ಧನ್ತೇರಸ್ನಂದು (Dhanteras) ಚಿನ್ನ ಖರೀದಿಯನ್ನು (Gold) ಶುಭಕರ ಹಾಗೂ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಜನರು ಆಭರಣ (jewelry) ಖರೀದಿಯಿಂದ ಹಿಡಿದು ಚಿನ್ನದ ನಾಣ್ಯಗಳ ಖರೀದಿಯವರೆಗೆ ಸಾಧ್ಯವಾದಷ್ಟು ತಮ್ಮ ಖರೀದಿಗಳನ್ನು ಈ ದಿನಕ್ಕಾಗಿಯೇ ಮೀಸಲಿಡುತ್ತಾರೆ. ಈ ಸಮಯದಲ್ಲಿ ಚಿನ್ನದ ಅಂಗಡಿಗಳು ಭರ್ಜರಿ ಮಾರಾಟಕ್ಕೆ ಸಾಕ್ಷಿಯಾಗುತ್ತವೆ. ಅಮವಾಸ್ಯೆಯ ಚಂದ್ರ ಸೌರ ಕ್ಯಾಲೆಂಡರ್ನಲ್ಲಿನ ಅಶ್ವಯುಜ ಮಾಸದ ವಿಕ್ರಮ್ ಸಂಬತ್ ಹಿಂದೂ ಕ್ಯಾಲೆಂಡರ್ ತಿಂಗಳಿನಲ್ಲಿ ಕೃಷ್ಣ ಪಕ್ಷದ 13 ನೇ ಚಂದ್ರನ ದಿನದಂದು ಧನ್ತೇರಸ್ ಅನ್ನು ಆಚರಿಸಲಾಗುತ್ತದೆ. ಹಬ್ಬಗಳ ಸಂದರ್ಭಗಳಲ್ಲಿ ಖರೀದಿಯಂತಹ ಯೋಜನೆಗಳನ್ನು ಸಾಮಾನ್ಯವಾಗಿ ಜನರು ಶುಭವೆಂದು ಪರಿಗಣಿಸುತ್ತಾರೆ ಅದರಲ್ಲೂ ಚಿನ್ನದ ನಾಣ್ಯ, ಚಿನ್ನದ ಬಿಸ್ಕತ್ತು, ಆಭರಣಗಳನ್ನು ಖರೀದಿಸುವ ಸಂಪ್ರದಾಯವು ಇಂದಿಗೂ ಅವಿಭಾಜ್ಯ ಅಂಗವಾಗಿಯೇ ಉಳಿದಿದೆ.
ವಿಶೇಷವಾಗಿ ಧನ್ತೇರಸ್ ಹಾಗೂ ದೀಪಾವಳಿಯ ಸಮಯದಲ್ಲಿಯೇ ಚಿನ್ನ ಖರೀದಿಯನ್ನು ಗ್ರಾಹಕರು ಹೆಚ್ಚಾಗಿ ಮಾಡುತ್ತಾರೆ. ಸಾಮಾನ್ಯವಾಗಿ, ಜುಲೈ-ಸೆಪ್ಟೆಂಬರ್ ಮಾನ್ಸೂನ್ ಮತ್ತು ಪಿತೃ-ಪಕ್ಷದಂತಹ ಅಶುಭ ಅವಧಿಗಳಿಂದಾಗಿ ಚಿನ್ನದ ಬೇಡಿಕೆಗೆ ಕಾಲೋಚಿತವಾಗಿ ದುರ್ಬಲ ಅವಧಿ ಎಂದೆನಿಸಿದ್ದು, ಖರೀದಿದಾರರು ಸಾಮಾನ್ಯವಾಗಿ ಚಿನ್ನದ ಖರೀದಿಯನ್ನು ಮುಂದೂಡಲು ಬಯಸುತ್ತಾರೆ.
ದೇಶದಲ್ಲಿ ಚಿನ್ನ ಖರೀದಿ ಎಲ್ಲೆಲ್ಲಿ? ಎಷ್ಟೆಷ್ಟು?
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAT) ಮತ್ತು AIGF ಪ್ರಕಾರ, 2021 ರಲ್ಲಿ ಧನ್ತೇರಸ್ನಲ್ಲಿ ದೇಶಾದ್ಯಂತ ಸುಮಾರು 15 ಟನ್ ಚಿನ್ನವನ್ನು ಮಾರಾಟ ಮಾಡಲಾಗಿದ್ದು ಚಿನ್ನದ ಮೌಲ್ಯ ಸುಮಾರು ರೂ 7,500 ಕೋಟಿ ಎಂದು ಅಂದಾಜಿಸಲಾಗಿದೆ. ದೆಹಲಿಯಲ್ಲಿ ಸುಮಾರು ರೂ 1,000 ಕೋಟಿ ಮಾರಾಟವಾಗಿದ್ದರೆ, ಮಹಾರಾಷ್ಟ್ರದಲ್ಲಿ ಸುಮಾರು ರೂ 1,500 ಕೋಟಿ ಚಿನ್ನ ಮಾರಾಟವಾಗಿದೆ ಅಂತೆಯೇ ಉತ್ತರ ಪ್ರದೇಶದಲ್ಲಿ ಸುಮಾರು 600 ಕೋಟಿ ಮತ್ತು ದಕ್ಷಿಣ ಭಾರತದಲ್ಲಿ ಸುಮಾರು 2,000 ಕೋಟಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲಾಗಿದೆ ಎಂಬುದು ವರದಿಯಾಗಿದೆ.
ವರದಿಗಳ ಪ್ರಕಾರ, ಬೆಲೆಬಾಳುವ ಲೋಹಗಳ ಬೇಡಿಕೆಯು ವರ್ಷದಿಂದ ವರ್ಷಕ್ಕೆ (YoY) 40% ದಷ್ಟು ಹೆಚ್ಚಾಗಿದೆ (YoY) ಈ ಹಬ್ಬದ ಋತುವಿನಲ್ಲಿ ಚಿನ್ನದ ಒಟ್ಟಾರೆ ಬೇಡಿಕೆಯ 70% ವಾಗಿದ್ದು ಧನ್ತೇರಸ್ಗೆ ಮುಂಚಿತವಾಗಿಯೇ ಒಟ್ಟಾರೆ ಒಳ್ಳೆಯ ಬೇಡಿಕೆಯನ್ನುಂಟು ಮಾಡಿದೆ.
ರವೀಂದ್ರ ರಾವ್, CMT, EPAT, VP- ಕೋಟಾಕ್ ಸೆಕ್ಯುರಿಟೀಸ್ನಲ್ಲಿ ಮುಖ್ಯ ಸರಕು ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದು, ನ್ಯೂಸ್ 18 ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಧನ್ತೇರಸ್ ಹಾಗೂ ದೀಪಾವಳಿಯ ಮುನ್ನವೇ ಚಿನ್ನದ ಮಾರುಕಟ್ಟೆಯಲ್ಲಿನ ಬೇಡಿಕೆಯ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ಮಹಿಳೆಯರೇ, ಈ ಆರೋಗ್ಯ ಸಮಸ್ಯೆಗಳು ಋತುಬಂಧದ ಲಕ್ಷಣವಂತೆ
ಎರಡು ವರ್ಷಗಳ ಕೋವಿಡ್ ನಂತರ ಈ ಬಾರಿಯ ಧನ್ತೇರಸ್ ಬೆಲೆಬಾಳುವ ಲೋಹದ ಮಾರುಕಟ್ಟೆಯ ಕುರಿತು ದೃಷ್ಟಿಕೋನವೇನು?
2022 ರ ಧನ್ತೇರಸ್ ಮತ್ತು ಸಮತೋಲನ ವರ್ಷಕ್ಕಾಗಿ, ಸಂಘರ್ಷದ ಅಂಶಗಳ ನಡುವೆ ನಿರೀಕ್ಷೆಯು ಮಿಶ್ರವಾಗಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆಯೂ ಹಬ್ಬದ ಮತ್ತು ಮದುವೆಯ ಬೇಡಿಕೆಯು ಚಿನ್ನದ ಮಾರುಕಟ್ಟೆಗೆ ಮೌಲ್ಯವನ್ನು ನೀಡಲಿವೆ. ಹೆಚ್ಚಿನ ಆಮದು ಸುಂಕ ಮತ್ತು ಹೆಚ್ಚಿನ ಹಣದುಬ್ಬರಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳೂ ಇದೆ.
ಲೋಹದ ಮಾರುಕಟ್ಟೆಗೆ ಸಂಬಂಧಿಸಿದಂತೆ ಪ್ರಮುಖ ಪರಿಗಣನೆಗಳು ಯಾವುವು?
ರಾವ್ ತಿಳಿಸಿರುವಂತೆ ಪ್ರಸ್ತುತ, ಬಡ್ಡಿದರಗಳನ್ನು ಹೆಚ್ಚಿಸುವ ಮೂಲಕ ಹಣದುಬ್ಬರವನ್ನು ನಿಯಂತ್ರಿಸುವಲ್ಲಿನ ನಿಲುವು ಪ್ರಮುಖ ಪರಿಗಣನೆಯಾಗಿದೆ. ನಿರೀಕ್ಷಿತಕ್ಕಿಂತ ಹೆಚ್ಚಿನ ಯುಎಸ್ ಹಣದುಬ್ಬರ ಪರಿಸ್ಥಿತಿಯು ನವೆಂಬರ್ನಲ್ಲಿ ಮುಂಬರುವ ಸಭೆಯಲ್ಲಿ ಫೆಡರಲ್ ರಿಸರ್ವ್ ಬೋರ್ಡ್ನ 75-bps ಹೆಚ್ಚಳಕ್ಕೆ ಹೋಗಬಹುದು ಎಂದು ಬಹುತೇಕ ಖಚಿತವಾಗಿದೆ ಎಂದು ತಿಳಿಸಿದ್ದಾರೆ.
ಈ ಧನ್ತೇರಸ್ನಲ್ಲಿ ಚಿನ್ನದಲ್ಲಿ ಏಕೆ ಹೂಡಿಕೆ ಮಾಡಬೇಕು?
ಫೆಡ್ನ ವಿತ್ತೀಯ ಬಿಗಿಗೊಳಿಸುವ ನಿಲುವಿನ ಮಧ್ಯೆ ಚಿನ್ನದ ಮೇಲೆ ಒತ್ತಡ ಹೇರಲಾಗಿದ್ದರೂ ರಷ್ಯಾ ಮತ್ತು ಉಕ್ರೇನ್ನಂತಹ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ಹಿನ್ನೆಲೆಯಲ್ಲಿ ಕೆಳಮಟ್ಟದಲ್ಲಿ ಅದನ್ನು ಬೆಂಬಲಿಸಬಹುದು. ಆರ್ಥಿಕ ಹಿಂಜರಿತವು ಚಿನ್ನಕ್ಕೆ ಬೆಂಬಲ ಒದಗಿಸಬಹುದು ಎಂದು ರಾವ್ ಹೇಳಿದ್ದಾರೆ.
ಇದನ್ನೂ ಓದಿ: ಹೊಕ್ಕುಳನ್ನು ಇದೇ ಕಾರಣಕ್ಕೆ ನಮ್ಮ ಆರೋಗ್ಯದ ಡಿಟೆಕ್ಟರ್ ಅಂತ ಕರೆಯೋದು
ಧನ್ತೇರಸ್ನ ಹಿಂದಿನ ವರ್ಷಗಳಲ್ಲಿ ಚಿನ್ನದ ಬೆಲೆಯ ಟ್ರೆಂಡ್ ಏನಾಗಿತ್ತು?
ಇದು 2018 ರಿಂದ ಪ್ರಾರಂಭವಾಗಿ ಕಳೆದ 5 ವರ್ಷಗಳಲ್ಲಿ ಅಕ್ಟೋಬರ್ನಲ್ಲಿ ಮಿಶ್ರ ಪ್ರವೃತ್ತಿಯಾಗಿದೆ ಎಂಬುದು ರಾವ್ ಮಾತಾಗಿದೆ. 2018 ಮತ್ತು 2019 ಅಕ್ಟೋಬರ್ ತಿಂಗಳುಗಳಲ್ಲಿ ಕ್ರಮವಾಗಿ 4% ದ ಜೊತೆಗೆ ಸಂಪೂರ್ಣ ಮಾಸಿಕ ಲಾಭಗಳೊಂದಿಗೆ 5 ವರ್ಷಗಳಲ್ಲಿ 3 ವರ್ಷ ಚಿನ್ನದ ಬೆಲೆ ಏರಿದೆ.
2023 ರ ದೀಪಾವಳಿಯವರೆಗೆ ಚಿನ್ನದ ಉದ್ದೇಶಿತ ಬೆಲೆ
2022 ರಿಂದ 2023 ದೀಪಾವಳಿಯವರೆಗೆ, ಅಂದರೆ ಮುಂದಿನ 12 ತಿಂಗಳುಗಳಲ್ಲಿ, ಚಿನ್ನವು ಸರಾಸರಿ ರೂ. 54500/10ಗ್ರಾಂಗೆ ಎಂದು, ರಾವ್ ಸೂಚಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ