ನಿಮ್ಮ ಕಣ್ಣಿನಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅದು ಕೊರೋನಾ ಲಕ್ಷಣ

ಕೆನಡಾದಲ್ಲಿರುವ ರಾಯಲ್ ಅಲೆಕ್ಸಾಂಡರ್ ಆಸ್ಪತ್ರೆಯ ಕಣ್ಣಿನ ವಿಭಾಗಕ್ಕೆ ಮಹಿಳೆಯೋರ್ವಳು ಆಗಮಿಸಿದ್ದಳು. ಆಕೆಗೆ ಕಣ್ಣಿನ ಸಮಸ್ಯೆ ಕಾಣಿಸಿಕೊಂಡಿತ್ತು. ನಂತರ ಆಕೆಗೆ ಕೊರೋನಾ ಇರುವುದು ಖಚಿತವಾಗಿತ್ತು.

ಕಣ್ಣು

ಕಣ್ಣು

 • Share this:
  ಕೊರೋನಾ ವೈರಸ್​ ವಿಶ್ವಾದ್ಯಂತ ಭಾರೀ ವೇಗದಲ್ಲಿ ಹರಡುತ್ತಿದೆ. ಅಚ್ಚರಿ ಎಂದರೆ ಭಾರತದಲ್ಲಿ ಕೊರೋನಾ ಸೋಂಕು ತಗುಲಿದ ಶೇ.68 ಜನರಲ್ಲಿ ಯಾವುದೇ ಲಕ್ಷಣಗಳಲ್ಲೇ ಕಾಣಿಸಿಕೊಂಡಿಲ್ಲ ಎಂದು ವರದಿಯೊಂದು ಹೇಳಿದೆ. ಯಾವುದೆ ಲಕ್ಷಣ ಇಲ್ಲದಿದ್ದರೂ ಕೇವಲ ಕಣ್ಣಿನ ಆಧಾರದ ಮೇಲೆ ನಿಮಗೆ ಕೊರೋನಾ ಬಂದಿದೆಯೋ ಅಥವಾ ಇಲ್ಲವೋ ಎನ್ನುವುದನ್ನು ಹೇಳಬಹುದು ಎಂದು ಹೊಸ ಅಧ್ಯಯನವೊಂದು ಹೇಳಿದೆ.

  ಕೆನಡಾದಲ್ಲಿರುವ ರಾಯಲ್​ ಅಲೆಕ್ಸಾಂಡರ್​ ಆಸ್ಪತ್ರೆಯ ಕಣ್ಣಿನ ವಿಭಾಗಕ್ಕೆ ಮಹಿಳೆಯೋರ್ವಳು ಆಗಮಿಸಿದ್ದಳು. ಆಕೆಗೆ ಪದೇ ಪದೇ ಕಣ್ಣು ಕೆಂಪು ಬಣ್ಣಕ್ಕೆ ತಿರುಗುತ್ತಿತ್ತು. ಆಸ್ಪತ್ರೆಗೆ ಬರಲು ಇದು ಮುಖ್ಯ ಕಾರಣ. ಆಸ್ಪತ್ರೆಯಲ್ಲಿ ಕೆಲ ಕಾಲ ಆಕೆಗೆ ಚಿಕಿತ್ಸೆ ನೀಡಲಾಗಿತ್ತಾದರೂ ವೈದ್ಯರಿಗೆ ಈ ಸಮಸ್ಯೆಗೆ ಮೂಲ ಏನು ಎಂಬುದನ್ನು ಹುಡುಕಲು ಸಾಧ್ಯವೇ ಆಗಿರಲಿಲ್ಲ. ನಂತರ ಗೊತ್ತಾಗಿದ್ದೇನೆಂದರೆ , ಆಕೆ ಏಷ್ಯಾ ಭಾಗದಿಂದ ಕೆನಡಾಗೆ ಬಂದಿದ್ದಳು ಎಂಬುದು.

  ತಕ್ಷಣ ಆಕೆಗೆ ಕೊರೋನಾ ಟೆಸ್ಟ್​ ಮಾಡಲಾಗಿತ್ತು. ಈ ವೇಳೆ ಆಕೆಗೆ ಕೊರೋನಾ ಪಾಸಿಟಿವ್​ ಬಂದಿದೆ. ನಂತರ ಆಕೆಯ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್​ ಮಾಡಲಾಗಿದ್ದು, ಎಲ್ಲರ ವರದಿ ನೆಗೆಟಿವ್​ ಬಂದಿದೆ.

  ಇದನ್ನೂ ಓದಿ: ಬ್ರೇಕಪ್ ಫೀಲಿಂಗ್​ಗೆ ಕಂಠ ಪೂರ್ತಿ ಕುಡಿದಳು; ಹಾರಾಟ ನಡೆಸುತ್ತಿದ್ದ ವಿಮಾನದ ಕಿಟಕಿಯ ಗಾಜನ್ನೇ ಒಡೆದಳು!

  ಕೆನಡಾ ವೈದ್ಯರು ಹೇಳುವ ಪ್ರಕಾರ, ಶೇ.10-15 ಪ್ರಕರಣಗಳಲ್ಲಿ ವೈದ್ಯರು ಕಣ್ಣಿನ ಮೂಲಕವೇ ಕೊರೋನಾ ಲಕ್ಷಣಗಳನ್ನು ಪತ್ತೆ ಹಚ್ಚಿದ್ದಾರಂತೆ. ಕೊರೋನಾ ಸೋಂಕು ತಗುಲಿದ ಕೆಲವರ ಕಣ್ಣು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದು ಕೂಡ ರೋಗದ ಲಕ್ಷಣವೇ. ಕೆಲವರಿಗೆ ಜ್ವರ ಮತ್ತು ಖೆಮ್ಮು ಇಲ್ಲದಿದ್ದರೂ ಕಣ್ಣು ಕೆಂಪಾಗುತ್ತದೆ. ಇದರ ಮೂಲಕ ಸೋಂಕನ್ನು ಪತ್ತೆ ಹಚ್ಚಬಹುದು ಎಂಬುದು ಕೆನಡಾ ವೈದ್ಯರ ಅಭಿಪ್ರಾಯ.
  First published: