ಪಿಂಚಣಿ ನಿಧಿಯನ್ನು ಐಪಿಒಗಳಲ್ಲಿ ಹೂಡಿಕೆ ಮಾಡುವ ಅವಕಾಶ..! ಹೂಡಿಕೆ ನಿಯಮಗಳೇನು..?

ಪಿಎಫ್‌ಎಮ್‌ (PFM) ಗಳನ್ನು ಆಯ್ಕೆಮಾಡುವುದಕ್ಕಾಗಿ ಪಿಎಫ್‌ಆರ್‌ಡಿಎ (PFRDA) ಉನ್ನತ ಪರವಾನಗಿಗಳನ್ನು ಸಹ ಅನುಮತಿಸಿದೆ.

Photo: Google

Photo: Google

  • Share this:

ಇನ್ನು ಮುಂದೆ ಪಿಂಚಣಿ ನಿಧಿ ನಿರ್ವಹಣೆ ಮಾಡುವವರಿಗೆ (PFMs) ಪಿಂಚಣಿ ಹಣವನ್ನು ಬೇರೆ ಬೇರೆ ಕಂಪನಿಗಳ ಷೇರುಗಳಲ್ಲಿ ತೊಡಗಿಸಿಕೊಳ್ಳಲು ಆರಂಭಿಕ ಸಾರ್ವಜನಿಕ ಹೂಡಿಕೆ (IPOs) ಮೂಲಕವೂ ಅವಕಾಶ ದೊರೆಯಲಿದೆ. ಪಿಂಚಣಿ ನಿಧಿಗಳಲ್ಲಿ ಹಣ ತೊಡಗಿಸುವವರ ಸಂಖ್ಯೆಯನ್ನು ಒಂದು ಕೋಟಿಗೆ ಹೆಚ್ಚಿಸಬೇಕೆಂಬ ಗುರಿಯನ್ನು ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (PFRDA) ಹೊಂದಿದೆ. ಪಿಂಚಣಿ ಹಣವನ್ನು ಇದೀಗ ಅವಕಾಶವಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯ ಕಂಪೆನಿಗಳ ಷೇರುಗಳಲ್ಲಿ ತೊಡಗಿಸಬಹುದಾಗಿದೆ.


ಭಾರತದ ಪಿಂಚಣಿ ನಿಧಿಯನ್ನು ಆಯ್ದ ಸಾರ್ವಜನಿಕವಾಗಿ ಪಟ್ಟಿ ಮಾಡಲಾದ ಕಂಪನಿಗಳು ಮತ್ತು ಆರಂಭಿಕ ಸಾರ್ವಜನಿಕ ಕೊಡುಗೆಗಳಲ್ಲಿ ಹೂಡಿಕೆ ಮಾಡಲು ಶೀಘ್ರದಲ್ಲೇ ಅನುಮತಿಸಲಾಗುವುದು ಎಂದು ವಲಯ ನಿಯಂತ್ರಕ ತಿಳಿಸಿದೆ.


ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರದ (PFRDA) ಅಧ್ಯಕ್ಷರಾದ ಸುಪ್ರತಿಮ್ ವಂದ್ಯೋಪಾದ್ಯಾಯ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಾಂಕ್ರಾಮಿಕದ ಅವಧಿಯಲ್ಲಿ ಜನರಿಗೆ ಪಿಂಚಣಿ ಮೇಲೆ ಆಸಕ್ತಿ ಹೆಚ್ಚಾಗಿದೆ ಎಂದು ತಿಳಿಸಿದ್ದು, ಈ ಹೂಡಿಕೆಗಳು ಕೆಲವೊಂದು ನಿಯಮಗಳನ್ನು ಒಳಗೊಂಡಿವೆ ಎಂದು ತಿಳಿಸಿದ್ದಾರೆ. ನಾವು ಶೀಘ್ರದಲ್ಲಿಯೇ ಹೂಡಿಕೆ ನಿಯಮಗಳನ್ನು ಘೋಷಿಸಲಿದ್ದೇವೆ. ಸಾರ್ವಜನಿಕ ಹೂಡಿಕೆಯ ವಿಷಯಕ್ಕೆ ಬಂದಾಗ ನಾವು ಕೆಲವೊಂದು ನಿರ್ಬಂಧಗಳನ್ನು ಜಾರಿಗೊಳಿಸುವುದು ಕಡ್ಡಾಯವಾಗಿದೆ. ಪಿಂಚಣಿ ನಿರ್ಧಿ ನಿರ್ವಹಣೆ ಮಾಡುವವರು ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಕೊಡುಗೆಗಳಲ್ಲಿ ಮಾತ್ರವೇ ಹೂಡಿಕೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ. ಖಾಸಗಿ ವಲಯದ ಪಿಂಚಣಿ ನಿಧಿ ವ್ಯವಸ್ಥಾಪಕರಾಗಿ ಸೇರಿಸಬೇಕಾಗಿರುವ ಆ್ಯಕ್ಸಿಸ್ ಮ್ಯೂಚುವಲ್ ಫಂಡ್ ಆರ್‌ಬಿಐ ಅನುಮೋದನೆಗಾಗಿ ಕಾಯುತ್ತಿದೆ ಎಂದು ಸುಪ್ರತಿಮ್ ಹೇಳಿದರು.


ಇದನ್ನು ಓದಿ: ಪ್ರಾಥಮಿಕ ಶಾಲಾ ಮಕ್ಕಳು ಸೋಂಕನ್ನು ನಿಭಾಯಿಸುವಲ್ಲಿ ಜಾಣರು, ಶಾಲೆ ತೆರೆಯಿರಿ : ಐಸಿಎಂಆರ್ ವರದಿ

ಪಿಎಫ್‌ಎಮ್‌ (PFM) ಗಳನ್ನು ಆಯ್ಕೆಮಾಡುವುದಕ್ಕಾಗಿ ಪಿಎಫ್‌ಆರ್‌ಡಿಎ (PFRDA) ಉನ್ನತ ಪರವಾನಗಿಗಳನ್ನು ಸಹ ಅನುಮತಿಸಿದೆ. ನಿರ್ದಿಷ್ಟ ಸಂಖ್ಯೆಗಳನ್ನು ತಿಳಿಸದಿದ್ದರೂ ಪಿಂಚಣಿ ನಿಯಂತ್ರಕವು ಕೆಲವೊಂದು ಹೊಸ ಪಿಎಫ್‌ಎಮ್‌ಗಳನ್ನು ಆಯ್ಕೆಮಾಡಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.


ಜುಲೈ 10, 2021 ರ ಹೊತ್ತಿಗೆ, ಅಟಲ್ ಪಿಂಚಣಿ ಯೋಜನೆ ಮತ್ತು ಪ್ರಮುಖ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಒಳಗೊಂಡಂತೆ ನಿರ್ವಹಣೆಯಡಿಯಲ್ಲಿರುವ ಒಟ್ಟು ಆಸ್ತಿ 6.2 ಲಕ್ಷ ಕೋಟಿ ರೂ. ಆರ್ಥಿಕ ವರ್ಷ 2021 ರಲ್ಲಿ (AUM) ನಿರ್ವಹಣೆ ವ್ಯಾಪ್ತಿಯಲ್ಲಿರುವ ಸ್ವತ್ತು 5.78 ಲಕ್ಷ ಕೋಟಿ ರೂ ಆಗಿದೆ. ಈ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ನಿರೀಕ್ಷಿಸಲಾಗಿದ್ದು ಇವುಗಳಲ್ಲಿ ವ್ಯವಸ್ಥಿತ ವಾಪಸಾತಿ ಯೋಜನೆ (SWP) ಮತ್ತು ಕನಿಷ್ಠ ಖಾತ್ರಿಗೊಳಿಸಿದ ಆದಾಯ ಯೋಜನೆ ಕೂಡ ಸೇರಿವೆ.ಇನ್ನು ಪಿಂಚಣಿ ನಿಯಂತ್ರಕವು ಕಡಿಮೆ ಅಪಾಯ ಹೊಂದಿರುವ ಗ್ರಾಹಕರಿಗಾಗಿ ಕನಿಷ್ಠ ಖಾತ್ರಿಗೊಳಿಸಿದ ಆದಾಯ ಯೋಜನೆಯನ್ನು ರೂಪಿಸುತ್ತಿದೆ.


ಈಕ್ವಿಟಿಗಳಲ್ಲಿ ಹೂಡಿಕೆ ಮಾಡಬಹುದಾದ ಮೊತ್ತವನ್ನು ವಿನಿಯೋಗಿಸುವ ವಿಚಾರದಲ್ಲಿ ಪಿಎಫ್‌ಎಮ್‌ಗಳಿಗೆ ಕೆಲವು ನಿರ್ಬಂಧಗಳಿದ್ದು ಇದರಿಂದ ನಿಧಿ ನಿರ್ವಹಣೆ ಮಾಡುವವರಿಗೆ ಹೆಚ್ಚಿನ ಕಡೆಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುತ್ತಿಲ್ಲ.


ಪಿಎಫ್‌ಆರ್‌ಡಿಎ ನಿಯಂತ್ರಕ ಅಧಿಕಾರಗಳನ್ನು ಪಡೆದ ನಂತರ, ಅದು ಅವರ ಖಾತೆಗಳು ಮತ್ತು ದಾಖಲೆಗಳನ್ನು ಸಲ್ಲಿಸಲು ನಿವೃತ್ತಿ ಫಂಡ್‌ಗಳನ್ನು ಕೇಳುತ್ತದೆ ಮತ್ತು ಹಣಕಾಸು ಸಚಿವಾಲಯದ ಮಾರ್ಗಸೂಚಿಗಳನ್ನು ಗಮನಿಸಲಾಗಿದೆಯೇ ಎಂದು ಪರಿಶೀಲಿಸುತ್ತದೆ.


First published: