HOME » NEWS » Lifestyle » PERIOD ROMANCE CAN GET YOU PREGNANT SEXUALL WELLNESS KVD

ಮುಟ್ಟಿನ ದಿನಗಳಲ್ಲಿ ಸೆಕ್ಸ್ ಮಾಡುವುದರಿಂದ ಗರ್ಭಿಣಿಯಾಗುವ ಸಾಧ್ಯತೆಗಳು ಎಷ್ಟಿರುತ್ತೆ.. ಪರಿಹಾರವೇನು?

ಪಿರಿಯೆಡ್ಸ್​ ವೇಳೆ ಸಂಭೋಗವಾದಲ್ಲಿ ಪ್ರೆಗ್ನೆಂಟ್​ ಆಗುವ ಸಾಧ್ಯತೆಗಳು 0.33%ರಷ್ಟು ಎನ್ನಲಾಗುತ್ತದೆ. ಆದರೆ ಶೇ.100ರಷ್ಟು ಗರ್ಭವತಿ ಆಗುವುದೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ.

news18-kannada
Updated:June 17, 2021, 10:01 PM IST
ಮುಟ್ಟಿನ ದಿನಗಳಲ್ಲಿ ಸೆಕ್ಸ್ ಮಾಡುವುದರಿಂದ ಗರ್ಭಿಣಿಯಾಗುವ ಸಾಧ್ಯತೆಗಳು ಎಷ್ಟಿರುತ್ತೆ.. ಪರಿಹಾರವೇನು?
ಸಾಂದರ್ಭಿಕ ಚಿತ್ರ
  • Share this:
ಋತುಚಕ್ರ ಹಾಗೂ ಲೈಂಗಿಕತೆ ಒಂದಕ್ಕೊಂದು ಕೊಂಡಿಯಂತಿರುವ ವಿಷಯಗಳು. ಆದರೆ ಈ ಬಗ್ಗೆ ಮಾತನಾಡಲು ಮುಜುಗರಪಡುವವರೇ ಹೆಚ್ಚು. ಪಿರಿಯಡ್ಸ್​​​, ಸೆಕ್ಸ್​​​, ಪ್ರೆಗ್ನೆಂಟ್​​​​​​ ಎಲ್ಲವೂ ಒಂದಕ್ಕೊಂದು ಸಂಬಂಧಿತ ಸಂಗತಿಗಳು. ಮುಟ್ಟಿನ ಬಗ್ಗೆ, ಸೆಕ್ಸ್​​​ ಬಗ್ಗೆ ಸತ್ಯಗಳಿಗಿಂತ ಮಿತ್ಯಗಳೇ ಹೆಚ್ಚು. ಸರಿಯಾದ ಮಾಹಿತಿಗಿಂತ ತಪ್ಪು ಮಾಹಿತಿ ಹೆಚ್ಚಾಗಿ ಜನರನ್ನು ತಲುಪಿರುತ್ತದೆ. ಹೀಗಾಗಿ ಈ ಬಗ್ಗೆ ಸರಿಯಾದ , ವೈಜ್ಞಾನಿಕ ಮಾಹಿತಿ ಪಡೆಯುವುದು ಬಹು ಮುಖ್ಯ.

ಮುಟ್ಟಿನ ದಿನಗಳಲ್ಲಿ ಸೆಕ್ಸ್​ ನಿಷಿದ್ಧವೇ?

ಮುಟ್ಟಿನ ದಿನಗಳಲ್ಲಿ ಸೆಕ್ಸ್​ ನಿಷಿದ್ಧ ಎಂದೇ ಬಹುತೇಕರು ಭಾವಿಸಿದ್ದಾರೆ. ಆದರೆ ಸಂಗಾತಿಯೊಂದಿಗೆ ದೈಹಿಕವಾಗಿ ಸೇರಬೇಕಾ ಸೇರಬಾರದಾ ಎಂಬುದು ಎಂದಿಗೂ ಯುವತಿಯ ಆಯ್ಕೆ ಆಗಿರಬೇಕು. ಮುಟ್ಟಿನ ದಿನಗಳಲ್ಲಿ ನೋವು, ಸುಸ್ತು ಕಾಣಿಸಿಕೊಂಡರೆ ವಿಶ್ರಾಂತಿ ಪಡೆಯುವುದೇ ಲೇಸು. ಇನ್ನು ಅತಿಯಾದ ರಕ್ತಸ್ರಾವವಿರುವವರು ಸುರಕ್ಷಿತವಾಗಿರಲು ಸೆಕ್ಸ್​​ನಿಂದ ದೂರವಿರಿ. ಆದರೆ ಯಾವುದೇ ಸಮಸ್ಯೆ ಇಲ್ಲದೇ ಸಂಗಾತಿಯೊಂದಿಗೆ ಸೇರುವುದು ಯುವತಿ/ಮಹಿಳೆಯ ಆಯ್ಕೆ ಆಗಿದ್ದರೆ ಯಾವುದೇ ಸಮಸ್ಯೆ ಇಲ್ಲ. ಮುಟ್ಟಿನ ದಿನಗಳಲ್ಲಿ ಸೆಕ್ಸ್​​​​ ಮಾಡುವುದು ತಪ್ಪೇನಿಲ್ಲ. ಆದರೆ ಕಾಂಡೋಮ್​​ ಬಳಸುವುದು ಉತ್ತಮ.

ಮುಟ್ಟಿನ ದಿನಗಳಲ್ಲಿ ಸೆಕ್ಸ್​ ಮಾಡಿದರೆ ಪ್ರೆಗ್ನೆಂಟ್​ ಆಗ್ತಾರಾ?

ಋತುಚಕ್ರದ ಅವಧಿ ಸಾಮಾನ್ಯವಾಗಿ 28-30 ದಿನಗಳು. 28 ದಿನಗಳಲ್ಲಿ ಗರ್ಭ ಮೊಟ್ಟೆಯನ್ನು ಉತ್ಪಾದಿಸಿ ಫೆಲೊಪೈನ್​ ಟ್ಯೂಬ್​ ಮೂಲಕ ಸಂಚರಿಸಿ ವೀರ್ಯಕ್ಕಾಗಿ ಕಾಯುತ್ತದೆ. ಈ ದಿನಗಳಲ್ಲಿ ಗಂಡಿನ ವೀರ್ಯ ಸಿಗದಿದ್ದಾಗ, ತನ್ನಿಂದ ತಾನೇ ಮೊಟ್ಟೆ ನಾಶವಾಗಿ ಮುಟ್ಟಿನ ರೂಪದಲ್ಲಿ ಹೊರ ಬರುತ್ತದೆ. ಮುಟ್ಟಿನ ಸಮಯದಲ್ಲಿ ಸೆಕ್ಸ್​ ಮಾಡುವುದರಿಂದ ಪ್ರೆಗ್ನೆಂಟ್​ ಆಗುವ ಸಾಧ್ಯತೆಗಳು ಅತ್ಯಂತ ಕಡಿಮೆ. ವೀರ್ಯ ಗರ್ಭಕೋಶ ಪ್ರವೇಶಿಸಿದರು ಗರ್ಭ ಕಟ್ಟಲು ಮೊಟ್ಟೆ ಇರುವುದಿಲ್ಲ. ಹೀಗಾಗಿ ಪಿರಿಯೆಡ್ಸ್​ ವೇಳೆ ಸಂಭೋಗವಾದಲ್ಲಿ ಪ್ರೆಗ್ನೆಂಟ್​ ಆಗುವ ಸಾಧ್ಯತೆಗಳು 0.33%ರಷ್ಟು ಎನ್ನಲಾಗುತ್ತದೆ. ಆದರೆ ಶೇ.100ರಷ್ಟು ಗರ್ಭವತಿ ಆಗುವುದೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ.

ಮುಟ್ಟಿನ ದಿನ ಸೆಕ್ಸ್​ನಿಂದ ಯಾರು ಪ್ರೆಗ್ನೆಂಟ್​​ ಆಗಬಹುದು?

ಋತುಚಕ್ರದಲ್ಲಿ ತೀವ್ರ ಏರುಪೇರು ಇರುವವರು, ಅತ್ಯಂತ ಕಡಿಮೆ ಅವಧಿಯಲ್ಲಿ ಪೆರಿಯಡ್ಸ್​ ಆಗುವವರು ಗರ್ಭವತಿ ಆಗುವ ಸಾಧ್ಯತೆಗಳು ಇರುತ್ತೆ. 28 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಅಂದರೆ ತಿಂಗಳಿಗೆ 2 ಬಾರಿ ಮುಟ್ಟಾಗುವವರು ಪ್ರೆಗ್ನೆಂಟ್​ ಆಗಬಹುದು. ಪುರುಷರ ವೀರ್ಯದ ಫಲವತತ್ತೆಯೂ ಕಾರಣವಾಗಬಹುದು. ಯೋನಿ ಮೂಲಕ ಪ್ರವೇಶಿಸುವ ಸ್ಪರ್ಮ್​​​​ ಸಾಮಾನ್ಯವಾಗಿ 3-4 ದಿನಗಳ ಕಾಲ ಜೀವಂತವಾಗಿರುತ್ತವೆ. ಆದರೆ ಕೆಲವೊಂದು ಗುಣಮುಟ್ಟದ ವೀರ್ಯ 7 ದಿನಗಳ ಕಾಲ ಜೀವಂತವಿರುವ ಸಾಧ್ಯತೆಗಳಿವೆ. ಇಂಥ ಸಮಯದಲ್ಲಿ ಮೊಟ್ಟೆ ಉತ್ಪಾದನೆ ಆಗಿ ಕಾಯುತ್ತಿರು ವೀರ್ಯವನ್ನು ಸೇರಿದರೆ ಗರ್ಭ ಕಟ್ಟುತ್ತದೆ.ಹೀಗಾಗಿ ಸುರಕ್ಷತೆ ಇಲ್ಲದೇ ಮುಟ್ಟಿನ ದಿನಗಳಲ್ಲಿ ಸೆಕ್ಸ್​​ ಮಾಡುವುದು ಸುರಕ್ಷಿತಲ್ಲ. ಸುಮ್ಮನೆ ಮುಟ್ಟಿನ ದಿನಗಳಲ್ಲಿ ಒಂದಾದರೆ ಮಕ್ಕಳಾಗುವುದೇ ಇಲ್ಲ ಎಂಬ ಭ್ರಮೆ ಬೇಡ. ವಲ್ಲದ ಗರ್ಭದಿಂದ ತಪ್ಪಿಸಿಕೊಳ್ಳಲು ಸದಾ ಸುರಕ್ಷತೆ ಬಳಸುವುದು ಉತ್ತಮ.
Published by: Kavya V
First published: June 17, 2021, 10:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories