Face Pack: ಚಂದ್ರನ ಮುಖ, ಗುಲಾಬಿ ಕೆನ್ನೆ! ನೀವೂ ಈ ರೀತಿ ಆಗ್ಬೇಕು ಅಂದ್ರೆ ಮನೆಯಲ್ಲೇ ಮಾಡಿ ನೈಸರ್ಗಿಕ ಫೇಸ್ ಪ್ಯಾಕ್

ಹಲವು ಕಾರಣಗಳಿಂದ ಮುಖದ ಗುಲಾಬಿ ಹೊಳಪು ಮಾಯವಾಗುತ್ತದೆ. ಚರ್ಮದ ಆರೈಕೆಯ ಕೊರತೆ ಮತ್ತು ಟ್ಯಾನಿಂಗ್ ಸಮಸ್ಯೆ ಉಂಟಾಗುತ್ತದೆ. ನಿಮ್ಮ ಚರ್ಮಕ್ಕಾಗಿ ವಾರಕ್ಕೆ ಮೂರು ಬಾರಿ ವಿಶೇಷ ಫೇಸ್ ಪ್ಯಾಕ್ ಮಾಡಿಕೊಳ್ಳಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೆನ್ನೆಯ (Cheeks) ಮೇಲೆ ಗುಲಾಬಿ (Rose) ಹೊಳಪು (Brightening) ಯಾರಿಗೆ ತಾನೇ ಬೇಡ ಹೇಳಿ? ಮುಖದ (Face) ಸೌಂದರ್ಯವು (Beauty) ಹೆಚ್ಚಾಗಲು ದಿನವೂ ನಿಯಮಿತವಾಗಿ ಸೌಂದರ್ಯ ವರ್ಧಕ ಬಳಸುವುದು ಎಲ್ಲರ ರೂಢಿಯಾಗಿದೆ. ಹಾಗೆಯೇ ಕೆಲವರು ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ತ್ವಚೆಯ ಗ್ಲೋ ಹೆಚ್ಚಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ನಿಮ್ಮ ಅಂದವನ್ನು ಹೆಚ್ಚಿಸುವ ಅನೇಕ ನೈಸರ್ಗಿಕ ವಸ್ತುಗಳು ಇವೆ. ಅವುಗಳು ಸುಲಭವಾಗಿ ಸಿಗುವಂತಹವು. ದಿನವೂ ನೀವು ಅವುಗಳನ್ನು ಮುಖಕ್ಕೆ ಹಚ್ಚುತ್ತಾ ಬಂದರೆ ಸೌಂದರ್ಯ ಹೆಚ್ಚುತ್ತದೆ. ಜೊತೆಗೆ ಮೊಡವೆ, ಕಪ್ಪು ಕಲೆ ಹಾಗೂ ಮುಖದ ವೈಟ್ ಹೆಡ್ಸ್ ಕಡಿಮೆ ಆಗುತ್ತವೆ. ನಿಮ್ಮ ತ್ವಚೆ ಹೊಳಪಾಗುತ್ತದೆ.

    ಇದು ಸೌಂದರ್ಯದ ವಿಷಯ. ಹಲವು ಕಾರಣಗಳಿಂದ ಮುಖದ ಗುಲಾಬಿ ಹೊಳಪು ಮಾಯವಾಗುತ್ತದೆ. ಚರ್ಮದ ಆರೈಕೆಯ ಕೊರತೆ ಮತ್ತು ಟ್ಯಾನಿಂಗ್ ಸಮಸ್ಯೆ ಕಾರಣವಾಗುತ್ತದೆ. ನಿಮ್ಮ ಚರ್ಮಕ್ಕಾಗಿ ವಾರಕ್ಕೆ ಮೂರು ಬಾರಿ ವಿಶೇಷ ಫೇಸ್ ಪ್ಯಾಕ್  ಮಾಡಿಕೊಳ್ಳಿ. ಮುಖದಲ್ಲಿ ಗುಲಾಬಿ ಹೊಳಪು ತರಲು ಯಾವ ಫೇಸ್ ಪ್ಯಾಕ್ ಹಾಕಬೇಕು ಎಂಬುದನ್ನು ಇಲ್ಲಿ ನೋಡೋಣ.

    1 ಟೀಸ್ಪೂನ್ ಶ್ರೀಗಂಧದ ಪುಡಿ

    2 ಟೀಸ್ಪೂನ್ ರೋಸ್ ವಾಟರ್

    1/4 ಟೀಸ್ಪೂನ್ ಕಡಲೆ ಹಿಟ್ಟು

    ಬಳಕೆ ಮಾಡುವ ವಿಧಾನ

    ಶ್ರೀಗಂಧದ ಪುಡಿ, ರೋಸ್ ವಾಟರ್, ಕಡಲೆ ಹಿಟ್ಟು ಈ ಮೂರು ವಸ್ತುಗಳನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ 20 ನಿಮಿಷದವರೆಗೆ ಅನ್ವಯಿಸಿ. ನಂತರ ತಾಜಾ ನೀರಿನಿಂದ ಮುಖ ತೊಳೆಯಿರಿ. ಮಾಯಿಶ್ಚರೈಸರ್ನೊಂದಿಗೆ ಮಸಾಜ್ ಮಾಡಿ.

    ಇದನ್ನೂ ಓದಿ: ಕೂದಲು ಬಿಳಿ ಹಾಗೂ ಉದುರುವುದನ್ನು ತಡೆಯಲು ಹರಳೆಣ್ಣೆ ಹಚ್ಚುವುದು ಹೇಗೆ?

    ನಿಮ್ಮ ಚರ್ಮವು ಶುಷ್ಕವಾಗಿದ್ದರೆ, ಈ ಪೇಸ್ಟ್ ಅನ್ನು ತಯಾರಿಸುವಾಗ, ಅದಕ್ಕೆ ಕಾಲು ಚಮಚ ಜೇನುತುಪ್ಪ ಸೇರಿಸಿ. ಇದು ತ್ವಚೆಯ ಶುಷ್ಕತೆ ಹೋಗಲಾಡಿಸುತ್ತದೆ. ಚರ್ಮದ ಮೇಲೆ ಸಂಗ್ರಹವಾಗಿರುವ ಸತ್ತ ಜೀವಕೋಶಗಳನ್ನು ಸ್ವಚ್ಛಗೊಳಿಸುತ್ತದೆ. ತ್ವಚೆಯ ಹೊಳಪು ಕೂಡ ಹೆಚ್ಚುತ್ತದೆ.

    ಮುಖದ ಮೇಲಿನ ಕಲೆಗಳನ್ನು ತೆಗೆದು ಹಾಕಲು ಫೇಸ್ ಪ್ಯಾಕ್

    ನಿಮ್ಮ ಮುಖವು ಕಳೆಗುಂದಿದ ಹಾಗೆ ಕಾಣುತ್ತಿದ್ದರೆ ಚರ್ಮದ ಮೇಲೆ ಕಲೆಗಳು ಕಾಣಿಸಿದರೆ ಈ ಫೇಸ್ ಪ್ಯಾಕ್ ತಯಾರಿಸಿ.

    1 ಟೀಸ್ಪೂನ್ ಶ್ರೀಗಂಧದ ಪುಡಿ

    ಟೀಚಮಚ ಅಲೋವೆರಾ ಜೆಲ್

    2 ಟೀಸ್ಪೂನ್ ರೋಸ್ ವಾಟರ್

    ಕಾಲು ಟೀಚಮಚ ಅರಿಶಿನ

    ಈ ಎಲ್ಲಾ ವಸ್ತುಗಳನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ ಅದನ್ನು ಮುಖದ ಮೇಲೆ ಅನ್ವಯಿಸಿ. ಇದು ನಿಮ್ಮ ಮುಖದ ಕಲೆ ಮತ್ತು ಚರ್ಮದ ಮೊಡವೆ ಸಹ ತೆಗೆದು ಹಾಕುತ್ತದೆ.

    ಬಾದಾಮಿ ಎಣ್ಣೆ ಮತ್ತು ಬಾಳೆಹಣ್ಣಿನ ಫೇಸ್ ಪ್ಯಾಕ್

    ಹಸಿ ಬಾಳೆಹಣ್ಣು - 1

    ಬಾದಾಮಿ ಎಣ್ಣೆ - 3 ಟೀಸ್ಪೂನ್

    ಈ ಫೇಸ್ ಪ್ಯಾಕ್ ಮಾಡಲು, ಮೊದಲು ಬಾಳೆಹಣ್ಣು ಮತ್ತು ಬಾದಾಮಿ ಪೇಸ್ಟ್ ಮಾಡಿ. ನಂತರ ಎರಡನ್ನೂ ಒಟ್ಟಿಗೆ ಸೇರಿಸಿ ಫೇಸ್ ಪ್ಯಾಕ್ ತಯಾರಿಸಿಕೊಳ್ಳಿ. ಈಗ ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ ಮತ್ತು 20 ನಿಮಿಷ ಒಣಗಲು ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಈ ಫೇಸ್ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ.

    ಮೊಸರು ಫೇಸ್ ಪ್ಯಾಕ್

    ತಾಜಾ ಮೊಸರು - 3 ಟೀಸ್ಪೂನ್

    ಅರಿಶಿನ – ಅರ್ಧ ಟೀ ಸ್ಪೂನ್

    ಇದನ್ನೂ ಓದಿ: ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್ ಬೆಳವಣಿಗೆ ತಡೆಯುತ್ತೆ ಶುಂಠಿ-ಬೆಳ್ಳುಳ್ಳಿ

    ಮೊದಲು ತಾಜಾ ಮೊಸರು ಮತ್ತು ಅರಿಶಿನ ಬೆರೆಸಿ ಫೇಸ್ ಪ್ಯಾಕ್ ಮಾಡಿ. ಫೇಸ್ ಪ್ಯಾಕ್ ಅನ್ನು ಕುತ್ತಿಗೆ ಮತ್ತು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಬಿಡಿ. ಈಗ ಲಘುವಾಗಿ ಮಸಾಜ್ ಮಾಡಿ, ತಣ್ಣೀರಿನಿಂದ ಮುಖ ತೊಳೆಯಿರಿ. ನಂತರ ಮುಖ ಚೆನ್ನಾಗಿ ಒರೆಸಿ ಮಾಯಿಶ್ಚರೈಸರ್ ಅನ್ವಯಿಸಿ.
    Published by:renukadariyannavar
    First published: