Pimples: ಏನೇ ಮಾಡಿದ್ರೂ ಮುಖದಲ್ಲಿ ಮೊಡವೆಗಳು ಕಡಿಮೆ ಆಗ್ತಿಲ್ವಾ? ಒಮ್ಮೆ ಈ ಟಿಪ್ಸ್​ ಟ್ರೈ ಮಾಡಿ..!

ಕೈಗೆ ಸಿಕ್ಕಿದ್ದೆಲ್ಲಾ ಕ್ರೀಂಗಳನ್ನು ಹಚ್ಚುವ ಬದಲು ಅಡುಗೆ ಮನೆಯಲ್ಲೇ ಸಿಗುವ ಕೆಲವೊಂದು ಪದಾರ್ಥಗಳಿಂದ ನಮ್ಮ ಮುಖದಲ್ಲಿನ ಮೊಡವೆಗಳು ಮಾಯವಾಗಿ ಪಳಪಳನೆ ಹೊಳೆಯುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೆಲವರಿಗೆ ಎಷ್ಟೇ ಕ್ರೀಂ, ಫೇಸ್ ಪ್ಯಾಕ್(Cream, Face pack) ಬಳಸಿದರೂ ತ್ವಚೆ(Skin) ಎಣ್ಣೆಯುಕ್ತವಾಗಿರುತ್ತದೆ. ಜೊತೆಗೆ ಮೊಡವೆ(Pimples)ಗಳು ಹೆಚ್ಚಾಗಿರುತ್ತವೆ. ಅಂತಹವರು ಕೆಲವೊಂದು ಟಿಪ್ಸ್(Tips) ಪಾಲಿಸಿದರೆ ಅವರ ಮುಖ ಕಾಂತಿಯುತವಾಗುತ್ತದೆ. ಹಾಗೂ ಮೊಡವೆ ಕಲೆಗಳಿ(Pimple Marks)ಗೂ ಗುಡ್​ ಬೈ ಹೇಳಬಹುದು. ಕೈಗೆ ಸಿಕ್ಕಿದ್ದೆಲ್ಲಾ ಕ್ರೀಂ(Cream)ಗಳನ್ನು ಹಚ್ಚುವ ಬದಲು ಅಡುಗೆ ಮನೆಯಲ್ಲೇ ಸಿಗುವ ಕೆಲವೊಂದು ಪದಾರ್ಥಗಳಿಂದ ನಮ್ಮ ಮುಖದಲ್ಲಿನ ಮೊಡವೆಗಳು ಮಾಯವಾಗಿ ಪಳಪಳನೆ ಹೊಳೆಯುತ್ತದೆ. ಇನ್ನೂ ಕೆಲವರಿಗೆ ಟ್ಯಾನ್ ಸಮಸ್ಯೆಯೂ ಇರುತ್ತದೆ. ಇದಕ್ಕೆ ಮನೆಯಲ್ಲೇ ಮದ್ದು ಇದೆ. ಇಲ್ಲಿ ನಾವು ಹೇಳಿರುವ ಫೇಸ್​ ಪ್ಯಾಕ್​ಗಳನ್ನು ಟ್ರೈ ಮಾಡಿ.

ಮುಖಕ್ಕೆ ಗ್ರೀನ್ ಟೀ & ನಿಂಬೆ ರಸದ ಪ್ಯಾಕ್​ ಹಾಕಿ

ಎರಡು ಟೇಬಲ್​​ ಸ್ಪೂನ್​  ಗ್ರೀನ್​ ಟೀ, ಸ್ವಲ್ಪ ನಿಂಬೆ ರಸ ತೆಗೆದುಕೊಳ್ಳಿ. ಮೊದಲು ಒಂದು ಬಟ್ಟಲಿನಲ್ಲಿ 2 ಟೇಬಲ್ ಸ್ಪೂನ್​ ಗ್ರೀನ್​ ಟೀ ಹಾಕಿ. ನಂತರ ಅದಕ್ಕೆ ನಿಂಬೆ ರಸ ಸೇರಿಸಿ. ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಹತ್ತಿ ಉಂಡೆಯಿಂದ ಮುಖಕ್ಕೆ ಆ ಮಿಶ್ರಣವನ್ನು ಹಚ್ಚಿರಿ. 15 ರಿಂದ 20 ನಿಮಿಷಗಳ ಕಾಲ ಬಿಡಿ, ನಂತರ ನಿಮ್ಮ ಮುಖವನ್ನು ಚೆನ್ನಾಗಿ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ಈ ಮಿಶ್ರಣವನ್ನು ದಿನಕ್ಕೆ ಮೂರು ಬಾರಿ ಬಳಸಿ ನೋಡಿ. ಮೊಡವೆ ಕಲೆಗಳು ಹೋಗುತ್ತವೆ.

ಇದನ್ನೂ ಓದಿ:Health Tips: ಹೆಚ್ಚು ನೀರು ಕುಡಿಯುವುದರಿಂದಲೂ ಜೀವಕ್ಕೆ ಅಪಾಯ..!

ಟೊಮ್ಯಾಟೋ ಮತ್ತು ಜೇನುತುಪ್ಪದ ಫೇಸ್​ ಪ್ಯಾಕ್

ಟೊಮೆಟೊದಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಚರ್ಮದ ಬಣ್ಣವನ್ನು ಸುಧಾರಿಸಲು ಟೊಮೆಟೊ ಒಳ್ಳೆಯದು. ಇದನ್ನು ಬಳಸುವುದರಿಂದ ಮುಖದ ಮೇಲಿನ ಕಲೆಗಳು ಮತ್ತು ಮೊಡವೆಗಳಂತಹ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಇದಕ್ಕಾಗಿ ಕೆಲವು ಪ್ಯಾಕ್‌ಗಳನ್ನು ಬಳಸಬಹುದು.

ಮೊದಲು ಎರಡು ಚಮಚ ಟೊಮೆಟೊ ಪೇಸ್ಟ್ ತೆಗೆದುಕೊಳ್ಳಿ, ಅದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ. ಮೊದಲು ಮುಖ ಮತ್ತು ಕುತ್ತಿಗೆಯನ್ನು ಸ್ವಚ್ಛಗೊಳಿಸಿ. ಬಳಿಕ ಟೊಮೊಟೊ ಮತ್ತು ಜೇನುತುಪ್ಪದ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಈ ಪ್ಯಾಕ್ ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಚರ್ಮಕ್ಕೆ ಸಾಕಷ್ಟು ತೇವಾಂಶ ಸಿಗುತ್ತದೆ.

ಇದನ್ನೂ ಓದಿ:Baby Skin Care Tips: ನವಜಾತ ಮಗುವಿನ ತ್ವಚೆಯ ರಕ್ಷಣೆಗೆ ಈ ಟಿಪ್ಸ್​ ಫಾಲೋ ಮಾಡಿ

ನೈಸರ್ಗಿಕ ಪರಿಹಾರ

ಟೊಮೆಟೊ ಪೇಸ್ಟ್‌ಗೆ ಏನನ್ನೂ ಸೇರಿಸದೆ ಮುಖ ಮತ್ತು ಕುತ್ತಿಗೆಗೆ ಮಾತ್ರ ಹಚ್ಚಬಹುದು. ಇದು ನೈಸರ್ಗಿಕ ಪರಿಹಾರವಾಗಿದೆ. ಆದ್ದರಿಂದ ಇದನ್ನು ಯಾವಾಗ ಬೇಕಾದರೂ ಪ್ರಯತ್ನಿಸಬಹುದು. ಇದು ಯಾವುದೇ ಅಡ್ಡ ಪರಿಣಾಮಗಳನ್ನು ಬೀರಲ್ಲ. ಈ ರೀತಿ ಮಾಡುವುದರಿಂದ ಕಲೆಗಳು ಕಡಿಮೆಯಾಗುವುದು ಮಾತ್ರವಲ್ಲದೆ ಮೊಡವೆಗಳೂ ಕಡಿಮೆಯಾಗುತ್ತವೆ.
Published by:Latha CG
First published: