Cinnamon Tea For Sleeping: ರಾತ್ರಿ ಸರಿಯಾಗಿ ನಿದ್ದೆ ಮಾಡದವರು ದಾಲ್ಚಿನ್ನಿ ಚಹಾ ಸೇವಿಸಿ, ಉತ್ತಮ ನಿದ್ದೆ ಮಾಡಿ

ಎಂಟು ಗಂಟೆಗಳ ಉತ್ತಮ ನಿದ್ದೆ ಮಾಡುವುದು ಸೌಂದರ್ಯದ ಜೊತೆಗೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೂ ಒಳ್ಳೆಯದು. ರಾತ್ರಿ ಚೆನ್ನಾಗಿ ನಿದ್ದೆ ಬರಲ್ಲ ಎನ್ನುವವರು ವಿಶೇಷ ಬಾಳೆಹಣ್ಣು ಮತ್ತು ದಾಲ್ಚಿನ್ನಿ ಚಹಾ ತಯಾರಿಸಿ ಕುಡಿಯಬಹುದು. ಇದು ನಿಮ್ಮ ಉತ್ತಮ ನಿದ್ರೆ ಹಾಗೂ ದೇಹಕ್ಕೆ ಅನೇಕ ಪ್ರಯೋಜನ ನೀಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದಿನವೂ (Daily) ಮನುಷ್ಯ ಉತ್ತಮ ನಿದ್ದೆ (Sleeping) ಮಾಡಬೇಕು. ಅಂದಾಗ ಮಾತ್ರ ಆತ ಆರೋಗ್ಯವಂತನಾಗಿ (Healthy) ಹಾಗೂ ಮಾರನೇ ದಿನವನ್ನು (Day) ಚೆನ್ನಾಗಿ ಆರಂಭಿಸಲು ಸಾಧ್ಯವಾಗುತ್ತದೆ. ನಿದ್ದೆ ಸರಿಯಾಗಿ ಆಗದೇ ಹೋದರೆ ಮಾರನೇ ದಿನದ ಬೆಳಗ್ಗೆ (Morning) ಬೇಗ ಏಳಲು ಮನಸ್ಸಾಗುವುದಿಲ್ಲ. ಮಧ್ಯಾಹ್ನದ ಊಟದ ನಂತರ ಜೋರು ನಿದ್ದೆ ಬರಲು ಶುರುವಾಗುತ್ತದೆ. ಹಾಗಾಗಿ ಉತ್ತಮ ಹಾಗೂ ಒಳ್ಳೆಯ ನಿದ್ದೆ ಮಾಡುವುದು ತುಂಬಾ ಮುಖ್ಯವಾಗಿದೆ. ಉತ್ತಮ ಮತ್ತು ಆಳವಾದ ನಿದ್ರೆ ಆರೋಗ್ಯಕ್ಕೆ ತುಂಬಾ ಅತ್ಯಗತ್ಯ. ಆಳವಾದ ನಿದ್ದೆ ಮಾಡಿದ ನಂತರ ಸಾಕಷ್ಟು ತಾಜಾತನ ಇರುತ್ತದೆ. ಬೇಗ ಬೇಗ ಕೆಲಸ ಮಾಡಿಕೊಂಡು, ಕ್ರಿಯಾಶೀಲತೆಯಿಂದ ಓಡಾಡಿಕೊಂಡಿರಲು ಸಾಧ್ಯವಾಗುತ್ತದೆ.

    ಉತ್ತಮ ನಿದ್ದೆ ಮಾಡುವುದು ಆರೋಗ್ಯಕ್ಕೆ ಅತ್ಯಗತ್ಯ

    ಎಂಟು ಗಂಟೆಗಳ ಉತ್ತಮ ನಿದ್ದೆ ಮಾಡುವುದು ಸೌಂದರ್ಯದ ಜೊತೆಗೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೂ ಒಳ್ಳೆಯದು. ರಾತ್ರಿ ಚೆನ್ನಾಗಿ ನಿದ್ದೆ ಬಾರದೇ, ತಡರಾತ್ರಿಯಾದರೂ ಟಿವಿ, ಮೊಬೈಲ್ ನೋಡುತ್ತಾ ಟೈಂಪಾಸ್ ಮಾಡುವವರು ತುಂಬಾ ಜನರಿದ್ದಾರೆ. ಇನ್ನು ಕೆಲವರು ಮಲಗಿದ ನಂತರ ರಾತ್ರಿ ಕನಸು, ಮೂತ್ರ ವಿಸರ್ಜನೆ, ಬಾಯಾರಿಕೆಯಿಂದ ನಿದ್ದೆ ಕೆಟ್ಟು ಹೋಗುತ್ತದೆ.

    ಹಾಗಾದರೆ ದಿನವೂ ಆಳವಾದ ಮತ್ತು ಉತ್ತಮ ನಿದ್ದೆ ಮಾಡಲು ಇಲ್ಲಿ ತಿಳಿಸಿದ ವಿಧಾನವನ್ನು ಆಧರಿಸಿ, ನೀವು ವಿಶೇಷ ಬಾಳೆಹಣ್ಣಿನ ಚಹಾ ತಯಾರಿಸಿ ಕುಡಿಯಬಹುದು. ಇದು ನಿಮ್ಮ ಉತ್ತಮ ನಿದ್ರೆ ಹಾಗೂ ದೇಹಕ್ಕೆ ಅನೇಕ ಪ್ರಯೋಜನ ನೀಡುತ್ತದೆ.

    ಇದನ್ನೂ ಓದಿ: ಮಳೆಗಾಲದಲ್ಲಿ ವೇಟ್ ಲಾಸ್ ಹಾಗೂ ಡಯಟ್ ಮುಂದುವರೆಸಲು ಏನು ಮಾಡಬೇಕು ಗೊತ್ತಾ?

    ಉತ್ತಮ ನಿದ್ರೆ ಮಾಡಲು ಏನು ಮಾಡಬೇಕು?

    ಉತ್ತಮ ನಿದ್ರೆ ಪಡೆಯಲು, ಮಲಗುವ ಸುಮಾರು ಒಂದು ಗಂಟೆ ಮೊದಲು ಬಾಳೆಹಣ್ಣು ಮತ್ತು ದಾಲ್ಚಿನ್ನಿಯಿಂದ ಮಾಡಿದ ಚಹಾ ಸೇವನೆ ಮಾಡಿ. ಇದು ನಿಮ್ಮ ನಿದ್ದೆಯ ತೊಂದರೆಯನ್ನು ನಿವಾರಿಸುತ್ತದೆ. ಬಾಳೆಹಣ್ಣು ಮತ್ತು ದಾಲ್ಚಿನ್ನಿ ಚಹಾ ತಯಾರಿಸಲು ಬೇಕಾಗುವ ಪದಾರ್ಥಗಳು ಯಾವವು?

    ಒಂದೂವರೆ ಕಪ್ ನೀರು

    1 ಬಾಳೆಹಣ್ಣು

    1 ಟೀಸ್ಪೂನ್ ದಾಲ್ಚಿನ್ನಿ

    ಬಾಳೆಹಣ್ಣು ಮತ್ತು ದಾಲ್ಚಿನ್ನಿ ಚಹಾ ಮಾಡುವ ವಿಧಾನ

    ಬಾಳೆಹಣ್ಣನ್ನು ತೊಳೆದು ಸ್ವಚ್ಛ ಮಾಡಿ, ಸಿಪ್ಪೆ ಸಹಿತ ಸಣ್ಣ ತುಂಡುಗಳಾಗಿ ಕತ್ತರಿಸಿ.

    ಈಗ ಚಹಾ ಮಾಡಲು ಈ ತುಂಡುಗಳನ್ನು ಪಾತ್ರೆಯಲ್ಲಿ ಹಾಕಿ.

    ಮೇಲೆ ಒಂದು ಟೀಚಮಚ ದಾಲ್ಚಿನ್ನಿ ಪುಡಿ ಹಾಕಿ.

    ಈಗ ಮೇಲಿನಿಂದ ನೀರನ್ನು ಸೇರಿಸಿ ಮತ್ತು ಈ ಮಿಶ್ರಣವನ್ನು 10 ನಿಮಿಷಗಳವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ.

    ಬಾಳೆಹಣ್ಣು ಕುದ್ದು ಸಿಪ್ಪೆ ಸುಲಿಯಲು ಪ್ರಾರಂಭಿಸಿದಾಗ, ನಂತರ ಗ್ಯಾಸ್ ಅನ್ನು ಆಫ್ ಮಾಡಿ. ಇದನ್ನು ಜರಡಿ ಸಹಾಯದಿಂದ ಫಿಲ್ಟರ್ ಮಾಡಿ ಮತ್ತು ಕುಡಿಯಿರಿ.

    ನೀವು ಮಲಗುವ ಒಂದು ಗಂಟೆ ಮೊದಲು ಬಾಳೆಹಣ್ಣು ಮತ್ತು ದಾಲ್ಚಿನ್ನಿ ಚಹಾ ಕುಡಿಯುವುದರಿಂದ ರಾತ್ರಿ ಮಲಗುವಾಗ ಮೂತ್ರ ಬರದಂತೆ ಮಲಗುವ ಮುನ್ನ ಫ್ರೆಶ್ ಅಪ್ ಆಗಲು ಸಮಯ ಸಿಗುತ್ತದೆ.

    ಪ್ರತಿ ರಾತ್ರಿ ಮಲಗುವ ಮುನ್ನ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ. ಇದು ನಿಮಗೆ ಉತ್ತಮ ನಿದ್ದೆ ಮತ್ತು ಮುಂಜಾನೆ ಉಲ್ಲಾಸ ಹಾಗೂ ಜಾಯ್ ಫುಲ್ ಆಗಿರಿಸುತ್ತದೆ.

    ಬಾಳೆಹಣ್ಣು ನಿದ್ದೆ ಬರಲು ಸಹಾಯ ಮಾಡುತ್ತದೆ

    ಬಾಳೆಹಣ್ಣು ಅಮೈನೋ ಆಮ್ಲ, ಟ್ರೈಫೋಟಾನ್ ಮತ್ತು ವಿಶ್ರಾಂತಿ ಗುಣ ಹೊಂದಿವೆ. ಅವುಗಳ ಸೇವನೆಯು ಮೆದುಳಿನಲ್ಲಿ ಸಿರೊಟೋನಿನ್ ಸ್ರವಿಸುವಿಕೆಗೆ ಕಾರಣವಾಗುತ್ತದೆ. ಸೆರಾಟೋನಿನ್ ಒಂದು ವಿಶ್ರಾಂತಿ ಹಾರ್ಮೋನ್, ಇದು ಮೆದುಳನ್ನು ಶಾಂತಗೊಳಿಸುತ್ತದೆ. ನಿದ್ರೆಯನ್ನು ಉತ್ತೇಜಿಸುತ್ತದೆ. ದೇಹದ ಜೀವಕೋಶಗಳನ್ನು ಶಾಂತಗೊಳಿಸುತ್ತದೆ ಮತ್ತು ವಿಶ್ರಾಂತಿಯ ಭಾವನೆಯನ್ನು ನೀಡುತ್ತದೆ.

    ಬಾಳೆಹಣ್ಣು ದೇಹದಲ್ಲಿ ಕಾರ್ಟಿಸೋಲ್ ಉತ್ಪಾದನೆ ಮಿತಿಗೊಳಿಸುತ್ತದೆ. ಕಾರ್ಟಿಸೋಲ್ ಹಾನಿಕಾರಕ ಹಾರ್ಮೋನ್ ಆಗಿದೆ. ಇದು ದೇಹ ಮತ್ತು ಮೆದುಳಿನಲ್ಲಿನ ಒತ್ತಡಕ್ಕೆ ಮುಖ್ಯ ಕಾರಣವಾಗಿದ್ದರಿಂದ ಇದನ್ನು ಒತ್ತಡದ ಹಾರ್ಮೋನ್ ಎಂದೂ ಕರೆಯುತ್ತಾರೆ.

    ಇದನ್ನೂ ಓದಿ: ಎಣ್ಣೆಯುಕ್ತ ಮುಖದಲ್ಲಿ ಕಾಣಿಸುವ ಬಿಳಿ ಮೊಡವೆ ತೆಗೆಯಲು ಸುಲಭ ಟಿಪ್ಸ್, ಟ್ರೈ ಮಾಡಿ

    ನಿದ್ರೆಗಾಗಿ ದಾಲ್ಚಿನ್ನಿ ಬಳಕೆ

    ದಾಲ್ಚಿನ್ನಿ ಒಂದು ಆಯುರ್ವೇದ ಔಷಧ. ರೋಗಗಳ ಚಿಕಿತ್ಸೆಯಲ್ಲಿ ಬಳಸುತ್ತಾರೆ. ನಿದ್ರಾಹೀನತೆಯ ಸಮಸ್ಯೆ ಕೂಡ ಕಾಯಿಲೆಯಾಗಿದೆ. ರಾತ್ರಿ ಸರಿಯಾಗಿ ನಿದ್ದೆ ಬಾರದವರು ದಾಲ್ಚಿನ್ನಿಯಿಂದ ತಯಾರಿಸಿದ ಚಹಾ ಸೇವನೆ ಉತ್ತಮ ಪರಿಣಾಮ ಬೀರುತ್ತದೆ.
    Published by:renukadariyannavar
    First published: