ಗಣೇಶ ವಿಸರ್ಜನೆಯಲ್ಲಿ ಮ್ಯೂಸಿಕ್ ನಿಷೇಧ: ಸೈಲೆಂಟ್ ಡಿಜೆ ಮೊರೆ ಹೋಗಿ ಯಶಸ್ವಿ ಗಣೇಶೋತ್ಸವ ಆಚರಿಸಿದ ವಿನಾಯಕ ಮಂಡಳಿ

news18
Updated:September 25, 2018, 2:42 PM IST
ಗಣೇಶ ವಿಸರ್ಜನೆಯಲ್ಲಿ ಮ್ಯೂಸಿಕ್ ನಿಷೇಧ: ಸೈಲೆಂಟ್ ಡಿಜೆ ಮೊರೆ ಹೋಗಿ ಯಶಸ್ವಿ ಗಣೇಶೋತ್ಸವ ಆಚರಿಸಿದ ವಿನಾಯಕ ಮಂಡಳಿ
news18
Updated: September 25, 2018, 2:42 PM IST
-ನ್ಯೂಸ್ 18 ಕನ್ನಡ

ಗಣೇಶೋತ್ಸವ ಅಂದರೆ ಅಲ್ಲಿ ಡೋಲು, ಡಿಜೆ ಮ್ಯೂಸಿಕ್ ಸಾಮಾನ್ಯ. ಆದರೆ ಬಾಂಬೆ ಹೈಕೋರ್ಟ್​ ಗಣೇಶ ಮೆರವಣಿಗೆಯ ವೇಳೆ ಮತ್ತು ವಿಸರ್ಜನೆಯ ಸಂದರ್ಭದಲ್ಲಿ ಡಿಜೆ ಮತ್ತು ಡಾಲ್ಬಿ ಸೌಂಡ್ ಸ್ಟಿಸ್ಟಮ್​ಗಳನ್ನು ಬಳಸಬಾರದೆಂದು ಇತ್ತೀಚೆಗೆ ಆದೇಶ ಹೊರಡಿಸಿತ್ತು. ಇದರಿಂದ ಗಣೇಶೋತ್ಸವದಲ್ಲಿ ಪಾಲ್ಗೊಳ್ಳುವ ಅಭಿಮಾನಿಗಳಿಗೆ ನಿರಾಸೆ ಆಗಿರುವುದು ಸುಳ್ಳಲ್ಲ. ಆದರೆ ಈ ಆದೇಶವನ್ನು ಪಾಲಿಸಿ, ಅದ್ಧೂರಿ ಗಣೇಶೋತ್ಸವನ್ನು ಮುಂಬೈನ ಧಾರಾವಿ ಜನರು ಆಯೋಜಿಸಿದ್ದರು. ಶ್ರೀ ಸಿದ್ದಿ ವಿನಾಯಕ ಮಂಡಳಿಯವರು ಹೈ ಕೋರ್ಟ್​ನ ಹೊಸ ತೀರ್ಪನ್ನು ಗೌರವಿಸಿ ಮ್ಯೂಸಿಕ್ ಸಿಸ್ಟಂಗಳನ್ನು ಬಳಸದೇ ಸೈಲೆಂಟ್ ಡಿಜೆ ಮೊರೆ ಹೋಗಿದ್ದಾರೆ.


ಇತ್ತೀಚಿನ ದಿನಗಳಲ್ಲಿ ಸೈಲೆಂಟ್ ಡಿಜೆ ಹೊಸ ಆಕರ್ಷಣೆಗೆ ಕಾರಣವಾಗುತ್ತಿದ್ದು, ಈ ಪ್ರಯೋಗವನ್ನು ಧಾರಾವಿಯ ಸಿದ್ದಿ ವಿನಾಯಕ ಮಂಡಳಿ ಬಳಸಿ ಎಲ್ಲರ ಗಮನ ಸೆಳೆದರು. ಗಣೇಶ ಮೆರವಣಿಗೆ ವೇಳೆ ನೆರೆದಿದ್ದ ಜನರು ಹೆಡ್​ಫೋನ್ ಹಾಕಿಕೊಂಡು ಸಂಗೀತವನ್ನು ಆಸ್ವಾದಿಸುತ್ತಾ ಕುಣಿದು ಕುಪ್ಪಳಿಸಿದರು. ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರು ಹೆಡ್​ಫೋನ್ ಬಳಸಿ ಸಂಗೀತ ಕೇಳಿಕೊಂಡು ಕುಣಿದು ಕುಪ್ಪಳಿಸುತ್ತಾ ಅದ್ಧೂರಿ ಗಣೇಶ ವಿಸರ್ಜನೆ ನೆರವೇರಿಸಿದರು. ಈ ವಿಡಿಯೋಗಳ ತುಣುಕುಗಳು ಸದ್ಯ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಶ್ರೀ ಸಿದ್ದಿ ವಿನಾಯಕ ಮಂಡಳಿಯವರ ಈ ಕ್ರಮಕ್ಕೆ ಅದ್ಭುತ ಪ್ರಶಂಸೆ ವ್ಯಕ್ತವಾಗುತ್ತಿದೆ.
First published:September 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...