾರ್ಖಾನೆಗಳ ಫ್ಯಾನ್‍ಗಳಿಂದ ಗಾಳಿಯಲ್ಲಿ ಹರಡಿ ನೀರಿಗೆ ಸೇರಿರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
Youtube Video
First published: March 23, 2020, 4:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories