• Home
  • »
  • News
  • »
  • lifestyle
  • »
  • Peanuts And Health: ಮಧುಮೇಹ ತಡೆಗೆ ಮಾತ್ರವಲ್ಲ ಆಯುಷ್ಯ ಹೆಚ್ಚಳಕ್ಕೂ ಸಹಕಾರಿ ಕಡಲೆಕಾಯಿ

Peanuts And Health: ಮಧುಮೇಹ ತಡೆಗೆ ಮಾತ್ರವಲ್ಲ ಆಯುಷ್ಯ ಹೆಚ್ಚಳಕ್ಕೂ ಸಹಕಾರಿ ಕಡಲೆಕಾಯಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಡಲೆ ಕಾಯಿ ಚಳಿಗಾಲದಲ್ಲಿ ಹೆಚ್ಚು ಸಿಗುವ ಪದಾರ್ಥ ಆಗಿದೆ. ಆದರೆ ಕಡಲೆಕಾಯಿ ತಿನ್ನುವುದರಿಂದ ಆಯುಷ್ಯ ಹೆಚ್ಚುತ್ತದೆ ಎಂದು ಹೇಳಲಾಗಿದೆ. ಇಷ್ಟು ಮಾತ್ರವಲ್ಲ ಜೊತೆಗೆ ಕಡಲೆ ಕಾಯಿ ಸೇವನೆ ಮಾಡುವುದರಿಂದ ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳು ಸಿಗುತ್ತವೆ ಎಂದು ತಜ್ಞರು ಹೇಳುತ್ತಾರೆ.

  • Share this:

    ಕಡಲೆಕಾಯಿ (Peanuts) ಸೀಸನ್ (Season) ಶುರುವಾಗಿದೆ. ಹಸಿಯಾಗಿ, ಹುರಿದ ಮತ್ತು ಕುದಿಸಿದ ಕಡಲೆ ಕಾಯಿ ತಿನ್ನಲು ತುಂಬಾ ಜನರು (People) ಇಷ್ಟ (Like) ಪಡುತ್ತಾರೆ. ಕಡಲೆ ಕಾಯಿ ಸಣ್ಣ ಮಕ್ಕಳಿಂದ (Children’s) ಹಿಡಿದು ದೊಡ್ಡವರತನಕ ತುಂಬಾ ಪ್ರೀತಿಯಿಂದ ಇಷ್ಟ ಪಟ್ಟು ತಿನ್ನುವ ಕಾಳು ಆಗಿದೆ. ಕಡಲೆ ಕಾಯಿಯನ್ನು ಬಡವರ ಬಾದಾಮಿ ಎಂದು ಕರೆಯುತ್ತಾರೆ. ಯಾಕಂದ್ರೆ ಕಡಲೆ ಕಾಯಿ ಇದನ್ನು ಸೇವನೆ ಮಾಡುವುದರಿಂದ ಬಾದಾಮಿ ಸೇವನೆಯಷ್ಟೇ ಆರೋಗ್ಯ ಪ್ರಯೋಜನಗಳು (Health Benefits) ಸಿಗುತ್ತವೆ ಎಂದು ಹೇಳಲಾಗುತ್ತದೆ. ಮತ್ತು ಕಡಲೆ ಕಾಯಿ ಅದರ ಬೆಲೆ ಅಗ್ಗವಾಗಿದೆ. ಚಳಿಗಾಲದಲ್ಲಿ ಹೆಚ್ಚು ಜನರು ಕಡಲೆಕಾಯಿ ಸೇವನೆ ಮಾಡುತ್ತಾರೆ.


    ಕಡಲೆಕಾಯಿ ತಿನ್ನುವುದರಿಂದ ಆಯುಷ್ಯ ಹೆಚ್ಚುತ್ತದೆ!


    ಯಾಕಂದ್ರೆ ಕಡಲೆ ಕಾಯಿ ಚಳಿಗಾಲದಲ್ಲಿ ಹೆಚ್ಚು ಸಿಗುವ ಪದಾರ್ಥ ಆಗಿದೆ. ಆದರೆ ಕಡಲೆಕಾಯಿ ತಿನ್ನುವುದರಿಂದ ಆಯುಷ್ಯ ಹೆಚ್ಚುತ್ತದೆ ಎಂದು ಹೇಳಲಾಗಿದೆ. ಇಷ್ಟು ಮಾತ್ರವಲ್ಲ, ಜೊತೆಗೆ ಕಡಲೆ ಕಾಯಿ ಸೇವನೆ ಮಾಡುವುದರಿಂದ ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳು ಸಿಗುತ್ತವೆ ಎಂದು ತಜ್ಞರು ಹೇಳುತ್ತಾರೆ.


    ಆದರೆ ಕಡಲೆಕಾಯಿ ಸೇವನೆ ಎಲ್ಲಾ ಜನರಿಗೆ ಆರೋಗ್ಯ ಪ್ರಯೋಜನ ನೀಡುವುದಿಲ್ಲ. ಕಡಲೆ ಕಾಯಿ ತಿಂದ ನಂತರ ಕೆಲವರು ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಾರೆ. ಈ ಸಮಸ್ಯೆ ಎಷ್ಟು ದೊಡ್ಡದಾಗಿದೆ ಅಂದ್ರೆ ಕೆಲವೊಮ್ಮೆ ಇದು ಮಾರಣಾಂತಿಕವೂ ಆಗುತ್ತದೆ. ವ್ಯಕ್ತಿ ಕೆಲವೊಮ್ಮೆ ಪ್ರಾಣ ಕಳೆದುಕೊಳ್ಳುವ ಸ್ಥಿತಿಗೂ ತಲುಪಬಹುದು.


    ಇದನ್ನೂ ಓದಿ: ಚರ್ಮದ ವಯಸ್ಸಾಗುವಿಕೆ ಪ್ರಕ್ರಿಯೆ ತಡೆಗೆ ವಿಟಮಿನ್ ಸಿ ಸೀರಮ್ ಹೇಗೆ ಪ್ರಯೋಜನಕಾರಿ?


    ಕಡಲೆಕಾಯಿ ಸೇವನೆ ಮಾಡುವುದರಿಂದ ಯಾವ ಆರೋಗ್ಯ ಪ್ರಯೋಜನಗಳು ಸಿಗುತ್ತವೆ? ಮತ್ತು ಯಾರು ಕಡಲೆಕಾಯಿ ಸೇವನೆ ಮಾಡಬಾರದು ಎಂದು ತಿಳಿಯೋಣ?


    ಆರೋಗ್ಯಕರ ಕೊಬ್ಬು ಕಡಲೆಕಾಯಿಯಲ್ಲಿದೆ


    ಆರೋಗ್ಯಕರ ಕೊಬ್ಬು ದೇಹಕ್ಕೆ ಪ್ರಯೋಜನಕಾರಿ ಆಗಿದೆ. ಜೊತೆಗೆ ಅವುಗಳು ಹೃದಯಕ್ಕೆ ಹಾನಿ ಮಾಡುವ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುತ್ತದೆ. ಕಡಲೆಕಾಯಿಯಲ್ಲಿ ಬಹು ಅಪರ್ಯಾಪ್ತ ಕೊಬ್ಬಿನಂಶ ಇದೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯ ಕಾಪಾಡುತ್ತದೆ.


    ಆಯುಷ್ಯ ಹೆಚ್ಚಿಸುವ ಅಂಶಗಳಿಂದ ಕೂಡಿದೆ ಕಡಲೆಕಾಯಿ


    ಕಡಲೆಕಾಯಿ ಸೇವನೆ ಮಾಡುವುದರಿಂದ ಆಯುಷ್ಯ ಹೆಚ್ಚುತ್ತದೆ ಎಂದು ಅಧ್ಯಯನವೊಂದು ಹೇಳಿದೆ. ವೆಬ್‌ಎಮ್‌ಡಿ ಹೇಳುವ ಪ್ರಕಾರ, ಪ್ರತಿದಿನ ಕಡಲೆಕಾಯಿ ಸೇವನೆ ಮಾಡುವ ಜನರು ಅದನ್ನು ಸೇವನೆ ಮಾಡದವರಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎಂದು ಅಧ್ಯಯನ ಹೇಳಿದೆ. ಆದರೆ ಇದನ್ನು ದೃಢೀಕರಿಸಲು ಹೆಚ್ಚಿನ ಅಧ್ಯಯನದ ಅಗತ್ಯತೆ ಇದೆ.


    ತೂಕ ನಷ್ಟದಲ್ಲಿ ಕಡಲೆಕಾಯಿ ಪ್ರಯೋಜನಕಾರಿ


    ನೀವು ತೂಕ ಇಳಿಸಿಕೊಳ್ಳಲು ಸಾಧ್ಯ ಆಗುತ್ತಿಲ್ಲವೇ? ಇದರ ಹಿಂದೆ ಕ್ಯಾಲೋರಿ ನಿಯಂತ್ರಣದ ಕೊರತೆ ಕಾರಣ ಆಗಿರಬಹುದು. ಆದರೆ, ಕಡಲೆಕಾಯಿಯಲ್ಲಿ ಕಡಿಮೆ ಕ್ಯಾಲೋರಿ ಕಂಡು ಬರುತ್ತದೆ. ಜೊತೆಗೆ ಪ್ರೋಟೀನ್ ಕೂಡ ಇದೆ. ಇದು ನಿಮ್ಮ ಹೊಟ್ಟೆಯು ದೀರ್ಘ ಕಾಲದವರೆಗೆ ತುಂಬಿರಲು ಸಹಾಯ ಮಾಡುತ್ತದೆ. ಜೊತೆಗೆ ನೀವು ಕಡಿಮೆ ಕ್ಯಾಲೋರಿಯ ಕಡಲೆಕಾಯಿ ಸೇವನೆ ಮೂಲಕ ತೂಕ ಇಳಿಸಬಹುದು.


    ರಕ್ತದ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ


    ನೀವು ಮಧುಮೇಹಿ ಸಮಸ್ಯೆ ಹೊಂದಿದ್ದರೆ ಕಡಲೆಕಾಯಿ ಸೇವನೆ ಮಾಡುವುದರಿಂದ ರಕ್ತದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇಡಲು ಸಹಕಾರಿ. ಕಡಲೆಕಾಯಿ ಕಡಿಮೆ ಗ್ಲೈಸೆಮಿಕ್ ಆಹಾರ ಆಗಿದೆ. ಕಡಲೆಕಾಯಿ ಸೇವನೆ ರಕ್ತದ ಸಕ್ಕರೆ ಇದ್ದಕ್ಕಿದ್ದಂತೆ ಹೆಚ್ಚಾಗಲ್ಲ. ಅನೇಕ ಅಧ್ಯಯನಗಳಲ್ಲಿ ಕಡಲೆಕಾಯಿ ಸೇವನೆ ಮಹಿಳೆಯರಲ್ಲಿ ಟೈಪ್ 2 ಮಧುಮೇಹದ ಅಪಾಯ ಕಡಿಮೆ ಮಾಡುತ್ತದೆ.


    ಯಾವ ಪೋಷಕಾಂಶಗಳು ಕಡಲೆಕಾಯಿಯಲ್ಲಿ ಸಮೃದ್ಧವಾಗಿವೆ?


    ಕಡಲೆಕಾಯಿಯಲ್ಲಿ ಅನೇಕ ಪೋಷಕಾಂಶಗಳಿವೆ. ವಿಟಮಿನ್ ಇ, ಪ್ರೋಟೀನ್, ತಾಮ್ರ, ಫೋಲೇಟ್, ಮೆಗ್ನೀಸಿಯಮ್, ಫೈಬರ್ ಪೋಷಕಾಂಶಗಳು ಇವೆ. ಈ ಪೌಷ್ಟಿಕಾಂಶ ಪಡೆಯಲು ನೀವು ಕಚ್ಚಾ ಕಡಲೆಕಾಯಿ ಸೇವಿಸಬಹುದು. ಮತ್ತು ಅದನ್ನು ಯಾವುದೇ ಪಾಕ ವಿಧಾನದಲ್ಲಿ ಬೆರೆಸಿ ತಿನ್ನಬಹುದು.


    ಇದನ್ನೂ ಓದಿ: ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಯಾವ ಅಂಶಗಳು ಮುಖ್ಯ ಕಾರಣವಾಗಿವೆ?


    ಯಾವ ಜನರು ಕಡಲೆಕಾಯಿ ಸೇವನೆ ಮಾರಕವಾಗುತ್ತದೆ?


    ಕಡಲೆಕಾಯಿಯಲ್ಲಿ ಹಲವು ಗುಣಗಳಿವೆ. ಕೆಲವರು ಇದನ್ನು ಸೇವನೆ ಮಾಡಬಾರದು. ಅಲರ್ಜಿಯಿಂದ ಬಳಲುತ್ತಿರುವ ಜನರಿಗೆ ಇದಯ ಮಾರಣಾಂತಿಕವಾಗಬಹುದು. ಈ ಪ್ರತಿಕ್ರಿಯೆಯನ್ನು ಅನಾಫಿಲ್ಯಾಕ್ಸಿಸ್ ಎಂದು ಕರೆಯುತ್ತಾರೆ. ಉಸಿರಾಟದ ತೊಂದರೆ, ವಾಕರಿಕೆ, ವಾಂತಿ, ದೇಹದ ಊತ, ತಲೆತಿರುಗುವಿಕೆ ರೋಗ ಲಕ್ಷಣಗಳು ಕಂಡು ಬರುತ್ತವೆ.

    Published by:renukadariyannavar
    First published: