Holiday Plan: ದಸರಾ ಹತ್ತಿರ ಬರ್ತಿದೆ, ಮೈಸೂರಿಗೆ ಹೋದ್ರೆ ಈ ಪ್ಲೇಸ್​ಗಳನ್ನು ಮಿಸ್​ ಮಾಡ್ದೇ ನೋಡ್ಕೊಂಡು ಬನ್ನಿ

Places Near Me In Mysuru: ಭವ್ಯವಾದ ಅರಮನೆಗಳು (Palace), ಬೆರಗುಗೊಳಿಸುವ ಉದ್ಯಾನಗಳು (Gardens), ವರ್ಣರಂಜಿತ ಉತ್ಸವಗಳು (Festival) ಮತ್ತು ಅಸಾಧಾರಣ ಕರಕುಶಲತೆಯು ಮೈಸೂರನ್ನು ವಿಭಿನ್ನವಾಗಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕರ್ನಾಟಕದ (Karnataka) ಮೈಸೂರಿಗೆ (Mysuru) ಸಂಬಂಧಿಸಿದ ಪ್ರತಿಯೊಂದು ವಿಚಾರದಲ್ಲೂ ಸೌಂದರ್ಯದ (Beauty) ಸ್ಪರ್ಶವಿದೆ. ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ ನಗರವು ಭಾರತದ (India) ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಭವ್ಯವಾದ ಅರಮನೆಗಳು (Palace), ಬೆರಗುಗೊಳಿಸುವ ಉದ್ಯಾನಗಳು (Gardens), ವರ್ಣರಂಜಿತ ಉತ್ಸವಗಳು (Festival) ಮತ್ತು ಅಸಾಧಾರಣ ಕರಕುಶಲತೆಯು ಮೈಸೂರನ್ನು ವಿಭಿನ್ನವಾಗಿಸಿದೆ. ಸದ್ಯ ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಸಹ ಹತ್ತಿರ ಬರುತ್ತಿದೆ. ಈ ಸಮಯದಲ್ಲಿ ಮೈಸೂರಿಗೆ ಹೋದರೆ ಮೈಸೂರಿನಲ್ಲಿ ಭೇಟಿ ನೀಡಬೇಕಾದ ಪ್ರಮುಖ 6 ಸ್ಥಳಗಳ ಲಿಸ್ಟ್​ ಇಲ್ಲಿವೆ.   

ಮೈಸೂರು ಅರಮನೆ

ಮೈಸೂರು ಮಹಾರಾಜ ಅರಮನೆ ಎಂದೂ ಕರೆಯಲ್ಪಡುವ ಈ ಅರಮನೆಯು ಭಾರತದ ಅತಿದೊಡ್ಡ ಅರಮನೆಗಳಲ್ಲಿ ಒಂದಾಗಿದೆ. ಇದು ನಗರದ ಮಧ್ಯಭಾಗದಲ್ಲಿದ್ದು, ನಿಮಗೆ ಬಹಳ ಇಷ್ಟವಾಗುತ್ತದೆ. ಅರಮನೆಯನ್ನು 1897 ರಲ್ಲಿ ಕಟ್ಟಿಗೆಯನ್ನು ಬಳಸಿ ನಿರ್ಮಿಸಲಾಗಿತ್ತು, ಆದರೆ ಬೆಂಕಿಯಿಂದಾಗಿ ಅದು ಹಾನಿಗೊಳಗಾಯಿತು. ಇದನ್ನು ನಂತರ 1912 ರಲ್ಲಿ ಪುನರ್ನಿರ್ಮಿಸಲಾಯಿತು. ಹಗಲಿನಲ್ಲಿ ಇದು ನಿಮ್ಮ ಕಣ್ಣಿಗೆ ಹಬ್ಬವಾಗಿದ್ದರೆ, ರಾತ್ರಿ 98000 ಕ್ಕೂ ಹೆಚ್ಚು ಬಲ್ಬ್‌ಗಳ ಲೈಟ್​ನಲ್ಲಿ ಅರಮನೆಯನ್ನು ನೋಡಿ ಮಂತ್ರಮುಗ್ಧರಾಗುವುದರಲ್ಲಿ ಅನುಮಾನವಿಲ್ಲ.

ಕಾರಂಜಿ ಲೇಕ್​

ಕಾರಂಜಿ ಲೇಕ್​ ಪ್ರಸಿದ್ಧ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿದೆ. ಮೈಸೂರು ಅರಸರು ಕೆರೆಯನ್ನು ನಿರ್ಮಿಸಿದ್ದು, ಸುಮಾರು 90 ಎಕರೆ ವಿಸ್ತೀರ್ಣದ ಈ ಲೇಕ್​ ಕರ್ನಾಟಕ ರಾಜ್ಯದ ಅತಿದೊಡ್ಡ ಕೆರೆಗಳಲ್ಲಿ ಒಂದಾಗಿದೆ. ಇದು ಮೈಸೂರು ಮೃಗಾಲಯದ ಹಿಂಭಾಗದಲ್ಲಿದ್ದು, ಒಟ್ಟಿಗೆ ಎರಡನ್ನೂ ನೋಡಬಹುದು.  ನೀವು ಇಲ್ಲಿ 90 ಜಾತಿಯ ಪಕ್ಷಿಗಳನ್ನು ನೀವು ನೋಡಬಹುದು. ಸುತ್ತಲೂ ಸುಂದರವಾದ ಉದ್ಯಾನವನವಿದೆ.

ಚಾಮುಂಡಿ

ಬೆಟ್ಟಮೈಸೂರಿಗೆ ಹೋದ ಮೇಲೆ ಬೆಟ್ಟಕ್ಕೆ ಹೋಗದೇ ಇರಲಾಗದು. ಈ ಚಾಮುಂಡಿ ಬೆಟ್ಟವು ಸಮುದ್ರ ಮಟ್ಟದಿಂದ 1065 ಮೀಟರ್ ಎತ್ತರದಲ್ಲಿದೆ. ಇದು ಮೈಸೂರಿನಿಂದ ಕೇವಲ 3 ಕಿಮೀ ದೂರದಲ್ಲಿದೆ. ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಸ್ಥಾನವು 11 ನೇ ಶತಮಾನದಷ್ಟು ಹಳೆಯದು. ಬೆಟ್ಟದ ಅರ್ಧ ದಾರಿಯಲ್ಲಿ, ನೀವು ನಂದಿ ವಿಗ್ರಹವನ್ನು ಸಹ ನೋಡಬಹುದು. 5 ಮೀಟರ್ ಎತ್ತರದ ಪ್ರತಿಮೆಯ ವಿಶೇಷತೆ ಏನೆಂದರೆ ಇದನ್ನು 1659 ರಲ್ಲಿ ಒಂದೇ ಬಂಡೆಯಿಂದ ಕೆತ್ತಲಾಗಿದೆ.

ಇದನ್ನೂ ಓದಿ: ಅತಿಯಾಗಿ ಮೈಕ್ರೋವೇವ್​ ಬಳಸುವ ಅಭ್ಯಾಸ ಇದ್ರೆ ಈಗ್ಲೇ ಬಿಡಿ, ಆರೋಗ್ಯ ಸಮಸ್ಯೆ ಕಟ್ಟಿಟ್ಟಬುತ್ತಿ

ಮೈಸೂರು ಮೃಗಾಲಯ

ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ ಎಂದೂ ಕರೆಯಲ್ಪಡುವ ಮೈಸೂರು ಮೃಗಾಲಯವು ನಿಮಗೆ ಅದ್ಭುತ ಅನುಭವವನ್ನು ನೀಡುತ್ತದೆ. ಇದು 1892 ರಲ್ಲಿ ನಿರ್ಮಿಸಲಾದ ಭಾರತದ ಅತ್ಯಂತ ಹಳೆಯ ಮೃಗಾಲಯಗಳಲ್ಲಿ ಒಂದಾಗಿದೆ. ಮೃಗಾಲಯದಲ್ಲಿ ನಮ್ಮ ದೇಶದ ಪ್ರಾಣಿಗಳನ್ನು ಮಾತ್ರವಲ್ಲದೆ ಪ್ರಪಂಚದಾದ್ಯಂತದ ಪ್ರಾಣಿಗಳು ಸಹ ಇದೆ.

ಬೃಂದಾವನ ಗಾರ್ಡನ್​

ಬೃಂದಾವನ ಉದ್ಯಾನವನವು ಕೃಷ್ಣರಾಜ ಸಾಗರ ಅಣೆಕಟ್ಟಿನ ಬಳಿ ಇದೆ. ಇತಿಹಾಸದ ಪ್ರಕಾರ ಈ ಉದ್ಯಾನವನ್ನು ನಿರ್ಮಿಸುವ ಕೆಲಸವನ್ನು 1927 ರಲ್ಲಿ ಪ್ರಾರಂಭಿಸಲಾಗಿತ್ತು ಮತ್ತು ಇದು 1932 ರಲ್ಲಿ ಪೂರ್ಣಗೊಂಡಿದೆ. ಇದು ಬೊಟಾನಿಕಲ್ ಪಾರ್ಕ್ ಮತ್ತು ಅನೇಕ ಕಾರಂಜಿಗಳನ್ನು ಹೊಂದಿದೆ. ಸಂಗೀತ ಕಾರಂಜಿ ಇದರ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದು, ಇದನ್ನು ಮಿಸ್​ ಮಾಡಲೇಬಾರದು.

ಇದನ್ನೂ ಓದಿ: ಆಫೀಸ್​ನಲ್ಲಿ ನಿದ್ದೆ ತಡೆಯೋಕೆ ಆಗ್ತಿಲ್ವಾ? ಚಿಂತೆ ಬಿಡಿ ಈ ಸೂಪರ್ ಹ್ಯಾಕ್ಸ್ ನಿಮಗಾಗಿಯೇ ಇರೋದು

ಶಿವನಸಮುದ್ರ

ಶಿವನಸಮುದ್ರ ಜಲಪಾತವು ಮೈಸೂರಿನಿಂದ 85 ಕಿಮೀ ದೂರದಲ್ಲಿದೆ. ಶಿವನಸಮುದ್ರವು ಕಾವೇರಿ ನದಿಯನ್ನು ಎರಡು ಜಲಪಾತಗಳಾಗಿ ವಿಭಜಿಸುವ ದ್ವೀಪ ಪಟ್ಟಣವಾಗಿದ್ದು, ಎರಡು ಜಲಪಾತಗಳಿಗೆ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತ ಎಂದು ಕರೆಯಲಾಗುತ್ತದೆ. ಶಿವನಸಮುದ್ರದ ಮತ್ತೊಂದು ವಿಶೇಷತೆಯೆಂದರೆ ಏಷ್ಯಾದ ಮೊದಲ ಜಲವಿದ್ಯುತ್ ಕೇಂದ್ರ ಇಲ್ಲಿಯೇ ಆರಂಭವಾಗಿದ್ದು.
Published by:Sandhya M
First published: