• Home
  • »
  • News
  • »
  • lifestyle
  • »
  • Periods Postpone: ಪಿರಿಯಡ್ಸ್ ಮುಂದಕ್ಕೆ ಹಾಕಲು ಈ ನೈಸರ್ಗಿಕ ಆಹಾರಗಳನ್ನು ಸೇವಿಸಿ

Periods Postpone: ಪಿರಿಯಡ್ಸ್ ಮುಂದಕ್ಕೆ ಹಾಕಲು ಈ ನೈಸರ್ಗಿಕ ಆಹಾರಗಳನ್ನು ಸೇವಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೆಣ್ಣುಮಕ್ಕಳು ತಮ್ಮ ಪಿರಿಯಡ್ಸ್ ಅವಧಿ ಹಬ್ಬ ಅಥವಾ ಸಮಾರಂಭದ ಸಮಯದಲ್ಲಿ ಬರಬಾರದು ಎಂದು ಭಾವಿಸುತ್ತಾರೆ. ಹೀಗೆ ಕೆಲವರು ಔಷಧಿ ಸೇವನೆ ಮಾಡುವ ಮೂಲಕ ಪಿರಿಯಡ್ಸ್ ಮುಂದಕ್ಕೆ ಹೋಗುವಂತೆ ಮಾಡುತ್ತಾರೆ. ಅದು ಅವರನ್ನು ಚೆನ್ನಾಗಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುವಂತೆ ಮಾಡುತ್ತದೆ.

  • Share this:

    ಅಕ್ಟೋಬರ್ ತಿಂಗಳ (October Month) ಕೊನೆಯ ವಾರಗಳು (Last Weeks) ಹಬ್ಬಗಳ (Festivals) ಸಡಗರ ಮತ್ತು ಸಂಭ್ರಮ ತರುತ್ತವೆ. ಮೊದಲು ಅಕ್ಟೋಬರ್ 24 ರಿಂದ ದೀಪಾವಳಿ (Diwali), ಕಾರ್ತಿಕ ಅಮವಾಸ್ಯೆ ಹೀಗೆ ಸಾಲು ಸಾಲು ಹಬ್ಬಗಳು, ಮದುವೆ ಸಮಾರಂಭಗಳು ಬರುತ್ತವೆ. ಈ ಹಬ್ಬಗಳಲ್ಲಿ ಹೆಣ್ಣು ಮಕ್ಕಳು, ಮಹಿಳೆಯರು ಸಡಗರದಿಂದ ತಯಾರಾಗುವುದು, ಪೂಜೆ ವಿಧಿ ವಿಧಾನಗಳಲ್ಲಿ ಭಾಗಿಯಾಗುವುದು, ಮನೆ ಕೆಲಸ, ಅಲಂಕಾರ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಈ ಸಮಯದಲ್ಲಿ ಅವರ ಪಿರಿಯಡ್ಸ್ ಡೇಟ್ ಬರಬಾರದು ಎಂಬ ಟೆನ್ಶನ್ ಬಹುತೇಕ ಮಹಿಳೆಯರನ್ನು ಕಾಡುತ್ತದೆ.


    ಹಬ್ಬ ಹರಿದಿನಗಳಲ್ಲಿ ಋತುಚಕ್ರ ಮುಂದಕ್ಕೆ ಹಾಕುವುದು 


    ಆದಾಗ್ಯೂ ಹೆಣ್ಣುಮಕ್ಕಳು ತಮ್ಮ ಪಿರಿಯಡ್ಸ್ ಅವಧಿ ಹಬ್ಬ ಅಥವಾ ಸಮಾರಂಭದ ಸಮಯದಲ್ಲಿ ಬರಬಾರದು ಎಂದು ಭಾವಿಸುತ್ತಾರೆ. ಹೀಗೆ ಕೆಲವರು ಔಷಧಿ ಸೇವನೆ ಮಾಡುವ ಮೂಲಕ ಪಿರಿಯಡ್ಸ್ ಮುಂದಕ್ಕೆ ಹೋಗುವಂತೆ ಮಾಡುತ್ತಾರೆ. ಅದು ಅವರನ್ನು ಚೆನ್ನಾಗಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುವಂತೆ ಮಾಡುತ್ತದೆ.


    ಹಬ್ಬ ಹರಿದಿನಗಳಲ್ಲಿ ಋತುಚಕ್ರ ಬಂದಾಗ ಮಹಿಳೆಯರು ಪ್ರತ್ಯೇಕವಾಗಿ ಬದುಕಬೇಕಾಗಿಲ್ಲ. ಆದರೆ ಪಿರಿಯಡ್ಸ್‌ ನಲ್ಲಿ ಮಹಿಳೆಯರು ಪೂಜೆಯಲ್ಲಿ ಭಾಗವಹಿಸುವಂತಿಲ್ಲ ಅಥವಾ ಅಡುಗೆ, ಸಿಹಿ ತಿಂಡಿ ಮಾಡುವಂತಿಲ್ಲ ಎಂಬ ನಂಬಿಕೆ ಈಗಲೂ ಇದೆ. ಅಂತಹ ವೇಳೆ ಋತುಚಕ್ರ ಹಬ್ಬದಲ್ಲಿ ಬರುತ್ತದೆ ಎಂದು ಖಚಿತವಿರುವ ಮಹಿಳೆಯರು ಅವಧಿಯ ದಿನಾಂಕ ವಿಸ್ತರಿಸುವ ಔಷಧಿ ಸೇವನೆ ಮಾಡುತ್ತಾರೆ.


    ಇದನ್ನೂ ಓದಿ: ಅಜೀರ್ಣ ಸಮಸ್ಯೆಗೆ ಈ ಕಾಳು ಪರಿಹಾರ ಅನ್ನುತ್ತೆ ಆಯುರ್ವೇದ!


    ಪಿರಿಯಡ್ಸ್ ಮುಂದಕ್ಕೆ ಹಾಕಲು ನೈಸರ್ಗಿಕ ಪರಿಹಾರಗಳು


    ಗುಂಜಾನ್ ಐವಿಎಫ್ ವರ್ಲ್ಡ್ ಗ್ರೂಪ್‌ನ ಸ್ತ್ರೀರೋಗ ಶಾಸ್ತ್ರದ ಸಂಸ್ಥಾಪಕ ಮತ್ತು ಐವಿಎಫ್ ತಜ್ಞರು ಕೆಲವು ನೈಸರ್ಗಿಕ ಪರಿಹಾರಗಳನ್ನು ಶೇರ್ ಮಾಡಿದ್ದಾರೆ. ಔಷಧಿಗಳ ಮೂಲಕ ಅವಧಿಗಳನ್ನು ಹೆಚ್ಚಿಸಲು ಸಾಧ್ಯವಿದೆ. ಆದರೆ ಔಷಧಿ ತೆಗೆದುಕೊಳ್ಳುವ ಮೊದಲು, ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ ಎನ್ನುತ್ತಾರೆ ತಜ್ಞರು.


    ಏಕೆಂದರೆ ಕೆಲವು ಮಾತ್ರೆಗಳು ಸ್ತ್ರೀಯರ ದೇಹದ ಮೇಲೆ ಹಾನಿಕಾರಕ ಪರಿಣಾಮ ಉಂಟು ಮಾಡುವ ಸಾಧ್ಯತೆಯಿದೆ. ಅಂತಹ ವೇಳೆ ಹೆಚ್ಚಿನ ಅಗತ್ಯವಿದ್ದಲ್ಲಿ ನಂತರ ಅವಧಿಯ ದಿನಾಂಕ ಮಾತ್ರ ಮುಂದೂಡಿ. ಅದೂ ಸಹ ನೈಸರ್ಗಿಕ ಪರಿಹಾರಗಳೊಂದಿಗೆ. ಏಕೆಂದರೆ ಇದು ಅತ್ಯಲ್ಪ ಅಡ್ಡಪರಿಣಾಮ ಹೊಂದಿದೆ.


    ಆಪಲ್ ಸೈಡರ್ ವಿನೆಗರ್ ಕುಡಿಯಿರಿ


    ಆಪಲ್ ಸೈಡರ್ ವಿನೆಗರ್ ಅವಧಿಯ ದಿನಾಂಕ ಮುಂದೂಡಲು ಸಹಕಾರಿ ಆಗಿದೆ ಎಂದು ತಜ್ಞರು ಹೇಳುತ್ತಾರೆ. ವಾಸ್ತವದಲ್ಲಿ ಇದು ಹೆಚ್ಚಿನ ಮಟ್ಟದ ಆಮ್ಲೀಯ ಅಂಶ ಹೊಂದಿದೆ. ಇದು ಅವಧಿ ವಿಳಂಬಗೊಳಿಸಲು ಸಹಾಯ ಮಾಡುತ್ತದೆ. ಇದನ್ನು ನೀರಿನಲ್ಲಿ ಒಂದು ಅಥವಾ ಎರಡು ಚಮಚ ವಿನೆಗರ್ ಬೆರೆಸಿ ಸೇವಿಸಬಹುದು.


    ನಿಂಬೆ ರಸವು ತಡವಾಗಿ ಮುಟ್ಟನ್ನು ತರಲು ಪರಿಹಾರ


    ಅವಧಿಯ ದಿನಾಂಕ ವಿಸ್ತರಿಸಲು ನಿಂಬೆ ರಸ ಸೇವಿಸಿ ಎಂದು ತಜ್ಞರು ಶಿಫಾರಸು ಮಾಡುತ್ತಾರೆ. ಆಪಲ್ ಸೈಡರ್ ವಿನೆಗರ್‌ನಂತೆ, ನಿಂಬೆ ರಸವು ವಿಟಮಿನ್ ಸಿ ಯಲ್ಲಿ ಸಮೃದ್ಧ ಆಗಿದೆ. ಇದು ಮುಟ್ಟಿನ ವಿಳಂಬಕ್ಕೆ ಕೊಡುಗೆ ನೀಡುವಾಗ ಉತ್ತಮ ಚರ್ಮ ಉತ್ತೇಜಿಸಲು ಸಹಾಯ ಮಾಡುತ್ತದೆ.


    ದಾಲ್ಚಿನ್ನಿ ಚಹಾ ಸೇವನೆ ಅವಧಿ ಮುಂದೂಡಲು ಸಹಕಾರಿ


    ತಡವಾದ ಅವಧಿಗೆ ಅತ್ಯಂತ ಜನಪ್ರಿಯ ಮನೆಮದ್ದುಗಳಲ್ಲಿ ದಾಲ್ಚಿನ್ನಿ ಚಹಾ ಆಗಿದೆ. ಇದರ ಜೊತೆ ದಾಲ್ಚಿನ್ನಿ ಚಹಾ ಭಾರೀ ಅವಧಿಗಳಲ್ಲಿ ಸಹ ಸಹಾಯಕವಾಗಿದೆ.


    ಸಾಸಿವೆ ಬೀಜ ತಡವಾದ ಅವಧಿಗೆ ಕಾರಣ


    ನಿಮ್ಮ ಅವಧಿನ್ನು ವಿಸ್ತರಿಸಲು ನೀವು ಬಯಸಿದರೆ ಸಾಸಿವೆ ಬೀಜಗಳನ್ನು ಸೇವಿಸಿ. ಸಾಸಿವೆ ಕಾಳುಗಳಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧ ಆಗಿವೆ. ಇದು ಮುಟ್ಟನ್ನು ವಿಳಂಬಗೊಳಿಸಲು ಸಹಾಯ ಮಾಡುತ್ತದೆ.


    ಮಸಾಲೆಯುಕ್ತ ಆಹಾರ ತಪ್ಪಿಸಿ


    ಹೆಚ್ಚು ಮಸಾಲೆಯುಕ್ತ ಆಹಾರ ಅಥವಾ ಬಿಸಿ ಆಹಾರ ದಿನಾಂಕ ಹೆಚ್ಚಿಸುವ ಬದಲು ಅವಧಿ ಮೊದಲೇ ಮಾಡುತ್ತದೆ. ಏಕೆಂದರೆ ಬಿಸಿ ಆಹಾರವು ದೇಹದಲ್ಲಿ ಈಸ್ಟ್ರೊಜೆನ್ ಮಟ್ಟ ಹೆಚ್ಚಿಸುತ್ತದೆ.


    ಇದನ್ನೂ ಓದಿ: ಹಸಿ ಹಾಲನ್ನು ಚರ್ಮ ಮತ್ತು ಕೂದಲಿನ ಆರೈಕೆಗೆ ಹೀಗೂ ಬಳಸಬಹುದು


    ಅವಧಿಯ ದಿನಾಂಕಕ್ಕಿಂತ ಹಲವು ದಿನಗಳ ಮೊದಲು ಸೇವಿಸಿ


    ಅವಧಿಯ ದಿನಾಂಕವನ್ನು ವಿಸ್ತರಿಸಲು ನೈಸರ್ಗಿಕ ಪರಿಹಾರಗಳನ್ನು ಅವಧಿಯ ದಿನಾಂಕಕ್ಕಿಂತ 7 ರಿಂದ 10 ದಿನಗಳ ಮೊದಲು ಪ್ರಾರಂಭಿಸಿ ಅಂತಾರೆ ತಜ್ಞರು. ವಿಳಂಬ ಅಥವಾ ಅಕಾಲಿಕ ಮುಟ್ಟಿಗೆ ವೈದ್ಯಕೀಯ ಸಲಹೆಯನ್ನು ಪಡೆಯಿರಿ.

    Published by:renukadariyannavar
    First published: