Pigmentation: ಮುಖದ ಮೇಲೆ ಬಂಗು ಬಂದರೆ ಈ ರೀತಿ ಮಾಡಿ ಸಾಕು..! ಆ ಕಪ್ಪು ಕಲೆಗಳಿಗೆ ಮನೆಯಲ್ಲೇ ಇದೆ ಪರಿಹಾರ

ನಮ್ಮ ಚರ್ಮದಲ್ಲಿ ಮೆಲನಿನ್ ಉತ್ಪಾದನೆ ಹೆಚ್ಚಾದಂತೆಲ್ಲಾ ಈ ಕಲೆಗಳು ಕೆನ್ನೆ, ಹಣೆ, ಮೂಗಿನ ಮೇಲೆ ಮೂಡಲಾರಂಭಿಸುತ್ತವೆ. ಈ ಹೈಪರ್ ಪಿಗ್​ಮೆಂಟೇಶನ್​ ಅಥವಾ ಬಂಗಿಗೆ ಹಲವಾರು ಕಾರಣಗಳಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮುಖದ ಮೇಲೆ ಬಂಗು(Hyper Pigmentation) ಬಂದರೆ ಎಂತಹವರಿಗೂ ಕಿರಿಕಿರಿ ಎನಿಸುತ್ತೆ. ಈ ಬಂಗು ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಇದಕ್ಕೆ ಹೈಪರ್​ ಪಿಗ್​ಮೆಂಟೇಶನ್(Hyper Pigmentation)​ ಎಂದು ಕರೆಯುತ್ತಾರೆ. ಮಹಿಳೆಯರ(Women) ಸುಂದರ ಮುಖದಲ್ಲಿ ಬಯಸದೆ ಬರುವ ಅತಿಥಿ ಈ ಬಂಗು ಎಂದರೆ ತಪ್ಪಾಗಲಾರದು. ನಮ್ಮ ಚರ್ಮದಲ್ಲಿ ಮೆಲನಿನ್ ಉತ್ಪಾದನೆ ಹೆಚ್ಚಾದಂತೆಲ್ಲಾ ಈ ಕಲೆಗಳು ಕೆನ್ನೆ, ಹಣೆ, ಮೂಗಿನ ಮೇಲೆ ಮೂಡಲಾರಂಭಿಸುತ್ತವೆ. ಈ ಹೈಪರ್ ಪಿಗ್​ಮೆಂಟೇಶನ್​ ಅಥವಾ ಬಂಗಿಗೆ ಹಲವಾರು ಕಾರಣಗಳಿವೆ. ಸುಡುವ ಸೂರ್ಯನ ಬಿಸಿಲಿ(Sun rays)ಗೆ ಸತತವಾಗಿ ಚರ್ಮ(Skin)ವನ್ನು ಒಡ್ಡುವುದು. ಅನುವಂಶೀಯತೆ(Heredity), ಹಾರ್ಮೋನಲ್ ಬದಲಾವಣೆಗಳು(Hormonal Changes) ಮುಖದ ಮೇಲೆ ಬಂಗು ಬರಲು ಕಾರಣವಾಗುತ್ತವೆ.

  ಮಹಿಳೆಯರು ತಮ್ಮ ಸೌಂದರ್ಯದ ಕುರಿತಾಗಿ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ. ಮುಖದಲ್ಲಿ ಏನಾದರೂ ಒಂದು ಸಮಸ್ಯೆ ಉಂಟಾದರೆ ತಕ್ಷಣ ಬ್ಯೂಟಿ ಪಾರ್ಲರ್ ಗೆ ಓಡುತ್ತಾರೆ. ಇಲ್ಲವೇ ಯಾವುದಾದರೂ ಜಾಹಿರಾತನ್ನು ನೋಡಿ ಅದನ್ನು ತಮ್ಮ ಮುಖದ ಮೇಲೆ ಪ್ರಯೋಗ ಮಾಡಿಕೊಳ್ಳುತ್ತಾರೆ. ಇದರಿಂದ ಹಲವಾರು ತೊಂದರೆಗಳಿಗೆ ಒಳಗಾಗುವುದನ್ನು ನಾವು ನೋಡಿರುತ್ತೇವೆ. ಹೀಗಾಗಿ ಮನೆಯಲ್ಲಿಯೇ ಈ ಬಂಗಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.

  ಮನೆಯಲ್ಲಿ ಪಿಗ್​​ಮೆಂಟೇಶನ್​ ಚಿಕಿತ್ಸೆಗಾಗಿ ಕೆಲವು ವಿಧಾನಗಳು ಇಲ್ಲಿವೆ.

  ಆಪಲ್ ಸೈಡರ್ ವಿನೆಗರ್

  ಆಪಲ್ ಸೈಡರ್ ವಿನೆಗರ್ ಬೀಟಾ ಕೆರೋಟಿನ್​ನ್ನು ಹೊಂದಿದೆ. ಇದು ನಿಮ್ಮ ಚರ್ಮದ ಮೇಲಿನ ಪಿಗ್​​ಮೆಂಟೇಶನ್​​ನನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಚಮಚ ಆಪಲ್​ ಸೈಡರ್ ವಿನೆಗರ್​​ನ್ನು 2 ಚಮಚ ನೀರಿನೊಂದಿಗೆ ಬೆರೆಸಿ ಕಪ್ಪು ಕಲೆಗಳಿರುವ ಜಾಗಕ್ಕೆ ಈ ಮಿಶ್ರಣವನ್ನು ಹಚ್ಚಿ, 5 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ದಿನಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಬಂಗಿನ ಸಮಸ್ಯೆ ಕಡಿಮೆಯಾಗುತ್ತದೆ.

  ಇದನ್ನೂ ಓದಿ:Pimples: ಏನೇ ಮಾಡಿದ್ರೂ ಮುಖದಲ್ಲಿ ಮೊಡವೆಗಳು ಕಡಿಮೆ ಆಗ್ತಿಲ್ವಾ? ಒಮ್ಮೆ ಈ ಟಿಪ್ಸ್​ ಟ್ರೈ ಮಾಡಿ..!

  ಅಲೋವೇರಾ:

  ಅಲೋವೇರಾ ಮುಖದ ಸೌಂದರ್ಯವನ್ನು ಹೆಚ್ಚಿಸುವ ನೈಸರ್ಗಿಕ ಮದ್ದು. ಇದರಲ್ಲಿ ಅಲೋಯಿನ್ ಅಂಶ ಇದೆ. ಬಂಗಿನ ಸಮಸ್ಯೆ ಇರುವವರು ಈ ಅಲೋವೇರಾವನ್ನು ಮುಖಕ್ಕೆ ಹಚ್ಚುವುದರಿಂದ ಕಲೆಯ ಸಮಸ್ಯೆ ಮಾಯವಾಗುತ್ತದೆ. 2012ರ ಅಧ್ಯಯನದ ಪ್ರಕಾರ, healthline.comನಲ್ಲಿ ಉಲ್ಲೇಖಿಸಲಾದ ವರದಿಯಲ್ಲಿ ಅಲೋವೇರಾ ಹೈಪರ್​ ಪಿಗ್​ಮೆಂಟೇಶನ್​​ಗೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ ಎಂದು ಹೇಳಿದೆ. ಮಲಗುವ ಮುನ್ನ ಶುದ್ಧವಾದ ಅಲೋವೇರಾ ಜೆಲ್​​ನ್ನು ಕಲೆಗಳಿರುವ ಭಾಗಕ್ಕೆ ಹಚ್ಚಿ. ಬೆಳಗ್ಗೆ ಬೆಚ್ಚಗಿನ ನೀರಿನಿಂದ ತೊಳೆಯಿರಿ. ನಿಮ್ಮ ಚರ್ಮದ ಬಣ್ಣ ಸುಧಾರಿಸುವವರೆಗೆ ಪ್ರತಿದಿನ ಹೀಗೆ ಮಾಡಿ.

  ಕೆಂಪು ಈರುಳ್ಳಿ:

  ವಿಟಮಿನ್ ಸಿ ಹೆಚ್ಚಾಗಿರುವ ಆ್ಯಂಟಿ ಆಕ್ಸಿಡೆಂಟ್​ಗಳಲ್ಲಿ ಒಂದಾದ ಕೆಂಪು ಈರುಳ್ಳಿ ಮುಖದ ಮೇಲಿನ ಬಂಗು ನಿವಾರಣೆಗೆ ಉತ್ತಮ ಮನೆ ಮದ್ದು. ಕೆಂಪು ಈರುಳ್ಳಿಯನ್ನು ಕತ್ತರಿಸಿ ಕಪ್ಪು ಕಲೆಗಳಿರುವ ಭಾಗಕ್ಕೆ ದಿನಕ್ಕೆ 2 ಬಾರಿಯಂತೆ ಹಚ್ಚುತ್ತಾ ಬಂದರೆ ಬಂಗಿನ ಸಮಸ್ಯೆ ದೂರವಾಗಿ, ಮುಖ ಕಾಂತಿಯುತವಾಗುತ್ತದೆ.

  ಗ್ರೀನ್​ ಟೀ:

  Healthline.com ನಲ್ಲಿ ಉಲ್ಲೇಖಿಸಲಾದ ಸಂಶೋಧನೆಯ ಪ್ರಕಾರ, ಗ್ರೀನ್​ ಟೀ ಪಿಗ್​​ಮೆಂಟೇಶನ್​​ ಸಮಸ್ಯೆಗೆ ರಾಮಬಾಣ. ಗ್ರೀನ್​ ಟೀ ಮುಖದ ಮೇಲಿನ ಕಪ್ಪು ಕಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನೀವು ಬಂಗಿನ ಸಮಸ್ಯೆ ಎದುರಿಸುತ್ತಿದ್ದರೆ, ಗ್ರೀನ್​ ಟೀ ಸಾರವನ್ನು ಮುಖಕ್ಕೆ ಹಚ್ಚಬಹುದು. 3-5 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಗ್ರೀನ್​ ಟೀ ಬ್ಯಾಗ್​ನ್ನು ಕರಗಿಸಿ. ನಂತರ ನೀರಿನಿಂದ ಟೀ ಬ್ಯಾಗ್​ನ್ನು ತೆಗೆದು, ಅದು ತಣ್ಣಗಾಗಲು ಬಿಡಿ. ಬಳಿಕ ಮುಖದ ಮೇಲೆ ಕಲೆಗಳಿರುವ ಜಾಗಕ್ಕೆ ಟೀ ಬ್ಯಾಗ್​ನ್ನು ಇಡಿ. ಪ್ರತಿದಿನ ಹೀಗೆ ಮಾಡುವುದರಿಂದ ಬಂಗು ಕಡಿಮೆಯಾಗುತ್ತದೆ.

  ಪರಂಗಿ ಹಣ್ಣು:

  ಪರಂಗಿ ಹಣ್ಣಿನಲ್ಲಿ ಪ್ಯಾಪೇನ್​ ಅಂಶವು ಯಥೇಚ್ಚವಾಗಿರುವುದರಿಂದ ಇದು ಪಿಗ್​ಮೆಂಟೇಶನ್ ನಿವಾರಣೆಗೆ ಉತ್ತಮ ಮನೆ ಮದ್ದಾಗಿದೆ. ತುರಿದ ಪಪ್ಪಾಯ ಹಣ್ಣಿನ ರಸವನ್ನು ಪ್ರತಿನಿತ್ಯ ಮುಖಕ್ಕೆ ಲೇಪಿಸಿ 10-15 ನಿಮಿಷಗಳ ಕಾಲ ಬಿಡಬೇಕು. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಪ್ರತಿದಿನ ಹೀಗೆ ಮಾಡುತ್ತಾ ಬಂದರೆ ಕಲೆರಹಿತ ಮುಖ ನಿಮ್ಮದಾಗುತ್ತದೆ.

  ಹಾಲು:

  ಹಾಲಿನಲ್ಲಿ ಲ್ಯಾಕ್ಟಿಕ್​ ಆಮ್ಲ ಇರುವುದರಿಂದ ಇದು ಪಿಗ್​ಮೆಂಟೇಶನ್​ನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಒಂದು ಬಟ್ಟಲಿಗೆ ಸ್ವಲ್ಪ ಹಾಲನ್ನು ಸುರಿದುಕೊಂಡು, ಹತ್ತಿಯ ಉಂಡೆಯನ್ನು ನೆನೆಸಿ. ದಿನಕ್ಕೆ 2 ಬಾರಿ ಹಾಲಿನಲ್ಲಿ ಮಿಂದ ಹತ್ತಿ ಉಂಡೆಯನ್ನು ಮುಖದ ಮೇಲಿನ ಕಪ್ಪು ಕಲೆಗಳಿರುವ ಜಾಗಕ್ಕೆ ಹಚ್ಚಿರಿ. ಪ್ರತಿದಿನ ಹೀಗೆ ಮಾಡುವುದರಿಂದ ಕಲೆಗಳು ದೂರಾಗುತ್ತವೆ.

  ಇದನ್ನೂ ಓದಿ: Health Tips: ಹೆಚ್ಚು ನೀರು ಕುಡಿಯುವುದರಿಂದಲೂ ಜೀವಕ್ಕೆ ಅಪಾಯ..!

  ಟೊಮೆಟೊ:

  Healthline.com ನಲ್ಲಿ ಉಲ್ಲೇಖಿಸಿದಂತೆ, ‘‘2011 ರಲ್ಲಿ ಬ್ರಿಟಿಷ್ ಜರ್ನಲ್ ಆಫ್ ಡರ್ಮಟಾಲಜಿ‘‘ಯಲ್ಲಿ ಪ್ರಕಟವಾದ ಅಧ್ಯಯನವು ಲೈಕೋಪೀನ್‌ನಲ್ಲಿ ಸಮೃದ್ಧವಾಗಿರುವ ಟೊಮೆಟೊ ಪೇಸ್ಟ್ ಚರ್ಮವನ್ನು ಫೋಟೊಡ್ಯಾಮೇಜ್‌ನ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಅಂಶಗಳಿಂದ ರಕ್ಷಿಸುತ್ತದೆ ಎಂದು ಕಂಡುಹಿಡಿದಿದೆ". ಅಧ್ಯಯನದಲ್ಲಿ ಭಾಗವಹಿಸಿದವರು 12 ವಾರಗಳ ಕಾಲ ಪ್ರತಿದಿನ ಆಲಿವ್ ಎಣ್ಣೆಯಲ್ಲಿ 55 ಗ್ರಾಂ ಟೊಮೆಟೊ ಪೇಸ್ಟ್ ಅನ್ನು ಸೇವಿಸಿದ್ದಾರೆ.

  ನಿಮ್ಮ ದೈನಂದಿನ ಆಹಾರದಲ್ಲಿ ಟೊಮೆಟೊವನ್ನು ಸೇರಿಸಬಹುದು. ಟೊಮೆಟೊದಿಂದ ಚರ್ಮವು ಹಗುರ ಮತ್ತು ಕಾಂತಿಯುತವಾಗುತ್ತದೆ. ಏಕೆಂದರೆ ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿದೆ.
  Published by:Latha CG
  First published: