ಆ ಮೂರು ದಿನಗಳು; ಋತುಚಕ್ರದ ವೇಳೆ ಓದಿನಲ್ಲಿ ಏಕಾಗ್ರತೆ ಕಡಿಮೆಯಾಗುತ್ತಾ?

ಋತುಚಕ್ರದಿಂದ ಮಹಿಳೆಯರ ಆರೋಗ್ಯ ಮತ್ತು ಶಿಕ್ಷಣದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ತಿಳಿಯವ ಸಲುವಾಗಿ ನಡೆಸಿದ ವಿವಿಧ ದೇಶಗಳಲ್ಲಿ ಸಮೀಕ್ಷೆಯಲ್ಲಿ 21,573 ಯುವತಿಯರನ್ನು ಅಧ್ಯಯನ ಮಾಡಲಾಯಿತು.

news18
Updated:July 4, 2019, 4:05 PM IST
ಆ ಮೂರು ದಿನಗಳು; ಋತುಚಕ್ರದ ವೇಳೆ ಓದಿನಲ್ಲಿ ಏಕಾಗ್ರತೆ ಕಡಿಮೆಯಾಗುತ್ತಾ?
ಸಾಂದರ್ಭಿಕ ಚಿತ್ರ
  • News18
  • Last Updated: July 4, 2019, 4:05 PM IST
  • Share this:
ಮಾನಸಿಕವಾಗಿ, ದೈಹಿಕವಾಗಿ ಎಷ್ಟೇ ಸಬಲರಾಗಿದ್ದರೂ ತಿಂಗಳ ಮೂರ್ನಾಲ್ಕು ದಿನ ನೋವು, ತೊಳಲಾಟವನ್ನು ಅನುಭವಿಸಲೇಬೇಕು. ಹಳ್ಳಿಯವರಿರಲಿ, ಪೇಟೆಯವರಿರಲಿ ಎಲ್ಲ ಮಹಿಳೆಯರ ಸಮಸ್ಯೆ. ಇದಕ್ಕೆಂದು ಹಲವಾರು ಔಷಧಿ, ಮಾತ್ರೆಗಳು ಬಂದಿದ್ದರೂ ಅವೆಲ್ಲ ನಮ್ಮ ಮನಸ್ಥಿತಿ ಮತ್ತು ಭಾವನೆಗಳನ್ನು ನಿಯಂತ್ರಿಸಲಾರವು.

ಮಹಿಳೆಯರ ಋತುಚಕ್ರ ಕೇವಲ ಅವರ ಆರೋಗ್ಯ ಮತ್ತು ಮನಸಿನ ಮೇಲೆ ಮಾತ್ರವಲ್ಲ ಶಿಕ್ಷಣದ ಮೇಲೂ ಪರಿಣಾಮ ಬೀರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಋತುಚಕ್ರ ವೇಳೆಯಲ್ಲಿ ಯುವತಿಯರು ಓದಿನ ಬಗ್ಗೆ ಹೆಚ್ಚು ಗಮನ ಹರಿಸಲು ಸಾಧ್ಯವಿಲ್ಲದ ಕಾರಣ ಅವರು ಶೈಕ್ಷಣಿಕವಾಗಿ ಹಿಂದುಳಿಯುತ್ತಾರೆ. ಇತ್ತೀಚಿನ ಸಮೀಕ್ಷೆ ಪ್ರಕಾರ ಋತುಚಕ್ರದ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ನೋವು ಯುವತಿಯರ ಶೈಕ್ಷಣಿಕ ಚಟುವಟಿಕೆಯ ಮೇಲೂ ಪರಿಣಾಮ ಬೀರುತ್ತದೆ.

ಎರಡು ಮೊಟ್ಟೆಯ ಕಥೆ: ಬಿಳಿ ಮತ್ತು ಕಂದು ಮೊಟ್ಟೆಯಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ?

ಋತುಚಕ್ರದ ಸಂದರ್ಭದ ಹೊಟ್ಟೆನೋವು ಎಲ್ಲರಿಗೂ ಬರುವಂಥದ್ದೇ ಎಂದುಕೊಳ್ಳುವ ಯುವತಿಯರು ಅದನ್ನು ಸಹಿಸಿಕೊಳ್ಳುತ್ತಾರೆಯೇ ವಿನಃ ಚಿಕಿತ್ಸೆ ಪಡೆಯಲು ಮುಂದಾಗುವುದಿಲ್ಲ. ಅಲ್ಲದೆ, ಮನೆಯಲ್ಲಿ ಯಾರ ಬಳಿಯೂ ಹೇಳಿಕೊಳ್ಳದೆ ತಮ್ಮಷ್ಟಕ್ಕೆ ತಾವು ಅನುಭವಿಸುತ್ತಾರೆ. ಈ ವೇಳೆಯಲ್ಲಿ ಮನಸು ಬಹಳ ಚಂಚಲವಾಗಿರುವುದರಿಂದ ಏಕಾಗ್ರತೆಯೂ ಕಡಿಮೆಯಿರುತ್ತದೆ. ಇದೇ ಕಾರಣಕ್ಕೆ ವಿದೇಶದ ಕೆಲವು ಕಂಪನಿಗಳಲ್ಲಿ ತಿಂಗಳ ಮೂರು ದಿನ ಮಹಿಳೆಯರಿಗೆ ಹೆಚ್ಚಿನ ಒತ್ತಡ ಹೇರುವುದಿಲ್ಲ.

ಅಧ್ಯಯನದಲ್ಲಿ ಏನಿದೆ?:

ಮಹಿಳಾ ಆರೋಗ್ಯದ ಕುರಿತಾದ ನಿಯತಕಾಲಿಕೆ ಪ್ರಕಟಿಸಿರುವ ಸಮೀಕ್ಷೆಯಲ್ಲಿ ತಿಳಿಸಿರುವ ಪ್ರಕಾರ, ಜಗತ್ತಿನ 3ನೇ ಎರಡರಷ್ಟು ಮಹಿಳೆಯರು (ಶೇ. 71) ನೋವುಭರಿತವಾದ ಋತುಚಕ್ರವನ್ನು ಅನುಭವಿಸುತ್ತಿದ್ದಾರೆ. ಐವರಲ್ಲಿ ಓರ್ವ ಯುವತಿ (ಶೇ. 20) ಈ ಪಿರಿಯಡ್​ ನೋವಿನಿಂದ ಶಾಲೆ/ ಕಾಲೇಜಿಗೆ ರಜೆ ಹಾಕುತ್ತಿದ್ದಾಳೆ. ಹಾಗೇ, ಶೇ. 41 ಯುವತಿಯರು ಕ್ಲಾಸಿನಲ್ಲಿ ಕುಳಿತಿದ್ದರೂ ಏಕಾಗ್ರತೆಯಿಂದ ಪಾಠ ಕೇಳಲು ಆಗದೆ ಒದ್ದಾಡುತ್ತಾರೆ.

ಲವ್​​ ಬ್ರೇಕ್​ ಅಪ್​ ಮಾಡಿಕೊಂಡವರು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿಋತುಚಕ್ರದಿಂದ ಮಹಿಳೆಯರ ಆರೋಗ್ಯ ಮತ್ತು ಶಿಕ್ಷಣದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ತಿಳಿಯವ ಸಲುವಾಗಿ ನಡೆಸಿದ ವಿವಿಧ ದೇಶಗಳಲ್ಲಿ ಸಮೀಕ್ಷೆಯಲ್ಲಿ 21,573 ಯುವತಿಯರನ್ನು ಅಧ್ಯಯನ ಮಾಡಲಾಯಿತು. 23 ಅಧ್ಯಯನಗಳು ಬೇರೆ ಬೇರೆ ದೇಶಗಳ ಬಡ ಮತ್ತು ಮಧ್ಯಮ ವರ್ಗದ ಯುವತಿಯರನ್ನು ಒಳಗೊಂಡಿತ್ತು. 15 ಅಧ್ಯಯನಗಳನ್ನು ಉತ್ತಮ ಆದಾಯ ಬರುವ ದೇಶಗಳ ಮಹಿಳೆಯರನ್ನು ಒಳಗೊಂಡು ನಡೆಸಲಾಯಿತು.

ಈ ಅಧ್ಯಯನದ ನೇತೃತ್ವ ವಹಿಸಿದ್ದ ಮೈಕ್ ಅರ್ಮೌರ್​ ಪ್ರಕಾರ, ಪಿರಿಯಡ್​ ವೇಳೆ ಕಾಣಿಸಿಕೊಳ್ಳುವ ನೋವು ಯುವತಿಯರ ಶಾಲಾ/ ಕಾಲೇಜು ವಿದ್ಯಾಭ್ಯಾಸದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ದೇಹದ ಹಾರ್ಮೋನ್​ನಲ್ಲಾಗುವ ಬದಲಾವಣೆಗಳಿಂದ ಅವರಿಗೆ ಏಕಾಗ್ರತೆಯಿಂದ ಪಾಠ ಕೇಳಲು ಸಾಧ್ಯವಾಗುವುದಿಲ್ಲ. ಪರೀಕ್ಷೆ ವೇಳೆ ಪಿರಿಯಡ್​ ಆದ ಬಹುತೇಕ ಯುವತಿಯರು ಸರಿಯಾಗಿ ಅಧ್ಯಯನ ಮಾಡಲಾಗದೆ ಫೇಲ್ ಆದ ಉದಾಹರಣೆಗಳು ಸಾಕಷ್ಟಿವೆ ಎಂದು ತಿಳಿದುಬಂದಿದೆ. ಅಲ್ಲದೆ, ಈ ಸಂದರ್ಭದಲ್ಲಿ ಕ್ರೀಡೆ, ಕ್ರಿಯಾತ್ಮಕ ಚಡುವಟಿಕೆಗಳಲ್ಲಿ ಬೆರೆಯಲು ಸಾಧ್ಯವಾಗುವುದಿಲ್ಲ. ಹಾಗೇ, ಎಲ್ಲರೊಂದಿಗೆ ಮೂಮೂಲಿನಂತೆ ಇರಲು ಸಾಧ್ಯವಾಗುವುದಿಲ್ಲ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.

 

First published:July 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ