Pulav Near Me: ಸೂಪರ್ ಪಲಾವ್​ ಸವಿಯೋಕೆ ಬೆಂಗಳೂರಿನ ಟಾಪ್ 5 ಸ್ಥಳಗಳೇ ಬೆಸ್ಟ್

Places for the Best Veg Palav Near Me: ಈ ರೆಸ್ಟೊರೆಂಟ್ (Restaurants) ​ಗಳಲ್ಲಿ ಅತ್ಯುತ್ತಮ ವೆಜ್ ಪಲಾವ್ ಸಿಗುತ್ತದೆ. ಬೆಂಗಳೂರಿನಲ್ಲಿ ಅತ್ಯಂತ ರುಚಿಕರವಾದ ಪಲಾವ್ ಸಿಗುವ ಸ್ಥಳಗಳ ಲಿಸ್ಟ್ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪುಲಾವ್ ಅಥವಾ ಪಲಾವ್ (Pulav)​, ಇದರ ರುಚಿಯೇ ವಿಭಿನ್ನ. ಮೊಸರು (Curd) ಬಜ್ಜಿಯ ಜೊತೆ ಇದನ್ನು ತಿನ್ನುವುದು ಬಹಳ ರುಚಿಕರ ಹಾಗೂ ಮನಸ್ಸಿಗೆ ಅದೇನೋ ಖುಷಿ ಕೊಡುತ್ತದೆ ಎನ್ನಬಹುದು. ನೀವು ಬೆಂಗಳೂರಿನಲ್ಲಿ (Bengaluru) ಉತ್ತಮವಾದ ಪಲಾವ್ ಅನ್ನು ಹುಡುಕುತ್ತಿದ್ದೀರಾ? ನಾವು ಬೆಂಗಳೂರಿನಲ್ಲಿರುವ ಪ್ರಸಿದ್ಧ ಸಸ್ಯಾಹಾರಿ ರೆಸ್ಟೋರೆಂಟ್‌ಗಳನ್ನು ಆಯ್ಕೆ ಮಾಡಿದ್ದೇವೆ, ಈ ರೆಸ್ಟೊರೆಂಟ್ (Restaurants) ​ಗಳಲ್ಲಿ ಅತ್ಯುತ್ತಮ ವೆಜ್ ಪಲಾವ್ ಸಿಗುತ್ತದೆ. ಬೆಂಗಳೂರಿನಲ್ಲಿ ಅತ್ಯಂತ ರುಚಿಕರವಾದ ಪಲಾವ್ ಸಿಗುವ ಸ್ಥಳಗಳ ಲಿಸ್ಟ್ ಇಲ್ಲಿದೆ.

 ಮುದ್ದಣ್ಣ ಹೋಟೆಲ್, ಹಲಸೂರುಪೇಟೆ, ಬೆಂಗಳೂರು

S.L.N ಲಂಚ್ ಹೋಮ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಮುದ್ದಣ್ಣ ಹೋಟೆಲ್, ವೆಜ್ ಪಲಾವ್​ಗೆ ಹೆಸರುವಾಸಿಯಾಗಿದೆ. ಇದು ಬೆಂಗಳೂರಿನ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಬಾಳೆ ಎಲೆಯ ಮೇಲೆ ಬಿಸಿ ಬಿಸಿಯಾಗಿ ಇಲ್ಲಿ ವೆಜ್ ಪಲಾವ್ ನೀಡಲಾಗುತ್ತದೆ. ಇಲ್ಲಿ  ರಾಜ್‌ಕುಮಾರ್ ಅವರ ಜನಪ್ರಿಯ ಚಲನಚಿತ್ರಗಳಾದ ‘ಶಂಕರ್ ಗುರು’, ‘ತ್ರಿಮೂರ್ತಿ’, ‘ಚತುರ್ಮಕುಖ’ ಹೆಸರಿನ 3 ವಿಭಿನ್ನ ಪಲಾವ್​ಗಳು ಸಿಗುತ್ತದೆ. ಈ ರೀತಿಯ ಪಲಾವ್ ನಿಮಗೆ ನಗರದ ಯಾವುದೇ ರೆಸ್ಟೊರೆಂಟ್​ನಲ್ಲಿ ಸಿಗುವುದಿಲ್ಲ. ಈ ಪಲಾವ್ ನಂಬಲಾಗದಷ್ಟು ಸುವಾಸನೆಯುಕ್ತ ಮತ್ತು ರುಚಿಕರವಾಗಿರುತ್ತದೆ. ಇದನ್ನು ಮಸಾಲೆಯುಕ್ತ ಚಟ್ನಿಯೊಂದಿಗೆ ನೀಡಲಾಗುತ್ತದೆ, ಇದು ಅಷ್ಟೇ ರುಚಿಯಾಗಿರುತ್ತದೆ. ಮುದ್ದಣ್ಣನ ಮತ್ತೊಂದು ವಿಶೇಷವೆಂದರೆ ಇಡ್ಲಿ, ವಡಾ, ಮೊಸರು ಅನ್ನ ಮತ್ತು ಖಾರಾಬಾತ್‌ ಜೊತೆ ನೀಡುವ ವಿಶಿಷ್ಟ ಪಲಾವ್​.

ವಿಳಾಸ: 39, ಹಲಸೂರುಪೇಟೆ, ನಗರತ್‌ಪೇಟೆ, ಬೆಂಗಳೂರು, ಕರ್ನಾಟಕ

ಸಮಯ: 7am - 4pm, 5pm - 9pm

ಸಿದ್ದಪ್ಪ ಹೋಟೆಲ್, ಸಂಪಂಗಿ ರಾಮನಗರ, ಬೆಂಗಳೂರು

ಈ ಉಪಾಹಾರ ಗೃಹವು ಅತ್ಯುತ್ತಮ ತಿಂಡಿ ಆಯ್ಕೆಗಳನ್ನು ನೀಡುತ್ತದೆ.  ದೋಸೆ, ಇಡ್ಲಿ ಮತ್ತು ಪಲಾವ್, ಹೀಗೆ ಎಲ್ಲವೂ ಇಲ್ಲಿ ಲಭ್ಯವಿದೆ.  ಸಂಪಂಗಿರಾಮನಗರದ ಹಳೆಯ ದೇವಾಲಯದ ಆವರಣದಲ್ಲಿರುವ ಈ ಸ್ಥಳದಲ್ಲಿ ಕುಳಿತುಕೊಳ್ಳಲು ಕುರ್ಚಿಗಳಿಲ್ಲ. ನೀವು ಉದ್ದವಾದ ಮರದ ಮೇಜಿನ ಮೇಲೆ ಕುಳಿತುಕೊಳ್ಳುತ್ತೀರಿ.

ಇದನ್ನೂ ಓದಿ: ಮನೆಯಲ್ಲಿ ಗಸಗಸೆ ಇದ್ರೆ ಸಾಕು, ಈ ಆರೋಗ್ಯ ಸಮಸ್ಯೆಗಳು ಹತ್ತಿರವೂ ಸುಳಿಯಲ್ಲ

ವಿಳಾಸ: ಅಶ್ವಥ್ ನಗರ, 7ನೇ ಬ್ಲಾಕ್, ಸಂಪಂಗಿ ರಾಮನಗರ, ಬೆಂಗಳೂರು

ಸಮಯ: 8:30am - 11:30am {ಸೋಮ-ಶನಿ} ಮತ್ತು 7.30am - 11.30am {ಭಾನುವಾರ}

ಬಿಎನ್ ಸಾಂಬಯ್ಯ ಶೆಟ್ಟಿ, ಶಿವಾಜಿ ನಗರ, ಬೆಂಗಳೂರು

BN ಸಾಂಬಯ್ಯ ಶೆಟ್ಟಿ ಬ್ರೌನ್ ಪಲಾವ್‌ಗಾಗಿ ವ್ಯಾಪಕವಾಗಿ ಜನಪ್ರಿಯರಾಗಿದೆ. ಆದರೆ ಇಲ್ಲಿಭಾನುವಾರ ಮಾತ್ರ ಪಲಾವ್​ ಸಿಗುತ್ತದೆ. ಬ್ರೆಡ್‌ ಪಲಾವ್ ಇಲ್ಲಿ ಹೆಚ್ಚು ಪ್ರಸಿದ್ಧ. ಬಿಎನ್ ಸಾಂಬಯ್ಯ ಶೆಟ್ಟಿಯವರಲ್ಲಿರುವ ಪಲಾವ್ ಆಂಧ್ರಪ್ರದೇಶದ ಚಿತ್ತೋರ್ ಪ್ರದೇಶದಿಂದ ಪ್ರಭಾವಿತವಾಗಿದೆ.

ವಿಳಾಸ: 90/2, ಧರ್ಮರಾಜ ಕೋಯಿಲ್ ಸ್ಟ್ರೀಟ್, ಶಿವಾಜಿ ನಗರ, ಬೆಂಗಳೂರು

ಸಮಯ: 7am - 11am

ನಮ್ಮ ಎಸ್.ಎಲ್.ಎನ್, ಬಸವನಗುಡಿ, ಬೆಂಗಳೂರು

ಈ ಹಳೆಯ ಸ್ಥಳ ದಕ್ಷಿಣ ಬೆಂಗಳೂರಿನಲ್ಲಿರುವ ಅತ್ಯಂತ ಹಳೆಯ ಆಹಾರ ಜಾಯಿಂಟ್‌ಗಳಲ್ಲಿ ಒಂದಾಗಿದೆ. ಪಾಕೆಟ್ ಸ್ನೇಹಿ ತಿಂಡಿಗಳಿಗಾಗಿ ಹೆಸರುವಾಸಿಯಾಗಿದೆ, ಅವರ ವೆಜ್ ಪಲಾವ್ ಬಹಳ ರುಚಿಕರವಾಗಿರುತ್ತದೆ. ಪಲಾವ್ ದಕ್ಷಿಣ ಭಾರತದ ನಿಜವಾದ ರುಚಿಯನ್ನು ಹೊಂದಿದೆ.ಇಲ್ಲಿನ ಆಹಾರವನ್ನು ಬಾಳೆ ಎಲೆಯ ಮೇಲೆ ಕಾಗದದ ಮೇಲೆ ಇಟ್ಟು ಬಡಿಸಲಾಗುತ್ತದೆ. ವೆಜ್ ಪಲಾವ್ ಜೊತೆಗೆ ಅವರು ಮಸಾಲೆ ಇಡ್ಲಿ, ಖಾರಾಭಾತ್, ಮಸಾಲಾಭಾತ್, ಸಾಬಕ್ಕಿ ದೋಸೆ, ಮಸಾಲೆ ದೋಸೆ ಮತ್ತು ಚಿತ್ರಾನ್ನವನ್ನು ಸಹ ಟ್ರೈ ಮಾಡಬೇಕು.

ವಿಳಾಸ: ಗಾಂಧಿ ಬಜಾರ್, ಬಸವನಗುಡಿ, ಬೆಂಗಳೂರು

ಸಮಯ: 7am - 4pm, 5pm - 9pm

ಇದನ್ನೂ ಓದಿ: ಫ್ರಿಡ್ಜ್​ ಇಲ್ಲ ಅಂದ್ರು ಹೀಗೆ ಟೊಮ್ಯಾಟೋ ರಕ್ಷಣೆ ಮಾಡಬಹುದು

ಚಿಕ್ಕಣ್ಣ ಟಿಫಿನ್ ರೂಮ್, ಚಿಕ್ಕಪೇಟೆ, ಬೆಂಗಳೂರು

ಕಬ್ಬನ್‌ಪೇಟೆಯಲ್ಲಿರುವ ಚಿಕ್ಕಣ್ಣ ಟಿಫಿನ್‌ ರೂಮ್‌ನಲ್ಲಿ ರೈಸ್‌ ಭಾತ್‌ ಮತ್ತು ಭಾತ್‌ ಮಸಾಲೆ ದೋಸೆ ತಿನ್ನಲೇಬೇಕು. ಹಾಗೆಯೇ ಇಲ್ಲಿನ ಪಲಾವ್ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಬಹಳ ರುಚಿಕರವಾಗಿರುತ್ತದೆ. ಲವಂಗ, ದಾಲ್ಚಿನ್ನಿ ಮತ್ತು ಹಸಿರು ಮೆಣಸಿನಕಾಯಿ ಹಾಕಿರುವ ಈ ಪಲಾವ್ ನಿಮಗೆ ಬಹಳ ಇಷ್ಟವಾಗುತ್ತದೆ.

ವಿಳಾಸ: 32/1, 30ನೇ ಕ್ರಾಸ್, ಕಬ್ಬನ್‌ಪೇಟೆ ಮುಖ್ಯ ರಸ್ತೆ, ಚಿಕ್ಕಪೇಟೆ, ಬೆಂಗಳೂರು

ಸಮಯ: 7am - 11:30am {ಭಾನು ಮತ್ತು ಸೋಮವಾರ} ಮತ್ತು 7am - 11:30am, 4pm - 8pm {ಮಂಗಳ-ಶನಿ}
Published by:Sandhya M
First published: