• Home
  • »
  • News
  • »
  • lifestyle
  • »
  • Sleeping Problem: ದಿನವೂ ರಾತ್ರಿ ಐದು ಗಂಟೆಗಿಂತ ಕಡಿಮೆ ಸಮಯ ನಿದ್ದೆ ಮಾಡುವವರು ಯಾವ ಕಾಯಿಲೆ ಅಪಾಯ ಎದುರಿಸುತ್ತಾರೆ?

Sleeping Problem: ದಿನವೂ ರಾತ್ರಿ ಐದು ಗಂಟೆಗಿಂತ ಕಡಿಮೆ ಸಮಯ ನಿದ್ದೆ ಮಾಡುವವರು ಯಾವ ಕಾಯಿಲೆ ಅಪಾಯ ಎದುರಿಸುತ್ತಾರೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದಿನವೂ ಐದು ಗಂಟೆಗಿಂತ ಕಡಿಮೆ ನಿದ್ದೆ ಮಾಡುವ ಜನರಲ್ಲಿ ಮಾರಣಾಂತಿಕ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. ಬ್ರಿಟನ್ ನಲ್ಲಿ ನಡೆಸಿದ ಸಂಶೋಧನೆಯಲ್ಲಿ ಇದು ಪತ್ತೆ ಆಗಿದೆ. ನಿದ್ರೆ ಮತ್ತು ಅದರ ಕೊರತೆಯ ಬಗ್ಗೆ ಜನರು ಹೆಚ್ಚು ಗಮನ ಹರಿಸಲ್ಲ. ಇದು ಕಳಪೆ ನಿದ್ರೆಯ ಅಪಾಯಕಾರಿ ಪರಿಣಾಮ ಬೀರುತ್ತದೆ.

ಮುಂದೆ ಓದಿ ...
  • Share this:

    ರಾತ್ರಿಯಲ್ಲಿ (Night) ತಡವಾಗಿ ಮಲಗುವುದು (Late Sleeping) ಹಲವು ಆರೋಗ್ಯ ಸಮಸ್ಯೆಗೆ (Health Problem) ನಿಮ್ಮನ್ನು ಗುರಿ ಆಗಿಸುತ್ತದೆ. ಮತ್ತು ರಾತ್ರಿಯಲ್ಲಿ ಐದು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ ಜನರ ಜೀವನಶೈಲಿಯು (People Lifestyle) ಮಾರಣಾಂತಿಕ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. ಬ್ರಿಟನ್ ನಲ್ಲಿ ನಡೆಸಿದ ಸಂಶೋಧನೆಯಲ್ಲಿ ಇದು ಪತ್ತೆ ಆಗಿದೆ. ನಿದ್ರೆ ಮತ್ತು ಅದರ ಕೊರತೆಯ ಬಗ್ಗೆ ಜನರು ಹೆಚ್ಚು ಗಮನ ಹರಿಸಲ್ಲ. ಆದರೆ ರಾತ್ರಿ ನಿದ್ದೆ ಕಡಿಮೆ ಮಾಡುವುದು, ರಾತ್ರಿ ಉತ್ತಮ ನಿದ್ದೆಗೆ ಅಡ್ಡಿಯಾಗುವುದು ಅಥವಾ ಕಳಪೆ ನಿದ್ರೆಯ ಅಪಾಯಕಾರಿ ಪರಿಣಾಮದ ಬಗ್ಗೆ ಹೇಳಲಾಗಿದೆ. ದಿನವೂ ರಾತ್ರಿ ಕಡಿಮೆ ನಿದ್ದೆ ಮಾಡುವುದು ಕಾಯಿಲೆಗಳಿಗೆ ನೂಕುತ್ತದೆ.


    ರಾತ್ರಿ ಕಡಿಮೆ ನಿದ್ದೆ ಮಾಡುವುದರ ಸಮಸ್ಯೆಗಳು


    ಮೆದುಳಿನ ಕಾರ್ಯ ಚಟುವಟಿಕೆಗೆ ಧಕ್ಕೆ ಆಗುತ್ತದೆ, ಸ್ಥೂಲಕಾಯ, ಹೊಟ್ಟೆ ಮತ್ತು ಜೀವನಶೈಲಿಯ ಅಸ್ವಸ್ಥತೆಗಳು, ಅನಿಯಮಿತ ನಿದ್ರೆಯ ಚಕ್ರಗಳು ಅನೇಕ ಜೀವಗಳ ಮೇಲೆ ಹಾನಿ ಉಂಟು ಮಾಡುತ್ತವೆ.


    ನಿದ್ರಾಹೀನತೆಯಿಂದ ಬಳಲುತ್ತಿರುವ ಜನರ ಹೊರೆ ಕರೋನಾ ಹೆಚ್ಚಿಸಿದೆ. ಅಲ್ಲದೇ ಜೋರಾಗಿ ನಿದ್ದೆ ಮಾಡುವುದು, ಗೊರಕೆ ಹೊಡೆಯುವುದು ಕೂಡ ಕಳಪೆ ನಿದ್ರೆಯ ಸಂಕೇತ ಆಗಿದೆ. ಇದನ್ನು ಜನರು ನಿರ್ಲಕ್ಷ್ಯ ಮಾಡ್ತಾರೆ.


    ಇದನ್ನೂ ಓದಿ: ಅಜೀರ್ಣ ಸಮಸ್ಯೆಗೆ ಈ ಕಾಳು ಪರಿಹಾರ ಅನ್ನುತ್ತೆ ಆಯುರ್ವೇದ!


    ದಿನಕ್ಕೆ ಎಷ್ಟು ಗಂಟೆ ನಿದ್ರೆ ಮಾಡ್ಬೇಕು?


    ನಿದ್ರೆ ನಮ್ಮ ಜೀವನದಲ್ಲಿ ಬಹಳ ಮುಖ್ಯ ಚಟುವಟಿಕೆ ಆಗಿದೆ. ನಾವು ದಿನಕ್ಕೆ ಸುಮಾರು 8 ಗಂಟೆ ಕಾಲ ನಿದ್ರಿಸಬೇಕು. ಅಂದರೆ ದಿನದ ಮೂರನೇ ಒಂದು ಭಾಗ. ಇದರರ್ಥ ನಮ್ಮ ಜೀವನದ 1/3, ನಾವು ವಿಶ್ರಾಂತಿ ಅಥವಾ ನಿದ್ರೆ ಮಾಡಬೇಕು.


    ಸಾಕಷ್ಟು ನಿದ್ರೆ ಮಾಡದೇ ಹೋದ್ರೆ ಅಧಿಕ ರಕ್ತದೊತ್ತಡ, ಹೃದ್ರೋಗ, ಖಿನ್ನತೆ, ಆತಂಕ ಮತ್ತು ಮೆದುಳಿನ ಕಾಯಿಲೆ ಉಂಟಾಗುತ್ತವೆ. ಮತ್ತು ಸ್ಟ್ರೆಸ್, ಚಿಂತೆ ಕಾಡುತ್ತದೆ. ಹಾಗಾಗಿ ರಾತ್ರಿ ಉತ್ತಮ ನಿದ್ದೆ ಹೊಂದುವುದು ಅವಶ್ಯಕ.


    ಕಳಪೆ ನಿದ್ರೆಯ ಆರಂಭಿಕ ಚಿಹ್ನೆಗಳು


    ನೀವು ಸರಿಯಾಗಿ ನಿದ್ದೆ ಮಾಡದಿದ್ದರೆ, ಬೆಳಗ್ಗೆ ಯಾವುದೇ ಉಲ್ಲಾಸ ಇರಲ್ಲ. ಮುಂಜಾನೆ ಬೇಗನೆ ನಿದ್ದೆ ಮಾಡುತ್ತೀರಿ. ಮತ್ತು ದಿನದ ಪ್ರಮುಖ ಕೆಲಸದ ಮಧ್ಯದಲ್ಲಿ ನಿದ್ರೆ ಮಾಡುತ್ತೀರಿ. ಜೊತೆಗೆ ತಲೆನೋವು, ಮೆಮೊರಿ ನಷ್ಟ ಮತ್ತು ನೀವು ಕೆಲಸದಲ್ಲಿ ಕಡಿಮೆ ಜಾಗ್ರತೆ ವಹಿಸಬೇಕು.


    ಸಾಕಷ್ಟು ನಿದ್ದೆ ಮಾಡದಿದ್ದರೆ ರಾತ್ರಿ ನಿದ್ರೆಯ ಸಮಯದಲ್ಲಿ ನಡೆಯುವ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುವುದು ಇದು ನಿಮ್ಮ ತೂಕವೂ ಹೆಚ್ಚಾಗಲು ಪ್ರಾರಂಭಿಸುತ್ತದೆ.


    ಮಾರಣಾಂತಿಕ ಕಾಯಿಲೆ ಅಪಾಯ


    UK ಯ ಯೂನಿವರ್ಸಿಟಿ ಕಾಲೇಜ್ ಲಂಡನ್ (UCL) ನ ಸಂಶೋಧಕರು, 50 ವರ್ಷಕ್ಕಿಂತ ಮೇಲ್ಪಟ್ಟ ಜನರು ದಿನಕ್ಕೆ ಐದು ಗಂಟೆ ಅಥವಾ ಅದಕ್ಕಿಂತ ಕಡಿಮೆ ನಿದ್ರೆ ಮಾಡುವವರು ಇತರೆ ಜನರಿಗೆ ಹೋಲಿಸಿದರೆ ಮಾರಣಾಂತಿಕ ಕಾಯಿಲೆ ಅಭಿವೃದ್ಧಿಪಡಿಸುವ ಅಪಾಯ 20 ಪ್ರತಿಶತ ಹೊಂದಿರುತ್ತಾರೆ ಎಂದು ಹೇಳಿದೆ.


    ಐದು ಗಂಟೆ ಅಥವಾ ಅದಕ್ಕಿಂತ ಕಡಿಮೆ ನಿದ್ದೆ ಮಾಡುವವರು ಏಳು ಗಂಟೆ ಕಾಲ ಮಲಗಿದವರಿಗೆ ಹೋಲಿಸಿದರೆ ಎರಡು ಅಥವಾ ಹೆಚ್ಚಿನ ಮಾರಣಾಂತಿಕ ಕಾಯಿಲೆ ಅಭಿವೃದ್ಧಿಪಡಿಸುವ ಅಪಾಯ 40 ಪ್ರತಿಶತ ಹೆಚ್ಚಿಸಿದ್ದಾರೆ.


    PLOS ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಈ ಸಂಶೋಧನೆ ಪ್ರಕಾರ, 50, 60 ಮತ್ತು 70 ವರ್ಷ ವಯಸ್ಸಿನ ಜನರು ಐದು ಗಂಟೆ ಅಥವಾ ಅದಕ್ಕಿಂತ ಕಡಿಮೆ ಸಮಸಯ ನಿದ್ದೆ ಮಾಡುತ್ತಾರೆ. ಏಳು ಗಂಟೆ ಮಲಗುವವರಿಗೆ ಹೋಲಿಸಿದರೆ ಅವರ ಮಾರಣಾಂತಿಕ ಕಾಯಿಲೆ ಅಭಿವೃದ್ಧಿಪಡಿಸುವ ಅಪಾಯ 30 ರಿಂದ 40 ಪ್ರತಿಶತ ಹೆಚ್ಚಾಗುತ್ತದೆ.


    ಇದನ್ನೂ ಓದಿ: ಹಸಿ ಹಾಲನ್ನು ಚರ್ಮ ಮತ್ತು ಕೂದಲಿನ ಆರೈಕೆಗೆ ಹೀಗೂ ಬಳಸಬಹುದು


    ಹೆಚ್ಚುತ್ತಿದೆ ಬಹು ರೋಗಗಳ ಸಮಸ್ಯೆ


    ಹೆಚ್ಚಿನ ಆದಾಯ ಹೊಂದಿರುವ ದೇಶಗಳಲ್ಲಿ ಬಹು ರೋಗಗಳ ಸಮಸ್ಯೆ ಹೆಚ್ಚುತ್ತಿದೆ. ಮತ್ತು ಅರ್ಧಕ್ಕಿಂತ ಹೆಚ್ಚು ವಯಸ್ಸಾದ ವಯಸ್ಕರು ಈಗ ಕನಿಷ್ಠ ಎರಡು ಮಾರಣಾಂತಿಕ ಕಾಯಿಲೆ ಹೊಂದಿದ್ದಾರೆ ಎಂದು ಪ್ರಮುಖ ಲೇಖಕ ಸೆವೆರಿನ್ ಸಬಿಯಾ ಹೇಳಿದ್ದಾರೆ.

    Published by:renukadariyannavar
    First published: