ನೀವು ಎಲ್ಲಾದರೂ ರಜೆಗೆ (Holiday) ಹೋಗುವಾಗ ನಿಮ್ಮ ಪುಟ್ಟ ಬೆಕ್ಕು, ನಾಯಿ ಅಥವಾ ಯಾವುದೇ ಸಾಕುಪ್ರಾಣಿಗಳನ್ನು (Pet) ಬಿಟ್ಟು ಹೋಗುವುದು ಎಷ್ಟು ನೋವನ್ನು ನೀಡುತ್ತದೆ ಎಂಬುದು ಹೇಳಲು ಅಸಾಧ್ಯ. ಅಲ್ಲದೇ ಕೆಲ ಅನಿವಾರ್ಯ ಸಂದರ್ಭದಲ್ಲಿ ಸಹ ನಿಮ್ಮ ಮುದ್ದಿನ ಸಾಕು ಪ್ರಾಣಿಯನ್ನು ಮನೆಯಲ್ಲಿ ಒಂದೇ ಬಿಟ್ಟು ಹೋಗುವುದು ಸುಲಭದ ಮಾತಲ್ಲ. ನಾವು ಈ ರೀತಿಯ ಸಂದರ್ಭ ಬಂದಾಗ ಸಾಮಾನ್ಯವಾಗಿ ಸ್ನೇಹಿತರ ಮನೆ ಅಥವಾ ಸಂಬಂಧಿಕರ ಮನೆಯನ್ನು ಹುಡುಕುತ್ತೇವೆ. ಆದರೆ ನಮ್ಮಿಂದ ಬೇರೆಯವರಿಗೆ ತೊಂದರೆ ಎಂಬ ಆಲೋಚನೆ ಬಂದಾಗ ನಾವು ಪೆಟ್ ಕೇರ್ ಸೆಂಟರ್ಗಳನ್ನು ಹುಡುಕುತ್ತೇವೆ. ಬೆಂಗಳೂರಿನಲ್ಲಿ (Bengaluru) ನಿಮ್ಮ ಮುದ್ದಿನ ಮಗುವನ್ನು ನೋಡಿಕೊಳ್ಳಲು ಸೂಕ್ತವಿರುವ ಕೆಲ ಸೆಂಟರ್ಗಳ (Pet Care Centers) ಲಿಸ್ಟ್ ಇಲ್ಲಿದೆ.
ಪೆಟ್ ಸ್ಟೆಪಿನ್, ರುಸ್ತಂ ಭಾಗ್
ನೀವು ದೀರ್ಘ ರಜೆಯ ಮೇಲೆ ನಿಮ್ಮ ಸಾಕುಪ್ರಾಣಿಯನ್ನು ದುಃಖದಿಂದ ಬಿಟ್ಟು ಹೋಗುತ್ತಿದ್ದರೆ ಅಥವಾ ಒಂದು ದಿನಕ್ಕಾಗಿ ಅವನನ್ನು ಅಥವಾ ಅವಳನ್ನು ನೋಡಿಕೊಳ್ಳಬೇಕಾಗಿದ್ದರೂ, ಈ ಸ್ಥಳವು ಸೂಕ್ತ ಎನ್ನಬಹುದು. ಇಲ್ಲಿ ನಿಮ್ಮ ಸಾಕು ಪ್ರಾಣಿಯನ್ನು ಮಕ್ಕಳಂತೆಯೇ ನೋಡಿಕೊಳ್ಳುತ್ತಾರೆ. ಯಾವುದೇ ಬೆಲ್ಟ್ ಹಾಕದೆ ನೋಡಿಕೊಳ್ಳಲಾಗುತ್ತದೆ. ಅಲ್ಲಿರುವಾಗ, ನಿಮ್ಮ ನಾಯಿ, ಬೆಕ್ಕು, ಮೊಲ ಮತ್ತು ಇತರ ಸಾಕು ಪ್ರಾಣಿಗಳಿಗೆ ಸ್ನಾನ ಮಾಡಿಸುವುದು, ಮಸಾಜ್ ನೀಡುವುದು ಎಲ್ಲಾ ಸೌಲಭ್ಯ ನೀಡಲಾಗುತ್ತದೆ.
ವಿಳಾಸ: #38, HAL ಹಳೆಯ ವಿಮಾನ ನಿಲ್ದಾಣ ರಸ್ತೆ, ಮಣಿಪಾಲ್ ಆಸ್ಪತ್ರೆಯ ಹಿಂದೆ, ರುಸ್ತಮ್ ಬಾಗ್ ಲೇಔಟ್, ಬೆಂಗಳೂರು, ಕರ್ನಾಟಕ 560017
ಸಮಯ: ಮಧ್ಯಾಹ್ನ 12 ಗಂಟೆಯಿಂದ ಸಂಜೆ 5ರ ವರೆಗೆ
ಮೊಬೈಲ್ ನಂಬರ್: 097422 79644
ಪೆಟ್ಸ್ಪೇಸ್, ಸರ್ಜಾಪುರ ರೋಡ್
ನಿಮ್ಮ ಪುಟ್ಟ ಫ್ರೆಂಡ್ ಅನ್ನು ಬಿಟ್ಟು ನೆಮ್ಮದಿಯಾಗಿ ಬಿಟ್ಟು, ಟ್ರಿಪ್ ಹೋಗಲು ಇದು ಬೆಸ್ಟ್ ಸ್ಥಳ. ಇಲ್ಲಿ ನಿಮ್ಮ ಕಂದಮ್ಮಗಳಿಗೆ ಮನೆಯಿಂದ ಬೇರೆ ಕಡೆ ಇದ್ದೇವೆ ಎಂಬ ಭಾವನೆ ಬರುವುದಿಲ್ಲ. ಇಲ್ಲಿ ಅವುಗಳಿಗೆ ಆಟವಾಡಲು ದೊಡ್ಡ ಸ್ಥಳವಿದ್ದು, ಸ್ವಚ್ಛಂದವಾಗಿ ಆಡವಾಡಬಹುದು. ಇಲ್ಲಿ ನೀವು ಪ್ರತಿದಿನ ಬೆಳಗ್ಗೆ ನಿಮ್ಮ ನಾಯಿ, ಬೆಕ್ಕನ್ನು ಬಿಟ್ಟು ಸಂಜೆ ಕರೆದುಕೊಂಡು ಹೋಗುವ ಸೌಲಭ್ಯವಿದೆ.
ವಿಳಾಸ: ಸೈ. ಸಂ. 123, ಮುಳ್ಳೂರು ರಸ್ತೆ, ಕೊಡತಿ ಗ್ರಾಮ, ವರ್ತೂರು ಹೋಬಳಿ, ಆಫ್, ಸರ್ಜಾಪುರ ರಸ್ತೆ, ಕೊಡತಿ ಬಳಿ, ಗೇಟ್, ಬೆಂಗಳೂರು, ಕರ್ನಾಟಕ 560087
ಸಮಯ: ಬೆಳಗ್ಗೆ 9 ಗಂಟೆಯಿಂದ ಸಂಜೆ 5
ಮೊಬೈಲ್ ನಂಬರ್: 099000 20364
ಪಾವ್ಸ್, ಯಲಹಂಕ
ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ, ನಿಮ್ಮ ಪುಟ್ಟ ಪ್ರಾಣಿಗೂ ಸಹ ಮೀ ಟೈಮ್ ಬೇಕಾಗುತ್ತದೆ. ನೀವು ಹೊರಗೆ ಹೋಗುವಾಗ ಇಲ್ಲಿ ಬಿಟ್ಟು ಹೋದರೆ ನಿಮಗೆ ಯಾವುದೇ ಚಿಂತೆ ಕಾಡುವುದಿಲ್ಲ. ಅವುಗಳು ಇಲ್ಲಿ ಇದ್ದಾಗ ಆರಾಮವಾಗಿ ಆಟ ಆಡಿಕೊಂಡು ಇರುತ್ತವೆ. ಇಲ್ಲಿ ಅವುಗಳಿಗೆ ಯಾವುದೇ ನಿಯಮಗಳಿಲ್ಲ, ಅಲ್ಲದೇ ಬೇರೆ ಪ್ರಾಣಿಗಳೊಂದಿಗೆ ಬೆರೆಯಲು ಸಹ ಸಹಾಯವಾಗುತ್ತದೆ.
ವಿಳಾಸ: 108/ಆವಲಹಳ್ಳಿ, ಪ್ರೆಸಿಡೆನ್ಸಿ ಶಾಲೆ ಎದುರು, ಯಲಹಂಕ, ಬೆಂಗಳೂರು, ಕರ್ನಾಟಕ.
ಮೊಬೈಲ್ ನಂಬರ್: 096200 73222
ಸಮಯ: ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆ
ಇದನ್ನೂ ಓದಿ: ಮೊಮೊ ಸವಿಯೋಕೆ ಬೆಂಗಳೂರಿನ ಈ ಜಾಗಗಳು ಬೆಸ್ಟ್, ಇಲ್ಲಿ ಟೇಸ್ಟ್ ಮಾಡಿದ್ರೆ ನೀವು ಬೇರೆ ಎಲ್ಲೂ ಹೋಗೋಕೆ ಚಾನ್ಸೇ ಇಲ್ಲ!
ಜೆರುಸ್ ಲೊವಿನ್ ವೆಕೇಶನ್ ಹೋಮ್ ಫಾರ್ ಪೆಟ್, ಹೆಚ್ಎಸ್ ಆರ್ ಲೇಔಟ್
ಸಾಕು ಪ್ರಾಣಿಗಳ ಜನ್ಮದಿನವನ್ನು ಆಚರಿಸುವುದರಿಂದ ಹಿಡಿದು, ಅವುಗಳನ್ನು ಪುಟ್ಟ ಮಕ್ಕಳಂತೆ ನೋಡಿಕೊಳ್ಳುವುದರ ವರೆಗೆ ಇಲ್ಲಿ ಎಲ್ಲಾ ರೀತಿಯ ಸೌಲಭ್ಯ ಇಲ್ಲಿ ಲಭ್ಯವಿದೆ. ನಾಯಿ, ಬೆಕ್ಕು, ಮೊಲ ಸೇರಿದಂತೆ ಎಲ್ಲಾ ಪ್ರಾಣಿಗಳನ್ನು ಇಲ್ಲಿ ನೋಡಿಕೊಳ್ಳಲಾಗುತ್ತದೆ. ಇನ್ನು ಇಲ್ಲಿ ಪ್ರಾಣಿಗಳನ್ನು ಕಟ್ಟಿ ಹಾಕಲಾಗುವುದಿಲ್ಲ. ಸ್ವತಂತ್ರವಾಗಿ ಬಿಡಲಾಗುತ್ತದೆ.
ವಿಳಾಸ: 15ನೇ ಮುಖ್ಯ ರಸ್ತೆ, 5ನೇ ಬ್ಲಾಕ್, HBR ಲೇಔಟ್ 4ನೇ ಬ್ಲಾಕ್, HBR ಲೇಔಟ್, ಬೆಂಗಳೂರು, ಕರ್ನಾಟಕ 560043
ಮೊಬೈಲ್ ನಂಬರ್: 099864 59353
ಸಮಯ: ಬೆಳಗ್ಗೆ 10 ಗಂಟಯಿಂದ ರಾತ್ರಿ 8 ಗಂಟೆ
ಬೆಂಜಿ ಪೆಟ್ ಸ್ಟೇ, ಮಾಗಡಿ ರೋಡ್
ಇದು ಕೂಡ ನಿಮ್ಮ ಸಾಕುಪ್ರಾಣಿಗಳನ್ನು ಬಿಡಲು ಉತ್ತಮ ಸ್ಥಳಗಳಲ್ಲಿ ಒಂದು. ನೀವು ಟ್ರಿಪ್ ಹೋಗುವಾಗ, ಕೆಲಸಕ್ಕೆ ಹೋಗುವಾಗ ನಿಮ್ಮ ಮಗುವನ್ನು ಬಿಟ್ಟು ಹೋಗಬಹುದು. ಇಲ್ಲಿ ನಿಮಗೆ ಎಲ್ಲಾ ರೀತಿಯ ಸೌಲಭ್ಯಗಳು ಲಭ್ಯವಿದ್ದು, ಚಿಂತೆಯಿಲ್ಲದೇ ಬಿಟ್ಟು ಹೋಗಬಹುದು.
ಇದನ್ನೂ ಓದಿ: ಬೆಂಗಳೂರಿನಲ್ಲಿ ರೇಷ್ಮೆ ಸೀರೆ ಎಲ್ಲಿ ಖರೀದಿ ಮಾಡೋದು ಅನ್ನೊ ಯೋಚ್ನೆ ಬಿಡಿ, ಈ ಅಂಗಡಿಗಳಿಗೆ ಹೋಗಿ
ವಿಳಾಸ: ತಾವರೆಕೆರೆ, ಮಾಗಡಿ ರೋಡ್, ಬೆಂಗಳೂರು
ಸಮಯ: ಬೆಳಗ್ಗೆ 10 ರಿಂದ ಸಂಜೆ 5
ಮೊಬೈಲ್ ನಂಬರ್: +919900844012
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ