Painful Legs: ಕಾಲುಗಳಲ್ಲಿ ನಿರಂತರ ಊತ ಇದ್ದರೆ ನಿರ್ಲಕ್ಷ್ಯ ಬೇಡ! ಈ ಕಾಯಿಲೆಯ ಲಕ್ಷಣವಿರಬಹುದು

36 ವರ್ಷದ ಥೆರೆಸಾ ಫ್ರೆಡನ್‌ಬರ್ಗ್ ಹಿಂಡ್ಸ್ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆ. ಅವರು ಬಾಲ್ಯದಿಂದಲೂ ತನ್ನ ಪಾದಗಳು ದಪ್ಪವಾಗುತ್ತಿವೆ ಎಂದು ಡಾಕ್ಟರಿಗೆ ತೋರಿಸಿದಾಗ, ಕಾಲುಗಳಲ್ಲಿ ಕೊಬ್ಬು ಸಂಗ್ರಹವಾಗಿದೆ ಎಂದಿದ್ದರು ವೈದ್ಯರು. ನಂತರ ಥೆರೆಸಾ ಈ ವಿಷಯವನ್ನು ನಿರ್ಲಕ್ಷಿಸಿದರು.

ಥೆರೆಸಾ ಫ್ರೆಡನ್‌ಬರ್ಗ್ ಹಿಂಡ್ಸ್

ಥೆರೆಸಾ ಫ್ರೆಡನ್‌ಬರ್ಗ್ ಹಿಂಡ್ಸ್

  • Share this:
    ತಪ್ಪು ಆಹಾರ ಪದ್ಧತಿ (Bad Food Habit), ಜಡ ಜೀವನಶೈಲಿ (Bad Lifestyle), ಹಾರ್ಮೋನ್ ಅಸಮತೋಲನದಿಂದ ಜನರು ಅನೇಕ ರೀತಿಯ ಆರೋಗ್ಯ ಸಮಸ್ಯೆಗೆ (Health Problem) ತುತ್ತಾಗುತ್ತಿದ್ದಾರೆ. ಕೆಲವು ಕಾಯಿಲೆಗಳು (Disease), ಅನಾರೋಗ್ಯ ಸಮಸ್ಯೆಗಳು ಬೇಗನೆ ವಾಸಿಯಾಗುತ್ತವೆ. 36ರ ಹರೆಯದ ಮಹಿಳೆಯೊಬ್ಬರು ಕಾಯಿಲೆಯಿಂದ ಬಳಲುತ್ತಿದ್ದಾರೆ. ಆಕೆಯ ದೇಹದ ಕೆಳಭಾಗದ ಗಾತ್ರ ಹೆಚ್ಚಾಗಿದೆ. ಇದರಿಂದ ಆಕೆಗೆ ನಡೆಯಲು ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ಈ ರೋಗವು ಹಲವು ಭಾಗಗಳಲ್ಲಿ ಕಂಡು ಬರುತ್ತದೆ. ಈ ರೋಗದ ಲಕ್ಷಣಗಳನ್ನು ನೀವು ಗಮನಿಸಿದರೆ ತಕ್ಷಣ ತಜ್ಞರನ್ನು ಸಂಪರ್ಕಿಸಿ. ಹಾಗಾದ್ರೆ ಕಾಯಿಲೆಗೆ ತುತ್ತಾಗಿರುವ ಮಹಿಳೆ ಯಾರು? ಕಾಯಿಲೆ ಯಾವುದು, ಲಕ್ಷಣಗಳು ಬಗ್ಗೆ ತಿಳಿಯೋಣ.

    ಯಾವುದು ಆ ಕಾಯಿಲೆ ?

    36 ವರ್ಷದ ಥೆರೆಸಾ ಫ್ರೆಡನ್‌ಬರ್ಗ್-ಹಿಂಡ್ಸ್ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆ. ಅವರು ಬಾಲ್ಯದಿಂದಲೂ ತನ್ನ ಪಾದಗಳು ದಪ್ಪವಾಗುತ್ತಿವೆ ಎಂದು ಡಾಕ್ಟರಿಗೆ ತೋರಿಸಿದಾಗ, ಕಾಲುಗಳಲ್ಲಿ ಕೊಬ್ಬು ಸಂಗ್ರಹವಾಗಿದೆ ಎಂದಿದ್ದರು ವೈದ್ಯರು. ನಂತರ ಥೆರೆಸಾ ಈ ವಿಷಯವನ್ನು ನಿರ್ಲಕ್ಷಿಸಿದರು. ಆದರೆ ಕಾಲಾನಂತರದಲ್ಲಿ ಅವರ ಪಾದದ ಗಾತ್ರವು ಮತ್ತಷ್ಟು ಹೆಚ್ಚಾಯಿತು.

    ಪಾದದ ಗಾತ್ರ ಹೆಚ್ಚಾಗಿದ್ದರಿಂದ ನಡೆಯುವಾಗ ತೊಂದರೆ ಉಂಟಾಗುತ್ತಿತ್ತು. ಒಮ್ಮೆ ಥೆರೆಸಾ ಸ್ಟಾಕಿಂಗ್ಸ್ ಪಡೆಯಲು ಅಂಗಡಿಗೆ ಹೋದಾಗ, ಅಂಗಡಿಯವನು ಅವಳ ಅನಾರೋಗ್ಯವನ್ನು ತಕ್ಷಣವೇ ಗುರುತಿಸಿದನು. ಅಂಗಡಿಯವನು ನಿಮಗೆ ಲಿಂಫೋಡೆಮಾ ಕಾಯಿಲೆ ಉಂಟಾಗಿದೆ ಎಂದಿದ್ದನು. ನಂತರ ಥೆರೆಸಾ ವೈದ್ಯರ ಬಳಿ ಹೋದಾಗ ಲಿಪೊ-ಲಿಂಫೋಡೆಮಾ ಇರುವ ವಿಷಯ ವರದಿಯಲ್ಲಿ ಗೊತ್ತಾಗಿದೆ.

    ಇದನ್ನೂ ಓದಿ: ಜೋಳದಲ್ಲೂ ಇದೆ ಔಷಧೀಯ ಗುಣ, ಈ ಖಾಯಿಲೆಗಳಿಗೆ ಇದೇ ರಾಮಬಾಣ!

    ಹಾರ್ಮೋನ್ ಅಸಮತೋಲನದಿಂದ ಉಂಟಾಗುತ್ತದೆ ಲಿಂಪೋಡೆಮಾ

    ಲಿಂಪೊಡೆಮಾ ಹಾರ್ಮೋನ್ ಅಸಮತೋಲನದಿಂದ ಉಂಟಾಗುತ್ತದೆ. ವ್ಯಕ್ತಿಯ ಕಾಲುಗಳಲ್ಲಿ ಮತ್ತು ಕೆಲವೊಮ್ಮೆ ಕೈಗಳಲ್ಲಿ ಬಾವು ಬರುವುದು ನೋವು ತುಂಬಾ ತೀವ್ರವಾಗಿರುತ್ತದೆ. ಕೊಬ್ಬು ಸಂಗ್ರಹವಾಗುತ್ತದೆ. ಈ ಸಮಸ್ಯೆಯು ಮಹಿಳೆಯರಲ್ಲಿ ಸಾಕಷ್ಟು ಸಾಮಾನ್ಯವಾಗಿದೆ. ಲಿಂಪೋಡೆಮಾ ಲಕ್ಷಣಗಳು ಮೊದಲು ಕಾಲುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಕಾಲುಗಳ ಗಾತ್ರವು ಹೆಚ್ಚಾಗುತ್ತದೆ.

    ಲಿಂಫೆಡೆಮಾ ಮತ್ತು ಲಿಪಿಡೆಮಾ ಎಂದರೇನು?

    lymphedemasurgeon.com ಪ್ರಕಾರ, ಲಿಂಫೆಡೆಮಾ ಮತ್ತು ಲಿಪಿಡೆಮಾ ಎರಡು ವಿಭಿನ್ನ ವೈದ್ಯಕೀಯ ಅಸ್ವಸ್ಥತೆಗಳು. ಲಿಪಿಡೆಮಾವನ್ನು ಲಿಪೊಡೆಮಾ ಎಂದೂ ಕರೆಯುತ್ತಾರೆ. ಲಿಂಫೆಡೆಮಾ ಮತ್ತು ಲಿಪಿಡೆಮಾ ಅಸ್ವಸ್ಥತೆಗಳು ಎರಡೂ ಕೈಗಳು ಮತ್ತು ಪಾದಗಳಲ್ಲಿ ಊತ ಉಂಟು ಮಾಡುತ್ತವೆ. ಲಿಂಫೆಡೆಮಾದಲ್ಲಿ ತೋಳುಗಳು ಅಥವಾ ಕಾಲುಗಳಲ್ಲಿ ದ್ರವದ ಶೇಖರಣೆಯಿಂದ ಉಂಟಾಗುವ ದುಗ್ಧರಸ ವ್ಯವಸ್ಥೆಯ ಅಸ್ವಸ್ಥತೆಯಾಗಿದೆ. ಲಿಂಫೆಡೆಮಾದಲ್ಲಿ, ದೇಹದ ಕೈ ಮತ್ತು ಕಾಲುಗಳ ಅಂಗಾಂಶಗಳಲ್ಲಿ ಊತವಿರುತ್ತದೆ. ಇದು ಪ್ರಾಥಮಿಕ ಲಿಂಫೆಡೆಮಾ ಮತ್ತು ಸೆಕೆಂಡರಿ ಲಿಂಫೆಡೆಮಾ ಎಂದು ಎರಡು ವಿಧವಾಗಿದೆ.

    ಪ್ರಾಥಮಿಕ ಲಿಂಫೆಡೆಮಾವು 6,000 ಜನರಲ್ಲಿ ಒಬ್ಬರಲ್ಲಿ ಕಂಡು ಬರುತ್ತದೆ ಮತ್ತು ಸೆಕೆಂಡರಿ ಲಿಂಫೆಡೆಮಾವು ಸೋಂಕು, ಗಾಯ ಮತ್ತು ಕ್ಯಾನ್ಸರ್‌ನಂತಹ ಇತರ ಆರೋಗ್ಯ ಸಮಸ್ಯೆಗಳಿಂದ ಉಂಟಾಗುತ್ತದೆ. aerosmedical.com ಪ್ರಕಾರ, ಲಿಂಫೋಡೆಮಾವು ಮಿಲಿಯನ್‌ನಲ್ಲಿ ಒಬ್ಬ ವ್ಯಕ್ತಿಯಲ್ಲಿ ಕಂಡುಬರುತ್ತದೆ ಮತ್ತು ಲಿಪೊಡೆಮಾ ಪ್ರಪಂಚದ ಮೇಲೆ ಪರಿಣಾಮ ಬೀರುತ್ತದೆ. 11 ಪ್ರತಿಶತ ಮಹಿಳೆಯರು ಬಲಿಪಶುಗಳಾಗಿದ್ದಾರೆ.

    ಲಿಪಿಡೆಮಾ ಅಸ್ವಸ್ಥತೆಯಲ್ಲಿ, ಚರ್ಮದ ಅಡಿಯಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಕಾಲುಗಳ ಗಾತ್ರವು ಅಸಹಜವಾಗಿ ಹೆಚ್ಚಾತ್ತದೆ. ತೊಡೆ ಮತ್ತು ಸೊಂಟದಲ್ಲಿ ಕೊಬ್ಬು ಶೇಖರಗೊಳ್ಳತ್ತದೆ. ಅನೇಕ ಬಾರಿ ಕೊಬ್ಬು ತುಂಬಾ ಹೆಚ್ಚಾಗುತ್ತದೆ.

    ಲಿಂಫೆಡೆಮಾ ಮತ್ತು ಲಿಪಿಡೆಮಾದ ಲಕ್ಷಣಗಳು

    ಲಿಂಫೆಡೆಮಾವು ಕಾಲು ಅಥವಾ ಕೈಯ , ಪಾದಗಳು ಮತ್ತು ಕೈಗಳ ಮೇಲೆ ಪರಿಣಾಮ ಬೀರಬಹುದು. ಲಿಂಫೆಡೆಮಾದ ಲಕ್ಷಣಗಳು ಕಾಲಿನಲ್ಲಿ ಊತ, ಒಂದು ಕೈಯಲ್ಲಿ ಊತ, ಪೀಡಿತ ಪ್ರದೇಶದಲ್ಲಿ ನೋವು, ಊತದೊಂದಿಗೆ ಚರ್ಮವು ದಪ್ಪವಾಗುವುದು ಇತ್ಯಾದಿ ರೋಗಲಕ್ಷಣಗಳಿವೆ.

    ಇದನ್ನೂ ಓದಿ: ಮೂಲವ್ಯಾಧಿಗೆ ಇಲ್ಲಿದೆ ಸರಳ ಮನೆಮದ್ದು, ಖಂಡಿತಾ ಬೇಗ ಗುಣವಾಗುತ್ತೆ ಅಂತಾರೆ ಡಾಕ್ಟರ್

    ಲಿಪಿಡೆಮಾದಲ್ಲಿ ಚರ್ಮವು ಸಡಿಲಗೊಳ್ಳುತ್ತದೆ. ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು ಗೋಚರಿಸುತ್ತದೆ. ಈ ಸ್ಥಿತಿಯಲ್ಲಿ, ತೊಡೆಗಳು, ತೋಳುಗಳು ಮತ್ತು ಕಾಲುಗಳ ಗಾತ್ರವು ಹೆಚ್ಚಾಗುತ್ತದೆ. ಲಿಪಿಡೆಮಾದ ಆನುವಂಶಿಕವಾಗಿರಬಹುದು. ಪ್ರೌಢಾವಸ್ಥೆ, ಋತುಬಂಧ ಇತ್ಯಾದಿಗಳಲ್ಲಿನ ಹಾರ್ಮೋನ್ ಬದಲಾವಣೆಗಳಿಂದ ಕೂಡ ಆಗಿರಬಹುದು.
    Published by:renukadariyannavar
    First published: