ರಜೆ ದಿನಗಳು (Holiday) ಬಂತು ಎಂದರೆ ಸಾಕು ಯಾವುದಾದರೂ ಊರಿಗೆ ಪ್ರವಾಸ (Trip) ಹೋಗಲು ಪ್ಲ್ಯಾನ್ ಮಾಡಲಾಗುತ್ತದೆ. ಸದ್ಯ ಚಳಿಗಾಲ (Winter) ಆರಂಭವಾಗಿದೆ. ಜೊತೆಗೆ ಕ್ರಿಸ್ಮಸ್ ರಜೆ ಸಹ ಬಂದಿದೆ. ಕುಟುಂಬ ಸಮೇತ ಟ್ರಿಪ್ ಹೋಗುವುದು ಈ ಸಂದರ್ಭದಲ್ಲಿ ಸುಂದರ ಅನುಭವ ಎನ್ನಬಹುದು. ಇನ್ನು ಕರ್ನಾಟಕದಲ್ಲಿ ಪ್ರವಾಸ ಹೋಗಲು ಬಹಳಷ್ಟು ಸ್ಥಳಗಳಿವೆ. ಡಿಸೆಂಬರ್ನಲ್ಲಿ ಟ್ರಿಪ್ ಹೋಗಲು ಒಂದಕ್ಕಿಂತ ಒಂದು ಸುಂದರ ಸ್ಥಳಗಳು ನಿಮಗೆ ಸಿಗುತ್ತದೆ. ಆದರೆ, ಮಕ್ಕಳಿದ್ದರೆ ಸ್ಥಳಗಳ ಆಯ್ಕೆ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಸುರಕ್ಷತೆ ಹಾಗೂ ಮನರಂಜನೆಯ ದೃಷ್ಟಿಯಿಂದ ಕೆಲ ಸ್ಥಳಗಳು ಈ ಸಮಯದಲ್ಲಿ ಪ್ರವಾಸಕ್ಕೆ ಹೋಗಲು ಸೂಕ್ತ. ಹಾಗಾಗಿ, ಈ ಡಿಸೆಂಬರ್ನಲ್ಲಿ ಪ್ರವಾಸ ಮಾಡಲು ಸೂಕ್ತವಾಗಿರುವ ಸ್ಥಳಗಳ ಲಿಸ್ಟ್ ಇಲ್ಲಿದೆ.
ಮಡಿಕೇರಿ, ಶಿವಮೊಗ್ಗ, ಹಂಪಿ, ನಾಗರಹೊಳೆ, ಗೋಕರ್ಣ, ದಾಂಡೇಲಿ, ಚಿಕ್ಕಮಗಳೂರು, ಮೈಸೂರು ಹೀಗೆ ನಿಮಗೆ ಹಲವಾರು ಸ್ಥಳಗಳಿದ್ದು, ಹತ್ತಿರದ ಸ್ಥಳಕ್ಕೆ ಹೋಗಿ ನೀವು ಎಂಜಾಯ್ ಮಾಡಬಹುದು. ಈ ಸಮಯದಲ್ಲಿ ಹಲವಾರು ರೆಸಾರ್ಟ್ಗಳು ನಿಮಗೆ ವಿಶೇಷ ಆಫರ್ಗಳನ್ನು ನೀಡುತ್ತವೆ. ಮಕ್ಕಳಿಗೆ ಸಹ ಇಲ್ಲಿ ವಿಶೇಷ ಚಟುವಟಿಕೆಗಳಿರುತ್ತದೆ.
ರಾಮನಗರ ಕ್ಯಾಂಪಿಂಗ್
ನೀವು ಬೆಂಗಳೂರಿನ ಸುತ್ತ- ಮುತ್ತ ವಾಸವಿದ್ದರೆ ಹಾಗೂ ನಿಮಗೆ ಹೆಚ್ಚು ಸಮಯವಿಲ್ಲ ಎಂದರೆ ಒಂದು ದಿನದ ಮಟ್ಟಿಗೆ ಮಕ್ಕಳ ಜೊತೆ ರಾಮನಗರ ಕ್ಯಾಂಪಿಂಗ್ ಹೋಗುವುದು ಒಳ್ಳೆಯ ಆಯ್ಕೆ ಎನ್ನಬಹುದು. ಇಲ್ಲಿ ನಿಮಗೆ ಒಂದು ಸುಂದರ ಅನುಭವ ಸಿಗುತ್ತದೆ. ಅಲ್ಲದೇ, ಮಕ್ಕಳಿಗೆ ಆಟ ಆಡಲು ಹಾಗೂ ನಿಮಗೆ ಸಹ ವಿವಿಧ ಚಟುವಟಿಕೆಗಳಿದ್ದು, ಆರಾಮದಾಯಕ ದಿನ ಕಳೆಯಲು ಬೆಸ್ಟ್ ಸ್ಥಳ ಎಂಬುದರಲ್ಲಿ ಅನುಮಾನವಿಲ್ಲ.
ಸ್ಥಳ: ಬೆಂಗಳೂರಿನ ವಿಮಾನ ನಿಲ್ದಾಣದಿಂದ ಸುಮಾರು 60 ಕಿಮೀ ದೂರದಲ್ಲಿದೆ. ನೀವು ಇಲ್ಲಿ ನಿಮಗೆ ಬೇಕಾದ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಫ್ರಿಜ್ನಲ್ಲಿ ಹಾಲಿಡಲು ಒಂದು ವಿಧಾನವಿದೆ, ಜಾಗ ಸಿಕ್ಕಲ್ಲಿ ಇಡಬೇಡಿ
ಕೊಡಗು
ಭಾರತದ ಸ್ಕಾಟ್ಲ್ಯಾಂಡ್ ಎಂದು ಪ್ರಸಿದ್ಧವಾಗಿರುವ ಈ ಕೊಡಗು, ಪ್ರವಾಸಿ ಪ್ರಿಯರ ನೆಚ್ಚಿನ ಸ್ಥಳ ಎಂಬುದರಲ್ಲಿ ಡೌಟ್ ಇಲ್ಲ. ಇಲ್ಲಿ ನೋಡಲು ಒಂದೆಲ್ಲಾ ಒಂದು ಸುಂದರ ಸ್ಥಳಗಳಿವೆ. ಜಲಪಾತಗಳು, ಟ್ರೆಕ್ಕಿಂಗ್ ಮಾಡಲು ಬೆಟ್ಟಗಳು, ರೆಸಾರ್ಟ್ಗಳು ಹೀಗೆ ಎಲ್ಲವೂ ನಿಮ್ಮ ರಜೆ ದಿನವನ್ನು ಸುಂದರಗೊಳಿಸುತ್ತದೆ. ದುಬಾರೆ ಆನೆ ಕ್ಯಾಂಪ್, ಕುಶಾಲ್ ನಗರ ಟಿಬೇಟಿಯನ್ ಕ್ಯಾಂಪ್, ಅಬ್ಬೆ ಫಾಲ್ಸ್ ಹೀಗೆ ನೀವು ನಿಮಗೆ ಇಷ್ಟವಾಗುವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ.
ಬೆಂಗಳೂರು
ನೀವು ಬೆಂಗಳೂರು ಬಿಟ್ಟು ಬೇರೆ ಜಿಲ್ಲೆಗಳಲ್ಲಿದ್ದರೆ ಮಕ್ಕಳನ್ನು ಕರೆದುಕೊಂಡು ಟ್ರಿಪ್ ಮಾಡಲು ಇದುಅದ್ಭುತವಾದ ಸ್ಥಳ. ಕರ್ನಾಟಕದ ರಾಜಧಾನಿಯಲ್ಲಿ ನಿಮಗೆ ಸಿಗದೇ ಇರುವ ಯಾವುದೇ ಮನರಂಜನೆ ಇಲ್ಲ. ಲಾಲ್ಬಾಗ್, ವಂಡರ್ ಲಾ, ನಂದಿ ಹಿಲ್ಸ್, ಸ್ನೋ ಸಿಟಿ ಸೇರಿದಂತೆ ಇಲ್ಲಿ ಸಹ ವಿವಿಧ ರೀತಿಯ ರೆಸಾರ್ಟ್ಗಳಿದ್ದು, ಮಕ್ಕಳಿಗೆ ಸಹ ಪ್ರವಾಸ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ.
ಗೋಕರ್ಣ
ಗೋಕರ್ಣ ಎಂದರೆ ಸಾಮಾನ್ಯವಾಗಿ ನೆನಪಾಗುವುದು ಬೀಚ್, ಚಳಿಗಾಲದಲ್ಲಿ ಬೀಚ್ನಲ್ಲಿ ಹೋಗಿ ಎಂಜಾಯ್ ಮಾಡುವುದು ನಿಜಕ್ಕೂ ಒಂದು ಸುಂದರ ಅನುಭವ ಎನ್ನಬಹುದು. ಇಲ್ಲಿ ದೇವಾಲಯದ ಜೊತೆಗೆ ಕಡಲತೀರದ ಆಹ್ಲಾದಕರ ವಾತಾವರಣವನ್ನು ಸಹ ಆನಂದಿಸಿ. ಹಾಗೆಯೇ ನೀವು ಇಲ್ಲಿಂದ ಮುರುಡೇಶ್ವರ ಬೀಚ್ಗೆ ಸಹ ಹೋಗಬಹುದು.
ಇದನ್ನೂ ಓದಿ: ಕ್ರಿಸ್ಮಸ್ ಟ್ರೀ ಅಲಂಕಾರ ಮಾಡೋಕೆ ಮಸ್ತ್ ಐಡಿಯಾ ಇಲ್ಲಿದೆ ನೋಡಿ
ಇದಿಷ್ಟೇ ಅಲ್ಲದೇ ನೀವು ಮೈಸೂರಿಗೆ ಸಹ ಪ್ರವಾಸ ಹೋಗಬಹುದು. ಅರಮನೆ ನಗರಿ ಮೈಸೂರಿನಲ್ಲಿ ನಿಮಗೆ ವಿವಿಧ ಅರಮನೆಗಳು, ಶುಕವನ, ಮೃಗಾಲಯವಿದೆ. ಇನ್ನು ನೀವು ಚಿಕ್ಕಮಗಳೂರು, ಸಕಲೇಶಪುರ, ಕನಕಪುರ ಹಾಗೂ ಬಂಡೀಪುರ ಮತ್ತು ನಗರಹೊಳೆ ಅಭಯಾರಣ್ಯಗಳಿಗೆ ಸಹ ನೀವು ಸಮಯದಲ್ಲಿ ವಿಸಿಟ್ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ