Puberty And Girls: ಹೆಣ್ಣು ಮಕ್ಕಳಲ್ಲಿ ಅತೀ ಚಿಕ್ಕ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ದೈಹಿಕ ಬದಲಾವಣೆಗಳ ಬಗ್ಗೆ ತಜ್ಞರು ಹೇಳೋದೇನು?

ಹದಿಹರೆಯದಲ್ಲಿ ದೇಹದಲ್ಲಿ ಅನೇಕ ಅಂಗಗಳು ಬೆಳವಣಿಗೆ ಆಗುತ್ತವೆ. ಪ್ರೌಢಾವಸ್ಥೆಯಲ್ಲಿ ಹುಡುಗಿಯರಲ್ಲಿ ಸ್ತನ ಗಾತ್ರ ಹೆಚ್ಚುತ್ತದೆ. ಆದರೆ ಬದಲಾಗುತ್ತಿರುವ ಕಾಲಮಾನದಲ್ಲಿ ಹೆಣ್ಣುಮಕ್ಕಳಲ್ಲಿ ಅಕಾಲಿಕ ಪ್ರೌಢಾವಸ್ಥೆ ಪ್ರಕರಣಗಳು ಹೆಚ್ಚು ಕಂಡು ಬರುತ್ತಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪ್ರೌಢಾವಸ್ಥೆಯಲ್ಲಿ (Puberty) ಪ್ರಕೃತಿ ಹಾಗೂ ವಯೋಸಹಜವಾಗಿ (Naturally and Age) ಹುಡುಗರು (Boys) ಮತ್ತು ಹುಡುಗಿಯರಲ್ಲಿ (Girls) ದೈಹಿಕ ಬದಲಾವಣೆಗಳು (Physical Changes) ಆರಂಭವಾಗುತ್ತವೆ. ಇದನ್ನು ಹದಿಹರೆಯದ ಸಮಯ ಎಂದೂ ಕರೆಯುತ್ತಾರೆ. ಅಂದ ಹಾಗೇ, ಹದಿಹರೆಯದಲ್ಲಿ ದೇಹದಲ್ಲಿ ಅನೇಕ ಅಂಗಗಳು ಬೆಳವಣಿಗೆ ಆಗುತ್ತವೆ. ಮತ್ತು ಅನೇಕ ಬದಲಾವಣೆಗಳು ಸಹ ಗೋಚರಿಸುತ್ತವೆ. ಈ ಪ್ರಕ್ರಿಯೆಯು ಸಾಮಾನ್ಯವಾಗಿ ಹುಡುಗಿಯರಲ್ಲಿ 10 ರಿಂದ 14 ವರ್ಷ ವಯಸ್ಸಿನಲ್ಲಿ ಶುರು ಆಗುತ್ತವೆ. ಆದರೆ ಹುಡುಗರಲ್ಲಿ ಇದು 12 ರಿಂದ 16 ವರ್ಷ ವಯಸ್ಸಿನಲ್ಲಿ ಆರಂಭವಾಗುತ್ತದೆ. ಪ್ರೌಢಾವಸ್ಥೆಯಲ್ಲಿ ಹುಡುಗಿಯರು ಮತ್ತು ಹುಡುಗರಲ್ಲಿ ವಿಭಿನ್ನ ಬದಲಾವಣೆಗಳಾಗುವುದನ್ನೂ ಸಹ ಗಮನಿಸಬಹುದು.

    ಹೆಣ್ಣು ಮಕ್ಕಳಲ್ಲಿ ಅತೀ ಚಿಕ್ಕ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ದೈಹಿಕ ಬದಲಾವಣೆಗಳು

    ಪ್ರೌಢಾವಸ್ಥೆಯಲ್ಲಿ ಹುಡುಗಿಯರಲ್ಲಿ ಸ್ತನ ಗಾತ್ರ ಹೆಚ್ಚುತ್ತದೆ. ಆದರೆ ಬದಲಾಗುತ್ತಿರುವ ಕಾಲಮಾನದಲ್ಲಿ ಹೆಣ್ಣುಮಕ್ಕಳಲ್ಲಿ ಅಕಾಲಿಕ ಪ್ರೌಢಾವಸ್ಥೆ ಪ್ರಕರಣಗಳು ಹೆಚ್ಚು ಕಂಡು ಬರುತ್ತಿವೆ. ಇದರಿಂದಾಗಿ ಪಾಲಕರು ವೈದ್ಯರ ಬಳಿ ಹೋಗುತ್ತಾರೆ. ತನ್ನ ಮಗಳಿಗೆ ಕೇವಲ 7 ವರ್ಷ. ಅವಳು ಇನ್ನೂ ಗೊಂಬೆಗಳ ಜೊತೆ ಆಟವಾಡುತ್ತಾಳೆ ಎಂದು ಪೋಷಕರೊಬ್ಬರು ವೈದ್ಯರಿಗೆ ಹೇಳಿದ್ದಾರೆ. ಇನ್ನು ಈ ಚಿಕ್ಕ ವಯಸ್ಸಿನಲ್ಲಿ, ಮಗಳ ಸ್ತನ ಗಾತ್ರ ಹೆಚ್ಚುತ್ತಿದೆ.

    ಇದಕ್ಕೆ ಹಾಲು ಮತ್ತು ಮಾಂಸದಲ್ಲಿರುವ ಹಾರ್ಮೋನುಗಳು ಕಾರಣವೇ? ಅಥವಾ ಆಹಾರದಲ್ಲಿ ಇರುವ ಆ್ಯಂಟಿಬಯೋಟಿಕ್ಸ್ ಕಾರಣನಾ ಎಂದು ಪ್ರಶ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಮತ್ತೊಂದು ಪ್ರಕರಣದಲ್ಲಿ ತಮ್ಮ ಮಗಳಿಗೆ 8 ವರ್ಷ. ಈ ವಯಸ್ಸಿನಲ್ಲಿಯೇ ಪಿರಿಯಡ್ಸ್ ಬರಲು ಪ್ರಾರಂಭಿಸಿದೆ. ಇದಕ್ಕೆ ಕಾರಣವೇನು ಎಂದು ಮತ್ತೊಬ್ಬರು ಕೇಳಿದ್ದಾರೆ.

    ಇದನ್ನೂ ಓದಿ: ಶ್ವಾಸಕೋಶ ತೊಂದರೆ, ಉಸಿರಾಟ ಸಮಸ್ಯೆಗೆ ಮನೆಯಲ್ಲೇ ಹೀಗೆ ಪರಿಹಾರ ಮಾಡಿ!

    ಮಕ್ಕಳ ತಜ್ಞ ಮತ್ತು ಅಂತಃಸ್ರಾವಶಾಸ್ತ್ರಜ್ಞರು ಹೇಳಿರುವ ಪ್ರಕಾರ, ತುಂಬಾ ಚಿಕ್ಕ ವಯಸ್ಸಿನಲ್ಲಿ ಪ್ರೌಢಾವಸ್ಥೆಗೆ ಒಳಗಾಗುವ ಅನೇಕ ಹುಡುಗಿಯರು ಇದ್ದಾರೆ. ಹೀಗೆ ಅಕಾಲಿಕ ಪ್ರೌಢಾವಸ್ಥೆಗೆ ಒಳಗಾದ ಮಕ್ಕಳು ಭವಿಷ್ಯದಲ್ಲಿ ಖಿನ್ನತೆ, ಸ್ಥೂಲಕಾಯ, ತಿನ್ನುವ ಅಸ್ವಸ್ಥತೆ ಮತ್ತು ಕ್ಯಾನ್ಸರ್‌ ಸೇರಿದಂತೆ ಅನೇಕ ರೀತಿಯ ವೈದ್ಯಕೀಯ ಮತ್ತು ಮಾನಸಿಕ ಸಮಸ್ಯೆ ಎದುರಿಸುತ್ತಾರೆ ಎಂದು ಹೇಳಿದ್ದಾರೆ.

    ಪ್ರೌಢಾವಸ್ಥೆಯ ಸಂಕೇತಗಳು

    ಅನೇಕ ಜನರು ಋತುಚಕ್ರದ ಆರಂಭವನ್ನು ಪ್ರೌಢಾವಸ್ಥೆಯ ಆರಂಭ ಎಂದು ತಪ್ಪಾಗಿ ಭಾವಿಸುತ್ತಾರೆ. ಆದರೆ ಸ್ತನ ಮತ್ತು ಪ್ಯುಬಿಕ್ ಕೂದಲಿನ ಬೆಳವಣಿಗೆ (ಖಾಸಗಿ ಭಾಗದ ಬಳಿ ಕೂದಲು) ಪ್ರೌಢಾವಸ್ಥೆಯ ಮೊದಲ ಸಂಕೇತವಾಗಿದೆ. ಕಂಕುಳಿನ ವಾಸನೆ, ತೋಳುಗಳಲ್ಲಿ ಕೂದಲು, ಮೊಡವೆ ಮತ್ತು ಚಿತ್ತಸ್ಥಿತಿಯು ಪ್ರೌಢಾವಸ್ಥೆಯ ವೈದ್ಯಕೀಯ ಲಕ್ಷಣಗಳು ಅಲ್ಲದೇ ಹೋದರೂ ಅದರೊಂದಿಗೆ ಸಂಬಂಧ ಹೊಂದಿದೆ.

    ಹಿಂದಿನ ಕಾಲದಲ್ಲಿ ಎಂಟು ವರ್ಷಕ್ಕಿಂತ ಮೊದಲು ಪ್ರೌಢಾವಸ್ಥೆಯ ಚಿಹ್ನೆಗಳು ಕಾಣಿಸಿದರೆ ಅದು ಅಪರೂಪ ಎನ್ನಲಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ 15 ಪ್ರತಿಶತ ಹುಡುಗಿಯರು ಏಳು ವರ್ಷ ವಯಸ್ಸಿನಲ್ಲೇ ಸ್ತನದ ಗಾತ್ರ ಹೆಚ್ಚಾಗುವುದನ್ನು ಅನುಭವಿಸುತ್ತಿದ್ದಾರೆ. ಹತ್ತು ಪ್ರತಿಶತ ಹುಡುಗಿಯರು ಪ್ಯುಬಿಕ್ ಕೂದಲು ಹೊಂದುತ್ತಿದ್ದಾರೆ. ಎಂಟನೇ ವಯಸ್ಸಿಗೆ ಇಪ್ಪತ್ತೈದು ಪ್ರತಿಶತ ಹುಡುಗಿಯರ ಸ್ತನ ಗಾತ್ರವು ಹೆಚ್ಚಾಗುತ್ತದೆ. ಆದರೆ ಇಪ್ಪತ್ತು ಪ್ರತಿಶತ ಹುಡುಗಿಯರು ಪ್ಯುಬಿಕ್ ಕೂದಲು ಹೊಂದುತ್ತಾರೆ.

    ವಯಸ್ಸಿಗೂ ಮೊದಲೇ ಉಂಟಾಗುವ ಪ್ರೌಢಾವಸ್ಥೆಗೆ ಕಾರಣಗಳು

    ಮೌಂಟ್ ಸಿನೈ ಹಾಸ್ಪಿಟಲ್ ಮತ್ತು ಸಿನ್ಸಿನಾಟಿ ವಿಶ್ವವಿದ್ಯಾಲಯ ವೈದ್ಯಕೀಯ ಕೇಂದ್ರ ನಡೆಸಿದ ಅಧ್ಯಯನದಲ್ಲಿ ಪ್ರೌಢಾವಸ್ಥೆಯು ಆರಂಭವಾದಾಗ ಸ್ಥೂಲಕಾಯ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಕೊಬ್ಬು ಅತ್ಯಂತ ಸಕ್ರಿಯ ಹಾರ್ಮೋನ್ ಗ್ರಂಥಿ. ಕೊಬ್ಬಿನ ಕೋಶಗಳು ಇತರ ಹಾರ್ಮೋನುಗಳನ್ನು ಈಸ್ಟ್ರೊಜೆನ್ ಆಗಿ ಪರಿವರ್ತಿಸುತ್ತವೆ.

    ಹುಡುಗಿಯರಲ್ಲಿ ಹೆಚ್ಚಿನ ಕೊಬ್ಬಿನ ಅಂಗಾಂಶವು ಪ್ರೌಢಾವಸ್ಥೆಯ ಆರಂಭಿಕ ಲಕ್ಷಣವಾಗಿದೆ. ಸಂಶೋಧಕರ ಪ್ರಕಾರ, ಪ್ರೌಢಾವಸ್ಥೆಯ ಆರಂಭಿಕ ಆಕ್ರಮಣಕ್ಕೆ ಬೊಜ್ಜು ಮುಖ್ಯ ಕಾರಣ ಹೌದೋ, ಅಲ್ಲವೋ ಎಂಬುದು ತಿಳಿದಿಲ್ಲ. ಇದರ ಬಗ್ಗೆ ಅನೇಕ ಸಂಶೋಧನೆಗಳು ನಡೆದಿವೆ.

    ಒತ್ತಡ ಮತ್ತು ಪ್ರೌಢಾವಸ್ಥೆಯ ಆರಂಭಿಕ ಆರಂಭದ ನಡುವೆ ಲಿಂಕ್ ಇದೆ. ಕೌಟುಂಬಿಕ ಹಿಂಸಾಚಾರದಿಂದ ಬೆಳೆಯುವ ಹುಡುಗಿಯರು ವಯಸ್ಸಿಗಿಂತ ಮೊದಲೇ ತಮ್ಮ ಅವಧಿ ಹೊಂದುತ್ತಾರೆ. ಒತ್ತಡದಲ್ಲಿ ದೀರ್ಘಕಾಲ ಕಳೆದಾಗ, ಮೆದುಳು ಸಾಧ್ಯವಾದಷ್ಟು ಬೇಗ ಸಂತಾನೋತ್ಪತ್ತಿ ಪ್ರಾರಂಭಿಸುತ್ತದೆ. ಸಂತಾನೋತ್ಪತ್ತಿಗೆ ಕಾರಣವಾದ ಹಾರ್ಮೋನುಗಳು ಮೆದುಳಿನಲ್ಲಿ ಅಭಿವೃದ್ಧಿ ಹೊಂದುತ್ತವೆ. ಮತ್ತು ಈ ಹಾರ್ಮೋನುಗಳು ಆರಂಭಿಕ ಪ್ರೌಢಾವಸ್ಥೆಗೆ ಕಾರಣ.

    ಪ್ರೌಢಾವಸ್ಥೆಯಲ್ಲಿ ಹೆಣ್ಣುಮಕ್ಕಳ ಪೋಷಕರು ಈ ವಿಷಯಗಳ ಬಗ್ಗೆ ಕಾಳಜಿ ವಹಿಸಿ

    ನಿಮ್ಮ ಮಗಳು ಪ್ರೌಢಾವಸ್ಥೆಯ ಆರಂಭದ ಹಂತದಲ್ಲಿದ್ದರೆ ಆಕೆಯ ದೇಹದಲ್ಲಿ ಆಗುವ ಬದಲಾವಣೆಗಳ ಬಗ್ಗೆ ತಿಳಿಯಿರಿ. ಮುಕ್ತವಾಗಿ ಮಾತನಾಡಿ. ಬದಲಾವಣೆಯ ಬಗ್ಗೆ ತಿಳಿ ಹೇಳಿ. ತಮ್ಮ ದೈಹಿಕ ಬದಲಾವಣೆ ಸಹಜ ಎಂದು ಅರ್ಥೈಸಿ.

    ವಯಸ್ಸಿಗೆ ಅನುಸಾರವಾಗಿ ವರ್ತಿಸಿ. ನಿಮ್ಮ ಮಗಳ ಪ್ರೌಢಾವಸ್ಥೆ ಬೇಗನೆ ಪ್ರಾರಂಭವಾದರೂ, ಅವಳನ್ನು ವಯಸ್ಸಾಗಿದೆ ಎಂದು ಭಾವಿಸಿ, ಹಾಗೇ ನೋಡದಿರಿ. ಆ ವಯಸ್ಸಿನಲ್ಲಿ ಅವರನ್ನು ಚಿಕ್ಕವರಂತೆ ನೋಡಿ.

    ಇದನ್ನೂ ಓದಿ: ದೈನಂದಿನ ತ್ವಚೆಯ ಕಾಳಜಿ ಹೀಗಿರಲಿ! ಆಹಾರದಲ್ಲಿ ಇವುಗಳನ್ನು ಮಿಸ್ ಮಾಡಬೇಡಿ

    ಪ್ರೌಢಾವಸ್ಥೆಯ ಪ್ರಾರಂಭವು ಮಗಳು ಬೆಳೆದಿದ್ದಾಳೆಂದಲ್ಲ. ಹಾಗಾಗಿ ಅವಳ ವಯಸ್ಸಿಗೆ ಅನುಗುಣವಾಗಿ ಮಾತನಾಡಿ. ಬಟ್ಟೆ ಸೇರಿದಂತೆ ಇತರೆ ವಿಷಯದಲ್ಲಿ ಕಿರಿ ಕಿರಿ ಮಾಡದಿರಿ. ಆತ್ಮವಿಶ್ವಾಸ ಹೆಚ್ಚಿಸಿ. ನಿಮ್ಮ ಮಗಳ ಭಾವನಾತ್ಮಕ ಮತ್ತು ದೈಹಿಕ ಆರೋಗ್ಯದ ಮೇಲೆ ನಿಗಾ ಇರಿಸಿ. ಮಗಳೊಂದಿಗೆ ಹೆಚ್ಚಿನ ಸಮಯ ಕಳೆಯಿರಿ.
    Published by:renukadariyannavar
    First published: