ಒಣ ಹಣ್ಣುಗಳಲ್ಲಿ (Dry Fruits) ಪಿಸ್ತಾ (Pistachio) ಕೂಡ ಒಂದು. ಒಣ ಹಣ್ಣುಗಳು ಆರೋಗ್ಯಕ್ಕೆ (Heath) ತುಂಬಾ ಲಾಭ (Benefits) ತಂದು ಕೊಡುತ್ತವೆ. ಚಳಿಗಾಲದಲ್ಲಿ (Winter) ನೀವು ಡ್ರೈ ಫ್ರೂಟ್ಸ್ ತಿನ್ನುವುದು ಹೆಚ್ಚು ಆರೋಗ್ಯಕರ. ಒಣ ಹಣ್ಣುಗಳು ಪೌಷ್ಟಿಕಾಂಶ ಸಮೃದ್ಧವಾಗಿವೆ. ಜೊತೆಗೆ ದೇಹವನ್ನು ಬೆಚ್ಚಗೆ ಇರಿಸಲು ಸಾಕಷ್ಟು ಸಹಾಯ ಮಾಡುತ್ತದೆ. ಪ್ರತಿಯೊಬ್ಬರೂ ಒಣ ಹಣ್ಣು ಸೇವನೆ ಮಾಡ್ತಾರೆ. ಒಣ ಹಣ್ಣುಗಳ ಸೇವನೆ ಕೆಲವು ಕಾಯಿಲೆಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ. ಒಣ ಹಣ್ಣುಗಳು ಉತ್ತಮ ಗುಣಮಟ್ಟದ್ದಾಗಿದ್ದರೆ, ಆರೋಗ್ಯಕ್ಕೆ ಹಿತ. ಈಗ ಮಾರುಕಟ್ಟೆಯಲ್ಲಿ ಹಲವು ನಕಲಿ ವಸ್ತುಗಳು ಬಂದಿವೆ. ಅದರಲ್ಲಿ ಒಣ ಹಣ್ಣುಗಳನ್ನು ಸಹ ಪರಿಶೀಲಿಸಿ ತರಬೇಕು.
ಒಣ ಹಣ್ಣುಗಳು ಗುಣಮಟ್ಟ ತಿಳಿಯುವುದು ಹೇಗೆ?
ಅನೇಕ ಬಾರಿ ಮಾರುಕಟ್ಟೆಯಿಂದ ಒಣ ಹಣ್ಣು ತರುತ್ತೇವೆ. ಆದರೆ ಅವು ಅಸಲಿ ಅಂತಾ ಗೊತ್ತಾಗಲ್ಲ. ಅವು ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನ ನೀಡುತ್ತವೆ ಎಂಬುದು ಸಹ ಗೊತ್ತಾಗುವುದಿಲ್ಲ. ಅವುಗಳ ಗುಣಮಟ್ಟ ಹೇಗಿದೆ ಎಂದು ಗೊತ್ತಾಗಲ್ಲ. ಇದಕ್ಕೆ ಮುಖ್ಯ ಕಾರಣ ಅಂದ್ರೆ ಒಣ ಹಣ್ಣುಗಳು ತುಂಬಾ ದುಬಾರಿಯಾಗಿರುವುದು.
ಹಾಗಾಗಿ ಒಣ ಹಣ್ಣುಗಳ ಗುಣಮಟ್ಟ ಚೆಕ್ ಮಾಡಬೇಕಾಗುತ್ತದೆ. ಇಲ್ಲಿ ನಾವು ಒಣ ಹಣ್ಣು ಪಿಸ್ತಾದ ಗುಣಮಟ್ಟ ಕಂಡು ಹಿಡಿಯುವುದು ಹೇಗೆ? ಅದರ ಗುಣಮಟ್ಟ ಪರೀಕ್ಷಿಸುವ ಸರಿಯಾದ ಮಾರ್ಗ ಯಾವುದು ಎಂದು ನೋಡೋಣ.
ತುದಿ ಒಡೆದ ಮತ್ತು ತಿಳಿ ಹಸಿರು ಬಣ್ಣದ ಪಿಸ್ತಾಗಳು
ಪಿಸ್ತಾ ಆರಿಸುವಾಗ ಯಾವಾಗಲೂ ಪಿಸ್ತಾದ ಒಂದು ತುದಿ ಸ್ವಲ್ಪ ಸೀಳಿರುವ ಬೀಜಗಳನ್ನು ನೋಡಿ. ಪಿಸ್ತಾ ಖರೀದಿ ಮಾಡುವಾಗ ಪಿಸ್ತಾಗಳು ಸಂಪೂರ್ಣವಾಗಿ ಶೆಲ್ ಆಗಿದ್ದರೆ ಅವುಗಳು ಹಣ್ಣಾಗಿಲ್ಲ ಅಥವಾ ಒಳಗಿನಿಂದ ಪಕ್ವವಾಗಿಲ್ಲ ಎಂದು ಹೇಳಲಾಗುತ್ತದೆ.
ಪಿಸ್ತಾದ ಚಿಪ್ಪು ಸಂಪೂರ್ಣವಾಗಿ ಮುಚ್ಚಿದ್ದರೆ ಅವುಗಳು ಒಳಗಿನಿಂದ ಕಹಿಯಾಗಿರಬಹುದು. ಯಾವಾಗಲೂ ಪಿಸ್ತಾ ಖರೀದಿ ಮಾಡಿ ಸೇವಿಸಿದರೆ, ಅದರ ರುಚಿ ಮತ್ತು ತಿಳಿ ಹಸಿರು ಬಣ್ಣದ ಬಗ್ಗೆ ಗೊತ್ತಾಗುತ್ತದೆ.
ಪಿಸ್ತಾ ಸ್ವಲ್ಪ ತುದಿ ಸೀಳಿರಬೇಕು ಮತ್ತು ತಿಳಿ ಹಸಿರು ಬಣ್ಣದಿಂದ ಕೂಡಿದ್ದರೆ ಅದು ಸರಿಯಾದ ಮತ್ತು ಉತ್ತಮ ಗುಣಮಟ್ಟದ ಪಿಸ್ತಾ ಆಗಿರುತ್ತದೆ. ಇನ್ನು ಪಿಸ್ತಾ ಚೆನ್ನಾಗಿ ಎರಡು ಭಾಗವಾಗಿದ್ದರೆ ಇವುಗಳನ್ನು ತೆರೆಯುವುದು ಸುಲಭ. ಸ್ವಲ್ಪ ಸಿಹಿ ಮತ್ತು ಹಸಿರು ಬಣ್ಣದಿಂದ ಕೂಡಿರುತ್ತವೆ. ಈ ಪಿಸ್ತಾದ ಗುಣಮಟ್ಟ ಉತ್ತಮವಾಗಿರುತ್ತದೆ.
ಪಿಸ್ತಾ ಖರೀದಿಸುವಾಗ ಯಾವ ವಿಷಯ ನೆನಪಿಡಬೇಕು?
ಉತ್ತಮ ಅಂಗಡಿಯಲ್ಲಿ ಅಥವಾ ಬ್ರ್ಯಾಂಡ್ ಪಿಸ್ತಾ ಖರೀದಿ ಮಾಡುವುದು
ಒಣ ಹಣ್ಣುಗಳು ಸಾಮಾನ್ಯವಾಗಿ ದುಬಾರಿಯಾಗಿರುತ್ತವೆ. ನೀವು ಪಿಸ್ತಾ ಖರೀದಿಸುವಾಗ ಅಥವಾ ಒಣ ಹಣ್ಣುಗಳ ಖರೀದಿ ವೇಳೆ ಅಗ್ಗದ ಒಣ ಹಣ್ಣು ಖರೀದಿಸಿದರೆ ಅವುಗಳ ಗುಣಮಟ್ಟ ಕಳಪೆಯಾಗಿರಬಹುದು.
ಹಾಗಾಗಿ ಆನ್ಲೈನ್ ನಲ್ಲಿ ಖರೀದಿ ಮಾಡಬೇಡಿ. ಉತ್ತಮ ಅಂಗಡಿ ಅಥವಾ ಉತ್ತಮ ಬ್ರ್ಯಾಂಡ್ ನ ಪಿಸ್ತಾ ಖರೀದಿ ಮಾಡಿ. ಮಾರುಕಟ್ಟೆಯಲ್ಲಿ ಬಹಿರಂಗವಾಗಿ ಇಟ್ಟಿರುವ ಪಿಸ್ತಾ ಖರೀದಿ ಮಾಡುವುದು ತಪ್ಪಿಸಿ.
ಪಿಸ್ತಾ ಎಲ್ಲಿಂದ ಬಂತು?
ಪಿಸ್ತಾಗಳು ಮಧ್ಯಪ್ರಾಚ್ಯದಲ್ಲಿ ಮೊದಲು ಕಂಡು ಬಂದವು. ಬಿಸಿ ಮತ್ತು ಶುಷ್ಕ ವಾತಾವರಣದಲ್ಲಿ ಪಿಸ್ತಾ ಬೆಳೆಯಲಾಗುತ್ತದೆ. ಮಧ್ಯಪ್ರಾಚ್ಯವು ಪಿಸ್ತಾ ಬೆಳೆಯಲು ಉತ್ತಮ ಹವಾಮಾನ ಹೊಂದಿದೆ. ಹಾಗಾಗಿ ಮಧ್ಯಪ್ರಾಚ್ಯ ಪಿಸ್ತಾಗಳು ವಿಶ್ವದ ಅತ್ಯುತ್ತಮ ಗುಣಮಟ್ಟದ ಪಿಸ್ತಾ ಎಂದು ಪರಿಗಣಿಸಲ್ಪಟ್ಟಿವೆ.
ಹಾಗಾಗಿ ನೀವು ಖರೀದಿಸುವ ಪಿಸ್ತಾಗಳು ಮಧ್ಯಪ್ರಾಚ್ಯದಿಂದ ಬರುತ್ತವೆಯೇ ಎಂದು ಪರಿಶೀಲಿಸಿ. ಇತ್ತೀಚೆಗೆ ಭಾರತ, ಚೀನಾ, ಅಮೆರಿಕ ದೇಶಗಳೂ ಸಹ ಪಿಸ್ತಾ ಬೆಳೆಯುತ್ತಿವೆ.
ಇದನ್ನೂ ಓದಿ: ಡಯಟ್ ಮತ್ತು ವ್ಯಾಯಾಮ ಇಲ್ಲದೆ ದೇಹದ ತೂಕ ಇಳಿಸಲು ಇಲ್ಲಿವೆ ಸುಲಭ ವಿಧಾನಗಳು..!
ಸರಿಯಾದ ಗುಣಮಟ್ಟದ ಪಿಸ್ತಾ ಪಡೆಯಲು ಪಿಸ್ತಾ ಬೆಳೆಯುವ ಸ್ಥಳೀಯ ರೈತರು ಮತ್ತು ಅವರ ಪಿಸ್ತಾಗಳು ಸೌಮ್ಯ ಸಿಹಿ ರುಚಿ ಹೊಂದಿದ್ದರೆ, ಅವರಿಂದ ಪಿಸ್ತಾ ಖರೀದಿ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ