Food Tips: ದೈಹಿಕ - ಮಾನಸಿಕ ಆರೋಗ್ಯಕ್ಕೆ ಆಯುರ್ವೇದ ಆಹಾರ ಪದ್ಧತಿ ಹೀಗಿದೆ

ವಾಸ್ತವದಲ್ಲಿ ಆಯುರ್ವೇದದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತೇಜಿಸಲು ಪೌಷ್ಟಿಕಾಂಶವು ಪ್ರಾಥಮಿಕ ವಿಧಾನವಾಗಿದೆ. ಅಂತಹ ಸ್ಥಿತಿಯಲ್ಲಿ ಆಯುರ್ವೇದ ತಜ್ಞರು ಆಹಾರಕ್ಕೆ ಸಂಬಂಧಿಸಿದ ಎಲ್ಲಾ ಸಣ್ಣ ಮತ್ತು ದೊಡ್ಡ ಆಯಾಮಗಳಿಗೆ ಸಂಬಂಧಪಟ್ಟಂತೆ ಕೆಲವು ನಿಯಮ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಆರೋಗ್ಯಕರ ಜೀವನ (Healthy Life) ನಡೆಸಲು ಅಥವಾ ಆರೋಗ್ಯಕರ ಜೀವನಶೈಲಿಗೆ (Lifestyle) ಆಹಾರ ಪದ್ಧತಿ (Food Plan) ತುಂಬಾ ಮುಖ್ಯ. ದಿನವೂ ನಾವು ಊಟ ಮಾಡುವ ವಿಚಾರದಲ್ಲಿ ಸಾಕಷ್ಟು ಕಾಳಜಿ (Care) ವಹಿಸಬೇಕು. ಬದುಕಲು ಆಹಾರ ಪದ್ಧತಿ ಬಹಳ ಮುಖ್ಯ. ಸಮತೋಲಿತ ಆಹಾರ ಮತ್ತು ಪೌಷ್ಟಿಕ ಆಹಾರ ಸೇವನೆ ಮಾಡುವುದು ಮಾತ್ರ ನಿಮ್ಮ ದೇಹವು ತನ್ನ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಶಕ್ತಿ ಪಡೆಯಲು ಸಹಾಯ ಮಾಡುತ್ತದೆ. ಹಳೆಯ ವೈದ್ಯಕೀಯ ವ್ಯವಸ್ಥೆಯಾದ ಆಯುರ್ವೇದವು ವ್ಯಕ್ತಿಯ ಆಹಾರ ಪದ್ಧತಿ ಹೇಗಿದ್ದರೆ ಆರೋಗ್ಯಕರ ಜೀವನಕ್ಕೆ ಸಹಕಾರಿ ಎಂಬುದನ್ನು ತಿಳಿಸಿದೆ. ಆಹಾರ ಸೇವನೆ ಮಾಡುವ ನಿಯಮ ಅಳವಡಿಸಿಕೊಳ್ಳಲು ಇದು ಸಲಹೆ ನೀಡುತ್ತದೆ.

    ದೈಹಿಕ ಮತ್ತು ಮಾನಸಿಕ ಆರೋಗ್ಯ

    ವಾಸ್ತವದಲ್ಲಿ ಆಯುರ್ವೇದದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತೇಜಿಸಲು ಪೌಷ್ಟಿಕಾಂಶವು ಪ್ರಾಥಮಿಕ ವಿಧಾನವಾಗಿದೆ. ಅಂತಹ ಸ್ಥಿತಿಯಲ್ಲಿ ಆಯುರ್ವೇದ ತಜ್ಞರು ಆಹಾರಕ್ಕೆ ಸಂಬಂಧಿಸಿದ ಎಲ್ಲಾ ಸಣ್ಣ ಮತ್ತು ದೊಡ್ಡ ಆಯಾಮಗಳಿಗೆ ಸಂಬಂಧಪಟ್ಟಂತೆ ಕೆಲವು ನಿಯಮ ಮಾಡಿದ್ದಾರೆ. ಅದು ನಿಮ್ಮ ಆಹಾರವನ್ನು ಔಷಧಿಯನ್ನಾಗಿ ಮಾಡಬಹುದು.

    ವೇದಾಮೃತ್ ಸಂಸ್ಥಾಪಕಿ ಮತ್ತು ಆಯುರ್ವೇದ ಎಂಡಿ ಡಾ ವೈಶಾಲಿ ಅವರು, ಇತ್ತೀಚೆಗೆ ಈ ನಿಯಮಗಳನ್ನು ಇನ್ಸ್ಟಾವನ್ನು ಪೋಸ್ಟ್ ಮೂಲಕ ತಿಳಿಸಿದ್ದಾರೆ. ಆಯುರ್ವೇದ ಆಹಾರಕ್ಕೆ ಸಂಬಂಧಿಸಿದ ಈ ಸರಳ ನಿಯಮಗಳನ್ನು ನೀವು ಸ್ಥಿರವಾಗಿ ಅನುಸರಿಸಿದರೆ, ನೀವು ದೀರ್ಘ ಕಾಲದವರೆಗೆ ರೋಗಗಳ ಹಿಡಿತದಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಮತ್ತು ಆರೋಗ್ಯಕರ ದೀರ್ಘಕಾಲ ಬದುಕಬಹುದು.

    ಇದನ್ನೂ ಓದಿ: ಆಗಾಗ ಶೀತ ಕಾಣಿಸಿಕೊಳ್ಳುತ್ತಿದ್ದರೆ ವಿಟಮಿನ್ ಸಿ ನಿಮ್ಮ ದೇಹ ಸೇರಲಿ

    ನಿಯಮ ಒಂದು: ನೀವು ಹಸಿವಾಗಿದ್ದಕ್ಕಿಂತ ಕಡಿಮೆ ತಿನ್ನಿರಿ

    ಆಹಾರವು ಚೆನ್ನಾಗಿ ಪೂರೈಸಲ್ಪಟ್ಟಿದೆ ಮತ್ತು ಜೀರ್ಣವಾಗುತ್ತದೆ ಎಂದು ತಿಳಿಯಲು ನಿಮ್ಮ ಹಸಿವಿಗಿಂತ ಸ್ವಲ್ಪ ಕಡಿಮೆ ತಿನ್ನುವುದು ಒಳ್ಳೆಯದು. ನಿಮ್ಮ ಹಸಿವಿನ 70 ರಿಂದ 80 ಪ್ರತಿಶತ ಆಹಾರ ಸೇವನೆ ಮಾಡುವುದು ಆರೋಗ್ಯ ಪ್ರಯೋಜನ ನೀಡುತ್ತದೆ. ನಿಮ್ಮ ಹೊಟ್ಟೆಯ 70% ತುಂಬಿರಬೇಕು. ಮತ್ತು 30% ಖಾಲಿಯಾಗಿರಬೇಕು ಎಂದು ಹೇಳುವ 70 ರಿಂದ 30 ನಿಯಮ ಯಾವಾಗಲೂ ಅನುಸರಿಸಿ.

    ನಿಯಮ ಎರಡು: ಭಾರೀ ಊಟ ಮಾಡುವುದು

    ಜೀರ್ಣಕಾರಿ ಬೆಂಕಿ ಮತ್ತು ಮಾನವ ದೇಹವು ಸೂರ್ಯನ ಚಲನೆ ಅನುಸರಿಸುತ್ತದೆ. ಹಾಗಾಗಿ ಮಧ್ಯಾಹ್ನದ ಊಟವು ದಿನದ ಅತ್ಯಂತ ಭಾರವಾದ ಊಟವಾಗಿರಬೇಕು. ಈ ಸಮಯದಲ್ಲಿ ನಿಮ್ಮ ದೇಹಕ್ಕೆ ಸಾಕಷ್ಟು ಶಕ್ತಿಗಾಗಿ ಹೆಚ್ಚು ಹೀರಿಕೊಳ್ಳುವ ಅಂಶಗಳು ಬೇಕಾಗುತ್ತವೆ. ಇದು ಮಧ್ಯಾಹ್ನ ಭಾರವಾದ ಆಹಾರ ಸೇವಿಸಲು ಆಯುರ್ವೇದವು ನಿಮಗೆ ಸಲಹೆ ನೀಡುತ್ತದೆ.

    ನಿಯಮ ಮೂರು : ತಡರಾತ್ರಿಯಲ್ಲಿ ತಿನ್ನಬೇಡಿ

    ತಡವಾಗಿ ಊಟ ಮಾಡುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿ ಬಿಟ್ಟಿದೆ. ಆದರೆ ಹೀಗೆ ಮಾಡುವುದು ನಿಮ್ಮ ಆರೋಗ್ಯ ಹಾಳು ಮಾಡುತ್ತದೆ. ಏಕೆಂದರೆ ನಿಮ್ಮ ದೇಹವು ರಾತ್ರಿ ವಿಶ್ರಾಂತಿ ಪಡೆಯಲು ಸಿದ್ಧವಾಗುತ್ತಿದ್ದಂತೆ, ನಮ್ಮ ಜೀರ್ಣಕ್ರಿಯೆಯ ಪ್ರಕ್ರಿಯೆಯು ನಿಧಾನಗೊಳ್ಳುತ್ತದೆ. ಇದು ನೀವು ಸೇವಿಸುವ ಕ್ಯಾಲೊರಿ ಕೊಬ್ಬಿನಂತೆ ಸಂಗ್ರಹಿಸುವ ಸಾಧ್ಯತೆ ಹೆಚ್ಚಿಸುತ್ತದೆ. ಹಾಗಾಗಿ ಮಲಗುವ ಮೊದಲು ಆಹಾರ ಸೇವನೆ ತಪ್ಪಿಸಿ. ಮಲಗುವ 3 ಗಂಟೆಗಳ ಮೊದಲು ಆಹಾರ ಸೇವಿಸುವುದು ಉತ್ತಮ.

    ನಿಯಮ ನಾಲ್ಕು: ತಾಜಾ ಆಹಾರ ಸೇವಿಸಿ

    ಆಯುರ್ವೇದದ ಪ್ರಕಾರ, ಆಹಾರವನ್ನು ಮತ್ತೆ ಬಿಸಿ ಮಾಡುವುದು ಸೂಕ್ತವಲ್ಲ. ಹಾಗಾಗಿ ಹಳೆಯ ಆಹಾರ ಸೇವನೆ ತಪ್ಪಿಸಿ. ಮತ್ತು ಆಹಾರವನ್ನು ಮತ್ತೆ ಮತ್ತೆ ಬಿಸಿ ಮಾಡುವುದನ್ನು ತಪ್ಪಿಸಿ. ಹಗಲಿನಲ್ಲಿ ತಯಾರಿಸಿದ ಆಹಾರ ರಾತ್ರಿ ತಿಂದರೂ ಉತ್ತಮ. ಆದರೆ ಫ್ರಿಡ್ಜ್ ನಲ್ಲಿಟ್ಟು ಮತ್ತೆ ಬಿಸಿ ಮಾಡಿದ ಆಹಾರ ನಿಮ್ಮ ಆರೋಗ್ಯ ಕೆಡಿಸುತ್ತದೆ.

    ಇದನ್ನೂ ಓದಿ: ಈ ಕೆಲವು ಚಟುವಟಿಕೆಗಳಿಂದ ಮಧುಮೇಹ ನಿಯಂತ್ರಿಸಿ!

    ನಿಯಮ ಐದು: ಆಹಾರ ಜೀರ್ಣವಾದ ನಂತರ ಮತ್ತೆ ಆಹಾರ ಸೇವಿಸಿ

    ನೀವು ಅಜೀರ್ಣ ಹೊಂದಿದ್ದರೆ ಉಪವಾಸ ಮಾಡುವುದು ಉತ್ತಮ. ಹಿಂದಿನ ಭೋಜನವು ಸಂಪೂರ್ಣವಾಗಿ ಜೀರ್ಣವಾಗದಿದ್ದರೆ ಮತ್ತು ನೀವು ಅದನ್ನು ಇನ್ನೂ ಸೇವಿಸುತ್ತಿದ್ದರೆ ದಯವಿಟ್ಟು ಊಟವನ್ನು ಬಿಟ್ಟು ಬಿಡಿ. ಒಣ ಶುಂಠಿಯೊಂದಿಗೆ ಬಿಸಿನೀರು ಕುಡಿಯಿರಿ. ಇದು ಊಟವನ್ನು ಜೀರ್ಣಿಸಿಕೊಳ್ಳಲು ಅವಕಾಶ ನೀಡುತ್ತದೆ.
    Published by:renukadariyannavar
    First published: