• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Child Care: ಮಕ್ಕಳ ಮೆದುಳು, ದೈಹಿಕ ಬೆಳವಣಿಗೆ ಉತ್ತಮವಾಗಿರಬೇಕಾದ್ರೆ ದೈಹಿಕ ಚಟುವಟಿಕೆಯಲ್ಲಿ ತೊಡಗಿಸುವುದು ಮರೆಯಬೇಡಿ..!

Child Care: ಮಕ್ಕಳ ಮೆದುಳು, ದೈಹಿಕ ಬೆಳವಣಿಗೆ ಉತ್ತಮವಾಗಿರಬೇಕಾದ್ರೆ ದೈಹಿಕ ಚಟುವಟಿಕೆಯಲ್ಲಿ ತೊಡಗಿಸುವುದು ಮರೆಯಬೇಡಿ..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Mental Health: ಸ್ಥೂಲಕಾಯದ ಮಕ್ಕಳ ಸಂಖ್ಯೆ ಆತಂಕಕಾರಿಯಾಗಿ ಹೆಚ್ಚಳ ಕಂಡಿದೆ. ಇದು ದೈಹಿಕ ಚಟುವಟಿಕೆಯ ಕೊರತೆ ಅಥವಾ ಅತಿಯಾಗಿ ತಿನ್ನುವುದರ ದ್ಯೋತಕವಾಗಿದೆ.

  • Share this:

physical activities: ಸೋಮಾರಿತನ, ದೈಹಿಕ ಚಟುವಟಿಕೆ, ವ್ಯಾಯಾಮ ಇಲ್ಲದಿರುವುದು ಅನೇಕ ರೋಗಗಳಿಗೆ ನಾವೇ ಆಹ್ವಾನ ಕೊಟ್ಟಂತಾಗುತ್ತದೆ. ಸ್ವಸ್ಥ ಆರೋಗ್ಯ ಬೇಕಾದರೆ ಕಡಿಮೆ ಎಂದರೂ ಅರ್ಧಗಂಟೆ ವ್ಯಾಯಾಮದಲ್ಲಿ ತೊಡಗುವಂತೆ, ದೇಹಕ್ಕೆ ಕೆಲಸ ಕೊಡುವಂತೆ ವೈದ್ಯರು ಸಲಹೆ ನೀಡುತ್ತಾರೆ. ವ್ಯಾಯಾಮದಲ್ಲಿ ಪ್ರತಿನಿತ್ಯ ತೊಡಗುವುದರಿಂದ ದಿನಪೂರ್ತಿ ನಾವು ಹೆಚ್ಚು ಉತ್ಸಾಹದಿಂದ ಕೆಲಸ ಕಾರ್ಯಗಳಲ್ಲಿ ತೊಡಗುವಂತೆ ಮಾಡುತ್ತದೆ. ಇದಕ್ಕೆ ಮಕ್ಕಳು, ದೊಡ್ಡವರು ಎಂಬ ಭೇದವಿಲ್ಲ. ದೈಹಿಕ ಚಟುವಟಿಕೆಯಿಂದ ದೂರ ಉಳಿದರೆ ಅಡ್ಡಪರಿಣಾಮಗಳಾಗುತ್ತದೆ. ದೊಡ್ಡವರಲ್ಲದೇ ಮಕ್ಕಳಲ್ಲೂ ಬೊಜ್ಜು ಮತ್ತು ಇತರ ಜೀವನಶೈಲಿಯ ಅಸ್ವಸ್ಥತೆಗಳ ಹೆಚ್ಚಳಕ್ಕೆ ಕಾರಣವಾಗಬಹುದು.


ಕಳೆದ ದಶಕದಲ್ಲಿ ಗಮನಿಸಿದಂತೆ, ಸ್ಥೂಲಕಾಯದ ಮಕ್ಕಳ ಸಂಖ್ಯೆ ಆತಂಕಕಾರಿಯಾಗಿ ಹೆಚ್ಚಳ ಕಂಡಿದೆ. ಇದು ದೈಹಿಕ ಚಟುವಟಿಕೆಯ ಕೊರತೆ ಅಥವಾ ಅತಿಯಾಗಿ ತಿನ್ನುವುದರ ದ್ಯೋತಕವಾಗಿದೆ. ಸ್ಥೂಲಕಾಯ ಮತ್ತು ಅಧಿಕ ತೂಕ, ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡಲು ಬಾಲ್ಯದಲ್ಲಿ ದೈಹಿಕ ಚಟುವಟಿಕೆಗಳು ನಿರ್ಣಾಯಕ ಪಾತ್ರ ವಹಿಸುತ್ತದೆ.


ದೈಹಿಕ ಚಟುವಟಿಕೆ ಮತ್ತು ಕ್ರೀಡೆಗಳು ವ್ಯಕ್ತಿಯನ್ನು ಆರೋಗ್ಯಕರವಾಗಿ ಸದೃಢವಾಗಿ ಇಡುತ್ತದೆ. ದೈಹಿಕ ಚಟುವಟಿಕೆಯ ತೀವ್ರ ಪರಿಣಾಮವೆಂದರೆ ಆತಂಕ ಕಡಿಮೆ ಮಾಡುವುದು, ನಿದ್ರೆ ಸುಧಾರಿಸುವುದು, ಅರಿವಿನ ಜಾಗರೂಕತೆ ಮತ್ತು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ನಿಯಮಿತವಾದ ದೈಹಿಕ ಚಟುವಟಿಕೆಯು ಆತಂಕ, ಆಳವಾದ ನಿದ್ರೆ, ಕಾರ್ಯಗಳನ್ನು ಯೋಜಿಸುವ, ಸಂಘಟಿಸುವ, ಪ್ರತಿಬಂಧಿಸುವ ಅಥವಾ ನಡವಳಿಕೆಗಳನ್ನು ಸುಗಮಗೊಳಿಸುವ ಮತ್ತು ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಪ್ರಕ್ರಿಯೆಯ ವೇಗ ಅಲ್ಲದೆ ಶೈಕ್ಷಣಿಕ ಕಾರ್ಯಕ್ಷಮತೆಯನ್ನೂ ಸುಧಾರಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: ಬೆಳಗಿನ ತಿಂಡಿಗೆ ಈ ಸಲಾಡ್​ಗಳ ಸೇವನೆ ಎಷ್ಟು ಆರೋಗ್ಯಕರ ಗೊತ್ತಾ?

6-17 ವರ್ಷ ವಯಸ್ಸಿನ ಮಕ್ಕಳು ಏರೋಬಿಕ್ ವ್ಯಾಯಾಮದಿಂದ ಹಿಡಿದು ಸ್ನಾಯು ಮತ್ತು ಮೂಳೆ ಬಲಪಡಿಸುವ ಚಟುವಟಿಕೆಗಳವರೆಗೆ ಪ್ರತಿದಿನ 60 ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಮಧ್ಯಮ ಮತ್ತು ಹುರುಪಿನ ತೀವ್ರತೆಯ ದೈಹಿಕ ಚಟುವಟಿಕೆ ಮಾಡುವ ಮೂಲಕ ಗಣನೀಯ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಓಟ, ಈಜು, ಕುಣಿತ, ಜಿಗಿತ, ಜಿಗಿಯುವ ಹಗ್ಗ, ಮತ್ತು ಬೈಸಿಕಲ್ ಇಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗುವುದರಿಂದ ದಿನಪೂರ್ತಿ ಉತ್ಸಾಹದಿಂದ ದಿನಕಳೆಯಬಹುದು.


ಮಕ್ಕಳು ಆನಂದಿಸಬಹುದಾದ, ಸ್ನಾಯುಗಳನ್ನು ಬಲಪಡಿಸುವ ಚಟುವಟಿಕೆಗಳು ಹೆಚ್ಚಾಗಿ ರಚನಾತ್ಮಕವಾಗಿರುವುದಿಲ್ಲ ಮತ್ತು ಆಟದ ಮೈದಾನದಲ್ಲಿ ಆಟವಾಡುವುದು, ಮರಗಳನ್ನು ಹತ್ತುವುದು ಮತ್ತು ಟಗ್-ಆಫ್-ವಾರ್, ರನ್ನಿಂಗ್, ಬ್ಯಾಸ್ಕೆಟ್ ಬಾಲ್, ಟೆನ್ನಿಸ್, ಜಂಪಿಂಗ್ ರೋಪ್ ಮತ್ತು ಹಾಪ್ಸ್ಕಾಚ್ ಮೂಳೆಗಳ ಬಲ ಮತ್ತು ಬೆಳವಣಿಗೆ ಹೆಚ್ಚಿಸುವ ಚಟುವಟಿಕೆಗಳಾಗಿವೆ.


ಮಕ್ಕಳು ಪ್ರತಿಯೊಂದು ರೀತಿಯ ಆಕಾರದ (ಸುತ್ತಿನಲ್ಲಿ, ಅಂಡಾಕಾರದಲ್ಲಿ, ಚೌಕಾಕಾರದಲ್ಲಿ, ತೆಳುವಾದ, ತಿರುಚಿದ, ಮತ್ತು ನೇರವಾಗಿ) ದೃಷ್ಟಿಗೋಚರ ಸ್ಮರಣೆ, ಸಾಂಕೇತಿಕ ಸ್ಮರಣೆ, ಭಾಷಾಶಾಸ್ತ್ರ, ಕೈನೆಸ್ಥೆಟಿಕ್ ಮತ್ತು ಪ್ರೋಪ್ರೊಸೆಪ್ಟಿವ್ ಗುಣಲಕ್ಷಣಗಳಿರುವ ದೈಹಿಕ ಕ್ರೀಡೆಗಳಲ್ಲಿ ಭಾಗಿಯಾಗಬೇಕಾಗುತ್ತದೆ. ಅಲ್ಲದೇ ಬ್ಯಾಟ್, ಚೆಂಡು, ಹಾಕಿ ಸ್ಟಿಕ್‍ ಮತ್ತು ರಾಕೆಟ್‍ಗಳಂತಹ ಕ್ರೀಡಾ ವಸ್ತುಗಳನ್ನು ಬಳಸುವಂತೆ ಮಾಡಬೇಕು. ಇವು ಮಕ್ಕಳನ್ನು ಭೌತಿಕವಾಗಿ ಬಲವಾಗಿಸುತ್ತದೆ ಮತ್ತು ವಿವಿಧ ಪರಿಕಲ್ಪನೆಗಳು ಹಾಗೂ ಕ್ರಿಯೆಗಳಿಗೆ ಒಡ್ಡಿಕೊಳ್ಳುವಂತೆ ಮಾಡುತ್ತದೆ.




ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.


 

top videos
    First published: